ಶ್ವಾನವೊಂದು ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನೇ ಅಡ್ಡಗಟ್ಟಿ ಓಡಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಬೀದಿ ನಾಯಿಗಳು ರಸ್ತೆಯಲ್ಲಿ ಸಾಗುವ ಬೈಕ್ ಸ್ಕೂಟರ್ ಹಾಗೂ ಕೆಲವೊಮ್ಮೆ ಜನ ಹಾಗೂ ಪುಟ್ಟ ಮಕ್ಕಳ ಮೇಲೂ ದಾಳಿ ಮಾಡುತ್ತವೆ. ನಾಯಿ ದಾಳಿಯನ್ನು ತಪ್ಪಿಸಲು ಹೋಗಿ ಅನೇಕ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಂದು ಕಡೆ ಬೀದಿ ನಾಯಿಯೊಂದು ಕೇವಲ ಐಷಾರಾಮಿ ಕಾರೊಂದನ್ನು ಮಾತ್ರ ಟಾರ್ಗೆಟ್ ಮಾಡಿದ್ದು, ಅದರ ವೀಡಿಯೋ ಈಗ ಈಗ ಭಾರಿ ವೈರಲ್ ಆಗಿದೆ.

@gharkekalesh ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ರಸ್ತೆಯಲ್ಲಿ ಸಾಗುವ ಇತರ ವಾಹನಗಳನ್ನು ಹೋಗಲು ಬಿಡುವ ಶ್ವಾನ ಕೇವಲ ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನು ಮಾತ್ರ ಅಡ್ಡಗಟ್ಟಿದೆ. ಇದನ್ನು ನೋಡಿದ ಲ್ಯಾಂಬೋರ್ಘಿನಿ ಕಾರು ಚಾಲಕ ಕಾರನ್ನು ಪಕ್ಕಕ್ಕೆ ಸರಿಸಿ ಹೋಗಲು ನೋಡಿದರೆ ಆಗಲೂ ಶ್ವಾನ ಕಾರಿನ ಮುಂದೆ ಅಡ್ಡ ನಿಂತಿದ್ದು ಅದನ್ನು ಮುಂದೆ ಹೋಗುವುದಕ್ಕೆ ಬಿಡದೇ ಅದು ನಿಧಾನಕ್ಕೆ ಚಲಿಸಲು ಶುರು ಮಾಡಿದಾಗಲೆಲ್ಲಾ ಅಡ್ಡಗಟ್ಟಿ ನಿಂತಿದೆ.

Scroll to load tweet…

ನಂತರ ಅದು ಹೇಗೋ ಕಾರಿನ ಚಾಲಕ ನಾಯಿಯ ಕಣ್ಣಿನಿಂದ ತಪ್ಪಿಸಿಕೊಂಡು ಮುಂದೆ ಸಾಗಿದರೆ ಬಹಳ ದೂರದವರೆಗೆ ವೇಗವಾಗಿ ಸಾಗುವ ಕಾರಿನ ಹಿಂದೆ ಈ ಶ್ವಾನ ಅದನ್ನು ಬೆನ್ನಟ್ಟಿ ಹೋಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನಾಯಿ ಏಕೆ ಕೇವಲ ಲ್ಯಾಂಬೋರ್ಘಿನಿ ಕಾರನ್ನೇ ಟಾರ್ಗೆಟ್ ಮಾಡಿ ಓಡಿಸುತ್ತಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ನಾಯಿಯ ಈ ವರ್ತನೆ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ಮೀಮ್ಸ್‌ಗೆ ಕಾರಣವಾಗಿದೆ. ಈ ಡಾಗೇಶ್ ಭಾಯ್ ಏಕೆ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ತೊಂದರೆ ತಗೊಳ್ತಿದೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಶ್ವಾನ ಯಾವ ರೀತಿ ದಾದಾಗಿರಿ ನಡೆಸ್ತಿದೆ ನೋಡಿ, ಲ್ಯಾಂಬೋರ್ಘಿನಿಯೇ ಹೆದರಿ ಓಡೋಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನ ನಿಜವಾಗಲೂ ವಾಹನ ಸವಾರರನನ್ನು ಬೆದರಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಹಿಂದೊಮ್ಮೆ ರೋಬೋಟಿಕ್ ನಾಯಿಗೆ ಬೀದಿ ನಾಯಿಯ ಪ್ರತಿಕ್ರಿಯಿಸಿದ ರೀತಿಯೊಂದು ವೈರಲ್ ಆಗಿತ್ತು. ಐಐಟಿ ಕಾನ್ಪುರದಲ್ಲಿ ನಡೆದ ನಾಲ್ಕು ದಿನಗಳ ತಂತ್ರಜ್ಞಾನ ಉತ್ಸವದಲ್ಲಿ ಈ ಕ್ಷಣವನ್ನು ಸೆರೆಹಿಡಿಯಲಾಗಿತ್ತು. ವೀಡಿಯೋದಲ್ಲಿ, ನಾಯಿ ಮೊದಲು ರೋಬೋಟ್‌ನ ಸುತ್ತಲೂ ಓಡಿದೆ ನಂತರ ಅದರ ವಿನ್ಯಾಸ ಮತ್ತು ನಿರ್ಮಾಣವನ್ನು ಕುತೂಹಲದಿಂದ ನೋಡಿದೆ. ನಂತರ ಅದು ರೋಬೋಟ್‌ನೊಂದಿಗೆ ಆಟವಾಡಲು ಪ್ರಯತ್ನಿಸುತ್ತದೆ, ಅದೇ ವಿಡಿಯೋದಲ್ಲಿ ಇತರ ನಾಯಿಗಳು ತಮ್ಮ ಪ್ರದೇಶದಲ್ಲಿ ರೋಬೋಟ್ ನೋಡಿ ಇದೇನು ಎಂಬಂತೆ ನೋಡುವ ದೃಶ್ಯವೂ ಸೆರೆಯಾಗಿತ್ತು.