'ಬೆಲ್ ಬಾಟಮ್' ಚಿತ್ರದ ನಂತರ ರಿಷಬ್‌ ಶೆಟ್ಟಿ ಮತ್ತೊಂದು ಸೂಪರ್‌ ಹಿಟ್ ಸಿನಿಮಾ ಯಾವಾಗ ರಿಲೀಸ್ ಮಾಡುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳು 'ಹೀರೋ' ಟ್ರೈಲರ್ ನೋಡಿ ಶಾಕ್ ಆಗಿದ್ದಾರೆ. ಕಾಮಿಡಿ, ಲವ್ ಹಾಗೂ ಮಾಸ್ ಆ್ಯಕ್ಷನ್‌ ಇರುವ ಹೀರೋ ಟ್ರೆಂಡಿಂಗ್ ಆಗಿ, ರೆಕಾರ್ಡ್ ಬರೆಯುವದರಲ್ಲಿ ಅನುಮಾನವೇ ಇಲ್ಲ. 

ದರ್ಶನ್‌ ದುಬಾರಿ ಕಾರಲ್ಲಿ ಡ್ರೈವ್‌ ಹೊರಟ ರಿಷಬ್; 'ಕನಸು ನನಸು ಮಾಡೋ ಡಿ-ಬಾಸ್'! 

ಏನೇ ಮಾಡಿದರೂ ನಾವು ಡಿಫರೆಂಟ್ ಎಂದು ಪದೇ ಪದೆ ಪ್ರೋವ್ ಮಾಡುವ ರಿಷಬ್ ಶೆಟ್ಟಿ ಲಾಕ್‌ಡೌನ್‌ ವೇಳೆ ಅತಿ ಕಡಿಮೆ ಅವಧಿಯಲ್ಲಿ ಸೀಮಿತ ಲೊಕೇಶನ್‌ನಲ್ಲಿ ಡಿಫರೆಂಟ್‌ ಆಗಿ ಈ ಸಿನಿಮಾ ರೆಡಿ ಮಾಡಿದ್ದಾರೆ. ಅಶೋಕವನ ಎಸ್ಟೇಟ್ ಹುಡುಕುತ್ತಾ ಹೊರಟ ಚಿತ್ರಕಥೆಗೆ ರಿಷಬ್‌ ದೊಡ್ಡದೊಂದು ಟ್ವಿಸ್ಟ್ ನೀಡುತ್ತಾರೆ.

ಚಿತ್ರದಲ್ಲಿ ರಿಷಬ್‌ ಶೆಟ್ಟಿಗೆ ಜೋಡಿಯಾಗಿ ಕಿರುತೆರೆ ನಾಯಕಿ, ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ. ಭರತ್ ರಾಜ್‌ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್‌ ಸಂಗೀತ ನೀಡಿದ್ದಾರೆ. ಟ್ರೈಲರ್ ಆರಂಭದಲ್ಲಿ ರಕ್ತದೂಕುಳಿಯೇ ಹರಿದಿದೆ. ಆನಂತರ ಕಾಮಿಡಿ ತೋರಿಸಲಾಗಿದೆ. ಟ್ರೈಲರ್‌ನಲ್ಲಿ ಇಷ್ಟೊಂದು ಟ್ವಿಸ್‌ ಇದೆ ಅಂದ್ಮೇಲೆ ಸಿನಿಮಾ ಹೇಗಿರುತ್ತೆ ಹೇಳಿ?

ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ- ಗಾನವಿ; ಟೈಟಲ್‌, ಫರ್ಸ್ಟ್‌ ಲುಕ್‌ ಬಿಡುಗಡೆ! 

ಕಥಾ ಸಂಗಮ ಹಾಗೂ ಬೆಲ್ ಬಾಟಮ್‌ ನಂತರ ರಿಷಬ್ ನಾಥುರಾಮ್, ಹರಿಕಥೆ ಅಲ್ಲ ಗಿರಿಕಥೆ, ಗರುಡ ಗಮನ ವೃಷಭ ವಾಹನ, ಬೆಲ್‌ ಬಾಟಮ್ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀರೋ ಸಿನಿಮಾ ಟ್ರೈಲರ್ ವೀಕ್ಷಿಸಿ ನೆಟ್ಟಿಗರು ರಿಷಬ್‌ ಶೆಟ್ಟಿಯನ್ನು ಕೊಂಡಾಡಿದ್ದಾರೆ.