ಪಾರ್ಕಿಂಗ್ ಸಿಬ್ಬಂದಿಯ ನಿದ್ದೆಗೆಡಿಸಿದ ಲಕಲಕ ಲ್ಯಾಂಬೋರ್ಘಿನಿ: ಆಮೇಲೆ ಏನ್ ಮಾಡ್ದ ನೋಡಿ
ಪಾರ್ಕಿಂಗ್ ಸಿಬ್ಬಂದಿಯೊಬ್ಬ ಮಾಲೀಕನ ಅನುಮತಿ ಇಲ್ಲದೇ ಲಂಬೋರ್ಘಿನಿ ಕಾರನ್ನು ತೆಗೆದುಕೊಂಡು ಜಾಲಿ ರೈಡ್ ಹೋದಂತಹ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅತ್ಯಂತ ಕಷ್ಟ ಪಟ್ಟು ಬೆಲೆ ಬಾಳುವ ಕಾರೊಂದನ್ನು ಕೊಂಡಿರುತ್ತೀರಿ. ಆದರೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತದೆ. ಈ ವೇಳೆ ನಿಮ್ಮ ಪರಿಸ್ಥಿತಿ ಹೇಗಿರಬಹುದು ಹೇಳಿ. ಕಾರು ಕಾಣೆಯಾಗಿದೆ ಅಥವಾ ಕಳ್ಳತನವಾಗಿದೆ ಎಂಬುದು ಖಚಿತವಾದಾಗ ನಿಮಗೆ ಹುಚ್ಚು ಹಿಡಿದಂತಾಗುವುದು ಸಾಮಾನ್ಯ. ಇಲ್ಲದ ಕಾರನ್ನು ಪಡೆಯಲು ನೀವು ಎಂಥಾ ಸಾಹಸ ಮಾಡಲು ಸಿದ್ದರಾಗಿರುತ್ತಿರಿ ಅಲ್ಲವೇ. ಈಗ ಅಮೆರಿಕಾದ (America) ನ್ಯೂಯಾರ್ಕ್‌ನಲ್ಲಿ (New York) ಇಂತಹದ್ದೇ ಘಟನೆಯೊಂದು ನಡೆದಿದೆ.
ಪಾರ್ಕಿಂಗ್‌ನಿಂದ ನಿಲ್ಲಿಸಿದ್ದ ವೈದ್ಯರೊಬ್ಬರ ಸುಮಾರು 2 ಕೋಟಿ 48 ಲಕ್ಷ ರೂಪಾಯಿ ($320000) ಮೌಲ್ಯದ ಲಂಬೋರ್ಗಿನಿ ಕಾರು ನಾಪತ್ತೆಯಾಗಿದೆ. ಆದರೆ ಇಲ್ಲಿ ಕಾರನ್ಯಾರೋ ಕದ್ದಿಲ್ಲ. ಪಾರ್ಕಿಂಗ್ ಸ್ಥಳದ ಸಿಬ್ಬಂದಿಯೋರ್ವ ಕಾರ್ ಮಾಲೀಕನ ಅನುಮತಿಯಿಲ್ಲದೆ ಪಾರ್ಕಿಂಗ್ ಲಾಟ್‌ನಿಂದ ಈ ಐಷಾರಾಮಿ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು (Lamborghini car) ಬಹಳ ಸುಲಭವಾಗಿ ಎತ್ತಿಕೊಂಡು ಜಾಲಿ ರೈಡ್ ಹೋಗಿದ್ದಾನೆ. ಅದು ಒಂದೆರಡು ಗಂಟೆ ಅಲ್ಲ, ಬರೋಬರಿ ಐದು ಗಂಟೆಗಳ ಕಾಲ ಈತ ತನ್ನದಲ್ಲದ ಯಾರದೋ ಕಾರಿನಲ್ಲಿ ಜಾಲಿರೈಡ್ ಮಾಡಿದ್ದಾನೆ.
Lamborghini ನಂತರ ದುಬಾರಿ Mercedes Maybach GLS 600 ಖರೀದಿಸಿದ ರಣವೀರ್
ಸುಮಾರು 5 ಗಂಟೆಗಳ ಕಾಲ ಕಾರನ್ನು ಅದನ್ನು ಓಡಿಸಿದ ನಂತರ, ಅವನು ಅದನ್ನು ತಂದು ಮತ್ತದೇ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ಈ ಲಂಬೋರ್ಗಿನಿಯು ಪ್ರಸಿದ್ಧ ವೈದ್ಯ ಡಾ ಮಿಖಾಯಿಲ್ ವರ್ಷವ್ಸ್ಕಿಗೆ ಸೇರಿದ್ದಾಗಿದ್ದು,, ಅವರು ಅದನ್ನು ಹಡ್ಸನ್ ಯಾರ್ಡ್ಸ್ ಸಮೀಪ ಕಟ್ಟಡದ ಹೊರಗೆ ನಿಲ್ಲಿಸಿ ರಾತ್ರಿ ಮನೆಗೆ ಹೋಗಿದ್ದರು. ನಂತರ ರಾತ್ರಿ, ಪಾರ್ಕಿಂಗ್ ಅಟೆಂಡೆಂಟ್ ಕಾರಿನೊಂದಿಗೆ ಹೋಗುತ್ತಿರುವುದನ್ನು ಸೆಕ್ಯುರಿಟಿ ಗಾರ್ಡ್ ನೋಡಿದ್ದು ಅದರ ವಿಡಿಯೋ ಕೂಡ ಸೆರೆ ಆಗಿದೆ.
ನಂತರ ಇವರು ಪಾರ್ಕಿಂಗ್ ಸ್ಥಳಕ್ಕೆ ಕಾರು ಪಡೆಯಲು ಬಂದಾಗ ಈ ಕಾರು ಕಳ್ಳತನ ಬೆಳಕಿಗೆ ಬಂದಿದೆ. ಆದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅಟೆಂಡರ್ ಎಲ್ಲಿಯೂ ಕಾಣಿಸಿಲ್ಲ. ಸುಮಾರು ಐದು ಗಂಟೆಗಳ ನಂತರ ಅಟೆಂಡೆಂಟ್ ಕಾರಿನೊಂದಿಗೆ ಹಿಂತಿರುಗಿದ ಎಂದು ತಿಳಿದು ಬಂದಿದೆ.
ಬರೀ ನಂಬರ್ ಪ್ಲೇಟ್‌ಗೆ 17 ಲಕ್ಷ ಕೊಟ್ಟ ಜೂ.NTR, ಕಾರ್ ಬೆಲೆ ಎಷ್ಟು ?
ಇದಕ್ಕೂ ಮೊದಲು ನ್ಯೂಯಾರ್ಕ್ ಸಿಟಿ ಪೋಲೀಸ್ ಡಿಪಾರ್ಟ್ಮೆಂಟ್ (NYPD) ಕಾರಿನ ಲೈಸೆನ್ಸ್ ಪ್ಲೇಟ್ ಅನ್ನು ಪರಿಶೀಲಿಸಿದಾಗ ಈ ಲಂಬೋರ್ಘಿನಿ ಇಡೀ ನ್ಯೂಯಾರ್ಕ್ ನಗರದ ಸುತ್ತಲೂ ಚಲಿಸುತ್ತಿದೆ ಎಂದು ತಿಳಿದು ಬಂದಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಲಂಬೋರ್ಘಿನಿ ಕಾರಿನ ಮಾಲೀಕರಾಗಿರುವ ಡಾ ಮಿಖಾಯಿಲ್ ವರ್ಷವ್ಸ್ಕಿ ಅವರನ್ನು ಪೀಪಲ್ ಮ್ಯಾಗಜೀನ್ '2015 ರ ಜೀವಂತ ಸೆಕ್ಸಿಯೆಸ್ಟ್ ಡಾಕ್ಟರ್' ಎಂದು ಆಯ್ಕೆ ಮಾಡಿತ್ತು. ಮಿಖಾಯಿಲ್ ವರ್ಷವ್ಸ್ಕಿ ಅವರು ಇನ್ಸಟಾಗ್ರಾಮ್ (Instagram) ನಲ್ಲಿ 44 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಯೂಟ್ಯೂಬ್( YouTube) ನಲ್ಲಿ 94 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಇವರ ಈ ಕಾರು ಕಳ್ಳತನ ಪ್ರಕರಣ ಮೇ ಮೊದಲ ವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಐಷಾರಾಮಿ ಕಾರುಗಳ ಕ್ರೇಜ್ ಇಂದಿನ ಯುವಕರಲ್ಲಿ ಸಾಮಾನ್ಯ ಎನಿಸಿದೆ. ಕಾರು ಕೊಳ್ಳಲಾಗದಿದ್ದರೂ ಕನಿಷ್ಠ ಚಾಲನೆ ನಡೆಸಲಾದರೂ ಕಾರು ಸಿಕ್ಕರೆ ಎಷ್ಟು ಚೆನ್ನಾಗಿರುವುದು ಎಂದು ಬಹುತೇಕ ಯುವಕರು ಭಾವಿಸುವುದುಂಟು. ಅಮೆರಿಕಾದಲ್ಲಿ ನಡೆದ ಈ ಘಟನೆಯೂ ಲಂಬೋರ್ಘಿನಿ ಕಾರು ಮೇಲೆ ಇರುವ ಯುವಕರ ಹುಚ್ಚುತನಕ್ಕೆ ಸಾಕ್ಷಿಯಾಗಿದೆ.