Asianet Suvarna News Asianet Suvarna News

'ತ್ರಿಬಲ್ ರೈಡಿಂಗ್‌'ಗೆ ಹೊರಟಿದ್ದಾರೆ ರಾಜಶೇಖರ್!

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ಚಿತ್ರ 'ತ್ರಿಬಲ್ ರೈಡಿಂಗ್'. ಆದರೆ ಇಲ್ಲಿರುವ ವಿಚಾರ ರೈಟಿಂಗ್ ಬಗ್ಗೆ! ಕೆ.ಎಲ್ ರಾಜಶೇಖರ್ ಎನ್ನುವ ಪ್ರತಿಭಾವಂತ ಬರಹಗಾರ ಗುರುತಿಸಿಕೊಂಡಿದ್ದು ಕಿರುತೆರೆಯ ಮಜಾ ಟಾಕೀಸ್ ಮೂಲಕ. ಆದರೆ ಈಗ ಇವರನ್ನು ಮೆಚ್ಚುತ್ತಿದ್ದಾನೆ ಟಾಕೀಸ್‌ನಲ್ಲಿ ಕುಳಿತ ಪ್ರೇಕ್ಷಕ. ಅದಕ್ಕೆ ಕಾರಣ ಸಿನಿಮಾಗಳಿಗೆ  ಆಕರ್ಷಕ  ಸಂಭಾಷಣೆ ಬರೆಯುವ ಇವರ ಕಾಯಕ.

Dialogue writer k Rajashekhar exclusive  interview
Author
Bangalore, First Published Feb 27, 2020, 3:54 PM IST

- ಶಶಿಕರ ಪಾತೂರು.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ಚಿತ್ರ 'ತ್ರಿಬಲ್ ರೈಡಿಂಗ್'. ಆದರೆ ಇಲ್ಲಿರುವ ವಿಚಾರ ರೈಟಿಂಗ್‌ನ ರೈಟಿಂಗ್ ಬಗ್ಗೆ! ಕೆ.ಎಲ್ ರಾಜಶೇಖರ್ ಎನ್ನುವ ಪ್ರತಿಭಾವಂತ ಬರಹಗಾರ ಗುರುತಿಸಿಕೊಂಡಿದ್ದು ಕಿರುತೆರೆಯ ಮಜಾ ಟಾಕೀಸ್ ಮೂಲಕ. ಆದರೆ ಈಗ ಇವರನ್ನು ಮೆಚ್ಚುತ್ತಿದ್ದಾನೆ ಟಾಕೀಸ್‌ನಲ್ಲಿ ಕುಳಿತ ಪ್ರೇಕ್ಷಕ. ಅದಕ್ಕೆ ಕಾರಣ ಸಿನಿಮಾಗಳಿಗೆ  ಆಕರ್ಷಕ  ಸಂಭಾಷಣೆ ಬರೆಯುವ ಇವರ ಕಾಯಕ. `ವಿಕ್ಟರಿ 2' ಮೂಲಕ ಸುದ್ದಿ ಮಾಡಿದ್ದ ರಾಜಶೇಖರ್, ಇದೀಗ ದರ್ಶನ್ ನಾಯಕರಾಗಿ ಬಿಡುಗಡೆಗೆ ಸಿದ್ಧವಾಗಿರುವ ರಾಬರ್ಟ್ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಸದ್ಯಕ್ಕೆ ಕನ್ನಡದ ಬಿಡುವಿಲ್ಲದ ಬರಹಗಾರರಾಗಿರುವ ಇವರ ಕೈಯ್ಯಲ್ಲಿ ಸದಾ ಎರಡು, ಮೂರು ಸಿನಿಮಾಗಳು ಸರದಿಯಲ್ಲಿರುತ್ತವೆ ಎನ್ನುವುದು ಸತ್ಯ. ಪ್ರಸ್ತುತ ತ್ರಿಬಲ್ ರೈಡಿಂಗ್ ಚಿತ್ರದ ಜತೆಗೆ ಸದ್ಯಕ್ಕೆ `ವರ್ಜಿನ್' ಎಂದು ಹೆಸರಿಡಲಾಗಿರುವ ಮದರಂಗಿ ಕೃಷ್ಣ ಅವರ ಸಿನಿಮಾ, ಚಿರಂಜೀವಿ ಸರ್ಜಾ ಅವರ ಹೊಸ ಸಿನಿಮಾ ಸೇರಿದಂತೆ ಮತ್ತೊಂದು ಹೊಸಬರ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಆದರೆ ನಟರಾಗಲೆಂದು ಬಂದ ರಾಜಶೇಖರ್ ನಿರ್ದೇಶನ ವಿಭಾಗ, ಸಂಭಾಷಣೆ ಮತ್ತು ಈಗ ನಟನೆ ಹೀಗೆ ಜನಪ್ರಿಯರಾಗುತ್ತಿದ್ದಾರೆ. ಈ ಮೂರು ವಿಭಾಗಗಳ ತ್ರಿಬಲ್ ರೈಡಿಂಗ್ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಅವರು ಮಾತನಾಡಿದ್ದಾರೆ. 

`ನನ್ನ ರೀತಿ ನೀತಿಯೇ ವಿಭಿನ್ನ' ಎನ್ನುತ್ತಾರೆ ಸ್ವಾತಿ..!

ಮೂರು ವಿಭಾಗಗಳಲ್ಲಿ ಏಕ ಕಾಲದಲ್ಲಿ ಗುರುತಿಸುತ್ತಿರುವುದರ ಗುಟ್ಟೇನು?

ಇಂದು ನಾನು ಸಿನಿಮಾ ರಂಗದಲ್ಲಿ ನಾನು ಸಸ್ಟೈನ್ ಆಗಿದ್ದೀನಿ ಅನ್ನೋದಕ್ಕೆ ಕಾರಣ, ಕಲಾ ಸರಸ್ವತಿ ನನಗೆ ಮೂರು ಮೂರು ವಿಭಾಗದಲ್ಲಿ ನನಗೆ ಆಶೀರ್ವಾದ ಮಾಡಿರುವುದೇ ಆಗಿದೆ. ನಾನು ಇಂಡಸ್ಟ್ರಿಗೆ ಬಂದದ್ದು ಬರೀ ಆಕ್ಟರ್ ಆಗಬೇಕೂಂತ. ಆದರೆ ಹಾಗೆ ಬೆಳೆಯುವವರೆಗೆ ಜೀವನ ಕಷ್ಟ ಆಗುತ್ತೆ ಅಂತ  ಡೈರೆಕ್ಷನ್ ಡಿಪಾರ್ಟ್‌ಮೆಂಟ್ ನಲ್ಲಿ ಕೆಲಸ ಶುರು ಮಾಡಿದೆ.  ಆದರೆ ಡೈರೆಕ್ಷನ್ ಡಿಪಾರ್ಟ್‌ಮೆಂಟಲ್ಲೂ ಕೆಲವೊಂದು ಸಲ ಕೆಲಸ ಇರುತ್ತಿರಲಿಲ್ಲ.  ಆದರೆ ಸುಮ್ಮನೆ ಕೂರೋಕೆ ಆಗಲ್ಲ. ಬೇರೆ ಕೆಲಸ ಮಾಡೋಕೆ ಮನಸ್ಸೂ ಬರಲ್ಲ. ಅನಿರ್ವಾಯವಾಗಿ ರೈಟರ್ ಆಗಿ ಕೆಲಸ ಮಾಡೋ ಒಂದು ಅವಕಾಶ ಬಂದಾಗ, ಎಲ್ಲಕ್ಕಿಂತ ಜಾಸ್ತಿ ನನ್ನ ಕೈ ಹಿಡಿದದ್ದು ಬರವಣಿಗೆ. ಆಕ್ಟಿಂಗ್, ಡೈರೆಕ್ಷನ್ ಜತೆ ಜತೆಗೆ ಈ ರೈಟಿಂಗ್ ಕೆಲಸವನ್ನೂ ಮಾಡಿದೆ. ಆದರೆ ದೊಡ್ಡ ಮಟ್ಟದಲ್ಲಿ ಹೆಸರು ದುಡ್ಡು ತಂದುಕೊಟ್ಟಿದ್ದು ಅಂದರೆ ರೈಟಿಂಗ್. ತುಂಬಾ ಜನರಿಗೆ ನಾನು ರೈಟರ್ ಅನ್ನೋದೇ ಗೊತ್ತಿರಲಿಲ್ಲ. ಸೀರಿಯಲ್‌ಗಳಲ್ಲಿ ಮಜಾ ಟಾಕೀಸ್‌ನಲ್ಲಿ ಸಿನಿಮಾದಲ್ಲಿ ಅಭಿನಯಿಸಿದ್ದರಿಂದ ಎಲ್ಲರೂ ನನ್ನ ಬರೀ ಆಕ್ಟರ್  ಅಂದುಕೊಂಡೇ ಮಾತಾಡಿಸ್ತಾ ಇದ್ರು. ಆಮೇಲೆ ಮಜಾ ಟಾಕೀಸ್ ರೈಟರ್ ಅಂತ ಒಂದು ಸಲ ಸೃಜನ್ ಅವರೇ ಒಂದ್ಸಲ ಸ್ಟೇಜಲ್ಲಿ ಪರಿಚಯ ಮಾಡಿಸಿದ್ರು. `ಇವರೇ ಮಜಾ ಟಾಕೀಸ್ ಎಪಿಸೋಡ್ ನ ಬರೆಯೋ ಮೇಷ್ಟ್ರು' ಅಂತ. ಕೆಲವೊಂದು ಆರ್ಟಿಕಲ್ ಬಂತು ಬರೀ ಆಕ್ಟರ್ ಮಾತ್ರ ಅಲ್ಲ ರೈಟರ್  ಕೂಡ ಅಂತ. ಆಮೇಲೇನೇ ಜನ ರೈಟರ್ ಅಂತ ಗುರುತಿಸಿದ್ದು, ಮೆಚ್ಚಿದ್ದು ಎಲ್ಲ. 

ಪ್ರಶಂಸೆ ಮಾತ್ರ ಸಾಕಾಗಲ್ಲ, ಕಲೆಕ್ಷನ್‌ ಮುಖ್ಯ: ಅಶೋಕ್‌

ರೈಟರ್ ಆಗಿ ನಿಮಗೆ ಇಷ್ಟೊಂದು ಡಿಮ್ಯಾಂಡ್ ಸೃಷ್ಟಿಯಾಗಲು ಕಾರಣವೇನು?

ನಾನು ಯಾವುದೇ ಒಂದು  ಬ್ರಾಂಡ್‌ಗೆ ಫಿಕ್ಸ್ ಆಗಿಲ್ಲ. ಅಂದರೆ ಇವನು ಕಾಮಿಡಿ ಮಾತ್ರ ಬರೆಯೋದು, ಇವನು  ಸೆಂಟಿಮೆಂಟಿಗೆ ಮಾತ್ರ ಲಾಯಕ್ಕು ಅಂತ ಹೇಳುವಂತಿಲ್ಲ. ಸಾಮಾನ್ಯವಾಗಿ ನಮ್ಮಲ್ಲಿನ ಬರಹಗಾರರು ಎಲ್ಲರೂ ಎಲ್ಲವನ್ನು ಬರೆಯುತ್ತಾರೆ. ಆದರೆ ಅವರಿಗೇ ಗೊತ್ತಿಲ್ಲದಂತೆ  ಚಿತ್ರರಂಗ ಅವರನ್ನು ಇದೇ ಜಾನರ್ ಗೆ ಇರಲಿ ಎಂದು ಫಿಕ್ಸ್ ಮಾಡಿ ಬಿಟ್ಟಿರುತ್ತದೆ. ಹಾಗಾಗಿ ನನಗೂ ಆ ತರಹ ಆಗ್ತೀನಿ ಅಂತ ಭಯ ಇತ್ತು. ಆದರೆ ನಾನು ಆ ತರಹ ಆಗೋಕೆ ಬಿಡಲಿಲ್ಲ. ಕಾಮಿಡಿ ಬಂದರೆ ಕಾಮಿಡಿ, ಮಾಸ್, ಸೆಂಟಿಮೆಂಟ್ ಎಲ್ಲಾ ಮಾಡಿದೆ. `ಅಮ್ಮಾ ಐ ಲವ್ ಯು' ಇಮೋಷನಲ್ ಸಿನಿಮಾ, `ವಿಕ್ಟರಿ 2' ಕಾಮಿಡಿ ಚಿತ್ರ, `ರಾಬರ್ಟ್' ಪಕ್ಕಾ ಮಾಸ್,  `ಬಿಲ್ ಗೇಟ್ಸ್' ಎಲ್ಲವೂ ಮಿಕ್ಸ್, ಮೆಸೇಜ್ ಇರುವಂತಹದ್ದು! ಹಾಗಾಗಿ ಬರಹಗಾರನಾಗಿ ನನ್ನನ್ನು ಇಮೇಜ್‌ಗೆ ಫಿಕ್ಸ್ ಮಾಡಲು ಸಾಧ್ಯವಿಲ್ಲ! ಈಗ ಮಾಡ್ತಿರೋ ಗಣೇಶ್ ಅವರ ಸಿನಿಮಾ `ತ್ರಿಬಲ್ ರೈಡಿಂಗ್' ಕಾಮಿಡಿ, ಮತ್ತೊಂದು ಚಿತ್ರ `ವರ್ಜಿನ್' ಸಿನಿಮಾ ಸೋಶಿಯಲ್ ಮೆಸೇಜ್ ಇರೋ ಸಿನಿಮಾ. ಹೀಗೆ ಎಲ್ಲಾ ತರಹ ಕಂಟೆಂಟಲ್ಲಿ ವರ್ಕ್ ಮಾಡಿರುವುದರಿಂದ ಇಂಡಸ್ಟ್ರಿನಲ್ಲಿ ಮಾಡಿರೋದರಿಂದ ಇಷ್ಟು ಬಿಝಿಯಾಗಿದ್ದೀನಿ ಅಂತ ಹೇಳಬಹುದು.

ಬರವಣಿಗೆ ಮತ್ತು ನಟನೆ ಎರಡರ ಹೊಂದಾಣಿಕೆ ಹೇಗೆ?

ನನ್ನ ನಟನೆಯ ಬಿಲ್ ಗೇಟ್ಸ್ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಚಿತ್ರಕ್ಕೆ ಸಂಭಾಷಣೆಯೂ ನನ್ನದೇ ಇತ್ತು. ಸಾಧ್ಯವಾದಷ್ಟು ಬರವಣಿಗೆ ಜೊತೆಗೆ ಆಕ್ಟಿಂಗ್ ಮಾಡ್ತಾ ಇರ್ತೀನಿ. ಡೇ ಟೈಮಲ್ಲಿ ಆಕ್ಟಿಂಗ್ ಮಾಡ್ತೀನಿ, ನೈಟ್ ಎಲ್ಲಾ ಕುಳಿತುಕೊಂಡು ಬರೆಯುತ್ತಾ ಇರ್ತೀನಿ. ಇತ್ತೀಚೆಗೆ `ಚೆಕ್ ಮೇಟ್' ಅಂತ ಸಿನಿಮಾ ಮುಗಿಸಿದೆ. ಅದರಲ್ಲಿ ಹೀರೋ ಫ್ರೆಂಡ್ ಕ್ಯಾರೆಕ್ಟರ್.  ಹೀರೋದು ಲವ್ ಎಪಿಸೋಡ್ ಬರುತ್ತೆ ಸಿನಿಮಾದಲ್ಲಿ, ಅದರಲ್ಲಿ ಫುಲ್ ಹೀರೋ ಜತೆಗೆ ಇರುವಂಥ ತುಂಬ ಮನಸೆಳೆಯುವ ಪಾತ್ರವನ್ನು ಮಾಡಿದ್ದೇನೆ. `ರೆಡಿ' ಅಂತ ಒಂದು ಸಿನಿಮಾ, ಇನ್ನೊಂದು ಹೊಸಬರ ಚಿತ್ರ ಹೀಗೆ ಆಕ್ಟಿಂಗ್ ಅವಕಾಶ ಸಿಕ್ಕಾಗಲೆಲ್ಲ ಒಪ್ಪಿಕೊಂಡಿದ್ದೇನೆ. ಮೊದಲು ನಟನಾಗುವ ಹುಚ್ಚಿತ್ತು ನಿಜ. ಹಾಗಂತ  ರೈಟಿಂಗ್ ಜತೆಗೆ ಆಕ್ಟಿಂಗ್ ಅವಕಾಶ ಕೊಡುತ್ತೀನಿ, ಫ್ರೀಯಾಗಿ ಮಾಡು ಎಂದರೆ ಮಾಡು ಎಂದರೆ ಒಪ್ಪುವ ಜಾಯಮಾನ ನನ್ನದಲ್ಲ. ಯಾಕೆಂದರೆ ಎರಡುಪಟ್ಟು ಶ್ರಮ ಹಾಕುವಾಗ ಅದೇ ರೀತಿಯಲ್ಲಿ ಪ್ರತಿಫಲ ನಿರೀಕ್ಷಿಸುವುದು ಕೂಡ ತಪ್ಪಲ್ಲವಲ್ಲ.

Follow Us:
Download App:
  • android
  • ios