Asianet Suvarna News Asianet Suvarna News

ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ- ಗಾನವಿ; ಟೈಟಲ್‌, ಫರ್ಸ್ಟ್‌ ಲುಕ್‌ ಬಿಡುಗಡೆ!

ರಿಷಬ್‌ ಶೆಟ್ಟಿ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್‌. 'ಹೀರೋ' ಫಸ್ಟ್ ಲುಕ್‌ ನೋಡಲು ನೀವೆಲ್ಲಾ ರೆಡಿ ನಾ?
 

actor producer rishab shetty hero poster look
Author
Bangalore, First Published Sep 10, 2020, 10:40 AM IST

ಸ್ಯಾಂಡಲ್‌ವುಡ್‌ನ ಕ್ಲಾಸ್ ಡೈರೆಕ್ಟರ್‌ ರಿಷಬ್‌ ಶೆಟ್ಟಿ ಹಾಗೂ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಒಟ್ಟಾಗಿ ಅಭಿನಯಿಸುತ್ತಿದ್ದಾರೆ ಎಂಬ ವಿಚಾರ ಈ ಹಿಂದೆಯೇ ಕೇಳಿ ಬಂದಿತ್ತು ಆದರೆ ಅದು ಯಾವ ಸಿನಿಮಾ, ಯಾರೆಲ್ಲಾ ಅಭಿನಯಿಸುತ್ತಾರೆ ಅದರಲ್ಲಿ ಇವರ ಪ್ರಾತ್ರವೇನು ಎಂಬ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಆದರೀಗ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ರೆಡಿಯಾಗಿದೆ ರಿಷಬ್ ಶೆಟ್ಟಿ ಮತ್ತು ಅವರ ತಂಡ.

ಮಗಳು ಜಾನಕಿ ಗಾನವಿ ಈಗ ರಿಷಬ್‌ ಶೆಟ್ಟಿಸಿನಿಮಾದ ನಾಯಕಿ;40 ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್!

ಹೌದು!  ರೆಟ್ರೋ ಶೈಲಿಯ ಹಾಡಿಗೆ ಇಬ್ಬರು ತೋಟದಲ್ಲಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರನ್ನು ಒಟ್ಟಾಗಿ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ' ಈ ಸಿನಿಮಾ ನನ್ನ ಜೀವನದಲ್ಲಿ ಸಿಕ್ಕಂತ ಬಿಗ್ ಸರ್ಪ್ರೈಸ್. ಈ ಸಂತೋಷವನ್ನು ನನ್ನ ಹಿತೈಷಿಗಳ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಹಿಂದಿನ ಪ್ರಾಜೆಕ್ಟ್‌ಗೆ ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ನಾನು ಚಿತ್ರೀಕರಣದಲ್ಲಿ ಮಜಾ ಮಾಡಿದಷ್ಟೇ ಸಿನಿಮಾ ನೋಡಿ ನೀವು ಎಂಜಾಯ್ ಮಾಡುತ್ತೀರಾ. ರಿಲೀಸ್‌ ಆಗುತ್ತಿರುವ ಟೈಟಲ್‌ ಹಾಗೂ ಫಸ್ಟ್ ಲುಕ್‌ ನೋಡಿ ಶೇರ್ ಮಾಡಿ' ಎಂದು ಗಾನವಿ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

 

ಟೈಟಲ್‌, ಲುಕ್‌ ಹೀಗಿದೆ: 

ಭರತರಾಜ್‌ ರಾಜ್‌ ಅವರ ಚಿತ್ರಕ್ಕೆ ರಿಷಬ್‌ ಶಟ್ಟಿ ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ 'ಹೀರೋ' ಎಂದು ಶೀರ್ಷಿಕೆ ನೀಡಲಾಗಿದೆ. 'You cannot be a hero without being coward' ಎಂದು ಪೋಸ್ಟರ್‌ ಲುಕ್‌ ಮೇಲೆ ಬರೆಯಲಾಗಿದೆ.

 

ಥ್ರಿಲರ್ ಸ್ಕ್ರೀಪ್ಟ್ ಹೊಂದಿರುವ ಈ ಸಿನಿಮಾದ ಚಿತ್ರೀಕರಣ  ಚಿಕ್ಕಮಗಳೂರಿನಲ್ಲಿ  40 ದಿನಗಳಲ್ಲಿ  ಮುಗಿಸಿದ್ದಾರೆ. ಚಿತ್ರದ ಪಾತ್ರಧಾರಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ  ಅರವಿಂದ್ ಕಶ್ಯಪ್ ಛಾಯಾಗ್ರಾಹಣ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ರಿಷಬ್, ಗಾನವಿ, ರಿಷಬ್ ಪತ್ನಿ ಪ್ರಗತಿ ಹಾಗೂ ಶೈನ್‌ ಶೆಟ್ಟಿ ಒಟ್ಟಾಗಿ ಕಾಣಿಸಿಕೊಂಡಿರುವ ಕಾರಣ ಚಿತ್ರದಲ್ಲಿ ಶೈನ್‌ ಕೂಡ ಯಾವುದಾದರೂ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.

Follow Us:
Download App:
  • android
  • ios