Asianet Suvarna News Asianet Suvarna News

ಎಲ್ಲಿದ್ದೆ ಇಷ್ಟುವರ್ಷ ಅಂದಿದ್ರು ರಿಷಬ್‌, ಕಣ್ತುಂಬಿ ಬಂತು : ಗಾನವಿ ಲಕ್ಷ್ಮಣ್‌

ಗಾನವಿ ಲಕ್ಷ್ಮಣ್‌ ಚಿಕ್ಕಮಗಳೂರಿನ ಅರಳು ನಗುವಿನ ಹುಡುಗಿ. ಹಲವರ ಪಾಲಿಗೆ ‘ಮಗಳು ಜಾನಕಿ’. ಇದೀಗ ‘ಹೀರೋ’ ಚಿತ್ರದಲ್ಲಿ ರಿಷಬ್‌ಗೆ ಹೀರೋಯಿನ್‌. ಗಾನವಿ ಮಾತಾಡಿದ್ದಾರೆ, ಕೇಳಿ.

Hero fame Ganavi laxman exclusive interview vcs
Author
Bangalore, First Published Jan 15, 2021, 8:03 AM IST

ಪ್ರಿಯಾ ಕೆರ್ವಾಶೆ

ಈ ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

ಗೃಹಿಣಿಯ ಪಾತ್ರ. ಒಬ್ಬ ಹೋಂ ಮೇಕರ್‌ ಬದುಕಿನಲ್ಲಿ ಏನೆಲ್ಲ ಏರುಪೇರುಗಳಾಗುತ್ತೆ ಅನ್ನೋ ಹಿನ್ನೆಲೆ. ಇದರಲ್ಲಿ ನಾನು ಸ್ಥಿರವಾಗಿ ಒಂದೇ ಥರ ಇರಲ್ಲ. ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತೀನಿ. ಹತ್ತಾರು ಬಗೆಯಲ್ಲಿ ಕಾಣಿಸಿಕೊಂಡಿದ್ದೀನಿ.

Hero fame Ganavi laxman exclusive interview vcs

ನಿಮಗೆ ಈ ಪಾತ್ರ ಯಾಕೆ ಮುಖ್ಯ?

ಒಬ್ಬ ನಟಿಯಾಗಿ ನೀರಿನ ಹಾಗೆ ಎಲ್ಲ ಪಾತ್ರದ ಒಳಹೊಗಬೇಕು. ಎಂಥ ಪಾತ್ರವನ್ನೂ ನಾನು ಚೆನ್ನಾಗಿ ಮಾಡಬಲ್ಲೆ ಅನ್ನೋದನ್ನು ನಿರೂಪಿಸಲಿಕ್ಕೆ ಇದು ದೇವರ ಕೊಟ್ಟಅತ್ಯುತ್ತಮ ಅವಕಾಶ . ಯಾಕೆಂದರೆ ಇಲ್ಲಿ ಎಲ್ಲ ಇಮೋಶನ್‌ಗಳಲ್ಲೂ ಅಭಿನಯಿಸಬೇಕು. ಬಹಳ ಡಿಫರೆಂಟ್‌ ಪಾತ್ರ ಇದು.

ನಿಮಗೆ ಬೆಸ್ಟ್‌ ಅನಿಸಿದ ಶಾಟ್‌?

ಪ್ರತಿಯೊಂದೂ ಬೆಸ್ಟೇ. ಟ್ರೇಲರ್‌ನಲ್ಲಿ ಒಂದು ಕ್ಲಿಪಿಂಗ್‌ ಬರುತ್ತೆ. ಒಂದು ಕಾರಿಡಾರಲ್ಲಿ ನಡ್ಕೊಂಡು ಬಂದು ನನ್ನ ಬಾಯ್‌ಫ್ರೆಂಡ್‌ಅನ್ನು ನೋಡೋದು. ಅಲ್ಲಿರುವ ಭಾವನಾತ್ಮಕತೆ ನನಗೆ ಬಹಳ ಇಷ್ಟಆಯ್ತು.

ಯಪ್ಪಾ!! ರಿಷಬ್ ಶೆಟ್ಟಿ 'ಹೀರೋ' ಟ್ರೇಲರ್ ನೋಡಿದ್ರಾ? 

ಎಷ್ಟೋ ಸಲ ಸಿನಿಮಾ ಮಾಡ್ತಾ ಮಾಡ್ತಾ ಇದು ನನ್ನ ಬದುಕಿಗೆ ಬಹಳ ಹತ್ತಿರದಲ್ಲಿದೆ ಅನಿಸುತ್ತಲ್ಲಾ, ಆ ಥರದ ಅನುಭವಗಳೇನಾದ್ರೂ?

ನಾನ್ಯಾವಾಗಲೂ ನನ್ನ ಕನಸಿನ ಲೋಕದಲ್ಲೇ ಇರುವವಳು. ಈ ಸಿನಿಮಾದಲ್ಲಿ ಬರುವ ಎಲ್ಲ ಘಟನೆಗಳೂ ನನಗೇ ಸಂಬಂಧಪಟ್ಟವೇನೋ ಅಂತನಿಸಿದೆ. ನಾನೊಬ್ಳು ರೈತರ ಮಗಳು. ಕಾಫಿ ಎಸ್ಟೇಟ್‌ನಲ್ಲಿ ಬೆಳೆದವಳು. ಜೀಪ್‌ ಓಡಿಸ್ಕೊಂಡು ತೋಟಕ್ಕೆ ಹೋಗ್ತಿದ್ದೆ. ಜನರ ಜೊತೆಗೆ ಬೆರೆಯುತ್ತಿದ್ದೆ. ಕಷ್ಟಪಡುತ್ತಿದ್ದೆ. ಹೀಗಾಗಿ ಬದುಕನ್ನು ಬಹಳ ಹತ್ತಿರದಿಂದ ನೋಡೋಕೆ ಸಾಧ್ಯ ಆಯಿತು. ಈ ಎಲ್ಲ ನಾನು ಮಾಡಿದ್ದೀನಲ್ಲ ಅಂತ ಅನಿಸಲಿಕ್ಕೆ ಶುರುವಾಯ್ತು.

Hero fame Ganavi laxman exclusive interview vcs

ಈ ಟೀಮ್‌ ಜೊತೆ ಕನೆಕ್ಟ್ ಆಗಿದ್ದು ಹೇಗೆ?

ನಾನು ಮೊದಲ ಅಡಿಶನ್‌ ಕೊಟ್ಟಿದ್ದು ‘ಕಿರಿಕ್‌ ಪಾರ್ಟಿ’ ಚಿತ್ರಕ್ಕೆ. ಆದರೆ ನನ್ನದು ಮೆಚ್ಯೂರ್‌್ಡ ಫೇಸ್‌ ಅನ್ನೋ ಕಾರಣಕ್ಕೆ ಸೆಲೆಕ್ಟ್ ಆಗ್ಲಿಲ್ಲ. ಅಲ್ಲೇ ರಿಷಬ್‌ ಪರಿಚಯವಾಗಿದ್ದು. ‘ನೀವು ನನ್ನ ರಿಜೆಕ್ಟ್ ಮಾಡಿದ್ದು ನಿಮ್ಮ ಫೇಸ್‌ ನೋಡಿಯೇ ಗೊತ್ತಾಯ್ತು, ಇದಾಗಿ ಊಟನೂ ಸೇರಲಿಲ್ಲ, ಐದು ವಾರ ನಿದ್ದೆನೂ ಮಾಡಿಲ್ಲ ಗೊತ್ತಾ?’ ಅಂತ ಈಗಲೂ ರಿಷಬ್‌ ಅವರಲ್ಲಿ ಹೇಳುತ್ತಿರುತ್ತೀನಿ.

ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ- ಗಾನವಿ; ಟೈಟಲ್‌, ಫರ್ಸ್ಟ್‌ ಲುಕ್‌ ಬಿಡುಗಡೆ! 

ಇಷ್ಟೆಲ್ಲ ನಿರೀಕ್ಷೆಗಳ ಭಾರದ ನಡುವೆ ಶೂಟಿಂಗ್‌ ವೇಳೆ ನಿಮಗೆ ಸಿಕ್ಕ ಶಹಭಾಸ್‌ಗಿರಿ?

ಅದು ಬಾಂಬ್‌ ಸೀಕ್ವೆನ್ಸ್‌. ಸಿಜಿ ಇಲ್ಲದೇ ರಿಯಲ್‌ ಬಾಂಬ್‌ ಬ್ಲಾಸ್ಟ್‌ ಥರವೇ ಮಾಡಿದ್ರು. ಆಗ ನನಗೆ ಕೈ ಕಾಲೆಲ್ಲ ತರಚಿದೆ. ಮಂಡಿಗೆ ಏಟಾಗಿದೆ. ಓಡೋದು, ಬೀಳೋದರ ನಡುವೆ ಬೆನ್ನಿಗೂ ವಿಪರೀತ ನೋವಾಗಿದೆ. ಇಷ್ಟೆಲ್ಲ ಆದರೂ ನಾನು ನೆಕ್ಸ್ಟ್‌ಮೂಮೆಂಟ್‌ನಲ್ಲೇ ಮತ್ತೊಂದು ಶಾಟ್‌ಗೆ ರೆಡಿ ಆದೆ. ನೋವಿನಲ್ಲೂ ಚೆನ್ನಾಗಿ ಮಾಡಿದೆ. ಊಟಕ್ಕೆ ಕೂತಿದ್ದಾಗ ರಿಷಬ್‌ ‘ನೀನು ಮುಂಚೆನೇ ನಮಗ್ಯಾಕೆ ಸಿಕ್ಕಿಲ್ಲ, ಇಷ್ಟುವರ್ಷ ಎಲ್ಲಿದ್ದೆ’ ಅಂದ್ರು. ನನ್ನ ಕಣ್ಣು ತುಂಬಿ ಬಂತು.

ಸಿನಿಮಾ ಬಿಟ್ರೆ ಗಾನವಿ ಎಲ್ಲಿ ಸಿಕ್ತಾರೆ ನಮಗೆ?

ಟ್ರಾವೆಲ್‌ನಲ್ಲಿ (ನಗು). ಬೆಂಗಳೂರಿಂದ ನಮ್ಮೂರು ಚಿಕ್ಕಮಗಳೂರಿಗೆ ಹೋಗೋ ಜರ್ನಿಯೇ ಅದ್ಭುತ. ನಾನು ಸಂಪೂರ್ಣ ಕಳೆದುಹೋಗಿರ್ತೀನಿ.

ಗಾನವಿ ಅನ್ನೋ ಚಂದದ ಹೆಸ್ರನ್ನು ನಿಮಗಿಟ್ಟೋರಾರ‍ಯರು?

ಅಮ್ಮ. ನನ್ನ ಈ ಹೆಸರಲ್ಲೊಂದು ಪಾಸಿಟಿವ್‌ ವೈಬ್ರೇಶನ್‌ ಇರೋದು ಗೊತ್ತಾಗ್ತಾ ಇರುತ್ತೆ. ಟಫ್‌ ಹುಡುಗಿ ನಾನು. ಸ್ಪೋಟ್ಸ್‌ರ್‍ ಬ್ಯಾಗ್ರೌಂಡ್‌ ನನ್ನದು. ಈಗಲೂ ಟ್ರೆಕ್ಕಿಂಗ್‌ಗೆಲ್ಲ ಹೋಗ್ತೀನಿ. ಜೀಪ್‌ ಓಡಿಸೋದು ಬಹಳ ಇಷ್ಟ. ಕಾಲೇಜ್‌ ಡೇಸ್‌ನಲ್ಲಿ ಅಪ್ಪನ ಕಣ್ಣು ತಪ್ಪಿಸಿ ಜೀಪ್‌ ರೈಡಿಂಗ್‌ ಕಲಿತದ್ದು. ಈಗಲೂ ಓಡಿಸ್ತೀನಿ.

Follow Us:
Download App:
  • android
  • ios