Asianet Suvarna News Asianet Suvarna News

ಕರ್ನಾಟಕದಲ್ಲಿ ಸಿನಿ ಶೂಟಿಂಗ್‌ಗೆ ಬೆಸ್ಟ್ ಪ್ಲೇಸ್ ಯಾವ್ದು? ಡಾ.ಶ್ರುತಿ ಹತ್ತಿರ ಕೇಳಿ..

ಎಂ.ಜಿ ಶ್ರೀನಿವಾಸ್ ಕನ್ನಡದ ಯುವ ನಟ, ನಿರ್ದೇಶಕರು. ಅವರ ಪತ್ನಿ ಶ್ರುತಿ ಕೂಡ ಶ್ರೀನಿವಾಸ್ ಅವರಂತೆ ಮೂಲತಃ ಮಾಧ್ಯಮ ಕ್ಷೇತ್ರದಿಂದಲೇ ಬಂದವರು. ಸಿನಿಮಾ ಚಿತ್ರೀಕರಣ ನಡೆಯುವ ನಾಡಿನ ವಿಶೇಷ ಸ್ಥಳಗಳ ಮಾಹಿತಿಯುಳ್ಳ 'ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ' ಎನ್ನುವ ಪುಸ್ತಕ ಬರೆದಿರುವ ಡಾ.ಶ್ರುತಿ ಅವರ ಮಾತುಗಳು ಇಲ್ಲಿವೆ.
 

Film escapes in karnataka Author Dr Shrutis interview
Author
Bengaluru, First Published Aug 26, 2020, 4:57 PM IST

ಶ್ರುತಿ ಅವರ ಪೂರ್ತಿ ಹೆಸರು ಶ್ರುತಿ ಇಂದಿರಾ ಲಕ್ಷ್ಮೀನಾರಾಯಣ್. `ಫಿಲ್ಮೀ ಎಸ್ಕೇಪ್ಸ್ ಇನ್ ಕರ್ನಾಟಕ' ಎನ್ನುವುದು ಅವರು ರಚಿಸಿರುವ ಪ್ರಥಮ ಪುಸ್ತಕ. ಕರ್ನಾಟಕ ಸರ್ಕಾರದ ಮೂಲಕ ಮಾರುಕಟ್ಟೆ ಪ್ರವೇಶಿಸಿರುವ ಈ ಆಂಗ್ಲ ಪುಸ್ತಕದಲ್ಲಿ ರಾಜ್ಯದ ಪ್ರಮುಖ ಸಿನಿಮಾ ಚಿತ್ರೀಕರಣಗಳ ಬಗ್ಗೆ ಸವಿವರ ಇದೆ. ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಶ್ರುತಿಗೆ ಸಿನಿಮಾ ಪತ್ರಕರ್ತೆಯಾಗಿ ಮಾಡಿರದಂಥ ಕೆಲಸ ಮಾಡಲು ಇಲ್ಲಿ ಅವಕಾಶ ದೊರಕಿತೆಂದು ಖುಷಿ ಇದೆ. ಇಂಥ ಮಾಹಿತಿಗಳ ಸಂಗ್ರಹಕ್ಕೆ ಮೊದಲೆಲ್ಲ ಕಷ್ಟ ಪಡಬೇಕಾಗಿತ್ತು. ಈಗ ಆನ್ಲೈನಲ್ಲೇ ವಿವರಗಳು ಲಭಿಸುತ್ತವೆ. ಆದರೆ ರಾಜ್ಯ ಸರ್ಕಾರವೇ ಹೊರತಂದ ಈ ಅಧಿಕೃತ ಮಾಹಿತಿ ಪುಸ್ತಕದ ತಯಾರಿ ಮತ್ತು ಹಿನ್ನೆಲೆಯ ಅಂಶಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿದ್ದಾರೆ ಡಾ.ಶ್ರುತಿ ಇಂದಿರಾ.

ಶಶಿಕರ ಪಾತೂರು

`ಪ್ರಾಣಿ' ಪ್ರಿಯೆ ಪದ್ಮಜಾ ರಾವ್!

ಮಾಧ್ಯಮ ಕ್ಷೇತ್ರಕ್ಕೆ ಬರಬೇಕು ಅನಿಸಿದ್ದೇಕೆ?
ನನ್ನ ತಾಯಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿದ್ದವರು. ಅವರ ಹೆಸರು ಆರ್ ಇಂದಿರಾ. ಸ್ಥಳೀಯ ಪತ್ರಿಕೆಗಳಿಂದ ಹಿಡಿದು, ನಾಡಿನ ಜನಪ್ರಿಯ ದೈನಿಕಕ್ಕೆ ಕೂಡ ಅವರು ಅಂಕಣ ಬರೆಯುತ್ತಿದ್ದರು. ಮಾತ್ರವಲ್ಲ, ಅವರ ಬರವಣಿಗೆಗಳಿಂದ ಪ್ರಭಾವಗೊಂಡು ಬದುಕನ್ನು ಪಾಸಿಟಿವ್ ಆಗಿ ಬದಲಾಯಿಸಿದವರ ಬಗ್ಗೆ ನನಗೆ ಗೊತ್ತು. ಹಾಗಾಗಿ ಬರಹ ಮಾಧ್ಯಮದ ಮೂಲಕ ಬದಲಾವಣೆ ತರಬಹುದೆನ್ನುವ ನಂಬಿಕೆ ಇತ್ತು. ಮಾತ್ರವಲ್ಲ, ಜನರೊಂದಿಗೆ ಮಾತನಾಡುವುದು, ಬೆರೆಯುವುದು ಅಂದರೆ ನನಗೂ ತುಂಬ ಇಷ್ಟ. ಹಾಗಾಗಿ ಮಾಧ್ಯಮ ಕ್ಷೇತ್ರವನ್ನು ಆಯ್ಕೆ ಮಾಡಲು ನನಗೆ ಅಮ್ಮನೇ ಕಾರಣ. ಇನ್ನು ಮಾಧ್ಯಮದಲ್ಲಿ ಸಿನಿಮಾ ವಿಭಾಗ ಎನ್ನುವುದು ಹೆಚ್ಚು ಜನರಿಂದ ಆಕರ್ಷಣೆಗೆ ಒಳಗಾಗಿರುವ ಕಾರಣ ಅದನ್ನೇ ಆಯ್ಕೆ ಮಾಡಿಕೊಂಡೆ. ಈಗ ಸಿನಿಮಾ ಬರವಣಿಗೆ ಎನ್ನುವುದು ಸಿನಿಮಾಗಾಗಿ ಬರವಣಿಗೆ ಬರೆಯುವ ತನಕ ಮುಂದುವರಿದಿದೆ. ಅದೇ ಸಂದರ್ಭದಲ್ಲಿ ಫ್ರೀಲೇನ್ಸ್ ಜರ್ನಲಿಸಂ ಮಾಡುತ್ತಲೇ ಇರುತ್ತೇನೆ.

ನನಗೆ ರಾಜಕೀಯವೂ ಬೇಡ, ಪ್ರಜಾಕೀಯವೂ ಬೇಡ- ಚೇತನ್

`ಫಿಲ್ಮೀ ಎಸ್ಕೇಪ್ಸ್ ಇನ್ ಕರ್ನಾಟಕ' ಪುಸ್ತಕ ಬರೆದ ಅನುಭವ ಹೇಗಿತ್ತು?
ಪುಸ್ತಕದಲ್ಲಿ ಮೂರು ವಿಭಾಗವಿದೆ. ಟ್ರಾವೆಲ್, ಫುಡ್ ಮತ್ತು ಸಿನಿಮಾ. ಅದರಲ್ಲಿ ಸಿನಿಮಾ ಮಾತ್ರ ನಾನು ಬರೆದಿದ್ದೇನೆ. ಇದರಲ್ಲಿ ತುಂಬ ಮಂದಿಯ ಸಹಕಾರ ಇದೆ. ಪುಸ್ತಕದ ತಯಾರಿಗೆ ಸಾಕಷ್ಟು ಹಿರಿಯ ಪತ್ರಕರ್ತರು, ಫಿಲ್ಮ್ ಮೇಕರ್ಸ್ ನಾಗಾಭರಣ, ರಾಜೇಂದ್ರ ಸಿಂಗ್ ಬಾಬು ಮೊದಲಾದ ಗಣ್ಯರು ನನಗೆ ತಮ್ಮ ಸಾಕಷ್ಟು ಸಮಯ ನೀಡಿ ಅನುಭಗಳನ್ನು ಹಂಚಿಕೊಂಡು ಸಹಾಯ ಮಾಡಿದ್ದಾರೆ. ವೈಯಕ್ತಿಕವಾಗಿ ಹೇಳಬೇಕೆಂದರೆ ಹತ್ತು ವರ್ಷಗಳ ಕಾಲ ಮಾಧ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಪತ್ರಿಕೆ, ಆನ್ಲೈನ್, ಟಿವಿ ಮಾಧ್ಯಮಗಳಲ್ಲಿ ರಿಪೋರ್ಟಿಂಗ್ ಆಂಕರಿಂಗ್ ಎಲ್ಲ ಕೆಲಸ ಮಾಡಿದ್ದೇನೆ. ಮಾಸ್ ಕಮ್ಯುನಿಕೇಶನಲ್ಲಿ ಪಿಎಚ್ ಡಿ ಮಾಡಿದ್ದೇನೆ. ಆದರೆ ಈ ಪುಸ್ತಕದ ರಚನೆ ಅವೆಲ್ಲವನ್ನು ಮೀರಿದ ಹೊಸ ಅನುಭವ ಆಗಿತ್ತು. ವಿಶೇಷವಾಗಿ ಪುಸ್ತಕಕ್ಕಾಗಿ ಮಹದೇವಪುರದ ಜನರು ಸೇರಿದಂತೆ ಸ್ಥಳೀಯರು ತುಂಬ ಹೆಚ್ಚು ಇನ್ ಪುಟ್ ನೀಡಿದ್ದಾರೆ. ಪುಸ್ತಕದಲ್ಲಿ ಹೇಳದ ಇನ್ನಷ್ಟು ವಿಚಾರಗಳು ಇವೆ. ಇನ್ನಷ್ಟು ಪುಟಗಳನ್ನು ಹೆಚ್ಚಿಸಬಹುದಿತ್ತು. ಮುಂದೆಯೂ ನಿಮ್ಮ ಕಾಂಟ್ರಿಬ್ಯೂಟ್ ಬಯಸುತ್ತೇವೆ ಎಂದು ಕೆಎಸ್ ಟಿಡಿಸಿಯ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಪುಷ್ಕರ್ ಅವರೇ ಹೇಳಿದ್ದಾರೆ. ಖುಷಿಯಾಗಿದೆ. 
Film escapes in karnataka Author Dr Shrutis interview

ಮಾತೃ ಸೇವೆಯಲ್ಲಿ ಶ್ರೀಧರ್ ಧನ್ಯ

ಹೊಸ ಪುಸ್ತಕ ರಚನೆಯ ಸಿದ್ಧತೆಯಲ್ಲಿದ್ದೀರ?
ಹೌದು. ನಿಜ ಹೇಳಬೇಕೆಂದರೆ ಈಗ ಪ್ರಕಟವಾಗಿರುವುದು ನನ್ನ ಎರಡನೇ ಪುಸ್ತಕ ಎನ್ನಬಹುದು. ಯಾಕೆಂದರೆ ಮೊದಲು ಆರಂಭಿಸಿದ ಪುಸ್ತಕ ಕಾರಣಾಂತರಗಳಿಂದ ಮುಗಿಸುವುದು ತುಸು ತಡವಾಗಿದೆ. ಹಾಗಾಗಿ ಎರಡನೇ ಪುಸ್ತಕವಾಗಿ ಸದ್ಯದಲ್ಲೇ ಅದರ ಬಿಡುಗಡೆ ಆಗಲಿದೆ. ಅದು ಶ್ರವಣ ಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಪುಸ್ತಕ. ಹೆಸರು `ಪಿನಾಕ್ಲ್ ಆಫ್ ಹ್ಯೂಮಾನಿಟಿ'. ಅದು ಸುಮಾರು ಎಂಬತ್ತು ಪುಟಗಳ ದೊಡ್ಡ ಪುಸ್ತಕವಾಗಿದ್ದು, ಸಾಕಷ್ಟು ಛಾಯಾಚಿತ್ರಗಳೂ ಅದರಲ್ಲಿರುತ್ತವೆ.  ಅಲ್ಲಿನ ಶಿಲ್ಪಕಲೆಯ ಜತೆಗೆ ಮೂಲತಃ ಅಲ್ಲಿನ ಆಚರಣೆಗಳಲ್ಲಿ ಏನು ಸಂಪ್ರದಾಯಗಳು ಅಡಕವಾಗಿದೆಯೋ  ಅವೆಲ್ಲವನ್ನು ಹೇಳಲಾಗಿದೆ. ನಾನು ಮಾಧ್ಯಮದಲ್ಲಿ ಸಿನಿಮಾ ಮನರಂಜನೆಯ ವಿಭಾಗದ ಬಗ್ಗೆ ಬರೆಯುತ್ತಿದ್ದ ಕಾರಣ, ನನಗೆ ಇದು ಮತ್ತೊಂದು ರೀತಿಯ ಹೊಸ ಅನುಭವವನ್ನೇ ನೀಡಿದೆ. ಇದರ ಜತೆಗೆ ನನ್ನದೇ ಎಸ್ ಐಎಲ್ ಎನ್ನುವ ಮೀಡಿಯಾ ಪ್ರೊಡಕ್ಷನ್ ಓಪನ್ ಮಾಡಿದ್ದೇನೆ. ಅಲ್ಲಿಯೂ ಬರವಣಿಗೆ  ಮುಂದುವರಿಸಿದ್ದೇನೆ. ನಮ್ಮ ಸಿನಿಮಾ ಬರಹಗಾರರ ತಂಡದ ಐದು ಮಂದಿಯಲ್ಲಿ ನಾನೂ ಒಬ್ಬಳಾಗಿದ್ದೇನೆ. ಒಟ್ಟಿನಲ್ಲಿ ಬರವಣಿಗೆ ಮುಂದುವರಿಯುತ್ತಲೇ ಇರುತ್ತದೆ.

Follow Us:
Download App:
  • android
  • ios