ನಟಿ ರಚಿತಾ ರಾಮ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ನಡುವೆ ತೆಲುಗಿಗೂ ಹೋಗುವ ತಯಾರಿಯಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಚಿತಾ ಅವರೊಂದಿಗಿನ ಮಾತು ಇಲ್ಲಿದೆ. 

- ಬಿಡುಗಡೆಯಾಗುತ್ತಿರುವ ‘ಅಯುಷ್ಮಾನ್ ಭವ’ ಚಿತ್ರದ ಬಗ್ಗೆ ಏನು ಹೇಳುತ್ತೀರಿ?

ಒಂದು ದೊಡ್ಡ ಸಿನಿಮಾ. ಶಿವರಾಜ್‌ಕುಮಾರ್, ಅನಂತ್‌ನಾಗ್ ಅವರಂತಹ ಲೆಜೆಂಡರಿ ನಟರ ಜತೆ ತೆರೆ ಹಂಚಿಕೊಂಡ ಖುಷಿ ಇದೆ. ಒಳ್ಳೆಯ ಕತೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಅದೇನು ಎಂಬುದು ನೀವು ಸಿನಿಮಾ ನೋಡಬೇಕು.

Good Newwz! ತಾಯಿಯಾಗುತ್ತಿದ್ದಾರೆ ಕರೀನಾ, ಕಿಯಾರಾ!

- ಡಾ ವಿ ನಾಗೇಂದ್ರ ಪ್ರಸಾದ್ ನಿರ್ದೇಶಿಸಿ, ವಸಿಷ್ಠ ಸಿಂಹ ಜತೆ ‘ಪಂಥ’ ಚಿತ್ರದಲ್ಲಿ ನಟಿಸುವ ಸುದ್ದಿ ಇತ್ತಲ್ಲ?
ಅದು ಸುಳ್ಳು. ನಾನು ಆ ಚಿತ್ರವನ್ನು ಇನ್ನೂ ಒಪ್ಪಿಕೊಂಡಿಲ್ಲ. ಮಾತುಕತೆ ಕೂಡ ಆಗಿಲ್ಲ. 

- ‘ಆಯುಷ್ಮಾನ್ ಭವ’ ಚಿತ್ರತಂಡದ ಜತೆಗೆ ನಿಮ್ಮ ಮುನಿಸು ಯಾಕೆ?

ಈ ಬಗ್ಗೆ ನೋ ಕಾಮೆಂಟ್ಸ್. ಚಿತ್ರದ ಪ್ರಚಾರದ ಪತ್ರಿಕಾಗೋಷ್ಟಿಗೆ ನನಗೆ ಯಾವುದೇ ಮಾಹಿತಿರಲಿಲ್ಲ. ಹೀಗಾಗಿ ನಾನು ಬರಲಿಲ್ಲ.

- ಇತ್ತೀಚೆಗೆ ತುಂಬಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೀರಲ್ಲ?

ನಿರ್ದೇಶಕರು ಬರೆದುಕೊಳ್ಳುವ ಕತೆ ಹಾಗೂ ಅವರ ಕಲ್ಪನೆಯ ಪಾತ್ರಕ್ಕೆ ನಾನೇ ಸರಿ ಅನಿಸುತ್ತಿದ್ದೇನೆ. ಹಾಗಂತ ಬಂದ ಚಿತ್ರಗಳನ್ನೆಲ್ಲ ನಾನು ಒಪ್ಪಿಕೊಳ್ಳುತ್ತಿಲ್ಲ. ನನ್ನ ನಟನೆಯ ಸಿನಿಮಾಗಳ ಪಟ್ಟಿಯಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳಲು ನಾನು ಯಾವ ಚಿತ್ರವನ್ನು ಒಪ್ಪುತ್ತಿಲ್ಲ. ಕತೆ ಕೇಳುತ್ತೇನೆ. ಇಷ್ಟ ಆದರೆ ಒಪ್ಪುತ್ತೇನೆ. ಅಲ್ಲದೆ ನಾನು ಸ್ಟಾರ್ ನಟರ ಚಿತ್ರಗಳಿಗೆ ಮಾತ್ರ ಸೀಮಿವಾಗಿಲ್ಲ.

ಬಿಕಿನಿ ಓಕೆ, ಅದರ ಮೇಲೆ 'ಹರೇ ರಾಮ್ 'ಯಾಕೆ? ನಟಿಗೆ ನೆಟ್ಟಿಗರಿಂದ ಕ್ಲಾಸ್!

- ನಿಮ್ಮ ಮುಂದಿರುವ ಸಿನಿಮಾಗಳು ಎಷ್ಟು?

ಇದೇ ನ.15 ಕ್ಕೆ ತೆರೆ ಕಾಣುತ್ತಿರುವ ‘ಅಯುಷ್ಮಾನ್ ಭವ’ ಸೇರಿದಂತೆ ಚಿತ್ರೀಕರಣದಲ್ಲಿರುವ ‘ಏಕ್ ಲವ್ ಯಾ’, ಚಿತ್ರೀಕರಣ ಮುಗಿಸಿರುವ ‘100’, ಶುರುವಾಗಬೇಕಿರುವ ‘ಡಾಲಿ’, ‘ಎಪ್ರಿಲ್ ಡಿಸೋಜಾ’, ‘ವೀರಂ’ ಚಿತ್ರಗಳಿವೆ. ಒಂದೊಂದು ಚಿತ್ರದಲ್ಲೂ ಒಂದು ರೀತಿಯ ಪಾತ್ರವಿದೆ.

- ತೆಲುಗಿನ ಬಾಲಕೃಷ್ಣ ಜತೆ ಸಿನಿಮಾ ಮಾಡುವ ಸುದ್ದಿ ಇದೆಯಲ್ಲ?

ಈ ಬಗ್ಗೆ ಮಾತುಕತೆ ಆಗುತ್ತಿದೆ. ಇನ್ನೂ ಮೂರು ದಿನ ಕಾದರೆ ಎಲ್ಲವೂ ಗೊತ್ತಾಗಲಿದೆ. ಈಗಲೇ ನಾನು ಏನು ಹೇಳಲ್ಲ.

- ಈಗ ಒಪ್ಪಿರುವ ಚಿತ್ರಗಳಲ್ಲಿ ನಿಮಗೆ ತೀರಾ ಹತ್ತಿರ ಎನಿಸುವ ಪಾತ್ರ ಯಾವುದು?

ಎಲ್ಲ ಚಿತ್ರಗಳ ಪಾತ್ರವೂ ಚೆನ್ನಾಗಿದೆ. ಪ್ರಜ್ವಲ್ ದೇವರಾಜ್ ಜತೆಗೆ ಮೊದಲ ಬಾರಿಗೆ ‘ವೀರಂ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇಲ್ಲಿ ಮೆಡಿಕಲ್ ವಿದ್ಯಾರ್ಥಿನ ಪಾತ್ರ ನನ್ನದು. ಹಾಗೆ ರಮೇಶ್ ಅರವಿಂದ್ ಜತೆಗೆ 100 ಪಾತ್ರವಿದೆ. ಇನ್ನೂ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರವೂ ಬೇರೆ ರೀತಿಯಲ್ಲಿದೆ. ಇವು ಕಮರ್ಷಿಯಲ್ಲಾಗಿಯೂ ನನಗೆ ಹೆಚ್ಚು ಹೆಸರು ತಂದುಕೊಡಬಲ್ಲವು.

- ನಿಮ್ಮ ಮನೆಯಲ್ಲಿ ಮದುವೆ ಸಂಭ್ರಮ ಹೇಗಿದೆ?

ನಿತ್ಯಾ ರಾಮ್ ಅವರ ಮದುವೆ. ಡಿಸೆಂಬರ್ 6 ರಂದು ಮದುವೆ ನಡೆಯಲಿದೆ. ಆ ತಯಾರಿಗಳಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದೇನೆ. ನನಗೆ ತುಂಬಾ ಇಷ್ಟವಾದ ಮಾಂಸಹಾರ ತಿನ್ನುವಂತಿಲ್ಲ. ಮದುವೆ ಮುಗಿಯುವ ತನಕ ಸಸ್ಯಹಾರಿ ಆಗಿರಬೇಕು.

- ಆರ್. ಕೇಶವಮೂರ್ತಿ