ಬಾಲಿವುಡ್ ನಟಿಯರು ಬಿಕಿನಿ ಹಾಕುವುದು ಸರ್ವೇ ಸಾಮಾನ್ಯ. ಅದರಲ್ಲಿ ವಿಶೇಷವೇನು ಇಲ್ಲ. ಆದ್ರೆ ಅದರ ಮೇಲೆ ಇರುವ ಪದಗಳ ಬಗ್ಗೆ ಸ್ವಲ್ಪ ಗಮನದಿಂದರಬೇಕು. 

ಟೈಗರ್ ಶ್ರಾಫ್, ಹೃತಿಕ್ ರೋಷನ್ ಜೊತೆ ಕಾಣಿಸಿಕೊಂಡಿದ್ದ ನಟಿ ವಾಣಿ ಕಪೂರ್ ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟು ಮಾಡಿಕೊಂಡಿದ್ದಾರೆ. ಇಂತಹ ಅಚಾತುರ್ಯಗಳನ್ನು ಬೇಕು ಅಂತಲೇ ಮಾಡುತ್ತಾರೋ, ಗೊತ್ತಾಗದೇ ಮಾಡುತ್ತಾರೋ ಆದರೆ ವೈರಲ್ ಮಾತ್ರ ಆಗಿಬಿಡುತ್ತದೆ. 

'ಹರೇ ರಾಮ್...' ಎಂದು ಬರೆದುಕೊಂಡಿದ್ದ ಬಿಕಿನಿ ಟಾಪ್ ವೊಂದನ್ನು ಹಾಕಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿಮಗೆ ಸಂಸ್ಕೃತಿ, ಸಂಸ್ಕಾರದ ಬೆಲೆ ಗೊತ್ತಿಲ್ಲ. ಜನರ ಧಾರ್ಮಿಕ ಭಾವನೆಗಳ ಜೊತೆ ಆಟವಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

Scroll to load tweet…
Scroll to load tweet…
Scroll to load tweet…

ವಾಣಿ ಕಪೂರ್ ಹೃತಿಕ್ ರೋಷನ್, ಟೈಗರ್ ಶ್ರಾಫ್ ಜೊತೆ "ವಾರ್' ಸಿನಿಮಾದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೊದಲ ದಿನದ ಶೋನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಇದಾಗಿದೆ. ವಿಶ್ವದಾದ್ಯಂತ 450 ಕೋಟಿ ಗಳಿಕೆ ಕಂಡಿದೆ.

 ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ