ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಕಿಯಾರಾ ಅಡ್ವಾಣಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕರೀನಾ-ಸೈಫ್ ಮನೆಗೆ ಮಗ ತೈಮೂರು ಬಂದು ವರ್ಷಗಳೇ ಕಳೆದಿವೆ. ಈಗ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಕರೀನಾ ಕಪೂರ್. ಕಿಯಾರಾ ಅಡ್ವಾಣಿಗೆ ಇನ್ನೂ ಮದುವೆಯಾಗಿಲ್ಲ. ಮದುವೆಗೆ ಮುನ್ನವೇ ತಾಯಿಯಾಗಲಿದ್ದಾರೆ ಎನ್ನಲಾಗಿದೆ. ಅಚ್ಚರಿಯಾದ್ರೂ ಇದು ನಿಜ! 

ಕರೀನಾ ಕಪೂರ್, ಕಿಯಾರಾ ಅಡ್ವಾಣಿ, ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ ಕಾಂಬಿನೇಶನ್‌ನಲ್ಲಿ 'ಗುಡ್‌ನ್ಯೂಸ್' ಎನ್ನುವ ಸಿನಿಮಾವೊಂದನ್ನು ಬರುತ್ತಿದೆ.  ಈ ಚಿತ್ರದಲ್ಲಿ ಕರೀನಾ ಹಾಗೂ ಕಿಯಾರಾ ಪ್ರಗ್ನೆಂಟ್ ಆಗಿದ್ದಾರೆ. 

 

ಅಕ್ಷಯ್ ಕುಮಾರ್‌ಗೆ ಜೋಡಿಯಾಗಿ ಕರೀನಾ ನಟಿಸಿದರೆ ದಿಲ್ಜಿತ್‌ಗೆ ಜೋಡಿಯಾಗಿ ಕಿಯಾರಾ ನಟಿಸಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಕಾಮಿಡಿ ಓರಿಯೆಂಟೆಡ್ ಚಿತ್ರ ಎನ್ನುವುದು ಗೊತ್ತಾಗುತ್ತದೆ. 

ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.