ಬಿಗ್‌ಬಾಸ್‌ನಲ್ಲಿ ಎರಡನೇ ವಾರ ಎಲಿಮಿನೇಶನ್‌ನಿಂದ ಶಮಂತ್ ಉಳಿದುಕೊಂಡ ರೀತಿ ನಿಜಕ್ಕೂ ಬಿಗ್‌ಬಾಸ್‌ ಇತಿಹಾಸದಲ್ಲೇ ಒಂದು ಅಚ್ಚರಿ. ಆದರೆ ಅದೃಷ್ಟವೊಂದರಲ್ಲೇ ತಾನು ದಿನ ಕಳೆಯುತ್ತಿಲ್ಲ ಎನ್ನುವುದನ್ನು ಉಳಿದ ದಿನಗಳಲ್ಲಿ ಸಾಬೀತು ಮಾಡಿ ತೋರಿಸಿದವರು ಶಮಂತ್.

`ಬಾ ಗುರು’ ಎಂದು ಆರಂಭವಾಗುವ ಗೀತೆ ಹೇಗೆ ಶೀರ್ಷಿಕೆಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡಿತು ಎನ್ನುವುದು ಎಲ್ಲರಿಗೂ ಗೊತ್ತು! ಅದೇ ಹೆಸರುಗಳು ಅಂಗಡಿ, ಹೋಟೆಲ್‌ಗಳಿಗೂ ಇಡುವಂತಾಗಿತ್ತು. ಆದರೆ ಬಿಗ್‌ಬಾಸ್ ಮನೆಯೊಳಗೆ ಆರಂಭದ ದಿನಗಳಲ್ಲಿ ಕಾಣಿಸಿದ ಶಮಂತ್ ನಿಜಕ್ಕೂ ಅಷ್ಟೊಂದು ಕ್ರಿಯಾಶೀಲ ಹುಡುಗ ನಿಜಾನ ಎನ್ನುವ ಸಂದೇಹ ತಾವೇ ಹುಟ್ಟು ಹಾಕಿದ್ದರು! ಆದರೆ ಆನಂತರ ಮನೆಯೊಳಗೆ ತಮ್ಮ ಪೊಸಿಷನ್ ಏನೆಂದು ತೋರಿಸಿಕೊಟ್ಟಿದ್ದು ಮಾತ್ರವಲ್ಲ, ಈಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಕೂಡ ಹೊಸ ಹುಮ್ಮಸ್ಸಿನಲ್ಲಿ ಮುಂದುವರಿದಿದ್ದಾರೆ.

- ಶಶಿಕರ ಪಾತೂರು
ಬಿಗ್‌ಬಾಸ್ ನಿಂದ ನೀವು ಪಡೆದ ಒಳ್ಳೆಯ ಮತ್ತು ಕೆಟ್ಟ ಅನುಭವಗಳೇನು?
ಬಿಗ್‌ಬಾಸ್ ನನ್ನ ಪಾಲಿಗೆ ಒಂದು ರೀತಿ ಬದುಕಿಗೆ ಟ್ರೇನಿಂಗ್ ಸೆಂಟರ್ ಇದ್ದಂತಿತ್ತು. ಯಾವ ಟೈಮಲ್ಲಿ ಹೇಗಿರಬೇಕು ಎನ್ನುವುದನ್ನು ತುಂಬ ಅರ್ಥ ಮಾಡಿಕೊಂಡೆ. ಬಹುಶಃ ಹೊರಗಿನಿಂದ ನೋಡುವಾಗ ಅಲ್ಲಿ ನಮ್ಮ ವರ್ತನೆ ಮನರಂಜನಾತ್ಮಕ ಅನಿಸಬಹುದೇನೋ. ಆದರೆ ಒಳಗಡೆ ನಿಜಕ್ಕೂ ಜೀವನ ಹೇಗೆ ನಡೆಸಬೇಕು ಎನ್ನುವುದನ್ನೇ ಕಲಿಯುತ್ತಿರುತ್ತೇವೆ. ನನಗೆ ತುಂಬಾ ಶಾರ್ಟ್ ಟೆಂಪರ್ ಇತ್ತು. ಅದನ್ನು ಕಳೆದುಕೊಂಡಿದ್ದೀನಿ. ಕೆಟ್ಟದಾದ ಅನುಭವಗಳೇನೂ ಇಲ್ಲ.

ನನ್ನ ಮೊದಲ ಬೋಜ್‌ಪುರ ಚಿತ್ರ ಆ.15ಕ್ಕೆ ಬಿಡುಗಡೆ: ಹರ್ಷಿಕಾ ಪೂಣಚ್ಚ

ನೀವು ಮರಳಿದ ನಂತರ ಮನೆಯವರ ಪ್ರತಿಕ್ರಿಯೆ ಹೇಗಿತ್ತು?

ನನ್ನ ವೃತ್ತಿ ಬದುಕು ಶುರುವಾಗಿ ಆರೇಳು ವರ್ಷಗಳಾಗಿವೆ. ನನ್ನ ಯಶಸ್ಸಿನ ಬಗ್ಗೆ ಮನೆಯಲ್ಲಿ ತುಂಬ ಡೌಟ್ ಇತ್ತು. ನನ್ನ ವೆಬ್ ಕಂಟೆಂಟ್ಸ್‌ ನೋಡಿದ್ದರು. “ನಿನ್ನ ವಿಡಿಯೋಗಳು ತರಲೆಗಳಾಗಿವೆ; ಅದನ್ನೇ ಡೀಸೆಂಟ್ ಆಗಿ ಮಾಡಬಹುದು” ಎಂದು ಸಲಹೆ ನೀಡುತ್ತಿದ್ದರು. ಆದರೆ ಮ್ಯೂಸಿಕ್, ಮಿಮಿಕ್ರಿ, ಡೈರೆಕ್ಷನ್ ಎಲ್ಲವೂ ನನ್ನಲ್ಲೇ ಸೇರಿಕೊಂಡಿದ್ದ ಕಾರಣ ಅವರಿಗೆ ಹಾಗೆ ಆಗಿತ್ತುಅನಿಸಿರಬಹುದು. ಆರು ವರ್ಷಗಳ ಹಿಂದೆ ಕ್ಯಾಬ್ ಡ್ರೈವರಾಗಿ ಕೆಲಸ ಮಾಡಿದ್ದ ಬಗ್ಗೆ ಬಿಗ್‌ಬಾಸ್‌ನಲ್ಲಿ ಹೇಳಿದ್ದು ಕೇಳಿ ನೋವು ಮಾಡಿಕೊಂಡರು. ಏನೂ ಆಗಲ್ಲ ಎಂದುಕೊಂಡಿದ್ದವನು ಇಷ್ಟಾದರೂ ಹೆಸರು ಮಾಡುತ್ತಿರುವುದು ನೋಡಿ ಖುಷಿಯಾಗಿದ್ಧಾರೆ. ಇಲ್ಲಿಂದ ನನ್ನ ಕೆಲಸ ಶುರುವಾಗಲಿದೆ.


ದಿನಕ್ಕೊಂದು ಒಳ್ಳೆಯ ಟ್ಯೂನ್ ಮಾತ್ರವಲ್ಲ, ಕನ್ನಡದ ಒಳ್ಳೆಯ ಪದಗಳನ್ನು ಕೂಡ ಬಳಸಲು ಸಾಧ್ಯವಾಗಿದ್ದು ಹೇಗೆ?
ಕನ್ನಡದ ಪದಗಳೆಲ್ಲ ನನಗೆ ತಾಯಿಯ ಕಡೆಯಿಂದ ದೊರಕಿರುವಂಥದ್ದು. ಯಾಕೆಂದರೆ ಅವರು ಕೂಡ ಒಬ್ಬರು ಕನ್ನಡದ ಗಾಯಕಿ. ಅವರ ಹೆಸರು ಮಂಗಳಾ. ಬಾಲ್ಯದಿಂದಲೇ ನನಗೆ ಕವಿಗಳ ಬಗ್ಗೆ ಅವರ ಕವಿತೆಗಳ ಬಗ್ಗೆ ಹೇಳಿಕೊಡುತ್ತಿದ್ದರು. ಅದು ಬಿಗ್ ಬಾಸ್ ಮನೆಯಲ್ಲಿ ಬಳಕೆಯಾಯಿತು ಅನಿಸುತ್ತೆ. ಅವರು ಹಾಡಿರುವ ಭಕ್ತಿಗೀತೆಗಳ ಕ್ಯಾಸೆಟ್ಸ್ ಬಂದಿವೆ. ಅವರು ಆಲ್ ಇಂಡಿಯಾ ರೇಡಿಯೋನಲ್ಲಿ ಕೆಲಸ ಮಾಡಿದವರು. ರೇಡಿಯೋ ನಾಟಕಗಳಲ್ಲಿ ಸುಚೇಂದ್ರ ಪ್ರಸಾದ್ ಅವರೊಂದಿಗೆ ಧ್ವನಿ ನೀಡಿದ್ದಾರೆ. ನನ್ನ ತಂದೆ ಜಯಕುಮಾರ್ ವೃತ್ತಿಯಲ್ಲಿ ಚಾರ್ಟೆಡ್ ಅಕೌಟೆಂಟ್ ಆದರೂ ವಯಲಿನಿಸ್ಟ್‌ ಕೂಡ ಹೌದು. ಹಾಗಾಗಿ ತಂದೆ,ತಾಯಿಯಿಂದಲೇ ಸಂಗೀತ, ಸಾಹಿತ್ಯ ನನಗೆ ಜೊತೆಯಾಗಿರಬಹುದು.

ಬಿ‌ಗ್‌ಬಾಸ್‌ನಲ್ಲಿ ಕಳೆದುಕೊಂಡಿದ್ದೇನು, ಪಡೆದಿದ್ದೇನು?: ಸಂಬರಗಿ

ಬಿಗ್‌ಬಾಸ್‌ಗೆ ಮೊದಲು ಹೇಗಿದ್ದಿರಿ? ಈಗ ನಿಮ್ಮ ಜೀವನದಲ್ಲಾದ ಬದಲಾವಣೆಗಳೇನು?
ನಾನು ಮೆಕಾನಿಕಲ್ ಡಿಪ್ಲೊಮ ಮಾಡಿದ ಬಳಿಕ ಜೈನ್ ಕಾಲೇಜಲ್ಲಿ ಇಂಟಿರಿಯರ್ ಡಿಸೈನಿಂಗ್ ಕೋರ್ಸ್ ಮಾಡಿದ್ದೆ. ಅದರ ಬಳಿಕ ಎರಡು ವರ್ಷ ಬೇರೆ ಕೆಲಸದಲ್ಲಿದ್ದುಕೊಂಡೇ ವೆಬ್ ಸೀರೀಸ್ ಮಾಡಿದ್ದೇನೆ. ಫ್ರೆಂಡ್ ಜೊತೆ ಸೇರಿ ಡೈರೆಕ್ಷನ್, ಎಡಿಟಿಂಗ್, ಡಬ್ಬಿಂಗ್ ಎಲ್ಲ ನಾನೇ ತೊಡಗಿಸಿಕೊಂಡಿದ್ದೆ. ಈ ಮೊದಲು ಸಿನಿಮಾ ಆಡಿಶನ್‌ಗಾಗಿ ಸಾಕಷ್ಟು ಸುತ್ತಾಡಿದ್ದೇನೆ. ಸುಮಾರು ನೂರೈವತ್ತು ಕಡೆಗಳಲ್ಲಿ ತಿರಸ್ಕರಿಸಲ್ಪಟ್ಟ ನನಗೆ ಅದಕ್ಕಾಗಿಯೇ ಬಿಗ್‌ಬಾಸ್ ಎನ್ನುವ ಅವಕಾಶ ದೊರಕಿತು ಎಂದುಕೊಂಡಿದ್ದೇನೆ! ಮೊದಲೆಲ್ಲ ನಾನು ಆಯ್ಕೆಯಾಗಿದ್ದ ಸಣ್ಣ ಪಾತ್ರಕ್ಕೂ ಕೊನೆಯ ನಿಮಿಷಗಳಲ್ಲಿ ಬೇರೆಯವರು ಬರುತ್ತಿದ್ದರು! ಆದರೆ ಈಗ ನನ್ನನ್ನು ನಾಯಕನಾಗಿಸಲು ನಾಲ್ಕು ಸಿನಿಮಾ ತಂಡಗಳು ಮುಂದೆ ಬಂದಿವೆ!ಮುಂದೆ ಯಾವೆಲ್ಲ ಯೋಜನೆ ಹಾಕಿಕೊಂಡಿದ್ದೀರಿ?

ಮಂಜು ಬಿಗ್‌ಬಾಸಲ್ಲಿ ಸಿಕ್ಕ ಅಮೂಲ್ಯ ಮುತ್ತು: ದಿವ್ಯಾ ಸುರೇಶ್

ಏಳೆಂಟು ಸಿನಿಮಾ ಆಫರ್‌ಗಳು ಬಂದಿವೆ. ಅವುಗಳಲ್ಲಿ ನಾಲ್ಕರಲ್ಲಿ ನಾಯಕನಾಗುವ ಅವಕಾಶ ಲಭಿಸಿದೆ. ಮುಖ್ಯವಾಗಿ ಬಿಗ್‌ ಬಾಸ್ ತಂದು ಕೊಟ್ಟ ಹೆಸರನ್ನು ಬೆಳೆಸುವಂಥ ಪಾತ್ರವೇ ಮಾಡಬೇಕು ಅಂತ ಇದೆ. ಒಟ್ಟಿನಲ್ಲಿ ಇದಕ್ಕಿಂತ ಹೆಜ್ಜೆ ಹಿಂದೆ ಇಡುವಂತಾಗಬಾರದು. ಆದರೆ ಅಡ್ಡಗಾಲು ಹಾಕುವವರು ಕೂಡ ಇದ್ದಾರೆ ಎಂದು ಚೆನ್ನಾಗಿ ಅರ್ಥವಾಗಿದೆ. ನಾನು ಒಳಗಡೆ ಇರುವಾಗ ಓಟಿಂಗ್ ಕಡಿಮೆ ಆಗಲಿ ಎಂದು ನನ್ನದೇ ಹಳೆಯ ವಿಡಿಯೋ ಹೊರಗೆ ಬಿಟ್ಟವರಿದ್ದರು. ಆ ಹತ್ತು ಸೆಕೆಂಡ್ ವಿಡಿಯೋದಲ್ಲಿ ನನ್ನ ಆಲ್ಬಮ್‌ ಸಾಂಗ್‌ನ ತಂಡದ ಹುಡುಗಿಯೇ ಇದ್ದರು. ಅದು ನಾನು ಕಿಸ್ ಮಾಡ್ತಿರೋ ವಿಡಿಯೋ ಅಂತ ಅಪ ಪ್ರಚಾರ ಮಾಡಿದ್ರು. ಆದರೆ ನಾನೇನೋ ತಮಾಷೆಯಾಗಿ ಗುಟ್ಟು ಹೇಳೋ ಸನ್ನಿವೇಶ ಅದಾಗಿತ್ತು. ಆಗ ನನ್ನ ಸ್ನೇಹಿತನಾಗಿದ್ದ ವ್ಯಕ್ತಿ ಅದನ್ನು ತಮಾಷೆಗೆಂದು ವಿಡಿಯೋ ಮಾಡಿದ್ದ. ಇನ್ನು ಮುಂದೆ ಅಂಥ ಅಪಪ್ರಚಾರದ ಕೆಲಸಗಳಿಂದ ನನ್ನ ದಾರಿಗೆ ಅಡ್ಡ ಬಂದರೆ ನಾನು ಕೂಡ ಚೆನ್ನಾಗಿ ಉತ್ತರಿಸಬಲ್ಲೆ ಎಂದು ತೋರಿಸುತ್ತೇನೆ.