ಅಕ್ಟೋಬರ್ 17ಕ್ಕೆ ಈ ಕಾರು ಬಿಡುಗಡೆಯಾಗುತ್ತಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 29 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹಾಗಂತ ಇದು ಸಣ್ಣ ಕಾರಲ್ಲ, ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಕಾರುಗಳ ಪ್ರತಿಸ್ಪರ್ಧಿ ಎಸ್‌ಯುವಿ ಕಾರು.

ಬೆಂಗಳೂರು (ಅ.09) ಹಬ್ಬದ ಸೀಸನ್‌ನಲ್ಲಿ ಹೊಸ ಕಾರು ಬಿಡುಗಡೆಯಾಗುತ್ತಿದೆ. ಹೌದು, ಇತ್ತೀಚೆಗೆ ರೆನಾಲ್ಟ್ ಹೊಸ ಅವತಾರದಲ್ಲಿ ಡಸ್ಟರ್ ಕಾರು ಬಿಡುಗಡೆ ಮಾಡಿದೆ. ಇದೀಗ ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಕಾರು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 17ಕ್ಕೆ ಈ ಕಾರು ಭಾರತದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ವಿಶೇಷ ಅಂದರೆ ಈ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 29 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರಿಂದ ನಿರ್ವಹಣೆ ಅತ್ಯಂತ ಸುಲಭವಾಗಲಿದೆ. ಸುದೀರ್ಘ ಪ್ರಯಾಣ,ಪ್ರತಿ ದಿನ ಬಳಕೆಗೆ ಪೆಟ್ರೋಲ್ ಚಿಂತೆ ಕಡಿಮೆಯಾಗಲಿದೆ.

21,000 ರೂಪಾಯಿಗೆ ಬುಕ್ ಮಾಡಿ ಹೊಸ ಕಾರು

ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಇ ಟೆಕ್ 160 ಕಾರು ಇಂದಿನಿಂದ (ಅಕ್ಟೋಬರ್ 09) ಬುಕಿಂಗ್ ಆರಂಭಗೊಂಡಿದೆ. ಕೇವಲ 21,000 ರೂಪಾಯಿಗೆ ಹೊಸ ಕಾರು ಬುಕ್ ಮಾಡಿಕೊಳ್ಳಬಹುದು. ರೆನಾಲ್ಟ್ ಅಧಿಕೃತ ವೆಬ್‌ಸೈಟ್ ಅಥವಾ ಅಧಿಕೃತ ಡೀಲರ್ ಬಳಿಕ ಹೊಸ ಕಾರು ಬುಕಿಂಗ್ ಮಾಡಲು ಸಾಧ್ಯವಿದೆ. ಅತ್ಯಾಕರ್ಷಕ ಕಾರು ಇದೀಗ ಹಲವು ಪ್ರತಿಸ್ಪರ್ಧಿಗಳಿಗೆ ನಡುಕು ಹುಟ್ಟಿಸಿದೆ.

ಹೊಸ ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಕಾರು ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಹೀಗಾಗಿ ಉತ್ತಮ ಮೈಲೇಜ್ ನೀಡುತ್ತಿದೆ. 1.8 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. 1.4 kWh ಬ್ಯಾಟರಿ ಪ್ಯಾಕ್ ಈ ಕಾರಿನಲ್ಲಿದೆ. ಕಾರಿನ ಪರ್ಫಾಮೆನ್ಸ್‌ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಾರು 160bhp ಪವರ್ ಹೊಂದಿದೆ. ಮಲ್ಟಿ ಮೋಡ್ ಟ್ರಾನ್ಸ್‌ಮಿಶನ್, ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಆಪರೇಟಿಂಗ್ , ಸ್ಮೂತ್ ಡ್ರೈವಿಂಗ್ ಸೇರಿದಂತೆ ಹಲವು ಟೆಕ್ನಾಲಜಿಗಳನ್ನು ಈ ಕಾರನಲ್ಲಿ ಬಳಸಲಾಗಿದೆ.

ಹೊಸ ಡಸ್ಟರ್ ಕಾರಿನ ಬೆಲೆ ಎಷ್ಟು

ಈ ಕಾರಿನಲ್ಲಿ ಬ್ಯಾಟರಿಗಳು ಕಾರು ಚಾಲನೆ ವೇಳೆ ರೀಚಾರ್ಜ್ ಆಗಲಿದೆ. ಹೀಗಾಗಿ ಕಾರು ಪ್ರಯಾಣದಲ್ಲಿ ಕಡಿಮೆ ಪೆಟ್ರೋಲ್ ಮೂಲಕ ಸಾಗಲಿದೆ. ಪ್ರೀಮಿಯಂ ಎಸ್‌ಯುವಿ ಕಾರು 29 ಕಿಲೋಮೀಟರ್ ಮೈಲೇಜ್ ಅತ್ಯುತ್ತಮವಾಗಿದೆ. ಕಾರಿನ ಬಕಿಂಗ್ ಓಪನ್ ಆಗುತ್ತಿದ್ದಂತೆ ಭರ್ಜರಿ ಬೇಡಿಕೆ ವ್ಯಕ್ತವಾಗುತ್ತಿದೆ. ಹೊಸ ಡಸ್ಟರ್‌ ಅತ್ಯಂತ ಆಕರ್ಷಕವಾಗಿದ್ದು, ಹಲವು ಪ್ರಯೋಜನಗಳಿಂದ ಕೂಡಿದೆ. ಸದ್ಯ ಕಾರಿನ ಬೆಲೆ ಬಹಿರಂಗವಾಗಿಲ್ಲ. ಅಕ್ಟೋಬರ್ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದೇ ವೇಳೆ ಕಾರಿನ ಬೆಲೆ ಬಹಿರಂಗವಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಡಸ್ಟರ್ ಕಾರಿನ ಬೆಲೆ 10.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ (ಎಕ್ಸ್ ಶೋ ರೂಂ).

ಸದ್ಯ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರು 1.0 ಲೀಟರ್ ಟರ್ಬೋ ಹಾಗೂ 1.3 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. 1.0 ಲೀಟರ್ ಟರ್ಬೋ ಎಂಜಿನ್ ಕಾರು 100bhp ಪವರ್ ಹಾಗೂ 160 Nm ಪವರ್ ಉತ್ಪಾದಿಸುತ್ತಿದೆ. ಇನ್ನು 1.0 ಲೀಟರ್ ಟರ್ಬೋ ಎಂಜಿನ್ ಕಾರು 163bhp ಪವರ್ ಹಾಗೂ 280Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ.