Asianet Suvarna News Asianet Suvarna News

ಇನ್ಮುಂದೆ ಕಾರಲ್ಲೂ ಹಾರಾಡ್ಬೋದು: ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕ ಸರ್ಕಾರ ಅನುಮತಿ! ಬೆಲೆ ಎಷ್ಟು ನೋಡಿ..

ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ. ಅಮೆರಿಕದ ಏವಿಯೇಶನ್‌ ಆಡಳಿತ ಸಂಸ್ಥೆ ಈ ಅನುಮತಿಯನ್ನು ನೀಡಿದ್ದು, ಈ ರೀತಿಯ ಕಾರಿಗೆ ಅನುಮತಿ ಸಿಕ್ಕಿದ್ದು ಇದೇ ಮೊದಲು.

want to fly above the traffic world s 1st flying car certified by united states ash
Author
First Published Jul 1, 2023, 12:13 PM IST

ನ್ಯೂಯಾರ್ಕ್ (ಜುಲೈ 1, 2023): ರಸ್ತೆಯ ಮೇಲೆ ಕಾರು ಓಡಿಸಬೇಕು ಎಂದರೆ ಟ್ರಾಫಿಕ್‌ ಸಮಸ್ಯೆಯೆ? ಹಾಗಿದ್ದರೆ ಇನ್ನು ಈ ಚಿಂತೆ ಇಲ್ಲ. ಅಲೆಫ್‌ ಕಾರು ಕಂಪನಿಯವರು ತಯಾರು ಮಾಡಿದ್ದ ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ. ಅಮೆರಿಕದ ಏವಿಯೇಶನ್‌ ಆಡಳಿತ ಸಂಸ್ಥೆ ಈ ಅನುಮತಿಯನ್ನು ನೀಡಿದ್ದು, ಈ ರೀತಿಯ ಕಾರಿಗೆ ಅನುಮತಿ ಸಿಕ್ಕಿದ್ದು ಇದೇ ಮೊದಲು.

2022ರಲ್ಲಿ ಈ ಕಾರನ್ನು ಅನಾವರಣಗೊಳಿಸಿದ್ದು, ಸಾರ್ವಜನಿಕ ರಸ್ತೆಗಳನ್ನು ಓಡಿಸಬಹುದು ಎಂದು ಕಂಪನಿ ಹೇಳಿತ್ತು. ಅಲ್ಲದೇ ಇದು ಲಂಬಾಕಾರದಲ್ಲಿ ಟೇಕಾಫ್‌ ಮತ್ತು ಲ್ಯಾಂಡ್‌ ಆಗುವ ಸಾಮರ್ಥ್ಯವನ್ನು ಹೊಂದಿದ್ದು, ಟ್ರಾಫಿಕ್‌, ಅಪಘಾತಗಳು ಸಂಭವಿಸಿದಾಗ ಸರಾಗವಾಗಿ ಈ ಕಾರಿನಲ್ಲಿ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿತ್ತು.

ಇದನ್ನು ಓದಿ: ದುಬೈನಲ್ಲಿ ಪ್ರಾರಂಭವಾಗ್ತಿದೆ Flying taxi: ನಾವು ಪ್ರಯಾಣಿಸುವ ರೀತಿಯನ್ನೇ ಬದಲಿಸುತ್ತೆ ಏರ್‌ ಕ್ಯಾಬ್‌..!

ಈ ಕಾರಿನ ಬೆಲೆ 8.6 ಕೋಟಿ ರೂ. ಆಗಿದ್ದು, ಸಂಪೂರ್ಣವಾಗಿ ಎಲೆಕ್ಟ್ರಿಕ್‌ ಕಾರ್‌ ಆಗಿದೆ. ಇದು ಸುಮಾರು 322 ಕಿ.ಮೀ. ದೂರ ಹಾರುವ ಸಾಮರ್ಥ್ಯ ಹೊಂದಿದ್ದು, ಮುಂಗಡವಾಗಿ ಕಾಯ್ದಿರಿಸಿದ ಬಳಿಕ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ. 2025ಕ್ಕೆ ಈ ಕಾರುಗಳು ಲಭ್ಯವಾಗುವ ಸಾಧ್ಯತೆಗಳಿವೆ.

ದುಬೈನಲ್ಲಿ ಹಾರುವ ಟ್ಯಾಕ್ಸಿ!
ಇನ್ನೊಂದೆಡೆ, ಚೀನಾದ (China) ಸಂಸ್ಥೆಯು ದುಬೈನಲ್ಲಿ (Dubai) ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು (Electric Flying Taxi)  ಪರೀಕ್ಷಿಸಿದೆ. ಈ ಹಿನ್ನೆಲೆ ಟ್ರಾಫಿಕ್‌ ದಟ್ಟಣೆಯಿಲ್ಲದೆ ಹೆಚ್ಚಿನ ನಗರಗಳ ಮೂಲಕ ಜನರು ಸುತ್ತುವ ಕನಸು ಸದ್ಯದಲ್ಲೇ ನನಸಾಗಲಿದೆ. ಇನ್ನು, ಏನಿದು ಫ್ಲೈಯಿಂಗ್ ಟ್ಯಾಕ್ಸಿ, ಇದು ಹೇಗೆ ಹೇಗೆ ಕೆಲಸ ಮಾಡುತ್ತದೆ, ಅವುಗಳ ಪ್ರಯೋಜನಗಳು ಮತ್ತು ಅದರಲ್ಲಿ ಪ್ರಯಾಣಿಸುವುದು ಹೇಗಿರುತ್ತದೆ ಎಂಬ ಬಗ್ಗೆ ಕುತೂಹಲವೇ.. ಇಲ್ಲಿ ತಿಳಿದುಕೊಳ್ಳಿ.. 

ಇದನ್ನೂ ಓದಿ: ದಿಲ್ಲಿ ಕರೋಲ್‌ಭಾಗ್‌ ಮಾರುಕಟ್ಟೆಯಲ್ಲಿ ಬೈಕ್‌ ರಿಪೇರಿ ಮಾಡಿದ ರಾಹುಲ್‌ ಗಾಂಧಿ

ಹಾರುವ ಟ್ಯಾಕ್ಸಿ ಬಗ್ಗೆ ಇಲ್ಲಿದೆ ವಿವರ..
ಫ್ಲೈಯಿಂಗ್ ಟ್ಯಾಕ್ಸಿ, ಇದನ್ನು ಏರ್ ಟ್ಯಾಕ್ಸಿ (Air Taxi) ಎಂದೂ ಕರೆಯುತ್ತಾರೆ. ಫ್ಲೈಯಿಂಗ್ ಟ್ಯಾಕ್ಸಿ ಅಂದರೆ ಅಕ್ಷರಶಃ ಹಾರುವ ಕಾರು. ಡಿಮ್ಯಾಂಡ್‌ ಮೇರೆಗೆ ಸಣ್ಣ ಹಾರಾಟಗಳಿಗಾಗಿ ಬಳಕೆಯಾಗುವ ವಾಣಿಜ್ಯ ವಿಮಾನ ಅಥವಾ ಹೆಲಿಕಾಪ್ಟರ್‌. ದಟ್ಟಣೆಯ ರಸ್ತೆಗಳೊಂದಿಗೆ ನಗರ ಕೇಂದ್ರಗಳಲ್ಲಿನ ಪ್ರಯಾಣಕ್ಕೆ ಪರ್ಯಾಯವಾಗಿ ಇದನ್ನು ಪರಿಗಣಿಸಲಾಗಿದೆ ಮತ್ತು ಇದನ್ನು ನಗರ ವಾಯು ಚಲನಶೀಲತೆ (Urban Air Mobility) (UAM) ವಾಹನ ಎಂದೂ ಕರೆಯುತ್ತಾರೆ.

ಕೆಲವು ಸಮಯದಿಂದ ಏರ್ ಟ್ಯಾಕ್ಸಿಗಳು ಆಕರ್ಷಕ ಆಯ್ಕೆಯಾಗಿ ಮಾರ್ಪಟ್ಟಿವೆ. ಇದಕ್ಕೆ ಕಾರಣ, ಟೊಯೋಟಾ, ಉಬರ್, ಹುಂಡೈ, ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಅನೇಕ ಕಂಪನಿಗಳು ತಮ್ಮ ಮಾಡೆಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮೋರ್ಗಾನ್ ಸ್ಟಾನ್ಲಿ ಸಂಶೋಧನಾ ಅಧ್ಯಯನದ ಪ್ರಕಾರ, ಸ್ವಾಯತ್ತ ನಗರ ವಿಮಾನ ಮಾರುಕಟ್ಟೆಯು 2040 ರ ವೇಳೆಗೆ 1.5 ಟ್ರಿಲಿಯನ್ ಡಾಲರ್‌ ಮೌಲ್ಯದ್ದಾಗಿರಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಎಲೆಕ್ಟ್ರಿಕ್‌ ವಾಹನ ಪ್ರಿಯರಿಗೆ ಶಾಕ್‌: ಸಬ್ಸಿಡಿ ಕಡಿತ ಎಫೆಕ್ಟ್‌; ನಾಳೆಯಿಂದ ಸ್ಕೂಟರ್‌, ಕಾರು, ಬಸ್‌ ದರ ಹೆಚ್ಚಳ

ಇನ್ನು, ಫ್ರಾಸ್ಟ್ ಮತ್ತು ಸುಲ್ಲಿವಾನ್‌ನ ಮತ್ತೊಂದು ಅಧ್ಯಯನವು 2022 ರಲ್ಲಿ ದುಬೈನಲ್ಲಿ ಏರ್ ಟ್ಯಾಕ್ಸಿಗಳು ಪ್ರಾರಂಭವಾಗುವುದನ್ನು ಮತ್ತು ಸಂಯುಕ್ತ ವಾರ್ಷಿಕ ಬೆಳವಣಿಗೆಯೊಂದಿಗೆ ವಿಸ್ತರಿಸುವುದನ್ನು ನೋಡುತ್ತದೆ. 2040 ರ ವೇಳೆಗೆ ಸುಮಾರು ಶೇ. 46 ದರದಲ್ಲಿ 430,000 ಕ್ಕಿಂತ ಹೆಚ್ಚು ಘಟಕಗಳಿಗೆ ದುಬೈನಲ್ಲಿ ಹಾರುವ ಟ್ಯಾಕ್ಸಿ ಕಾರ್ಯಾಚರಣೆಯಾಗಲಿದೆ ಎಂದೂ ಅಂದಾಜಿಸಿದೆ.

ಇದನ್ನೂ ಓದಿ: 50 ಲಕ್ಷ ಮೌಲ್ಯದ ಕಾರು ಖರೀದಿಸಿದ್ದಕ್ಕೆ ಕಮ್ಯುನಿಸ್ಟ್‌ ನಾಯಕನ ವಿರುದ್ಧವೇ ತಿರುಗಿಬಿದ್ದ ಪಕ್ಷ: ತನಿಖೆ ಆರಂಭ

Follow Us:
Download App:
  • android
  • ios