Asianet Suvarna News Asianet Suvarna News

`ರಕ್ಷಿತ್ ಶೆಟ್ಟಿಗೆ ನನ್ನ ಬೆಂಬಲವಿದೆ' ಎಂದ ಶಿವಣ್ಣ!

ರಕ್ಷಿತ್ ಶೆಟ್ಟಿಯ ಬಗ್ಗೆ ವಾಹಿನಿಯೊಂದು ಹರಡಿದ ಗಾಸಿಪ್‌ ಬಗ್ಗೆ ಈಗಾಗಲೇ ಅವರ ಅಭಿಮಾನಿಗಳು ವಿರೋಧಿಸಿದ್ದರು. ರಿಷಭ್, ರಕ್ಷಿತ್ ಕೂಡ ಆರೋಪ ನೋವುಂಟು ಮಾಡಿದ್ದಾಗಿ ಹೇಳಿದ್ದರು. ಇದೀಗ ಮೊದಲ ಬಾರಿಗೆ ಪ್ರಮುಖ ತಾರೆಯೊಬ್ಬರು ಸುವರ್ಣ ನ್ಯೂಸ್.ಕಾಮ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
 

Sandalwood star Shivarajkumars interview
Author
Bengaluru, First Published Jul 12, 2021, 2:10 PM IST

- ಶಶಿಕರ ಪಾತೂರು

ಇಂದು ಡಾ.ಶಿವರಾಜ್ ಕುಮಾರ್ ಅವರಿಗೆ 59ನೇ ವರ್ಷದ ಜನ್ಮದಿನ. ಶಿವಣ್ಣನ ಬರ್ತ್‌ ಡೇ ಎನ್ನುವುದು ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡ ಚಿತ್ರರಂಗ ಗುರುತಿಸುವಂಥ ದಿನ. ಅದಕ್ಕೆ ಅವರು ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ಡಾ.ರಾಜ್ ಅವರ ಪುತ್ರ ಎನ್ನುವುದೊಂದೇ ಕಾರಣವಲ್ಲ ಎನ್ನುವುದನ್ನು ಕಳೆದ ಮೂರುವರೆ ದಶಕಗಳಲ್ಲಿನ ತಮ್ಮ ಸಿನಿಮಾಗಳ ಮೂಲಕ ಸಾಬೀತು ಮಾಡಿದ್ದಾರೆ.

ಇದೀಗ ತಮ್ಮ ಸಂಭ್ರಮದ ನಡುವೆ ಸಹಕಲಾವಿದರ ಬದುಕಿನ ಸಮಾಧಾನದ ಬಗ್ಗೆಯೂ ಯೋಚಿಸಿದ್ದಾರೆ.  ನಾನಿದ್ದೇನೆ ಎಂದು ಭರವಸೆ ನೀಡಿರುವ ಅವರ ಮಾತುಗಳನ್ನು ಇಲ್ಲಿ ನೀಡಲಾಗಿದೆ.

ಕಳೆದ ವರ್ಷದಂತೆ ಈ ಬಾರಿಯೂ ಚಿತ್ರೀಕರಣಕ್ಕೆ ಮರಳಿದ ಮೊದಲಿಗ ನೀವೇ ಆಗಿದ್ದೀರಲ್ಲ?

ಅದಕ್ಕೆ ಕಾರಣವಿದೆ. ಏನೆಂದರೆ ಆದಷ್ಟು ಬೇಗ ಎಲ್ಲರಿಗೂ ಕೆಲಸ ಸಿಗುತ್ತಲ್ಲ ಅನ್ನೋದೇ ಖುಷಿಯ ವಿಚಾರ. ಓಪನಿಂಗ್ ಸ್ವಲ್ಪ ಆಯಾಸವಾಗಿತ್ತು. ಆದರೆ ಬರಬರುತ್ತಾ ಚೆನ್ನಾಗಿಯೇ ಆಯಿತು. ಕೆಲಸ ಮಾಡುವ ಆಸಕ್ತಿ ಇರುವವರಿಗೆ ಅವಕಾಶ ಸಿಕ್ಕಾಗ ಒಂದು ಎನರ್ಜಿ ಬಂದ ಹಾಗೆ ಇರುತ್ತೆ. 

ಮಾಯಾಮೃಗಕ್ಕೆ ಅದ್ಭುತ ಪ್ರತಿಕ್ರಿಯೆ- ಟಿ ಎನ್ ಸೀತಾರಾಮ್

ಅದು ಈ ಬಾರಿ `ಶಿವಪ್ಪ' ಸಿನಿಮಾದ ಮೂಲಕ ಶುರುವಾಯಿತು. ಈಗಾಗಲೇ ಸಿನಿಮಾದ ಎಂಬತ್ತು ಭಾಗ ಚಿತ್ರೀಕರಣ ಮಾಡಿಯಾಗಿದೆ. ನಿನ್ನೆ ಡಬ್ಬಿಂಗ್‌ನಲ್ಲಿದ್ದೆ. ಅದು `ಭಜರಂಗಿ 2' ಚಿತ್ರದ್ದು. ಒಟ್ಟಿನಲ್ಲಿ ಮತ್ತೆ ಚಿತ್ರರಂಗದಲ್ಲಿ ಹೊಸ ಹುರುಪು ಮೂಡುತ್ತಿದೆ ಎನ್ನಬಹುದು.

ವರ್ಷಕ್ಕೆ ಐದರಂತೆ ಬರುತ್ತಿದ್ದ ನಿಮ್ಮ ಸಿನಿಮಾಗಳು ಮೂರಕ್ಕೆ ಹಾಗೂ ಕಳೆದೆರಡು ವರ್ಷಗಳಿಂದ ಒಂದೊಂದಕ್ಕೆ ಸೀಮಿತವಾಗುತ್ತಿರುವ ಈ ಅನುಭವ ಹೇಗಿದೆ?

ಐದರಂತೆ ಬರುತ್ತಿದ್ದ ಚಿತ್ರಗಳು ಮೂರಕ್ಕೆ ಕುಸಿಯಲು ಪ್ರಮುಖ ಕಾರಣ ನಮ್ಮಲ್ಲಾದ ತಂತ್ರಜ್ಞಾನದ ಬೆಳವಣಿಗೆ ಎಂದೇ ಹೇಳಬಹುದು. ಯಾಕೆಂದರೆ ಈಗ ಮೇಕರ್ಸ್ ಗೆ ಟೆಕ್ನಿಕಲಿ ತುಂಬ ಅವಕಾಶಗಳಿವೆ. ಎಲ್ಲರೂ ಅವರವರಿಗೆ ಬೇಕಾದಷ್ಟು ಕಾಲಾವಧಿ ತೆಗೆದುಕೊಂಡು ಸಾವಕಾಶವಾಗಿ ಚಿತ್ರೀಕರಿಸುವ ಸಾಧ್ಯತೆಗಳಿವೆ.

ವೆಬ್ ಸೀರೀಸ್‌ಗೂ ಮೊದಲು ಹೊಸ ಸಿನಿಮಾ- ರಮೇಶ್ ಅರವಿಂದ್

ತಾಂತ್ರಿಕ ಬದಲಾವಣೆಯ ವಿಚಾರದಲ್ಲಿ ನಾವು ಕೂಡ ಸಮಾಜದೊಂದಿಗೆ ಹೆಜ್ಜೆ ಹಾಕಲೇಬೇಕಾಗುತ್ತದೆ. ಇನ್ನು ಕಳೆದೆರಡು ವರ್ಷಗಳ ಸಿನಿಮಾ ಅನುಭವ ನನಗೆ ಮಾತ್ರವಲ್ಲವಲ್ಲ? ಇಡೀ ವಿಶ್ವವೇ ಒಂದಾಗಿ ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

ಈ ಬಾರಿ ಮನೆಯಲ್ಲಿ ನಿಮ್ಮ ಹಳೆಯ ಸಿನಿಮಾಗಳನ್ನು ಮತ್ತೆ ಇಷ್ಟಪಟ್ಟು ನೋಡಿದ ಸಂದರ್ಭ ಇತ್ತೇ?

ನಾನು ಟಿವಿಯಲ್ಲಿ ಪ್ರಸಾರವಾಗುವ ಹಳೆಯ ಮೂವಿ ನೋಡಿ ಕುಳಿತುಕೊಳ್ಳುವುದಾದರೆ ಅದು ಅಪ್ಪಾಜಿಯವರದ್ದೇ ಆಗಿರುತ್ತೆ. ಉದಾಹರಣೆಗೆ ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್ ಮೊದಲಾದವನ್ನು ನೋಡುತ್ತೇನೆ. ಅದೇ ನನ್ನ ಮೂವಿಗಳ ವಿಚಾರಕ್ಕೆ ಬಂದರೆ ಹಾಗೇ ಕುಳಿತು ನೋಡೋಣ ಅನಿಸುವ ಚಿತ್ರಗಳೆಂದರೆ ಜೋಗಿ ಮತ್ತು ಟಗರು ತವರಿಗೆ ಬಾ ತಂಗಿ ಮೊದಲಾದವು ಎನ್ನಬಹುದು.

ಹತ್ತಾರು ಪ್ರತಿಭೆಗಳ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು

ಆದರೆ ನಾನು ಹೆಚ್ಚಾಗಿ ವೆಬ್ ಸೀರೀಸ್ ನೋಡುತ್ತಿದ್ದೆ ಮತ್ತು ಜಿಮ್ ಕಡೆಗೆ ಕೂಡ ಹೆಚ್ಚಿನ ಗಮನ ನೀಡಿದ್ದೇವೆ. ಯಾಕೆಂದರೆ ಮನೆಯಲ್ಲಿದ್ದಾಗ ಊಟ ಮಾಡಿ ದಪ್ಪಾಗುವುದು ಸಹಜ. ಕೆಲಸ ಕೂಡ ಇರುವುದಿಲ್ಲವಲ್ಲ? ಆದರೆ ನಾವು ಆರೋಗ್ಯ ಕೂಡ ಮೇನ್ಟೇನ್‌ ಮಾಡಬೇಕು ಎಂದಾದಾಗ ಜಿಮ್ ಮಾಡುವುದಕ್ಕೆ ಪ್ರಾಮುಖ್ಯತೆ ಕೊಟ್ಟೇ ಕೊಡುತ್ತೇವೆ. 

ಸದ್ಯಕ್ಕೆ ಕೊರೊನಾಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಆತಂಕಗೊಳಿಸುವ ವಿಷಯವೇನಾದರೂ ಇದೆಯೇ? 

ನನಗೆ ಒಂದು ಬಾರಿಯ ವಾಕ್ಸಿನ್‌ ಆಗಿದೆ.  ಆದರೆ ಸದ್ಯಕ್ಕೆ ಕೊರೊನಾಗಿಂತ ಅಧಿಕ ಭಯ ಆಗುವುದು ಅಂದರೆ ಕೆಲಸ ಕಳೆದುಕೊಂಡ ಜನ ಹೇಗೆ ಸರ್ವೈವ್ ಆಗುತ್ತಿದ್ದಾರೆ ಅನ್ನೋದೇ ಆಗಿದೆ. ಚಿತ್ರರಂಗದ ಕಡೆಯಿಂದಂತೂ ಈಗಾಗಲೇ ಸರ್ಕಾರಕ್ಕೆ ಮನವಿ ನೀಡಿದ್ದೇವೆ. ಸಮಸ್ಯೆ ಎಲ್ಲರಿಗೂ ಒಂದೇ ರೀತಿ ಆಗಿರುವುದರಿಂದ ತಕ್ಷಣದ ಪರಿಹಾರವನ್ನು ನಾವು ನಿರೀಕ್ಷಿಸುವುದು ಕೂಡ ತಪ್ಪು. ಈ ಸಂದರ್ಭದಲ್ಲಿ ಒತ್ತಡವನ್ನಂತೂ ಹಾಕೋಕೆ ಆಗಲ್ಲ. ಒಂದೊಂದಾಗಿ ಎಲ್ಲಾ ಸಂಕಷ್ಟಗಳು ಕೂಡ ದೂರವಾಗಬಹುದು ಎನ್ನುವ ನಿರೀಕ್ಷೆ ನಮ್ಮದು.

ನೀವು ಇತರರಿಗೆ ನೀಡುವ ನೆರವನ್ನು ಹೊರ ಜಗತ್ತಿನಿಂದ ಅಡಗಿಸುವುದೇಕೆ?

ಅಡಗಿಸುವುದಿಲ್ಲ. ಪ್ರಚಾರ ಮಾಡುವುದಿಲ್ಲ ಅಷ್ಟೇ. ಹಾಗಾಗಿ ಅದು ಯಾರದೋ ವಿಡಿಯೋ ಮೂಲಕ ಅಥವಾ ಇನ್ಯಾರದೋ ಮಾತಿನ ಮೂಲಕ ಹೊರಜಗತ್ತಿಗೆ ತಿಳಿಯುತ್ತದೆ. ಹಾಗೆ ಸುದ್ದಿಯಾಗುವುದನ್ನು ನಾನು ತಡೆಯುವುದಿಲ್ಲ. ಸಹಜವಾಗಿ ಮಾಡುವ ಸಹಾಯ ಸಹಜವಾಗಿಯೇ ಸುದ್ದಿಯಾದರೆ ಸಾಕು. ಯಾಕೆಂದರೆ ನಮ್ಮಲ್ಲಿ ಇದ್ದಾಗ ಇರದವರ ಕಷ್ಟ ಅರಿತರೆ ಆ ಕ್ಷಣಕ್ಕೆ ನಮ್ಮಿಂದಾಗುವ ಸಹಾಯ ಮಾಡುವುದು ನಾನಷ್ಟೇ ಅಲ್ಲ; ಎಲ್ಲ ಮನುಷ್ಯರ ಕರ್ತವ್ಯ. ಹಾಗಾಗಿ ಅದರಲ್ಲಿ ನಾವು ಹೇಳಿಕೊಳ್ಳುವಂಥದ್ದೇನಿಲ್ಲ. 

ಇತ್ತೀಚೆಗೆ ಮಾಧ್ಯಮಗಳಲ್ಲಿ ಕಲಾವಿದರ ವೈಯಕ್ತಿಕ ವಿಚಾರ ತೆಗೆದು ಅನಗತ್ಯವಾಗಿ ಗಾಸಿಪ್‌ಗೊಳಗಾಗುತ್ತಿದೆ ಅನಿಸಿದೆಯೇ?

ನಾನು ಯಾವಾಗಲೂ ಗಾಸಿಪ್‌ಗಳಿಂದ ದೂರವಾಗಿರುತ್ತೇನೆ. ಯಾಕೆಂದರೆ ನಾನು ಆ ಬಗ್ಗೆ ನೋಡುವುದಕ್ಕೇ ಹೋಗಲ್ಲ. ನೀವು ಈ ಪ್ರಶ್ನೆ ಯಾಕೆ ಕೇಳುತ್ತಿದ್ದೀರ ಎಂದು ನನಗೆ ಗೊತ್ತು. ರಕ್ಷಿತ್ ಬಗ್ಗೆ ಬಂದಿರುವ  ಆ ಸ್ಟೋರಿ ನಾನು ನೋಡಿಲ್ಲ. ಆದರೆ ತುಂಬ ಜನ ಆ ಬಗ್ಗೆ ನನಗೆ ಹೇಳಿದ್ದಾರೆ. ಯಾರದ್ದೇ ಆಗಲಿ ಪರ್ಸನಲ್ ಲೈಫ್‌ ಅನ್ನು ಟಾರ್ಗೆಟ್ ಮಾಡುವುದು ತಪ್ಪು.

Sandalwood star Shivarajkumars interview

ಪರ್ಸನಲಿ ರಕ್ಷಿತ್ ಶೆಟ್ಟಿ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಸಿಂಪಲ್ ಮತ್ತು ತುಂಬ ಪ್ರಾಮಾಣಿಕ ವ್ಯಕ್ತಿ ಆತ. ಹಾಗಿರಬೇಕಾದರೆ ಇಂಥ ಘಟನೆ ನಡೆದಿರುವುದು ಬೇಸರದ ವಿಚಾರ. ವಿ ಆರ್ ವಿತ್ ಹಿಮ್. ಐಯಾಮ್ ಆಲ್ವೇಸ್ ವಿತ್ ಹಿಮ್. ನನ್ನ ಕಡೆಯಿಂದ ಏನೇ ಸಹಾಯವಿದ್ದರೂ ನಾನು ಆತನಿಗೆ ನೀಡಲು ಸಿದ್ಧ. 

Follow Us:
Download App:
  • android
  • ios