ದ್ವಿಚಕ್ರ ವಾಹನವನ್ನು ಸರಿಪಡಿಸಲು ಸ್ಕ್ರೂಡ್ರೈವರ್ ಕೈಗೆತ್ತಿಕೊಂಡ ಅವರು ವ್ಯಾಪಾರಿಗಳು ಮತ್ತು ಬೈಕ್ ಮೆಕಾನಿಕ್‌ಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.ರಾಹುಲ್‌ ಗಾಂಧಿ ಮಂಗಳವಾರ ಸಂಜೆ ದೆಹಲಿಯ ಕರೋಲ್‌ಭಾಗ್‌ನಲ್ಲಿರುವ ಪ್ರಸಿದ್ಧ ಸೈಕಲ್‌ ಮಾರುಕಟ್ಟೆಗೆ ಭೇಟಿ ನೀಡಿದರು.

ನವದೆಹಲಿ (ಜೂನ್ 28, 2023): ಭಾರತ್ ಜೋಡೋ ಯಾತ್ರೆ ಮಾಡಿದಾಗಿನಿಂದ ಸಾರ್ವಜನಿಕರ ಜತೆಗೆ ಸಮಪರ್ಕ ಮುಂದುವರಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಬೈಕ್ ಮತ್ತು ಸೈಕಲ್ ಮೆಕ್ಯಾನಿಕ್‌ಗಳನ್ನು ಭೇಟಿ ಮಾಡಿದರು. ಕಾಂಗ್ರೆಸ್ ಮುಖಂಡ ಅಂಗಡಿಯೊಂದರಲ್ಲಿ ಮೆಕ್ಯಾನಿಕ್‌ಗಳೊಂದಿಗೆ ನೆಲದ ಮೇಲೆ ಕುಳಿತು ತನ್ನ ಕೈಗಳನ್ನು ಮಸಿ ಮಾಡಿಕೊಂಡು ಬೈಕ್ ಅನ್ನು ಸರಿಪಡಿಸಲು ಸಹ ಹಿಂಜರಿಯಲಿಲ್ಲ. 

ದ್ವಿಚಕ್ರ ವಾಹನವನ್ನು ಸರಿಪಡಿಸಲು ಸ್ಕ್ರೂಡ್ರೈವರ್ ಕೈಗೆತ್ತಿಕೊಂಡ ಅವರು ವ್ಯಾಪಾರಿಗಳು ಮತ್ತು ಬೈಕ್ ಮೆಕಾನಿಕ್‌ಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಹೌದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಸಂಜೆ ದೆಹಲಿಯ ಕರೋಲ್‌ಭಾಗ್‌ನಲ್ಲಿರುವ ಪ್ರಸಿದ್ಧ ಸೈಕಲ್‌ ಮಾರುಕಟ್ಟೆಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿಯ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಅಲ್ಲೇ ಇದ್ದ ಬೈಕ್‌ ರಿಪೇರಿ ಶಾಪ್‌ಗೆ ತೆರಳಿ ತಾವೂ ಒಂದಿಷ್ಟು ಬೈಕ್‌ ರಿಪೇರಿ ಮಾಡಿ, ಅಲ್ಲಿನ ಕೆಲಸಗಾರರೊಂದಿಗೆ ಸಂವಾದ ನಡೆಸಿದರು. ಕೆಲ ದಿನಗಳ ಹಿಂದೆ ರಾಹುಲ್‌ ಗಾಂಧಿ ಚಂಡೀಗಢದಲ್ಲಿ ಮತ್ತು ಅಮೆರಿಕ ಭೇಟಿಯ ವೇಳೆ ಟ್ರಕ್‌ನಲ್ಲಿ ಸಂಚಾರ ಮಾಡುವ ಮೂಲಕ ಜನಸಾಮಾನ್ಯ ಕಷ್ಟಸುಖ ಅರಿಯುವ ಯತ್ನ ಮಾಡಿದ್ದರು.

ಇದನ್ನು ಓದಿ: ಮಣಿಪುರ ಹಿಂಸೆಗೆ ವಿದೇಶಿ ಕುಮ್ಮಕ್ಕು; ಮ್ಯಾನ್ಮಾರ್‌ ಶಸ್ತ್ರಾಸ್ತ್ರ ಬಳಕೆ: ಹಿಂಸಾಪೀಡಿತ ರಾಜ್ಯಕ್ಕೆ ರಾಹುಲ್‌ ಗಾಂಧಿ ಭೇಟಿ

Scroll to load tweet…

ಮಾಜಿ ಲೋಕಸಭಾ ಸದಸ್ಯರು ಕರೋಲ್ ಬಾಗ್‌ನ ಸೈಕಲ್ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ಕಾರ್ಮಿಕರನ್ನು ಭೇಟಿ ಮಾಡಿದರು. ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು ಮತ್ತು ಅವರು ಆ ಪ್ರದೇಶದಲ್ಲಿನ ಸ್ಥಳೀಯರಿಗೆ ಹಸ್ತಲಾಘವ ಮಾಡಿದರು. ದೆಹಲಿಯಲ್ಲಿ ರಾಹುಲ್‌ ಗಾಂಧಿ ಸ್ಥಳೀಯರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ರಂಜಾನ್ ಸಮಯದಲ್ಲಿ, ಗಾಂಧಿಯವರು ಹಳೆಯ ದೆಹಲಿಯ ಮಾಟಿಯಾ ಮಹಲ್ ಮಾರುಕಟ್ಟೆ ಮತ್ತು ಬಂಗಾಳಿ ಮಾರುಕಟ್ಟೆಗೆ ಭೇಟಿ ನೀಡಿದರು ಮತ್ತು ಈ ಪ್ರದೇಶಗಳ ಜನಪ್ರಿಯ ಭಕ್ಷ್ಯಗಳನ್ನು ಸ್ವತಃ ಸೇವಿಸಿದ್ದರು. 2 ದಿನಗಳ ನಂತರ ಅವರು ನಗರದ ಮುಖರ್ಜಿ ನಗರ ಪ್ರದೇಶದಲ್ಲಿ ನಾಗರಿಕ ಸೇವಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಿದರು.

ಮಾನನಷ್ಟ ಮೊಕದ್ದಮೆಯಲ್ಲಿ ಅನರ್ಹತೆ ಮತ್ತು ಶಿಕ್ಷೆಗೆ ಗುರಿಯಾದ ನಂತರ 2024 ರ ಲೋಕಸಭಾ ಚುನಾವಣೆಯು ರಾಹುಲ್ ಗಾಂಧಿಯ ವ್ಯಾಪ್ತಿಯಿಂದ ಹೊರಗಿದೆ ಎಂದು ತೋರುತ್ತದೆ. ಆದರೂ, ರಾಹುಲ್‌ ಗಾಂಧಿಯವರು ತಮ್ಮ ಯಾತ್ರೆಯನ್ನು "ಮುಂದುವರಿಯಲು" ಸಿದ್ಧರಾಗಿರುವಂತೆ ತೋರುತ್ತಿದೆ.

ಇದನ್ನೂ ಓದಿ: ಅಮೆರಿಕದಲ್ಲೂ ರಾಹುಲ್‌ ಟ್ರಕ್‌ ರೈಡ್‌: ಭಾರತೀಯ ಮೂಲದ ಚಾಲಕನ ಲಾರಿಯಲ್ಲಿ ಸಿಧು ಮೂಸೇವಾಲಾ ಹಾಡು ಕೇಳಿ ಎಂಜಾಯ್‌!

ಅಷ್ಟೇ ಅಲ್ಲದೆ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ತಾವು ಇತ್ತೀಚೆಗೆ ಟ್ರಕ್‌ನಲ್ಲಿ ದಿಲ್ಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆ ಹಾಗೂ ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿದ್ದಾರೆ. ‘6 ಗಂಟೆಗಳ ಈ ಟ್ರಕ್‌ ಯಾತ್ರೆ ಅತ್ಯದ್ಭುತವಾಗಿತ್ತು. ಅಲ್ಲದೆ ಕುತೂಹಲಕರ ಸಂವಾದವು ಟ್ರಕ್‌ ಚಾಲಕ ಪ್ರೇಮ್‌ ರಜಪೂತ್‌ ಹಾಗೂ ಕ್ಲೀನರ್‌ ರಾಕೇಶ್‌ ಜತೆ ಈ ವೇಳೆ ನಡೆಯಿತು. ಪ್ರಯಾಣದಲ್ಲಿ 6 ತಾಸು ಕಳೆದಿದ್ದೇ ಗೊತ್ತಾಗಲಿಲ್ಲ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

“ಆರು ಗಂಟೆಗಳ ದೆಹಲಿ-ಚಂಡೀಗಢ ಪ್ರಯಾಣದಲ್ಲಿ ಟ್ರಕ್ ಡ್ರೈವರ್‌ಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆ! 24 ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯುವ ಅವರು ಭಾರತದ ಮೂಲೆ ಮೂಲೆಯನ್ನು ಒಂದುಗೂಡಿಸುತ್ತಾರೆ’’ ಎಂದೂ ರಾಹುಲ್‌ ಗಾಂಧಿ ಈ ವೇಳೆ ಹೇಳಿದ್ದರು.

ಇದನ್ನೂ ಓದಿ: ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಕಾಂಗ್ರೆಸ್‌ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ