ಅನಿಲ್ ಕುಮಾರ್ ಅವರು ಕಾರಿನ ಡೆಲಿವರಿ ತೆಗೆದುಕೊಳ್ಳುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಈ ಹಿನ್ನೆಲೆ ಸಿಪಿಐ-ಎಂ ತನಿಖೆ ಆರಂಭಿಸಿದೆ.

ಕೊಚ್ಚಿ (ಮೇ 30, 2023): ರಾಜಕಾರಣಿಗಳು ಐಷಾರಾಮಿ ಕಾರುಗಳನ್ನು ಖರೀದಿಸುವುದು ಸಾಮಾನ್ಯ. ಲಕ್ಷಾಂತರ ರೂ. ನಿಂದ ಹಿಡಿದು ಕೋಟ್ಯಂತರ ರೂ. ಕಾರುಗಳನ್ನೂ ಖರೀದಿಸಿ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಆದರೆ, ಕಮ್ಯೂನಿಸ್ಟ್‌ ನಾಯಕ ಹಾಗೂ ಪೆಟ್ರೋಲಿಯಂ ಮತ್ತು ಗ್ಯಾಸ್ ಕಾರ್ಮಿಕರ ಒಕ್ಕೂಟದ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅನಿಲ್ ಕುಮಾರ್ ಅವರು 50 ಲಕ್ಷ ರೂಪಾಯಿ ಬೆಲೆಬಾಳುವ ಮಿನಿ ಕೂಪರ್ ಖರೀದಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಒಕ್ಕೂಟವು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಗೆ ಸಂಯೋಜಿತವಾಗಿದೆ ಎಂದೂ ತಿಳಿದುಬಂದಿದೆ. 

ಅನಿಲ್ ಕುಮಾರ್ ಅವರು ಕಾರಿನ ಡೆಲಿವರಿ ತೆಗೆದುಕೊಳ್ಳುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಈ ಹಿನ್ನೆಲೆ ಸಿಪಿಐ-ಎಂ ತನಿಖೆ ಆರಂಭಿಸಿದೆ. ಆದರೆ, ಕಾರು ಖರೀದಿ ಬಗ್ಗೆ ಸ್ಪಷ್ಟನೆ ನೀಡಿದ ಅನಿಲ್‌ ಕುಮಾರ್‌, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಒಐಎಲ್) ಉದ್ಯೋಗಿಯಾಗಿರುವ ತಮ್ಮ ಪತ್ನಿ ಈ ಕಾರನ್ನು ಖರೀದಿಸಿದ್ದಾರೆ ಎಂದು ಸಿಐಟಿಯು ಮುಖಂಡ ಹೇಳಿದ್ದಾರೆ. 

ಇದನ್ನು ಓದಿ: 2027ಕ್ಕೆ ದೇಶದಲ್ಲಿ ಡೀಸೆಲ್‌ ಕಾರು, ಜೀಪು ಬ್ಯಾನ್‌? ಎಲೆಕ್ಟ್ರಿಕ್‌, ಅನಿಲ ಆಧರಿತ ವಾಹನ ಬಳಕೆಗೆ ಶಿಫಾರಸು

ಇನ್ನೊಂದೆಡೆ, ಈ ಮಿನಿ ಕೂಪರ್ ಜೊತೆಗೆ ಅವರು ಈಗಾಗಲೇ ಟೊಯೋಟಾ ಕ್ರೆಸ್ಟಾ ಲಿಮಿಟೆಡ್ ಎಡಿಷನ್, ಟೊಯೋಟಾ ಫಾರ್ಚೂನರ್ ವಾಹನಗಳ ಸಮೂಹವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ, ಡೀಲರ್‌ಶಿಪ್‌ನಿಂದ ಹೊಚ್ಚಹೊಸ, ಹೊಳೆಯುವ ಮಿನಿ ಕೂಪರ್ ಕಾರನ್ನು ಅನಿಲ್‌ ಕುಮಾರ್ ಅವರ ಕುಟುಂಬ ಪಡೆಯುತ್ತಿರುವ ಫೋಟೋ ವೈರಲ್‌ ಆಗಿದ್ದು, ಈ ಹಿನ್ನೆಲೆ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಈ ಮಧ್ಯೆ, ಕೆರಳದ ಕೊಚ್ಚಿಯ ಐಷಾರಾಮಿ ಪ್ರದೇಶವಾದ ಪನಮಪಲ್ಲಿ ನಗರದಲ್ಲಿ 4000 ಚದರ ಅಡಿ ವಿಸ್ತೀರ್ಣದಲ್ಲಿದೆ ಎಂದು ಹೇಳಲಾಗಿದೆ. ಅನಿಲ್‌ ಕುಮಾರ್‌ ಕೆಲಸ ಮಾಡದಿದ್ದರೂ ಹಫ್ತಾ ವಸೂಲಿಯ ಮೂಲಕವೇ ಹಣ ಮಾಡಿದ್ದಾರೆ. ಹಾಗೂ, ನೂಕ್ಕುಕೂಲಿ (ಕೆಲಸ ಮಾಡದೆ ಗೂಂಡಾ ಶುಲ್ಕವನ್ನು ಸಂಗ್ರಹಿಸುವುದು) ಸಂಗ್ರಹಿಸುವ ಮೂಲಕ ಎರ್ನಾಕುಲಂ ಸಿಪಿಎಂ ಪಕ್ಷದ ಕಾರ್ಯದರ್ಶಿ ಸಿ ಎನ್ ಮೋಹನ್ ಮತ್ತು ಇತರ ಸಿಪಿಎಂ ನಾಯಕರೊಂದಿಗೆ ಹಂಚಿಕೊಳ್ಳುತ್ತಾರೆ ಎಂದೂ ಹೇಳಲಾಗುತ್ತದೆ. 

ಇದನ್ನೂ ಓದಿ: ಈ ಊರಲ್ಲಿ ಇನ್ಮುಂದೆ ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳ ಕಾರುಬಾರು; ಪೆಟ್ರೋಲ್‌ ವೆಹಿಕಲ್ಸ್ ನೋಂದಣಿ ನಿಷೇಧ

ಅನಿಲ್ ಕುಮಾರ್ ಅವರು ಈ ಹಿಂದೆ ಕೊಚ್ಚಿಯ ವೈಪೀನ್‌ನ ಕುಜುಪಿಲ್ಲಿಯ ಗ್ಯಾಸ್ ಏಜೆನ್ಸಿಯೊಂದರ ಮಹಿಳಾ ಮಾಲೀಕರ ವಿರುದ್ಧ ಸಾರ್ವಜನಿಕವಾಗಿ ಬೆದರಿಕೆ ಹಾಕಿ ಹೆಚ್ಚು ಸುದ್ದಿಯಾಗಿದ್ದರು.

ಇದನ್ನೂ ಓದಿ: ಸಗಣಿ ಗ್ಯಾಸ್‌ ಬಳಸಿ ಓಡಬಲ್ಲ ಕಾರು ನಿರ್ಮಾಣಕ್ಕೆ ಮಾರು​ತಿ ರೆಡಿ..!

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಬಳಿಕ SC ಸರ್ಟಿಫಿಕೇಟ್‌ಗೆ ಬೆಲೆ ಇಲ್ಲ: ಈ ಕ್ಷೇತ್ರದ ಚುನಾವಣೆ ಅಸಿಂಧುಗೊಳಿಸಿದ ಹೈಕೋರ್ಟ್..!