Asianet Suvarna News Asianet Suvarna News

ಎಲ್ಲರ ಲೈಫಿನ ಕತೆಯೇ 'ಜಾಡಘಟ್ಟ' ಚಿತ್ರವಾಗಿದೆ: Raghu

ಹಾಸನ ಅರಸೀಕರೆ ಬಳಿಯ ‘ಜಾಡಘಟ್ಟ’ ಎಂಬ ಊರಿನ ಕಥೆ ‘ಜಾಡಘಟ್ಟ’ ಚಿತ್ರವಾಗಿದೆ. ಈ ಸಿನಿಮಾಕ್ಕೆ ಸಂಕಲನ, ಕತೆ, ಚಿತ್ರಕತೆ, ನಿರ್ದೇಶನದ ಜೊತೆಗೆ ನಾಯಕ ಸ್ಥಾನವನ್ನೂ ತುಂಬಿರುವುದು ರಘು. ಫೆ.4ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಬಗ್ಗೆ ಅವರ ಮಾತು.

Kannada Film Jadaghatta Actor Raghu Exclusive Interview gvd
Author
Bangalore, First Published Jan 31, 2022, 10:53 AM IST

ಪ್ರಿಯಾ ಕೆರ್ವಾಶೆ

ಹಾಸನ ಅರಸೀಕರೆ ಬಳಿಯ ‘ಜಾಡಘಟ್ಟ’ (Jadaghatta) ಎಂಬ ಊರಿನ ಕಥೆ ‘ಜಾಡಘಟ್ಟ’ ಚಿತ್ರವಾಗಿದೆ. ಈ ಸಿನಿಮಾಕ್ಕೆ ಸಂಕಲನ, ಕತೆ, ಚಿತ್ರಕತೆ, ನಿರ್ದೇಶನದ ಜೊತೆಗೆ ನಾಯಕ ಸ್ಥಾನವನ್ನೂ ತುಂಬಿರುವುದು ರಘು (Raghu). ಫೆ.4ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಬಗ್ಗೆ ಅವರ ಮಾತು.

* ಜಾಡಘಟ್ಟ ಅಂದರೆ ಕ್ರೈಮ್ ಸಿನಿಮಾ ಅನ್ನೋ ಅನುಮಾನ ಬರುತ್ತೆ?
ಇದು ಕ್ರೈಮ್ ಜಾನರ್ ಸಿನಿಮಾ ಅಲ್ಲ. ಔಟ್ ಆ್ಯಂಡ್ ಔಟ್ ಸೆಂಟಿಮೆಂಟ್ ಮೂವಿ. ಥಿಯೇಟರ್‌ನಲ್ಲಿ ಕೂತು ಸಿನಿಮಾ ನೋಡ್ತಿದ್ರೆ ನಿಮ್ಮ ಲೈಫನ್ನೇ ನೋಡ್ತಿರೋ ಹಾಗನಿಸಿ ಕಣ್ಣು ತುಂಬಿಕೊಳ್ಳೋದು ಗ್ಯಾರಂಟಿ.

* ಅಂಥದ್ದೇನಿದೆ ಈ ಸಿನಿಮಾದಲ್ಲಿ?
ನಮ್ಮೆಲ್ಲರ ಬದುಕಿನಲ್ಲಿ ನಡೆಯೋ ಕತೆ. ಅಪ್ಪ ಹಾಗೂ ಮಗನ ಲೈಫಿನ ಕತೆಯೂ ಹೌದು. ಅಪ್ಪ ಬದುಕಿದ್ದಾಗ ಮಗ ಚೆನ್ನಾಗಿ ತಿನ್ನುತ್ತಾ ಕುಡಿಯುತ್ತಾ ಮಜಾ ಉಡಾಯಿಸುತ್ತಿರುತ್ತಾನೆ. ಅದೇ ಅಪ್ಪ ಅವಮಾನದಲ್ಲಿ ತೀರಿಕೊಂಡಾಗ ಅವನಿಗೆ ಬದುಕಿನ ವಾಸ್ತವ ಮುಖಾಮುಖಿಯಾಗುತ್ತದೆ. ತಾನಿಷ್ಟು ಕಾಲ ತಮಾಷೆಯಾಗಿ ಕಳೆದ ಬದುಕೇ ಅಣಕಿಸಲಾರಂಭಿಸುತ್ತದೆ. ಶೇ.70ಕ್ಕಿಂತಲೂ ಜನ ಲೈಫಲ್ಲಿ ಒಂದಲ್ಲಾ ಒಂದು ಸಲ ಇಂಥದ್ದನ್ನ ಅನುಭವಿಸಿಯೇ ಇರುತ್ತಾರೆ. ಒಂದು ಕಡೆ ಮಗ ಕುಡಿದು ಬಿದ್ದು ಹೊರಳಾಡ್ತಾ ಇರ್ತಾನೆ. ಇನ್ನೊಂದು ಕಡೆ ತಂದೆ ಮರಣಬೇನೆಯಿಂದ ಒದ್ದಾಡುತ್ತಾ ಇರುತ್ತಾನೆ.

ಒಂಬತ್ತನೇ ದಿಕ್ಕು ಸ್ಟ್ರಾಂಗ್ ಕಂಟೆಂಟ್ ಇರೋ ಕರ್ಮಷಿಯಲ್ ಸಿನಿಮಾ: Dayal Padmanabhan

* ಚಿತ್ರೀಕರಣ ಜಾಡಘಟ್ಟ ಊರಿನಲ್ಲೇ ಮಾಡಿದ್ದೀರಾ?
ಹೌದು, ಇಡೀ ಸಿನಿಮಾ ಜಾಡಘಟ್ಟದಲ್ಲೇ ನಡೆದಿದೆ. ಅವಕಾಶಕ್ಕಾಗಿ ಹಂಬಲಿಸುವ ರಂಗಭೂಮಿ ಕಲಾವಿದರು, ಹೊಸ ನಟ ನಟಿಯರು ಚಿತ್ರದಲ್ಲಿದ್ದಾರೆ. ಪ್ರೇರಣಾ, ಸುಹಾನಾ, ಹರ್ಷಿತಾ ಅಂತ ಮೂವರು ನಾಯಕಿಯರು. ಧನುಷ್ ರಾಜ್, ಪುಟ್ಟರಾಜು ಮಹೇಶ್, ಪುಷ್ಪಲತಾ ಮೊದಲಾದವರು ನಟಿಸಿದ್ದಾರೆ.

* ನಿಮ್ಮ ಹಿನ್ನೆಲೆ?
ನಾನು ಮಂಡ್ಯದಿಂದ ಬಂದವನು. ಕಳೆದ ಹತ್ತು ವರ್ಷಗಳಿಂದ ಎಡಿಟರ್, ಅಸೋಸಿಯೇಟ್ ಡೈರೆಕ್ಟರ್ ಹಾಗೂ ಟೆಕ್ನಿಕಲ್ ಕೆಲಸ ಮಾಡುತ್ತಾ ಬಂದಿದ್ದೀನಿ. ಸಿನಿಮಾ ಮಾಡುವ ಆಸಕ್ತಿ ಇದ್ದರೂ ಅವಕಾಶ ಸಿಗಲಿಲ್ಲ. ಅದಕ್ಕಾಗಿ ನಾನೇ ಎಲ್ಲ ಜವಾಬ್ದಾರಿ ತೆಗೆದುಕೊಂಡು ಈ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದೆ. ನಮ್ಮ ಜನ ಎಂಥವರು ಅಂದರೆ ಪಕ್ಕದಲ್ಲಿ ತನ್ನ ತಾಯಿ ನರಳ್ತಾ ಬಿದ್ದಿದ್ರೆ ಅಸಡ್ಡೆ ಮಾಡ್ತಾರೆ. ಅದೇ ಸೋಷಿಯಲ್ ಮೀಡಿಯಾದಲ್ಲಿ ಅಂಥದ್ದೊಂದು ವೀಡಿಯೋ ನೋಡಿದರೆ ಮರುಗುತ್ತಾರೆ. ಅದಕ್ಕೆ ಜನರಿಗೆ ಅವರ ದಾರಿಯಲ್ಲೇ ಹೋಗಿ ಮೆಸೇಜ್ ಕೊಡೋಣ ಅನ್ನೋ ನಿಟ್ಟಿನಲ್ಲಿ ಈ ಸಿನಿಮಾ ಮಾಡ್ತಿದ್ದೀನಿ.

ಬುಡಕಟ್ಟಿನ ರಾಣಿಯಾಗಲು ಆಸೆ ಪಡುವ ಪಾತ್ರ: Bhoomi Shetty

* ಜಾಡಘಟ್ಟದ  ಅನುಭವಗಳು?
ಇದು ಹಾಸನ ಜಿಲ್ಲೆ ಅರಸೀಕೆರೆ  ಸಮೀಪದ ಹಳ್ಳಿ. ನಾನು ಲಾಕ್‌ಡೌನ್ ಸಮಯವನ್ನು ಈ ಹಳ್ಳಿಯಲ್ಲೇ ಕಳೆದೆ. ಅಲ್ಲಿನ ಬದುಕನ್ನು, ಜೀವನವನ್ನು ಹತ್ತಿರದಿಂದ ಗಮನಿಸಿದೆ. ನಾನು ಈಗ ತೆಗೆದುಕೊಂಡಿರುವ ಕತೆಯ ಎಳೆ ಹಳ್ಳಿಯ ಬದುಕಿನಲ್ಲಿ ಕಾಮನ್ ಆಗಿತ್ತು. ಅದನ್ನೇ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದೆ.

Follow Us:
Download App:
  • android
  • ios