ಭಾರತದಲ್ಲಿ 2021 ಮರ್ಸಿಡಿಸ್ ಜಿಎಲ್ಎ ಎಸ್‌ಯುವಿ ಲಾಂಚ್, ಆರಂಭಿಕ ಬೆಲೆ?

ಪ್ರಖ್ಯಾತ ಕಾರು ಉತ್ಪಾದಕ ಕಂಪನಿ ಮರ್ಸಿಡಿಸ್ ಬೆಂಜ್, ಭಾರತದಲ್ಲಿ ಮರ್ಸಿಡಿಸ್ 2021 ಜಿಎಲ್ಎ ಎಸ್‌ಯವಿಯನ್ನು ಲಾಂಚ್ ಮಾಡಿದೆ. ಈ ಎಸ್‌ಯುವಿ ಬೆಲೆ 42 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ಈ ಎಸ್‌ಯುವಿ ಹಲವು ವಿಶಿಷ್ಟ ಫೀಚರ್‌ಗಳು ಮತ್ತು ಎರಡು ಮಾದರಿಯ ಎಂಜಿನ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.

Mercedes Benz launched its 2021 Mercedes GLA SUV and Check details here

ಭಾರತದಲ್ಲೇ ಉತ್ಪಾದನೆ ಆರಂಭಿಸಿರುವ ಮರ್ಸೆಡಿಸ್ ಬೆಂಜ್ ಕಂಪನಿಯ ಜಿಎಲ್ಎ ಎಸ್‌ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ 42.1 ಲಕ್ಷ ರೂಪಾಯಿಯಿಂದ 57.3 ಲಕ್ಷ ರೂಪಾಯಿವರೆಗೂ ಇರಲಿದೆ. ಕಂಪನಿ ಭಾರತದಲ್ಲಿ ಉತ್ಪಾದಿಸಿ ಬಿಡುಗಡೆ ಮಾಡುತ್ತಿರುವ ಮೂರನೇ ಕಾರ್ ಇದಾಗಿದೆ.  ಈ ಬೆಲೆ ಎಕ್ಸ್ ಶೋರೂಮ್ ಬೆಲೆಯಾಗಿದೆ.

ಪ್ರೀಮಿಯಂ ಕಾರುಗಳಿಗೆ ಹೆಸರುವಾಸಿಯಾಗಿರುವ ಮರ್ಸೆಡಿಸ್ ಬೆಂಜ್, ಅತ್ಯಾಧುನಿಕ ಮತ್ತು ಐಷಾರಾಮಿ ಕಾರುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಈ ಕಾರುಗಳ ತಮ್ಮ ವಿಶಿಷ್ಟ ಫೀಚರ್‌ಗಳು ಮತ್ತು ರಸ್ತೆ ಮೇಲಿನ ಪ್ರದರ್ಶನಕ್ಕಾಗಿ ಹೆಚ್ಚು ಜನಪ್ರಿಯವಾಗಿವೆ.

ಇದು ಜಗತ್ತಿನ ಮೊದಲ ಹಾರುವ ಎಲೆಕ್ಟ್ರಿಕ್ ರೇಸಿಂಗ್ ಕಾರ್!

ಭಾರತದಲ್ಲಿ ಬಿಡುಗಡೆ ಮಾಡಿರುವ ಬೆಂಜ್ ಜಿಎಲ್‌ಎ ಎಸ್‌ಯುವಿಗೆ ಕಂಪನಿ ಈಗಾಗಲೇ ಬುಕ್ಕಿಂಗ್ ಆರಂಭಿಸಿದೆ. ಜಿಎಲ್‌ಎ 220ಡಿ ವೆರಿಯೆಂಟ್‌ಗಿಂತಲೂ ಬೇಸ್ ವೆರಿಯೆಂಟ್ ಆಗಿರುವ ಜಿಎಲ್ಎ 200 ಬೆಲೆ 1.6 ಲಕ್ಷ ರೂಪಾಯಿಯಷ್ಟು ತುಟ್ಟಿಯಾಗಿರಲಿದೆ.  ಇದೇ ವೇಳೆ, ಮರ್ಸೆಡಿಸ್ ಬೆಂಜ್ ಜಿಎಲ್ಎ 220ಡಿ 4ಮ್ಯಾಟಿಕ್ ಎಸ್‌ಯುವಿ ಅಂದಾಜು 46.7 ಲಕ್ಷ ರೂ.(ಎಕ್ಸ್ ಶೋರೂಮ್ ಬೆಲೆ) ಆಗಿರಲಿದೆ.

ಜರ್ಮನ್ ಬ್ರ್ಯಾಂಡ್‌ ಬೃಹತ್ ಎಸ್‌ಯುವಿಗಳಾದ ಜಿಎಲ್‌ಸಿ ಅಥವಾ ಜಿಎಲ್‌ಇಗಳ ರೀತಿಯಲ್ಲಿ ಮರ್ಸೆಡಿಸ್ ಬೆಂಜ್ ಜಿಎಲ್‌ಎ ಎಸ್‌ಯುವಿಗಳ ಲುಕ್ ಇದೆ. ಹಾಗಂತ ಸಂಪೂರ್ಣವಾಗಿ ಅವುಗಳನ್ನು ಹೋಲುತ್ತದೆ ಎಂದರ್ಥವಲ್ಲ. ನೋಡಲು ಹಾಗೆ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಬೆಂಜ್ ಎಸ್‌ಯುವಿಯಲ್ಲಿ ಸಾಕಷ್ಟು ಸುಂದರವಾದ ವಿನ್ಯಾಸವನ್ನು ಕಾಣಬಹುದು. ಪರಿಷ್ಕೃತ ವಿನ್ಯಾಸದಲ್ಲಿ ನಳನಳಿಸುತ್ತಿರುವ ಗ್ರಿಲ್, ಬಂಪರ್‌ಗಳ ಎಸ್‌ಯುವಿ ಸೌಂದರ್ಯವನ್ನು ಹೆಚ್ಚಿಸಿವೆ. ಹಾಗೆಯೇ ಮರುರೂಪಿಸಲಾದ ಟೇಲ್ ಲೈಟ್ಸ್ ಮತ್ತು ಮಲ್ಟಿ ಬೀಮ್ ಎಲ್ಇಡಿ ಹೆಡ್‌ಲೈಟ್‌ಗಳಂಥ ಹೊಸ ಫೀಚರ್‌ಗಳನ್ನು ಎಸ್‌ಯುವಿ ಹೊಂದಿದೆ. ಈ ಮರ್ಸೆಡಿಸ್ ಬೆಂಜ್ ಜಿಎಲ್ಎ ಎಸ್‌ಯುವಿ 17 ಮತ್ತು 19 ಇಂಚಿನ್ ವ್ಹೀಲ್‌ಗಳ ಆಯ್ಕೆಯಲ್ಲಿ ಸಿಗಲಿದೆ.

Mercedes Benz launched its 2021 Mercedes GLA SUV and Check details here

ಈ ಹೊಸ ಮರ್ಸೆಡಿಸ್ ಬೆಂಜ್ ಜಿಎಲ್ಎ ಎಸ್‌ಯಿವಿ ಹೊಸ 1.3 ಲೀ, ನಾಲ್ಕು ಸಿಲಿಂಡರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಮತ್ತು 2.0 ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್‌ ಡಿಸೇಲ್ ಎಂಜಿನ್‌ಗಳ ಆಧಾರಿತವಾಗಿದೆ.  ಇದೇ ವೇಳೆ, ಜಿಎಲ್ಎ 35 ಎಎಂಜಿ ವೆರಿಯೆಂಟ್‌ನಲ್ಲಿ ನಿಮಗೆ 2.0 ಲೀಟರ್ ನಾಲ್ಕು ಸಿಲಿಂಡರ್‌ಗಳ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಿಗಲಿದೆ.

ಆಫ್‌-ರೋಡ್ ಸ್ಕೂಟರ್ ಯಮಹಾ ಝುಮಾ ಹೇಗಿದೆ ಗೊತ್ತಾ?

ಜಿಎಲ್ಎ ಎಸ್‌ಯುವಿ ಒಳಾಂಗಣ ವಿನ್ಯಾಸವು ಹೆಚ್ಚು ಆಕರ್ಷಕವಾಗಿದೆ. ಈ ಎಸ್‌ಯುವಿಯಲ್ಲಿ ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹೊಸ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಇರಲಿದೆ. ಈ ಎರಡೂ ಡಿಸ್‌ಪ್ಲೇಗಳು 10.25 ಇಂಚಿನದ್ದಾಗಿವೆ. ಎ-ಕ್ಲಾಸ್ ಲಿಮೋಸೈನ್‌ನಲ್ಲಿ ಕಾಣಸಿಗುವ ಡಿಸ್‌ಪ್ಲೇಗಳನ್ನು ಇವು ಹೋಲುತ್ತವೆ ಎಂದು ಹೇಳಬಹುದು. ಆಪಲ್‌ಕಾರ್ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡುವ, ಮರ್ಸಿಡಿಸ್ ಬೆಂಜ್ ಅಭಿವೃದ್ಧಿಪಡಿಸಿರುವ ಎಂಬಿಯುಎಕ್ಸ್ ಸಿಸ್ಟಮ್ ಅನ್ನು ನೀವು ಡಿಜಿಟಲ್ ಇನ್ಫೋಟೈನ್ಮೆಂಟ್‌ನಲ್ಲಿ ಕಾಣಬಹುದು.

ಮರ್ಸೆಡಿಸ್ ಬೆಂಜ್‌ ಜಿಎಲ್ಎ ಎಸ್‌ಯುವಿಯಲ್ಲಿ ಆಕರ್ಷಕ ಸೀಟುಗಳನ್ನು ನೋಡಬಹುದು. ಕೇವಲ ತಾಂತ್ರಿಕ ನಾವೀನ್ಯತೆಯು ಮಾತ್ರವಲ್ಲದೇ ಈ ಸೀಟುಗಳನ್ನು ಪರಿಷ್ಕರಿಸಲಾಗಿದೆ. ಹೊಸ ಚರ್ಮದ ಹೊದಿಕೆಗಳಿದ್ದು, ಒಳಾಂಗಣ ಕಾಣುವ ಬಣ್ಣವೂ ಅದಕ್ಕೆಸಂಯೋಜಿತವಾಗುವಂತೆ ನೋಡಿಕೊಳ್ಳಲಾಗಿದೆ. ಇದೇ ವೇಳೆ, ಎಎಂಜಿ ಲೈನ್ ವೆರಿಯೆಂಟ್‌ನಲ್ಲಿ ಮಾತ್ರ ಎಲ್ಲ ಸೀಟುಗಳ ಸ್ಪೋರ್ಟ್ಸ್ ಸೀಟ್‌ಗಳಾಗಿದ್ದು, ಕ್ಯಾಬಿನ್ ಪೂರ್ತಿ ಬ್ಲ್ಯಾಕ್ ಬಣ್ಣದಿಂದ ಕೂಡಿದೆ ಎಂದು ಹೇಳಬಹುದು.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಇಷ್ಟು ಮಾತ್ರವಲ್ಲದೇ ಈ ಐಷಾರಾಮಿ ಮತ್ತು ಅತ್ಯಾಧುನಿಕ ಎಸ್‌ಯುವಿ ಬಳಕೆದಾರರಿಗೆ ರೆಡಾರ್ ಆಧಾರಿತ ಸಕ್ರಿಯ ಬ್ರೆಕಿಂಗ್ ಅಸಿಸ್ಟ್, ಏಳು ಏರ್ ಬ್ಯಾಗ್‌ಗಳು, ಆಕ್ಟಿವ್ ಬಾನೆಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಸೇರಿದಂತೆ ಅನೇಕ ಫೀಚರ್‌ಗಳನ್ನು ಒದಗಿಸುತ್ತದೆ.

Latest Videos
Follow Us:
Download App:
  • android
  • ios