ಮುಖೇಶ್ ಅಂಬಾನಿ ಒಡೆತನದ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಕಾರನ್ನು ವಿವಿಧ ಕೋನಗಳಲ್ಲಿ ನೋಡಿದರೆ ಅದು ವಿವಿಧ ಶೇಡ್‌ ಅಥವಾ ಬಣ್ಣಗಳಲ್ಲಿ ಕಾಣಿಸುತ್ತದೆ. ಈ ಕಾರಿನ ವಿಡಿಯೋ ವೈರಲ್‌ ಆಗಿದೆ..

ಮುಂಬೈ (ಜುಲೈ 5, 2023): ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಮತ್ತು ಅವರ ಬಳಿ ಸಾಕಷ್ಟು ಐರಾಷಾಮಿ ವಸ್ತುಗಳ ಶ್ರೇಣಿಯನ್ನು ಹೊಂದಿದ್ದಾರೆ. ಇವುಗಳನ್ನು ಖರೀದಿಸಲು ಹೆಚ್ಚಿನವರು ಕೇವಲ ಕನಸು ಕಾಣುವುದು ಮಾತ್ರ ಸಾಧ್ಯ ಎನ್ನಬಹುದು. ಮುಂಬೈನಲ್ಲಿ 15,000 ರೂ. ಮನೆಯಿಂದ 850 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್‌ಗಳವರೆಗೆ, ಮುಖೇಶ್ ಅಂಬಾನಿ ತಮ್ಮ ವಿಶಿಷ್ಟ ವಸ್ತುಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ಮತ್ತು, ಅವರ ಕಾರು ಸಂಗ್ರಹಣೆಯಲ್ಲಿಯೂ ಇದನ್ನು ಕಾಣಬಹುದು.

ಮುಖೇಶ್‌ ಅಂಬಾನಿ ರೋಲ್ಸ್‌ ರಾಯ್ಸ್‌, ಬೆಂಟ್ಲಿ, ಲ್ಯಾಂಡ್ ರೋವರ್,ಲ್ಯಾಂಬೋರ್ಘಿನಿ ಮತ್ತು ಇತರವುಗಳನ್ನು ಒಳಗೊಂಡಿರುವ ಅತಿ ದುಬಾರಿ ಮತ್ತು ಅಪರೂಪದ ಕಾರುಗಳ ಶ್ರೇಣಿಯನ್ನು ಹೊಂದಿದ್ದಾರೆ. ಮುಖೇಶ್ ಅಂಬಾನಿ ಭಾರತದಲ್ಲಿನ ಅತ್ಯಂತ ದುಬಾರಿ ಎಸ್‌ಯುವಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಲ್ಲಿನಾನ್‌ನ ಮಾಲೀಕರೂ ಆಗಿದ್ದಾರೆ.

ಇದನ್ನು ಓದಿ: ಇನ್ಮುಂದೆ ಕಾರಲ್ಲೂ ಹಾರಾಡ್ಬೋದು: ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕ ಸರ್ಕಾರ ಅನುಮತಿ! ಬೆಲೆ ಎಷ್ಟು ನೋಡಿ..

Rolls-Royce Cullinan ಯಾವುದೇ ಸಾಮಾನ್ಯ ಎಸ್‌ಯುವಿ ಅಲ್ಲದಿದ್ದರೂ, ಈ ಐಷಾರಾಮಿ ಕಾರನ್ನು ಮತ್ತೊಂದು ಹಂತಕ ಮೇಲಕ್ಕೆ ತೆಗೆದುಕೊಂಡು ಹೋಗಲು, ಮುಖೇಶ್‌ ಅಂಬಾನಿ ಅದಕ್ಕೆ 'ಬಣ್ಣ ಬದಲಾಯಿಸುವ' ಕೆಲಸ ಮಾಡಿಸಿದ್ದಾರೆ. ಅಂದರೆ, ಮುಖೇಶ್ ಅಂಬಾನಿ ಒಡೆತನದ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಕಾರನ್ನು ವಿವಿಧ ಕೋನಗಳಲ್ಲಿ ನೋಡಿದರೆ ಅದು ವಿವಿಧ ಶೇಡ್‌ ಅಥವಾ ಬಣ್ಣಗಳಲ್ಲಿ ಕಾಣಿಸುತ್ತದೆ. ಮತ್ತು ಇನ್ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಈ ವಿಶೇಷ ಕಾರನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಆ ಕಾರಿನ ವಿಡಿಯೋ ಇಲ್ಲಿದೆ ನೋಡಿ..

MUKESH AMBANI'S NEW ROLLS ROYCE CULLINAN l MUKESH AMBANI CAR COLLECTION 2021 #JIOGARAGE

ಈ ವಿಡಿಯೋದಲ್ಲಿ ಮುಖೇಶ್ ಅಂಬಾನಿಯವರ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಎಸ್‌ಯುವಿ ಕಣ್ಣುಗಳ ಮುಂದೆ ಬಣ್ಣಗಳನ್ನು ಬದಲಾಯಿಸುತ್ತಿರುವುದನ್ನು ಕಾಣಬಹುದು. ಕಾರಿಗೆ ವಿಶೇಷ ಬಣ್ಣದ ಕೆಲಸವಿಲ್ಲದಿದ್ದರೂ, ಸೈಕೆಡೆಲಿಕ್ ವ್ರಾಪ್‌ ಅನ್ನು ಮಾಡಲಾಗಿದೆ. ಕಲ್ಲಿನಾನ್‌ನ ವ್ರಾಪ್‌ ವಿವಿಧ ಶೇಡ್‌ಗಳ ದೀಪಗಳ ಅಡಿಯಲ್ಲಿ ವಿವಿಧ ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ, ಇದು ಕಾರಿನ ಬಣ್ಣವನ್ನು ಬದಲಾಯಿಸುವ ಭ್ರಮೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ದಿಲ್ಲಿ ಕರೋಲ್‌ಭಾಗ್‌ ಮಾರುಕಟ್ಟೆಯಲ್ಲಿ ಬೈಕ್‌ ರಿಪೇರಿ ಮಾಡಿದ ರಾಹುಲ್‌ ಗಾಂಧಿ

ಇನ್ನು, ಮುಖೇಶ್ ಅಂಬಾನಿ ಅವರ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಪೇಂಟ್‌ ಬೆಲೆಯೂ 1 ಕೋಟಿ ರೂ. ಗೂ ಹೆಚ್ಚಿನದ್ದು. ಟಸ್ಕನ್ ಸನ್ ಶೇಡ್‌ನಲ್ಲಿ ರೋಲ್ಸ್ ರಾಯ್ಸ್ ಕಲ್ಲಿನಾನ್‌ನ ಪೇಂಟ್ ಕೆಲಸಕ್ಕೆ ಸುಮಾರು 1 ಕೋಟಿ ರೂ ಆಗಿದೆ ಎಂದು Cartoq ವರದಿ ಮಾಡಿತ್ತು. ಭಾರತದಲ್ಲಿ ರೋಲ್ಸ್‌ ರಾಯ್ಸ್‌ ಕಲ್ಲಿನಾನ್‌ ಬೆಲೆಯು 6.8 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗಿದ್ದರೂ, 21-ಇಂಚಿನ ಚಕ್ರ ಮತ್ತು ಇತರ ಕಸ್ಟಮೈಸೇಶನ್‌ಗಳ ಜೊತೆಗೆ ಪೇಂಟ್‌ ಕೆಲಸವು ಕಾರಿನ ಬೆಲೆಯನ್ನು ಸುಮಾರು 13.14 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ ಎಂದು ವರದಿಯಾಗಿದೆ.

ಮರ್ಸಿಡೆಸ್ ಎಎಂಜಿ-ವ್ಯಾಗೆನ್ ಹಾಗೂ ಎಂಜಿ ಗ್ಲೋಸ್ಟರ್ ಬೆಂಗಾವಲಿನಲ್ಲಿ ಇತ್ತೀಚೆಗೆ ಅಂಬಾನಿ ಕುಟುಂಬದ ಈ ಹೊಸ ರೋಲ್ಸ್‌ ರಾಯ್ಸ್‌ ಕಲ್ಲಿನಾನ್‌ ಕಾರು ಕಾಣಿಸಿಕೊಂಡಿತ್ತು. ಇನ್ನು ಈ ಕಾರಿನ ನೋಂದಣಿ ಸಂಖ್ಯೆ '0001' ಆಗಿದ್ದು, ಇದಕ್ಕೆ ಕುಟುಂಬವು 12 ಲಕ್ಷ ರೂ. ಖರ್ಚು ಮಾಡಿದೆ. ಪ್ರಸಕ್ತ ಇರುವ ಸರಣಿಯಲ್ಲಿ ಎಲ್ಲ ಸಂಖ್ಯೆಗಳಿದ್ದು, ಈ ಕಾರಣಕ್ಕೆ ಅಂಬಾನಿ ಕುಟುಂಬ ಹೊಸ ಸರಣಿಯ ಸಂಖ್ಯೆಯನ್ನು ಆಯ್ಕೆ ಮಾಡಿದೆ. ಅಲ್ಲದೆ, ಇದಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸಿದೆ ಕೂಡ. ಈ ಕಾರಿನ ನೋಂದಣಿ 2037ರ ಜನವರಿ ತನಕ ಮಾನ್ಯತೆ ಹೊಂದಿದೆ. ಇನ್ನು ಈ ಎಲ್ಲ ಖರ್ಚುಗಳ ಜೊತೆಗೆ 40,000 ರೂ. ರಸ್ತೆ ಸುರಕ್ಷತಾ ತೆರಿಗೆಯನ್ನು ಕೂಡ ಪಾವತಿಸಲಾಗಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್‌ ವಾಹನ ಪ್ರಿಯರಿಗೆ ಶಾಕ್‌: ಸಬ್ಸಿಡಿ ಕಡಿತ ಎಫೆಕ್ಟ್‌; ನಾಳೆಯಿಂದ ಸ್ಕೂಟರ್‌, ಕಾರು, ಬಸ್‌ ದರ ಹೆಚ್ಚಳ
ಕೆಲವೊಂದು ವರದಿಗಳ ಪ್ರಕಾರ ಈ ಹೊಸ ಕಾರು ಮುಖೇಶ್ ಅಂಬಾನಿ ಅವರ ಬಳಕೆಗಾಗಿ ಖರೀದಿಸಿಲ್ಲ. ಬದಲಿಗೆ ಈ ಹೊಸ ಕಾರನ್ನು ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಎಂಗೇಜ್ ಮೆಂಟ್ ಉಡುಗೊರೆಯಾಗಿ ನೀಡಲಾಗಿದೆ. ಇವರಿಬ್ಬರ 2023ರ ಎಂಗೇಜ್ಮೆಂಟ್ ಜನವರಿಯಲ್ಲಿ ಆಗಿದ್ದು, ಈ ಕಾರಿನ ನೋಂದಣಿ ಕೂಡ ಇದೇ ತಿಂಗಳಲ್ಲಿ ಆಗಿದೆ. ಭದ್ರತಾ ಕಾರಣಗಳಿಂದ ಅವರು ಬುಲೆಟ್ ಪ್ರೂಫ್ ವಾಹನದಲ್ಲೇ ಪ್ರಯಾಣಿಸುತ್ತಾರೆ. 

ಇದನ್ನೂ ಓದಿ: 50 ಲಕ್ಷ ಮೌಲ್ಯದ ಕಾರು ಖರೀದಿಸಿದ್ದಕ್ಕೆ ಕಮ್ಯುನಿಸ್ಟ್‌ ನಾಯಕನ ವಿರುದ್ಧವೇ ತಿರುಗಿಬಿದ್ದ ಪಕ್ಷ: ತನಿಖೆ ಆರಂಭ