- Home
- Automobile
- Car News
- ಮತ್ತೆ ಬರುತ್ತಿದೆ ಎಲ್ಲರ ನೆಚ್ಚಿನ ವೋಕ್ಸ್ವ್ಯಾಗನ್ ಪೋಲೋ ಕಾರು, ಎಲೆಕ್ಟ್ರಿಕ್ ರೂಪದಲ್ಲಿ ಅನಾವರಣ
ಮತ್ತೆ ಬರುತ್ತಿದೆ ಎಲ್ಲರ ನೆಚ್ಚಿನ ವೋಕ್ಸ್ವ್ಯಾಗನ್ ಪೋಲೋ ಕಾರು, ಎಲೆಕ್ಟ್ರಿಕ್ ರೂಪದಲ್ಲಿ ಅನಾವರಣ
ವೋಕ್ಸ್ವ್ಯಾಗನ್ ಪೋಲೋ ಬಹುತೇಕರ ನೆಚ್ಚಿನ ಕಾರು. ರೇಸಿಂಗ್ನಲ್ಲಿ ಈ ಕಾರು ಬಳಸುತ್ತಾರೆ. ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಪೋಲೋ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.

ವೋಕ್ಸ್ವ್ಯಾಗನ್ ಪೋಲೋ ಕ್ಲಬ್ ಸ್ಪೋರ್ಟ್
ವೋಕ್ಸ್ವ್ಯಾಗನ್ ಪೋಲೋ ಕಾರು ಬಹುತೇಕರ ನೆಚ್ಚನ ಕಾರು.ಯುವ ಸಮೂಹಕ್ಕೆ ಸ್ಪೋರ್ಟ್ಸ್ ಕಾರಾಗಿ, ರೇಸಿಂಗ್ ಆಸಕ್ತರಿಗೆ ರೇಸ್ ಕಾರಾಗಿ, ಫ್ಯಾಮಿಲಿಗೆ ಕೌಟುಂಬಿಕ ಕಾರಾಗಿ..ಹೀಗೆ ಹಲವು ರೂಪದಲ್ಲಿ ಪೋಲೋ ಹಲವರ ಪ್ರೀತಿಗೆ ಪಾತ್ರವಾಗಿದೆ. ರೋಡ್ ಪ್ರೆಸೆನ್ಸ್ ಜೊತೆ ಗ್ರಿಪ್ ಅದ್ಭುತ. ಆಕರ್ಷಕ ಪೋಲೋ ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿದೆ. ಇದೀಗ ಪೋಲೋ ಪ್ರಿಯರಿಗೆ ಸಿಹಿ ಸುದ್ದಿ ಬಂದಿದೆ. ಪೋಲೋ ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಫೋಕ್ಸ್ವ್ಯಾಗನ್ (ವೋಕ್ಸ್ವ್ಯಾಗನ್) ಸಂಸ್ಥೆಯ GTI ಬ್ರ್ಯಾಂಡ್ಗೆ 50ರ ಸಂಭ್ರಮ. ಹೀಗಾಗಿ ಈ ವಿಶೇಷ ಸಂದರ್ಭದಲ್ಲಿ ಪೋಲೋ ಜಿಟಿಐ ಕ್ಲಬ್ ಸ್ಪೋರ್ಟ್ಸ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ.
4 ಸೆಕೆಂಡ್ನಲ್ಲಿ 100 ಕಿ.ಮಿ ವೇಗ
ನವೆಂಬರ್ 27ರಿಂದ ಡಿಸೆಂಬರ್ 6, 2026ರವರೆಗೆ ನಡೆಯಲಿರುವ 'ಎಸ್ಸೆನ್ ಮೋಟಾರ್ ಶೋ'ನಲ್ಲಿ ಈ ಕಾರು ಸಾರ್ವಜನಿಕ ಪ್ರದರ್ಶನ ಕಾಣಲಿದೆ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಪೋಲೋ ಕಾರು. ಕೇವಲ 4.7 ಸೆಕೆಂಡ್ನಲ್ಲಿ 0-100 ಕಿ.ಮೀ ವೇಗ ಪಡೆದುಕೊಳ್ಳಲಿದೆ. ರೇಸಿಂಗ್ ಆಸಕ್ತರಿಗೆ ಇದು ಸೂಕ್ತ ಕಾರು. ಮೂಲ ಸ್ವರೂಪ ಉಳಿಸಿಕೊಂಡು ಆಕರ್ಷಕ ಲುಕ್ ನೀಡಲಾಗಿದೆ. ಹೀಗಾಗಿ ಪೋಲೋ ಪ್ರಿಯರು ಮೊದಲ ನೋಟಕ್ಕೆ ಲವ್ ಆಗುವುದು ಖಚಿತ.
ಅದ್ಭುತ ಪವರ್ ಹಾಗೂ ಬಲಿಷ್ಠ ಮೋಟಾರ್
ಫೋಕ್ಸ್ವ್ಯಾಗನ್ ದೊಡ್ಡ ಇವಿ ಕಾರುಗಳಲ್ಲಿ ಬಳಸುವ APP550 ಎಲೆಕ್ಟ್ರಿಕ್ ಮೋಟಾರ್ ಪೋಲೋ ಕ್ಲಬ್ ಸ್ಪೋರ್ಟ್ ಕಾರಿನಲ್ಲಿ ನೀಡಲಾಗಿದೆ. ಹೀಗಾಗಿ 362 bhp ಪವರ್ ಹಾಗೂ 550 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. Polo GTI ಕಾರಿಗಿಂತ ಹೆಚ್ಚು ಬಲಿಷ್ಠ ಹಾಗೂ ಶಕ್ತಿಶಾಲಿಯಾಗಿದೆ.
4 ಡೋರ್ ಬದಲು 2 ಡೋರ್
ವಿಶೇಷ ಅಂದರೆ ಈ ಕಾನ್ಸೆಪ್ಟ್ ಕಾರು 4 ಡೋರ್ ಬದಲು 2 ಡೋರ್ ನೀಡಲಾಗಿದೆ. ಕಾರಿನ ಅಗಲ 50ಮಿ.ಮಿ ಹೆಚ್ಚಿಸಲಾಗಿದೆ. ಗ್ರೌಂಡ್ ಕ್ಲಿಯರೆನ್ಸ್ 15ಮಿಮಿ ತಗ್ಗಿಸಲಾಗಿದೆ. ಸೆರಾಮಿಕ್ ಬ್ರೇಕ್ ಸೇರಿದಂತೆ ಹಲವು ವಿಶೇಷತೆಗಳಿವೆ. ಈ ಕಾರಿನ ಗರಿಷ್ಠ ವೇಗ 240 ಕಿ.ಮಿ ಪ್ರತಿ ಗಂಟಗೆ. ಬ್ಲಾಕ್ ರಿಮ್ ಜೊತೆ ಪೋಲೋ ಕ್ಲಬ್ಸ್ಪೋರ್ಟ್ ಹೆಚ್ಚು ಆಕರ್ಷಕವಾಗಿದೆ.
ಕಾರಿನೊಳಗೆ ಹೊಸತನ
ರೇಸಿಂಗ್ ಬಕೆಟ್ ಸೀಟು ನೀಡಲಾಗಿದೆ. ಹಿಂಭಾಗದಲ್ಲಿ ಕೆಂಪು ಬಣ್ಣದ ರೋಲ್ಓವರ್ ಬಾರ್ಗಳನ್ನು (Rollover bars) ಅಳವಡಿಸಲಾಗಿದೆ. ಇದೇ ವೇಳೆ ಲಗೇಜ್ ಜಾಗ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಿಲ್ಲ. ರೇಸಿಂಗ್ ಕಾನ್ಸೆಪ್ಟ್ನಲ್ಲಿ ಕಾರು ಅನಾವರಣ ಮಾಡಲಾಗಿದೆ. ಸದ್ಯ ಇದು ಕಾನ್ಸೆಪ್ಟ್ ಕಾರಾಗಿದೆ. ಕಮರ್ಷಿಯಲ್ ಪ್ರೊಡಕ್ಷನ್ ಕರಿತು ಕಂಪನಿ ಅಧಿಕೃತ ಘೋಷಣೆ ಮಾಡಿಲ್ಲ
ಪೋಲೋ ಕಾನ್ಸೆಪ್ಟ್ ಮೇಲೆ ಕುತೂಹಲ ಹೆಚ್ಚಳ
ಪೋಲೋ ಹಲವರ ನೆಚ್ಚಿನ ಕಾರು. ಫೋಕ್ಸ್ವ್ಯಾಗನ್ ಏಕಾಏಕಿ ಪೋಲೋ ಹಾಗೂ ವೆಂಟೋ ಕಾರನ್ನು ಸ್ಥಗಿತಗೊಳಿಸಿತು. ಬಳಿಕ ಎಮೋ ಕಾರನ್ನು ಸ್ಥಗಿತಗೊಳಿಸಿತು. ಸದ್ಯ ಫೋಕ್ಸ್ವ್ಯಾಗನ್ ಪೈಕಿ ವರ್ಟಸ್ ಸೆಡಾನ್ ಕಾರು ಎಂಟ್ರಿ ಲೆವೆಲ್ ಕಾರಾಗಿ ಗುರುತಿಸಿಕೊಂಡಿದೆ. ಇದೀಗ ಪೋಲೋ ಕಾನ್ಸೆಪ್ಟ್ ಕಾರು ಹಲವರ ಕುತೂಹಲ ಹೆಚ್ಚಿಸಿದೆ.















