ವಿವೇಕ್‌ ಸಿಂಹ ಹಾಗೂ ಖುಷಿ ನಟನೆಯ ಸೈಕಲಾಜಿಕಲ್‌ ಹಾರರ್‌ ಚಿತ್ರ ‘ಸ್ಪೂಕಿ ಕಾಲೇಜು’ ಇಂದು ಬಿಡುಗಡೆ ಆಗುತ್ತಿದೆ. ಭರತ್‌ ಜಿ ನಿರ್ದೇಶನ, ಹೆಚ್‌ ಕೆ ಪ್ರಕಾಶ್‌ ನಿರ್ಮಾಣವಿದೆ. ಸಿನಿಮಾ ಬಗ್ಗೆ ನಾಯಕಿ ಖುಷಿ ಮಾತಾಡಿದ್ದಾರೆ.

ಪ್ರಿಯಾ ಕೆರ್ವಾಶೆ

ಸ್ಪೂಕಿ ಕಾಲೇಜು ಶೀರ್ಷಿಕೆ ಯಾಕೆ?

ಇದರ ಅರ್ಥ ಭಯಾನಕ ಕಾಲೇಜು ಅಂತ. ಕನ್ನಡ ಸಿನಿಮಾಗಳಲ್ಲಿ ಸ್ಪೂಕಿ ಅನ್ನೋ ಪದ ಈವರೆಗೆ ಬಳಕೆ ಆಗಿರಲಿಲ್ಲ. ನಮ್ಮದು ಹಾರರ್‌ ಸಬ್ಜೆಕ್ಟ್ ಆಗಿರೋದರಿಂದ ಈ ಶೀರ್ಷಿಕೆ ಕರೆಕ್ಟಾಗಿ ಮ್ಯಾಚ್‌ ಆಗುತ್ತೆ.

ನೀವೂ ಭಯ ಹುಟ್ಟಿಸುತ್ತೀರಾ?

ಹೌದು. ದಿಯಾದಲ್ಲಿ ಎಲ್ಲರನ್ನು ಅಳಿಸಿದ್ದೆ. ಇಲ್ಲಿ ಹೆದರಿಸೋದಕ್ಕೆ ಬರ್ತಿದ್ದೀನಿ. ಕಾಲೇಜು ಹೋಗೋ ಹುಡುಗಿ ಪಾತ್ರ. 2 ಶೇಡ್‌ನಲ್ಲಿ ಕಾಣಿಸಿಕೊಳ್ತೀನಿ. ನನ್ನ ಪಾತ್ರಕ್ಕೆ ಭೂತಕಾಲದ ಹಿನ್ನೆಲೆ ಇರುತ್ತೆ. ಅದನ್ನಿಟ್ಟು ವರ್ತಮಾನದಲ್ಲಿ ಆ ಕಾಲೇಜ್‌ ಹೋಗಿ ಅಲ್ಲಿ ಕೆಲವು ಭಯಾನಕ ಘಟನೆಗಳನ್ನು ಹೇಗೆ ಡೀಲ್‌ ಮಾಡ್ತೀನಿ ಅನ್ನೋದು ಕಥೆ. ಪಾತ್ರದ ಹೆಸರು ಖುಷಿ ಅಂತಲೇ.

ಡೀಲ್‌ ಮಾಡೋದು ಅಂದ್ರೆ ಆ್ಯಕ್ಷನ್‌ ಸೀಕ್ವೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದೀರಾ?

ಇಲ್ಲ. ದಿಯಾದ ಪಾತ್ರಕ್ಕೆ ಕಾಂಟ್ರಾಸ್ಟ್‌ ಈ ಪಾತ್ರ. ಸ್ವಲ್ಪ ಭಯಾನಕತೆ ಇದೆ, ಅಲ್ಲಲ್ಲಿ ಡಲ್‌ ಆಗಿದೆ. ಕೆಲವೊಂದು ಕಡೆ ನಿರ್ಲಿಪ್ತವಾಗಿರ್ತೀನಿ. ಮಾಡರ್ನ್‌ ಕಾಲೇಜು ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೀನಿ.

ಶೂಟಿಂಗ್‌ನಲ್ಲಾದ ಹಿಲೇರಿಯಸ್‌ ಅನುಭವ?

ಸಿನಿಮಾ ಪ್ರಮೋಶನ್‌ ವೇಳೆ ಪಾತ್ರಗಳಾಗಿ ನೇರ ಪ್ರೇಕ್ಷಕರ ಹತ್ತಿರವೇ ಹೋಗಿದ್ದು ಹಿಲೇರಿಯಸ್‌ ಅನುಭವ. ನಾನು ಎಲ್‌ಇಡಿ ಮಾಸ್‌್ಕ ಹಾಕ್ಕೊಂಡಿದ್ದೆ. ಈ ಸಿನಿಮಾ ನಾಯಕ ವಿವೇಕ್‌ ಹ್ಯಾಲೋವಿನ್‌ನ ಪಮ್ಕಿನ್‌ ತಲೆ ಮೇಲೆ ಹಾಕ್ಕೊಂಡಿದ್ರು. ಈ ಲುಕ್‌ನಲ್ಲಿ ರೋಡ್‌ ರೋಡ್‌ ಅಲೆದಿದ್ವಿ. ಎಷ್ಟೋ ಜನ ಹತ್ರ ಬಂದು ನೀವೇ ಅಲ್ವಾ ಇದು ಅಂತ ಕೇಳ್ತಾ ಇದ್ರು. ನಾವು ಮಾತೇ ಆಡ್ತಾ ಇರಲಿಲ್ಲ. ಆ ಅನುಭವವೇ ಭಿನ್ನ.

ಸಿನಿಮಾ, ಶಾರ್ಚ್‌ ಫಿಲಂ, ಆಲ್ಬಂ, ವೆಬ್‌ ಸೀರೀಸ್‌ ಅಂತೆಲ್ಲ ನಾನಾ ಕ್ಷೇತ್ರಗಳನ್ನ ಎಕ್ಸ್‌ಪ್ಲೋರ್‌ ಮಾಡಿದ್ದೀರಿ?

ಬೇರೆ ಭಾಷೆಗಳಲ್ಲೆಲ್ಲ ದೊಡ್ಡ ಸ್ಟಾರ್‌ಗಳೇ ಆಲ್ಬಂ, ವೆಬ್‌ ಸೀರೀಸ್‌ಗಳಲ್ಲಿ ನಟಿಸುತ್ತಾರೆ. ಅದೇ ಟ್ರೆಂಡ್‌. ಇದು ಅಗತ್ಯವೇ ಅಂತ ನನಗನಿಸೋದು.

Exclusive Interview: ಕನ್ನಡ ನಾಯಕಿಯರಿಗೆ ಬೇಡಿಕೆ ಹೆಚ್ಚಾಗ್ತಿದೆ: ಖುಷಿ ರವಿ

ಈಗ ನಿಮ್ಮ ಪಾತ್ರಗಳ ಆಯ್ಕೆಯಲ್ಲಿ ಬದಲಾವಣೆ ಆಗಿದೆಯಾ?

ನನಗೆ ಕತೆ ಹೇಳಲಿಕ್ಕೆ ಬರುವವರು, ‘ದಿಯಾದಲ್ಲಿ ಮಾಡಿದ್ದೀರಲ್ವಾ ಮೇಡಂ, ಅದೇ ಥರ ಸಾಫ್‌್ಟನೇಚರ್‌, ಇಂಟ್ರಾವರ್ಚ್‌ ಪಾತ್ರ’ ಅಂತ ಬರ್ತಾರೆ. ಆಗ ನಾನು ಮಾಡಲ್ಲ ಸರ್‌ ಅಂತೀನಿ. ಒಬ್ಬ ಕಲಾವಿದೆ ವೈವಿಧ್ಯಮಯ ಪಾತ್ರ ಮಾಡಬೇಕು. ಮುಂದಿನ ಸಿನಿಮಾದಲ್ಲಿ ಒಂದು ಕಚ್ಚಾ ಅಂದ್ರೆ ರಾ ಅಂತೀವಲ್ಲ, ಆ ಥರ ಪಾತ್ರದಲ್ಲಿ ಕಾಣಿಸಬೇಕು.