Asianet Suvarna News Asianet Suvarna News

ಕೊರೊನಾಗೆ ಮ್ಯೂಸಿಕ್ ಮದ್ದು ಕೊಟ್ಟ ಡಾ. ಜಸ್ಸಿ ಗಿಫ್ಟ್ !

ಜಸ್ಸಿ ಗಿಫ್ಟ್ ಎಂದರೆ ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ಸಂಗೀತ ನಿರ್ದೇಶಕ. ಕನ್ನಡದಲ್ಲಿ `ಹುಡುಗಾಟ'ದ ಮೂಲಕ ಆರಂಭಿಸಿ, `ಸಂಜು ವೆಡ್ಸ್ ಗೀತಾ', `ಮೈನಾ'ದಿಂದ ಹಿಡಿದು ಇತ್ತೀಚೆಗಷ್ಟೇ ತೆರೆಕಂಡ `ಥರ್ಡ್ ಕ್ಲಾಸ್' ಸಿನಿಮಾದ ತನಕ ಸಾಕಷ್ಟು ಫಸ್ಟ್ ಕ್ಲಾಸ್ ಹಾಡುಗಳನ್ನು ನೀಡಿದ ಕೀರ್ತಿ ಇವರದು. ಕಳೆದ ವರ್ಷಾಂತ್ಯಕ್ಕೆ ತಮ್ಮ ರಿಸರ್ಚ್ ಪ್ರಬಂಧ ಸಮರ್ಪಣೆಗಾಗಿ ಕಣ್ಣೂರು ಯೂನಿವರ್ಸಿಟಿಯಿಂದ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಜಸ್ಸಿಯವರು ಪ್ರಸ್ತುತ ತಮ್ಮ ತವರಾದ ತಿರುವನಂತಪುರದಲ್ಲಿ ವಾಸವಾಗಿದ್ದಾರೆ. ಕೊರೊನ ಕುರಿತಾದ  `ಕೋವಿಡ್ನ ಕೊಲ್ಲೋಣ'  ಎನ್ನುವ ಜಾಗೃತಿ ಗೀತೆಯನ್ನು ತಮ್ಮ ಜಸ್ಸಿಗಿಫ್ಟ್ ಪ್ರೊಡಕ್ಷನ್ಸ್ ಯೂಟ್ಯೂಬ್ ವಾಹಿನಿಯ ಮೂಲಕ ಸ್ವತಃ ಹೊರತಂದಿದ್ದಾರೆ. ಈ ಎಲ್ಲ ವಿಶೇಷಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ನೀಡಿರುವ ಮಾಹಿತಿಗಳು ಇಲ್ಲಿವೆ.
 
CoronaVirus song from Dr Jassie Gift
Author
Bangalore, First Published May 15, 2020, 5:41 PM IST

ಜಸ್ಸಿ ಗಿಫ್ಟ್ ಎಂದರೆ ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ಸಂಗೀತ ನಿರ್ದೇಶಕ. ಕನ್ನಡದಲ್ಲಿ `ಹುಡುಗಾಟ'ದ ಮೂಲಕ ಆರಂಭಿಸಿ, `ಸಂಜು ವೆಡ್ಸ್ ಗೀತಾ', `ಮೈನಾ'ದಿಂದ ಹಿಡಿದು ಇತ್ತೀಚೆಗಷ್ಟೇ ತೆರೆಕಂಡ `ಥರ್ಡ್ ಕ್ಲಾಸ್' ಸಿನಿಮಾದ ತನಕ ಸಾಕಷ್ಟು ಫಸ್ಟ್ ಕ್ಲಾಸ್ ಹಾಡುಗಳನ್ನು ನೀಡಿದ ಕೀರ್ತಿ ಇವರದು. ಕಳೆದ ವರ್ಷಾಂತ್ಯಕ್ಕೆ ತಮ್ಮ ರಿಸರ್ಚ್ ಪ್ರಬಂಧ ಸಮರ್ಪಣೆಗಾಗಿ ಕಣ್ಣೂರು ಯೂನಿವರ್ಸಿಟಿಯಿಂದ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಜಸ್ಸಿಯವರು ಪ್ರಸ್ತುತ ತಮ್ಮ ತವರಾದ ತಿರುವನಂತಪುರದಲ್ಲಿ ವಾಸವಾಗಿದ್ದಾರೆ. ಕೊರೊನ ಕುರಿತಾದ  `ಕೋವಿಡ್ನ ಕೊಲ್ಲೋಣ'  ಎನ್ನುವ ಜಾಗೃತಿ ಗೀತೆಯನ್ನು ತಮ್ಮ ಜಸ್ಸಿಗಿಫ್ಟ್ ಪ್ರೊಡಕ್ಷನ್ಸ್ ಯೂಟ್ಯೂಬ್ ವಾಹಿನಿಯ ಮೂಲಕ ಸ್ವತಃ ಹೊರತಂದಿದ್ದಾರೆ. ಈ ಎಲ್ಲ ವಿಶೇಷಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ನೀಡಿರುವ ಮಾಹಿತಿಗಳು ಇಲ್ಲಿವೆ.

- ಶಶಿಕರ ಪಾತೂರು

ಲಾಕ್ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ನಾನು ಲಾಕ್ಡೌನ್‌ಗೂ ಮೊದಲೇ ಕೇರಳಕ್ಕೆ ಬಂದಿದ್ದೆ. ಇಲ್ಲಿ ತಿರುವನಂತಪುರದ ನನ್ನ ನಿವಾಸದಲ್ಲಿ ಬಂಧಿಯಾಗಿದ್ದೇನೆ! ನಿನ್ನೆಯಿಂದ ಜನ ಸ್ವಲ್ಪ ಬೀದಿಗಿಳಿಯಲು ಶುರು ಮಾಡಿದ್ದಾರೆ. ಆದರೆ ನನಗೆ ಪ್ರ್ಯಾಕ್ಟೀಸ್ ಮಾಡಲು ಒಳ್ಳೆಯ ಅವಕಾಶ ದೊರಕಿದ ಹಾಗಿದೆ. ಪಿಯಾನೊ ಮೊದಲಾದ ಸಂಗೀತ ಉಪಕರಣಗಳನ್ನು ಅಭ್ಯಾಸ ಮಾಡುತ್ತಿರುತ್ತೇನೆ. ಆ ಕಾರಣದಿಂದಾಗಿ ನನಗೆ ಎರಡು ತಿಂಗಳಿನಿಂದ ಲಾಕ್ಡೌನ್ ಆಗಿದ್ದರೂ ಬೋರಾಗ್ತಿಲ್ಲ. ಇಲ್ಲಿ ನಿನ್ನೆಯಿಂದ ಜನ ಬೀದಿಗೆ ಇಳಿಯುತ್ತಿದ್ದಾರೆ.  ನಾನು ಮೊಬೈಲ್ ಕಾಲ್ ಮೂಲಕ ಕೂಡ ಸಂಗೀತಾಭ್ಯಾಸ ಮಾಡುತ್ತಿದ್ದೇನೆ. ನನಗೆ ಕ್ಲಾಸ್ ನೀಡುತ್ತಿರುವವರು ಚಂದ್ರಬಾಬು ಎನ್ನುವ ಮ್ಯೂಸಿಕ್ ಮಾಸ್ಟರ್. ಅವರು ಹಿರಿಯ ಸಂಗೀತಜ್ಞರಾಗಿದ್ದುಇತ್ತೀಚೆಗೆ ಸಿನಿಮಾಗಳಿಗೂ ಸಂಗೀತ ನೀಡುತ್ತಿದ್ದಾರೆ. ಅವರ ಬಳಿ ಮ್ಯೂಸಿಕ್ ಕಲಿಯುತ್ತಿದ್ದೇನೆ. 

ನನ್ನ ಮೊದಲ ನಗು, ಪ್ರೀತಿ ಎಲ್ಲವೂ ಅಮ್ಮ: ತಾರಾ

`ಕೋವಿಡ್‌ನ ಕೊಲ್ಲೋಣ' ಹಾಡು ಸೃಷ್ಟಿಯಾಗಿದ್ದು ಹೇಗೆ?
ಕಲಾವಿದರಿಗಂತು ಏನೂ ಮಾಡಲಾಗದಂಥ ಪರಿಸ್ಥಿತಿ. ಸಿನಿಮಾ, ಸ್ಟೇಜ್ ಶೋ ಯಾವುದೂ ಇಲ್ಲ. ಮನೆಯಲ್ಲೇ ಕುಳಿತು ಕಲಾವಿದರನ್ನು ಬಳಸಿಕೊಳ್ಳಬಹುದಾದ ಒಂದು ಗೀತೆ ಮತ್ತು ಪ್ರಸ್ತುತ ಸಂದರ್ಭಕ್ಕೆ ಉಪಯೋಗವಾಗಬಲ್ಲ ಸಂದೇಶವನ್ನು ಆಕರ್ಷಕವಾಗಿ ನೀಡುವ ಸಾಧ್ಯತೆ ಇದರಲ್ಲೇ ಇದೆ ಅನಿಸಿತು. ಹಾಗಾಗಿ `ಕೋವಿಡ್‌ನ ಕೊಲ್ಲೋಣ' ಎನ್ನುವ ಹಾಡು ಮಾಡಲು ಮುಂದಾದೆ. ಕೇರಳದಲ್ಲಿದ್ದುಕೊಂಡು ಕನ್ನಡದ ಹಾಡು ಮಾಡುವುದು ಒಂದು ರೀತಿ ಚಾಲೆಂಜ್ ಆಗಿತ್ತು. ತಂತ್ರಜ್ಞಾನ ಮುಂದುವರಿದಿರುವಾಗ ಅದು ಕೂಡ ಕಷ್ಟವೇನಲ್ಲವಲ್ಲ? ನಾನು ಟ್ಯೂನ್ ವಾಟ್ಸ್ಯಾಪ್ ಮಾಡಿದಾಗ ಪತ್ರಕರ್ತ ಶಶಿಕರ ಪಾತೂರು ಲಿರಿಕ್ಸ್ ಬರೆದುಕೊಟ್ಟರು. ನಾನೇ ಹಾಡಿದ ಬಳಿಕ ಅದಕ್ಕೆ ಒಂದಷ್ಟು ಕಲಾವಿದರು ಪರದೆಯ ಮೇಲಿನ ರೂಪ ಕೊಟ್ಟರು. ಮುಖ್ಯವಾಗಿ ಅನಿರುದ್ಧ್ ಜಟ್ಕರ್ ಸರ್, ಸಂಚಾರಿ ವಿಜಯ್ ಅವರು ಸೇರಿದಂತೆ ಕಲಾವಿದರ ಸಹಕಾರವನ್ನು ಮರೆಯಲಾಗದು.

ನೀವು ಡಾಕ್ಟರೇಟ್ ಪಡೆದುಕೊಂಡಿದ್ದು ಹೆಚ್ಚು ಸುದ್ದಿಯಾಗಲಿಲ್ಲವೇಕೆ?
ಅದು ಅಧ್ಯಯನದ ಮೂಲಕ ಪಡೆದುಕೊಂಡ ಕಾರಣ ಇರಬಹುದು ಹೆಚ್ಚು ಸುದ್ದಿಯಾಗಲಿಲ್ಲ. ಮಾತ್ರವಲ್ಲ ಡಾಕ್ಟರೇಟ್ ಗೌರವ ಲಭಿಸಿದ ಬಳಿಕ ಕೂಡ ನಾನು ಹೆಸರಿನ ಮುಂದೆ  ಡಾಕ್ಟರ್ ಎನ್ನುವ ಪದ ಬಳಸಿಲ್ಲ. ಅದು ಸುದ್ದಿಯಾಗದಿರಲು ಕಾರಣ ಇರಬಹುದು. ಅದ್ವೈತ ಮತ್ತು ಬುದ್ಧಿಸಂ ಜತೆಗಿನ ಕಂಪೇರಿಸಮ್‌ ಮಾಡಿ ಬರೆದ ಥಿಸೀಸ್‌ಗೆ ಕಣ್ಣೂರ್ ಯೂನಿವರ್ಸಿಟಿಯಿಂದ ಡಾಕ್ಟರೇಟ್‌ ದೊರಕಿತ್ತು. ನಾನು ಚಿತ್ರರಂಗ ಪ್ರವೇಶಿಸುವ ಮೊದಲೇ ಎಂಫೀಲ್ ಮುಗಿಸಿದ್ದೆ. ನನಗೆ ಇಂಡಿಯನ್ ಫಿಲಾಸಫಿ ಬಗ್ಗೆ ಮೊದಲಿನಿಂದಲೇ ಆಸಕ್ತಿ ಇತ್ತು. ಅದರಲ್ಲಿ ನಮಗೆ ಸಂಶೋಧನೆ ಮಾಡುವಂಥ ಸಾಕಷ್ಟು ವಿಚಾರಗಳಿವೆ. ಸಾಕಷ್ಟು ವಿಶಾಲವಾದ ಅವಕಾಶಗಳಿವೆ. ಕಾನ್ಸೆಪ್ಟ್ ಆಫ್ ಹಾರ್ಮನಿ ಎನ್ನುವ ವಿಚಾರದಲ್ಲಿ ಅದ್ವೈತ ಮತ್ತು ಬುದ್ಧಿಸಂ ನಡುವಿನ ಹೋಲಿಕೆಗಳ ಅಧ್ಯಯನ ನಡೆಸಿದ್ದೆ. 

ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೇಕೆ ಕೋಪ?

ಕನ್ನಡದಲ್ಲಿ ನಿಮ್ಮ ಹೊಸ ಚಿತ್ರಗಳು ಯಾವುವು?
ಕನ್ನಡದಲ್ಲಿ ಮೂರು ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದೆ. ಒಂದು ನಿರ್ಮಾಪಕ ಬಾಲರಾಜ್ ಅವರ ಪುತ್ರ ಸಂತೋಷ್ ನಾಯಕನಾಗಿರುವ ಚಿತ್ರ. ಮತ್ತೊಂದು ಸಿನಿಮಾ ಅಶುಬೆದ್ರ ನಾಯಕರಾಗಿರುವ `ರಂಗಮಂದಿರ'. ಇವಲ್ಲದೆ `ಓ ಪ್ರೇಮ' ಎನ್ನುವ ಚಿತ್ರವೂ ಇದೆ. ಆದರೆ ಸದ್ಯಕ್ಕೆ ಎಲ್ಲವೂ ಕೊರೊನಾ ಕಾರಣ ತಣ್ಣಗಾಗಿದೆ. ಕೇರಳದಲ್ಲಿ ಕೂಡ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಆರಂಭಿಸುವಂತೆ ಹೇಳಿದ್ದಾರೆ. ಆದರೆ ಚಿತ್ರರಂಗ ಆಕ್ಟಿವ್ ಆಗಲು ಇನ್ನು ಕೂಡ ಆರು ತಿಂಗಳು ಕಾಯಬೇಕಾಗಿ ಬರಬಹುದು. ಬೆಂಗಳೂರಿಗೆ ಬರೋಣ ಎಂದರೆ ಸದ್ಯದ ಮಟ್ಟಿಗೆ ಅದಕ್ಕೂ ಅವಕಾಶ ಇಲ್ಲವಲ್ಲ!

Follow Us:
Download App:
  • android
  • ios