ನಿಮ್ಮ ಹಿನ್ನೆಲೆ ಏನು?

ನನ್ನ ಮೂಲ ಮಂಗಳೂರು. ಇಂಜಿನಿಯರ್‌ ಓದಿದ್ದೇನೆ. ಸಿನಿಮಾ ರೈಟಿಂಗ್‌ ಹಾಗೂ ಚಿತ್ರಕತೆ ಕಲಿತ ಮೇಲೆ ಒಂದಿಷ್ಟುಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದರ ನಂತರ ನನ್ನ ಮೊದಲ ನಿರ್ದೇಶನ ‘ಲುಂಗಿ’.

ಚಿತ್ರರಂಗಕ್ಕೆ ಬಂದಿದ್ದು ಹೇಗೆ ಮತ್ತು ಯಾರು ಸ್ಫೂರ್ತಿ?

ಕಾಲೇಜು ಪುಸ್ತಕಗಳ ಹೊರತಾದ ಬರಹಗಳನ್ನು ಓದಲು ಶುರು ಮಾಡಿದೆ. ಕತೆ ಮತ್ತು ಕಾದಂಬರಿಗಳು ನನ್ನ ಫೇವರೇಟ್‌. ನನ್ನ ಈ ಓದಿನ ಹುಚ್ಚು ನನ್ನೊಳಗೆ ಕತೆಗಳ ಹುಟ್ಟಿಗೆ ಕಾರಣವಾಯಿತು. ಹಾಗೆ ಸಿನಿಮಾ ಮೇಲೆ ಆಸಕ್ತಿ ಬೆಳೆಸಿಕೊಂಡು 8 ವರ್ಷಗಳ ಹಿಂದೆ ಇಂಜಿನಿಯರಿಂಗ್‌ ಬಿಟ್ಟು ಚಿತ್ರರಂಗಕ್ಕೆ. ನಿರ್ದೇಶಕರಾದ ಯೋಗರಾಜ್‌ ಭಟ್‌, ಗುರು ಪ್ರಸಾದ್‌ ಹಾಗೂ ಪವನ್‌ ಕುಮಾರ್‌, ಸಾಹಿತಿ ಜಯಂತ್‌ ಕಾಯ್ಕಿಣಿ ಅವರೇ ನನ್ನ ಮೊದಲ ಸ್ಫೂರ್ತಿ

‘ಲುಂಗಿ’ ತೊಟ್ಟ ರಕ್ಷಿತ್; ಹೊಸಬರಿಗೆ ಸಾಥ್!

ನಿಮ್ಮನ್ನು ಗಾಢವಾಗಿ ಪ್ರಭಾವಿಸಿದ ಚಿತ್ರಗಳು ಯಾವುವು?

ನಾನು ಕಲಿಕೆಯ ದೃಷ್ಟಿಯಿಂದ ಸಾಕಷ್ಟುಸಿನಿಮಾಗಳನ್ನು ನೋಡಿದ್ದೇನೆ. ನಿರ್ದೇಶಕನಾಗಬೇಕೆಂದು ಕನಸು ಕಂಡಾಗ ‘ಮುಂಗಾರು ಮಳೆ’ ಯಶಸ್ಸು ನನ್ನ ಸಿನಿಮಾ ಕನಸಿಗೆ ಪ್ರೇರಣೆ ನೀಡಿತು. ಇತ್ತೀಚೆಗೆ ಬಂದ ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಅರವಿ’ ಚಿತ್ರಗಳು ನನ್ನ ಪ್ರಭಾವಿಸಿದವು. ಮಲಯಾಳಂ ಸಿನಿಮಾಗಳನ್ನು ನೋಡಿ ರಿಯಾಲಿಸ್ಟಿಕ್‌ ಚಿತ್ರಕತೆ ಕಲಿತೆ, ಇರಾನಿ ಚಿತ್ರಗಳನ್ನು ನೋಡಿ ನೆಲದ ಕತೆಗಳ ಹುಡುಕಾಟ ಕಂಡುಕೊಂಡೆ. ಹಾಗೆ ಜಗತ್ತಿನ 50 ಶ್ರೇಷ್ಠ ನಿರ್ದೇಶಕರ ಪಟ್ಟಿಮಾಡಿ ಅವರ ಸಿನಿಮಾಗಳನ್ನು ನೋಡುತ್ತಾ ಹೋದೆ. ಹೀಗೆ ಸಿನಿಮಾ ನೋಡಿದ್ದೇ ನನ್ನ ಅನುಭವ

ಚಿತ್ರರಂಗಕ್ಕೆ ಬರುವ ಹೊಸ ನಿರ್ದೇಶಕರಿಗೆ ಯಾವ ತಯಾರಿಗಳು ಅಗತ್ಯ?

ಚಿತ್ರಕಥೆ ತಿಳುವಳಿಕೆ ಬೇಕು. ಸಿನಿಮಾ ಓದುವ ಅಭ್ಯಾಸ ಬೇಕು. ನಮ್ಮಲ್ಲಿ ತಂತ್ರಜ್ಞರು ಇದ್ದಾರೆ. ಆದರೆ, ಓದುಗ ಇಲ್ಲ. ನಿರ್ದೇಶಕ ಒಳ್ಳೆಯ ಓದುಗನಾಗಬೇಕು ಎಂಬುದು ನನ್ನ ಅಭಿಪ್ರಾಯ. ‘ಒಂದು ಸಾಕ್ಷ್ಯ ಚಿತ್ರ ಮಾಡಿದರೆ 10 ಸಿನಿಮಾಗಳನ್ನು ಮಾಡಿದ ಅನುಭವ ನೀಡುತ್ತದೆ’ ಎನ್ನುವ ಮಣಿರತ್ನಂ ಅವರ ಮಾತುಗಳು ನಮ್ಮಂತ ಹೊಸಬರಿಗೆ ಪ್ರೇರಣೆಯಾಗುತ್ತದೆ.

ಕೆನಡಾ ಕನ್ನಡಿಗ ಪ್ರಣವ್‌ ಲುಂಗಿ ಚಿತ್ರಕ್ಕೆ ನಾಯಕ!

ಲುಂಗಿ ಅನ್ನೋ ಹೆಸರು ಹೊಳೆದಿದ್ದು ಹೇಗೆ?

ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ನಾನು ಮತ್ತು ಅಕ್ಷಿತ್‌ ಶೆಟ್ಟಿ. ಒಮ್ಮೆ ಅಕ್ಷಿತ್‌ ಹೇಳಿದ ಒಂದು ಸಾಲಿನ ಕತೆ ಬರೆಯುತ್ತ ಹೋದೆ. ಅದಕ್ಕೆ ಮೊದಲು ‘ಲುಂಗಿ ಸ್ಟೋರ್‌’ ಎನ್ನುವ ಹೆಸರಿಟ್ಟೆ. ಆ ಮೇಲೆ ‘ಲುಂಗಿ’ ಆಯ್ತು.

ಈ ಚಿತ್ರದ ಕತೆ ಏನು? ಯಾವ ವರ್ಗದ ಪ್ರೇಕ್ಷಕರಿಗೆ ಈ ಚಿತ್ರ ತಲುಪುತ್ತದೆ?

ಒಬ್ಬ ಯುವಕ ಮಾಲ್‌ ಹೋಗಿ ಲುಂಗಿ ಹುಡುಗಿಕೊಂಡು ಹೋದರೆ ಈಗಿನ ಜನರೇಷನ್‌ ಅವನನ್ನು ಹೇಗೆ ನೋಡುತ್ತದೆ ಎಂಬುದೇ ಚಿತ್ರದ ಕತೆ. ಫ್ಯಾಮಿಲಿ ಸಮೇತ ನೋಡುವ ಸಿನಿಮಾ. ಸೆಂಟಿಮೆಂಟ್‌ಗೆ ಮಹತ್ವ. ಇಲ್ಲಿ ಓದಿ ವಿದೇಶಕ್ಕೆ ಹೋಗುತ್ತೇವೆ. ಆದರೆ, ನಮ್ಮ ಓದು ನಮ್ಮ ದೇಶ ಕಟ್ಟಲು ಬಳಕೆಯಾಗಬೇಕು ಎನ್ನುವ ಸಂದೇಶವನ್ನು ಒಂದು ದೇಸಿ ಉದ್ಯಮದ ಕನಸಿನ ಮೂಲಕ ಹೇಳುತ್ತೇನೆ. ಮಾತನಾಡಿ ನಮ್ಮ ಭಾಷೆ ಉಳಿಸಬೇಕು, ಹೋರಾಟ ಮಾಡಿ ಅಲ್ಲ ಎನ್ನುವ ಮಾತುಗಳು ಇವೆ.

ಒಂದೇ ಚಿತ್ರಕ್ಕೆ ಇಬ್ಬರು ನಿರ್ದೇಶಕರು ಆಗಿದ್ದು ಹೇಗೆ?

ಮೊದಲು ಅಕ್ಷಿತ್‌ ಶೆಟ್ಟಿಒಬ್ಬರೇ ನಿರ್ದೇಶಕರು ಇದ್ದಿದ್ದು. ಇವರು ಹೇಳಿದ ಕತೆಯನ್ನು ನಾನು ಚಿತ್ರಕಥೆ ಮಾಡುತ್ತ ಹೋದಾಗ ನನ್ನ ಜೀವನದಲ್ಲಿ ಬಂದ ನೈಜ ಪಾತ್ರಗಳು ಕತೆಯಲ್ಲಿ ಪ್ರವೇಶವಾದವು. ನಾನು ಕಂಡ ಪಾತ್ರಗಳನ್ನು ನಾನೇ ನಿರ್ದೇಶನ ಮಾಡಬೇಕು ಎಂದಾಯಿತು. ಕೊನೆಗೆ ಅಕ್ಷಿತ್‌ ಶೆಟ್ಟಿತಾಂತ್ರಿಕ ವಿಭಾಗವನ್ನು ನಿಭಾಯಿಸಿದರೆ, ನಾನು ಕತೆ ಮತ್ತು ಕಲಾವಿದರ ನಟನೆಯನ್ನು ನೋಡಿಕೊಂಡೆ.

ಅಶ್ಲೀಲತೆ, ಧಾರ್ಮಿಕ ಭಾವನೆಗೆ ಧಕ್ಕೆ: ಬಿಗ್‌ ಬಾಸ್‌ಗೆ ನಿಷೇಧ ಭೀತಿ!

ಚಿತ್ರದಲ್ಲಿ ನಟಿಸಿರುವ ಪಾತ್ರಧಾರಿಗಳ ಕುರಿತು ಹೇಳುವುದಾದರೆ?

ಪ್ರಣವ್‌ ಹೆಗ್ಡೆ, ಅಹಲ್ಯಾ ಸುರೇಶ್‌, ರಾಧಿಕ ರಾವ್‌, ಮನೋಹರ್‌, ದೀಪಕ್‌ ರೈ, ರೂಪ, ಜಯಶೀಲ, ಪ್ರಕಾಶ್‌ ತುಂಬಿನಾಡು, ಕಾರ್ತಿಕ್‌, ಸಂದೀಪ್‌ ಶೆಟ್ಟಿ, ಚೇತನ್‌ ರೈ ಮಣಿ ಚಿತ್ರದಲ್ಲಿದ್ದಾರೆ. ರಿಜೋ ಪಿ ಜಾನ್‌ ಛಾಯಾಗ್ರಹಣ, ಪ್ರಸಾದ್‌ ಶೆಟ್ಟಿಸಂಗೀತ ಅವರದ್ದು. ಎಲ್ಲರು ಅವರ ಕೆಲಸಗಳನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ. ಮುಖೇಶ್‌ ಹೆಗ್ಡೆ ಅವರು ನಮ್ಮ ಕತೆಯನ್ನು ನಂಬಿ ನಿರ್ಮಾಣ ಮಾಡಿದ್ದಾರೆ.