ಪ್ರಶಂಸೆ ಮಾತ್ರ ಸಾಕಾಗಲ್ಲ, ಕಲೆಕ್ಷನ್‌ ಮುಖ್ಯ: ಅಶೋಕ್‌

ಐಎಂಡಿಬಿ ರೇಟಿಂಗ್‌ನಲ್ಲಿ ‘ದಿಯಾ’ ಚಿತ್ರಕ್ಕೆ ಹತ್ತರಲ್ಲಿ 9.6 ಮಾರ್ಕ್ಸ್‌ ಬಂದಿದೆ. ರಕ್ಷಿತ್‌ ಶೆಟ್ಟಿಯಂಥಾ ಸ್ಟಾರ್‌ ನಟ, ‘ಈ ಸಿನಿಮಾ ನೋಡಿ, ಇಷ್ಟಆಗ್ಲಿಲ್ಲ ಅಂದ್ರೆ ದುಡ್ಡು ವಾಪಾಸ್‌ ಕೊಡ್ತೀನಿ’ ಅಂದಿದ್ರು. ಇಂಥದ್ದೊಂದು ಗಟ್ಟಿಕಥೆಯ ಸಿನಿಮಾದ ಹಿಂದಿನ ಸೂತ್ರಧಾರ ಕೆ.ಎಸ್‌ ಅಶೋಕ. ಈ ಹಿಂದೆ 6-5=2 ನಂಥಾ ಸಿನಿಮಾ ನಿರ್ದೇಶಿಸಿರುವ ಅಶೋಕ ಇಲ್ಲಿ ತುಸು ಸಂಕೋಚದಿಂದಲೇ ತಮ್ಮ ಆಲೋಚನೆಗಳನ್ನು ತೆರೆದಿಟ್ಟಿದ್ದಾರೆ.

Kannada movie dia director ashok talks about movie collection

ಪ್ರಿಯಾ ಕೆರ್ವಾಶೆ

ಬಹುಶಃ ಆ ಭಯವೇ‘ದಿಯಾ’ ಸಿನಿಮಾ ಬಿಡುಗಡೆಗೆ ಇಷ್ಟುವಿಳಂಬವಾದದ್ದಕ್ಕೆ ಕಾರಣ ಅನಿಸುತ್ತೆ. ನಾವು ಮಾಡ್ತಿರೋದು ಸರಿನಾ ತಪ್ಪಾ, ಜನ ತಗೊಳ್ತಾರಾ ಅನ್ನೋ ಗೊಂದಲದಲ್ಲೇ ಒಂದಿಷ್ಟುಸಮಯ ಕಳೆದು ಹೋಯ್ತು.

ಮತ್ತೊಂದು ಅಂಶ ಅಂದರೆ ನನಗೆ ಟ್ರಯಲ್‌ ಆ್ಯಂಡ್‌ ಎರರ್‌ನಲ್ಲಿ ನಂಬಿಕೆ. ಮಾಡಿದ್ದನ್ನು ಮತ್ತೆ ಮತ್ತೆ ಸರಿ ಮಾಡ್ತಾ ತಿದ್ದುತ್ತಾ ಹೋಗ್ಬೇಕು. ನಿಯರ್‌ ಟು ಫರ್ಫೆಕ್ಷನ್‌ ಅಂತಾರಲ್ಲ ಹಾಗೆ. ನಾವ್ಯಾರೂ ಎಷ್ಟೇ ಕಷ್ಟಪಟ್ಟರೂ ಹಂಡ್ರೆಂಡ್‌ ಪರ್ಸೆಂಟ್‌ ಅಂದುಕೊಂಡ ಹಾಗೆ ಮಾಡಕ್ಕಾಗಲ್ಲ. ಅಟ್‌ಲೀಸ್ಟ್‌ 95 ಪರ್ಸೆಂಟ್‌ ಆದ್ರೂ ಮಾಡಬೇಕು. ನಾವು ಮಾಡಿದ್ದು ನಮಗೇ ಸರಿ ಅನಿಸಬೇಕು. ಇದಲ್ಲದೇ ಸರಿಹೊಂದುವ ನಟರನ್ನು ಹುಡುಕೋದಕ್ಕೇ ಒಂದು ವರ್ಷ ತಗೊಂಡ್ವಿ. ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಆಗ ಬ್ಯುಸಿಯಾಗಿದ್ದರು. ಅವರನ್ನು ಬಿಟ್ಟು ಬೇರೆಯವ್ರನ್ನು ಹಾಕ್ಕೊಳæೂೕ ಚಾನ್ಸೇ ಇರಲಿಲ್ಲ. ಅವರಿಗಾಗಿ ಕಾದ್ವಿ. ಇದರ ಜೊತೆಗೆ ನನ್ನ ಕಾರಣಕ್ಕೂ ಸಿನಿಮಾ ವಿಳಂಬವಾಗ್ತಾ ಹೋಯ್ತು.

ಚಿತ್ರ ವಿಮರ್ಶೆ : ದಿಯಾ

ಈ ಬಗೆಯ ಮೆಚ್ಚುಗೆ ಬರಬಹುದು ಅನ್ನುವ ನಿರೀಕ್ಷೆ ಇತ್ತಾ?

ನಮಗೆ ಆ ನಿರೀಕ್ಷೆ ಇರಲಿಲ್ಲ. ಆದರೆ ಒಂದು ಲೆಕ್ಕಾಚಾರ ಇರುತ್ತೆ. ಒಬ್ಬ ಡೈರೆಕ್ಟರ್‌ ತನಗನಿಸಿದ್ದನ್ನು ಮಾಡ್ತಾ ಹೋದಾಗ ಅವಗೊಂದು ತೃಪ್ತಿ ಸಿಕ್ಕರೆ ಉಳಿದವರಿಗೂ ಇಷ್ಟವಾಗಬಹುದು ಅಂತ. ಆದರೆ ಬರೀ ಮೆಚ್ಚುಗೆಯಷ್ಟೇ ಸಾಕಾಗಲ್ಲ. ಜೊತೆಗೆ ರೆವೆನ್ಯೂ ಬೇಕಾಗುತ್ತೆ. ನಿರ್ಮಾಪಕರು ಅಷ್ಟುಬಂಡವಾಳ ಹಾಕಿರ್ತಾರಲ್ಲಾ, ಅವರಿಗೆ ನಷ್ಟಆಗಬಾರದು. ಒಂದಂತೂ ಸತ್ಯ, ನಿಮ್ಮ ಸಿನಿಮಾಕ್ಕೆ ಎಷ್ಟೇ ಪ್ರಶಂಸೆ ವ್ಯಕ್ತವಾದರೂ ಎಂಡ್‌ ಆಫ್‌ ದ ಡೇ ಕೌಂಟ್‌ ಆಗೋದು ಸಿನಿಮಾ ಕಮರ್ಷಿಯಲೀ ಎಷ್ಟುಸಕ್ಸಸ್‌ ಆಗಿದೆ ಅನ್ನೋದೇ.

ನಿಮ್ಮ ಸಿನಿಮಾ ರಿಲೀಸ್‌ ಆದ ಸಂದರ್ಭ ಪ್ರವಾಹದಂತೆ ಸಿನಿಮಾಗಳು ಬಂದವು. ಇದರ ಪರಿಣಾಮ ಹೇಗಿತ್ತು?

ಖಂಡಿತಾ ಆಗಿದೆ. ನೂರಕ್ಕೆ ನೂರರಷ್ಟೂಅಫೆಕ್ಟ್ ಆಗಿದೆ. ಒಂದೇ ಸಲ ಅಷ್ಟೊಂದು ಸಿನಿಮಾಗಳು ಹೊರಬಿದ್ದಾಗ ಪ್ರತಿಯೊಂದಕ್ಕೂ ಥಿಯೇಟರ್‌ ಕೊಡಲೇ ಬೇಕಾಗುತ್ತೆ. ಆಗ ಚೆನ್ನಾಗಿ ಓಡಬಹುದಾದ ಸಿನಿಮಾಕ್ಕೆ ಪೆಟ್ಟು ಬಿದ್ದೇ ಬೀಳುತ್ತೆ. ಇದು ಮುಖ್ಯ ಸಮಸ್ಯೆ.

ಸ್ಟಾರ್‌ ನಟರ ದಿಲ್ ಗೆದ್ದ ದಿಯಾ; ಒಳ್ಳೆಯ ಸಿನಿಮಾಗಳಿಗೆ ರಕ್ಷಿತ್ ಸಾಥ್!

ಸಿನಿಮಾ ಅಂದ್ರೆ ಹಾಡು, ಫೈಟು, ಹೀರೋಯಿಸಂ ಇರಬೇಕು ಅನ್ನೋ ಮಿಥ್‌ ಒಡೆದಿದ್ದೀರಿ. ನಿಮ್ಮ ಸಿನಿಮಾದಲ್ಲಿ ಹಾಡು, ಫೈಟ್‌ ಇತ್ಯಾದಿ ಏನೂ ಇಲ್ಲ. ಆದರೆ ಏನೋ ಒಂದು ಮ್ಯಾಜಿಕ್‌ ನಡೆದ ಹಾಗಿದೆ. ನಿಮ್ಮ ಪ್ರಕಾರ ಅದೇನು?

ಮ್ಯಾಜಿಕ್‌ ಏನಂದ್ರೆ ಸ್ಕಿ್ರಪ್ಟ್‌ ಮಾಡುವಾಗ ಆಡಿಯನ್ಸ್‌ ಮೈಂಡ್‌ ಒಳಗೇ ಇರಬೇಕು. ಸಿನಿಮಾ ಫೀಲ್ಡ್‌ಗೆ ಬರುವವರು ಸಾಮಾನ್ಯವಾಗಿ ಆರಂಭದಲ್ಲಿ ಸಿನಿಮಾ ಪ್ರೇಮಿಗಳೇ ಆಗಿರುತ್ತಾರೆ. ನೂರಾರು ಸಿನಿಮಾ ನೋಡಿ, ಥತ್‌, ಏನ್‌ ಡಬ್ಬಾ ಆಗಿ ಸಿನಿಮಾ ತೆಗೀತಾನಿವನು ಅಂತನಿಸಿ, ತಾನು ಇವ್ರಿಗಿಂತ ಅದ್ಭುತವಾಗಿ ಒಂದು ಸಿನಿಮಾ ಮಾಡ್ತೀನಿ ಅನ್ನೋ ಮನಸ್ಥಿತಿಯಲ್ಲಿ ಇಂಡಸ್ಟ್ರಿಗೆ ಬರುತ್ತಾರೆ. ಹೆಚ್ಚಿನ ಸಲ ಅವನ ಸಿನಿಮಾ ಉಳಿದ ಸಿನಿಮಾಗಳಿಗಿಂತಲೂ ಡಬ್ಬವಾಗಿರುತ್ತೆ.

ಈ ಸಿನಿಮಾ ನೋಡುವಾಗ ಆಡಿಯನ್ಸ್‌ ಮನಸ್ಸಲ್ಲಿ ಏನು ಓಡ್ತಿರುತ್ತೆ ಅನ್ನೋದನ್ನು ಡೈರೆಕ್ಟರ್‌ ಇಮ್ಯಾಜಿನ್‌ ಮಾಡ್ಬೇಕಾಗುತ್ತೆ. ದಿಯಾ ಸಿನಿಮಾದ ಒಂದು ಸನ್ನಿವೇಶದಲ್ಲಿ ನಮ್ಮ ಮದುವೆಗೆ ಮನೆಯಲ್ಲಿ ಒಪ್ತಾರೋ ಇಲ್ವೋ ಅಂತ ಆ ಹುಡುಗ ಹುಡುಗಿ ಮಾತಾಡ್ತಾ ಬರುತ್ತಿರುತ್ತಾರೆ. ಆಗ ಅವರ ಬೈಕ್‌ ಆಕ್ಸಿಡೆಂಟ್‌ ಆಗುತ್ತೆ. ಅದು ಪ್ರೇಕ್ಷಕ ಊಹಿಸದ್ದು. ಅಂಥಾ ಅನಿರೀಕ್ಷಿತತೆ ಬೇಕು. ಈ ಸನ್ನಿವೇಶದಲ್ಲಿ ಪ್ರೇಕ್ಷಕ ಹೆದರ್ಬೇಕು ಅಂತ ಡೈರೆಕ್ಟರ್‌ ಅಂದುಕೊಂಡಿದ್ರೆ ಪ್ರೇಕ್ಷಕರ ನಿಜಕ್ಕೂ ಹೆದರಬೇಕು. ಆಗ ಅದು ಕ್ಲಿಕ್‌ ಆಗುತ್ತೆ. ನನ್ನ ಎರಡು ಸಿನಿಮಾದಲ್ಲೂ ಇದು ವರ್ಕ್ ಆಗಿದೆ.

ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಬಂದ ನಾಗಿಣಿ, ಜೊತೆ ಜೊತೆಯಲಿ ನಟರು!

ದಿಯಾ ದಿಂದ ನೀವು ಕಲಿತ ಪಾಠ?

ನಂಗೊಂದು ಭ್ರಮೆಯಿತ್ತು. ಸಿನಿಮಾದ ಬಗ್ಗೆ ಸ್ಟ್ರಾಂಗ್‌ ಮೌತ್‌ ಪಬ್ಲಿಸಿಟಿ ಇದ್ರೆ ಜನ ಥಿಯೇಟರ್‌ಗೆ ನುಗ್ಗಿ ಬರ್ತಾರೆ ಅಂತ. ಆದರೆ ಅದು ಯಾವ ವರ್ಗದ ಜನಕ್ಕೆ ನವು ಸಿನಿಮಾ ಮಾಡ್ತಿದ್ದೀವಿ ಅನ್ನೋದರ ಮೇಲೂ ನಿಂತಿದೆ ಅನ್ನೋದು ಗೊತ್ತಾಯ್ತು.

ಆಫ್‌ಬೀಟ್‌ ಸಿನಿಮಾ ಸಕ್ಸಸ್‌ ಆಗೋದು ಕಡಿಮೆ. ಇದಕ್ಕಿರುವ ವೀಕ್ಷಕರು ಥಿಯೇಟರ್‌ಗೆ ಬಂದು ನೋಡುವಂಥವರಲ್ಲ. ಸರ್ವೈವ್‌ ಆಗ್ಬೇಕು ಅಂದರೆ ಜನಪ್ರಿಯ ಸಿನಿಮಾಗಳೇ ಬರಬೇಕು. ಸಿನಿಮಾ ಫೀಲ್ಡ್‌ನಲ್ಲಿರುವವರೆಲ್ಲ ಪ್ರಿಫರ್‌ ಮಾಡೋದೇ ಜನಪ್ರಿಯ ಸಿನಿಮಾ. ಮೊದಲ ದಿನವಂತೂ ಯಾರೂ ಹೊಸ ಅಲೆ ಸಿನಿಮಾಕ್ಕೆ ಹೋಗಲ್ಲ.

- ಹ್ಯೂಮರ್‌ ಅಥವಾ ಕಾಮಿಡಿ ಬಹಳ ಮುಖ್ಯ. ಅದು ಮನಃಪೂರ್ವಕ ಜನರನ್ನು ನಗಿಸುವಂಥಾದ್ದು. ಸಿನಿಮಾದಲ್ಲಿ ಆ ಅಂಶ ಇರಬೇಕು.

- ವತ್‌ರ್‍ ಫಾರ್‌ ಥಿಯೇಟರ್‌. ಅಂದರೆ ಥಿಯೇಟರ್‌ಗೇ ಬಂದು ನೋಡುವಂಥ ‘ಅವನೇ ಶ್ರೀಮನ್ನಾರಾಯಣ’ ಥರ ಸಿನಿಮಾ ಮಾಡಬೇಕು. ಇದು ಸಾಮಾನ್ಯ ಬದುಕಿಗಿಂತ ತುಸು ಮೇಲ್ಮಟ್ಟದಲ್ಲಿರಬೇಕು. ಮನೆಯಲ್ಲಿ ಟಿವಿ ಎದುರು ಕೂತಾಗ ಸಿಗಲಾರದ್ದು ಸಿನಿಮಾ ಥಿಯೇಟರ್‌ ಬಂದಾಗ ಸಿಗಬೇಕು.

ಇಂಜಿನಿಯರಿಂಗ್‌ ಓದಿದ ನಿಮಗೆ ಸಿನಿಮಾ ಫೀಲ್ಡ್‌ಗೆ ಬಂದಿದ್ದಕ್ಕೆ ಪಶ್ಚಾತಾಪ?

ಖಂಡಿತಾ ಇಲ್ಲ. ನಾನು ಖುಷಿಯಿಂದಲೇ ಆರಿಸಿದ ಮಾಧ್ಯಮ ಇದು. ಇಲ್ಲಿ ನನಗೆ ಸಿಕ್ಕುತ್ತಿರುವ ಖುಷಿ ಅಲ್ಲಿ ಖಂಡಿತಾ ಸಿಕ್ತಿರಲಿಲ್ಲ.

ಸಿನಿಮಾ ಜನರ ಆಯ್ಕೆ ಮಾತ್ರ, ಅನಿವಾರ್ಯತೆ ಅಲ್ಲ!

ಇಷ್ಟಾದ ಮೇಲೋ ಒಂದು ನೋವಿದೆ. ಜನಕ್ಕೆ ಕನ್ನಡ ಸಿನಿಮಾ ಮೇಲೆ ನಂಬಿಕೆ ಬರುತ್ತಿಲ್ಲ ಅನ್ನುವ ನೋವು. ಉಳಿದ ಭಾಷೆ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಸ್ಟಾಂಡರ್ಡ್‌ ಆಫ್‌ ಸಿನಿಮಾ ಮೇಕಿಂಗ್‌ ಮ್ಯಾಚ್‌ ಆಗ್ತಿಲ್ಲ. ಇದು ನಿನ್ನೆ ಮೊನ್ನೆ ವಿಷ್ಯ ಅಲ್ಲ. 35 ವರ್ಷಗಳಿಂದ ಆಗುತ್ತಿರುವ ಪರಿಣಾಮ. ಈಗಲೂ ಫೇಸ್‌ ಮಾಡ್ತಿದ್ದೀವಿ. ಇದನ್ನೆಲ್ಲ ನೋಡ್ತಿದ್ರೆ ಎಲ್ಲೋ ಒಂದು ಕಡೆ ನಮ್ಮ ಸಿನಿಮಾ ಜಗತ್ತು ಕ್ರಮೇಣ ಸಾಯ್ತಿದೆಯೋನೋ ಅನಿಸಿ ಒಂಥರ ಆತಂಕ ಆಗುತ್ತೆ. ಇದು ಎಲ್ಲ ಭಾಷೆಗಳ ಸಿನಿಮಾ ಇಂಡಸ್ಟ್ರಿ ಪಡುತ್ತಿರುವ ಆತಂಕ. ಏಕೆಂದರೆ ಸಿನಿಮಾ ಜನರ ಆಯ್ಕೆ ಅಷ್ಟೇ, ಅನಿವಾರ್ಯತೆ ಅಲ್ಲವಲ್ಲ!

Latest Videos
Follow Us:
Download App:
  • android
  • ios