ಖ್ಯಾತ ಸಂಶೋಧಕ, ಸೆರ್ಬಿಯನ್-ಅಮಿರಿಕನ್ ನಿಕೋಲ ಟೆಸ್ಲಾ ಸಂಶೋಧಿಸಿದ ಕಾಯಿಲ್ ಕೈಗಾರಿಕಾ ಕ್ರಾಂತಿಯನ್ನೇನೂ ಸೃಷ್ಟಿಸಲಿಲ್ಲವಾದರೂ, ಕಾಯಿಲ್‌ನಿಂದ ಹೈವೋಲ್ಟೇಜ್ ಉತ್ಪಾದನೆ, ಕಡಿಮೆ ಕರೆಂಟ್, ಹೈ ಫ್ರಿಕ್ವೆನ್ಸಿ ಅಲ್ಟರ್‌ನೇಟಿಂಗ್ ಕರೆಂಟ್‌ ಉತ್ಪಾದನೆ ಈಗಲೂ ವಿಜ್ಞಾನಿಗಳ ಆಕರ್ಷಣೆಯಾಗಿರುವಂಥದ್ದು ನಿಜ. ಆದರೆ, 19ನೇ ಶತಮಾನದಲ್ಲಿ ಆವಿಷ್ಕಾರಗೊಂಡ ಈ ಕಾಯಿಲ್ ಅನ್ನು ಕೇರಳದ ತಿರುವನಂಥಪುರದ  ಹವ್ಯಾಸಿ ವಿಜ್ಞಾನಿಯೊಬ್ಬರನ್ನು ಈಗ ಮರು ಸೃಷ್ಟಿಸಿದ್ದಾರೆ. ಈ ಕಾಯಿಲ್ ನಿಸ್ತಂತು ಆಗಿ ವಿದ್ಯುತ್ ಅನ್ನು ವರ್ಗಾವಣೆ ಮಾಡುತ್ತದೆ. ತಿರುವಂಥಪುರದ ಹವ್ಯಾಸಿ ವಿಜ್ಞಾನಿಯ ಈ ಮರು ಸೃಷ್ಟಿಯ ವಿಡಿಯೋ ವೈರಲ್ ಆಗಿದೆ.

ತಿರುವನಂಥಪುರದ ತಿರುವಲ್ಲಮ್ ನಿವಾಸಿ ವಿ.ಎಸ್ ಸಾಬು ಎಂಬ ಹವ್ಯಾಸಿ ವಿಜ್ಞಾನಿಯೇ ಹೊಸ ಟೆಲ್ಸಾ ಕಾಯಿಲ್ ಸೃಷ್ಟಿಸಿದವರು. ವಿಶೇಷ ಎಂದರೆ, ಇವರು 1987ರಲ್ಲೇ ಭಾರತದ ಮೊದಲ ರೋಬಾಟ್  ಸೃಷ್ಟಿಸಿದವರು ಎಂದು ಹೇಳಲಾಗುತ್ತದೆ.

ಟ್ವಿಟರ್‌ನಿಂದ ಶೀಘ್ರವೇ ಪಾವತಿ ಸೇವೆ ‘ಟ್ವಿಟರ್ ಬ್ಲೂ’ ಆರಂಭ: ಚಂದಾದಾರಿಗೆ ವಿಶೇಷ ಫೀಚರ್ಸ್!

ಸಾಬು ಈಗ ಮರಸೃಷ್ಟಿಸಿರುವ ಕಾಯಿಲ್, 230 ವೋಲ್ಟ್ ವಿದ್ಯುತ್ ಅನ್ನು 3 ಲಕ್ಷ ವೋಲ್ಟ್‌ ಆಗಿ ಪರಿವರ್ತಿಸುತ್ತದೆ. ಈ ಕಾಯಿಲ್ ಹತ್ತಿರ ನೀವು ಎಲ್ಇಡಿ ಬಲ್ಬ್ ತಂದಾಗ ವಿದ್ಯುತ್ ಈ ಬಲ್ಬಗ್ ಹಾರಿದಾಗ ಅದು ಬೆಳಗುವುದನ್ನು ನೀವು ಕಾಣಬಹುದು ಕೂಡ.

ಈ ಮೊದಲು ಅಂದರೆ 1920ರವರೆಗೂ ಟೆಸ್ಲಾ ಕಾಯಿಲ್ ಸರ್ಕ್ಯೂಟ್‌ಗಳನ್ನು ವೈರ್‌ಲೆಸ್ ಟೆಲಿಗ್ರಾಫಿಗಾಗಿ ಸ್ಪಾರ್ಕ್ ಗ್ಯಾಪ್ ರೇಡಿಯೊ ಟ್ರಾನ್ಸ್‌ಮಿಟರ್‌ಗಳಲ್ಲಿ ಮತ್ತು ಎಲೆಕ್ಟ್ರೋಥೆರಪಿ ಮತ್ತು ವೈಲೆಟ್ ಕಿರಣಗಳ ಉಪಕರಣಗಳ ವೈದ್ಯಕೀಯ ಸಾಧನಗಳಲ್ಲಿ ವಾಣಿಜ್ಯಿತ್ಮಾಕವಾಗಿ ಬಳಸಲಾಗುತ್ತಿತ್ತು. ಆದರೆ, ಈ ಕಾಯಿಲ್‌ಗಳನ್ನು ಮನರಂಜನೆ ಮತ್ತು ಶೈಕ್ಷಣಿಕ ಪ್ರದರ್ಶನಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಆದರೂ ಸಣ್ಣ ಕಾಯಿಲ್‌ಗಳನ್ನು ಹೆಚ್ಚಿನ ನಿರ್ವಾತ ವ್ಯವಸ್ಥೆಗಳಿಗೆ ಸೋರಿಕೆ ಶೋಧಕಗಳಾಗಿಯೂ ಬಳಸಲಾಗುತ್ತದೆ ಎಂಬುದೂ ನಿಜ.

ಸಾಬು ಅವರು ಮರ ಸೃಷ್ಟಿಸಿರುವ ಈ ಟೆಸ್ಲಾ ಕಾಯಿಲ್ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ರೊಬಿಟಿಕ್ಸ್ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಸುಮಾರು 38 ವರ್ಷಗಳ ಕಾಲ ದೀರ್ಘ ಅನುಭವವನ್ನು ಹೊಂದಿದ್ದಾರೆ. ಇಂದಿನ ವಿಜ್ಞಾನಿಗಳಿಗೆ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಷ್ಟೇನೂ ಪರಿಚಿತವಲ್ಲದ ಈ ಕಾಯಿಲ್‌ಗಳನ್ನ ಬಳಸಿಕೊಂಡು ಉಪಕರಣಗಳೊಂದಿಗೆ ಪ್ರಯೋಗ ಮಾಡಲಾರಂಭಿಸಿದರು. ವಾಣಿಜ್ಯ ಅನ್ವಯಿಕಗಳಲ್ಲಿ ವ್ಯಾಪಕವಾಗಿ ತಂತ್ರಜ್ಞಾನವನ್ನು ಬಳಸದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬುದು ಸಾಬು ಅವರ ಖಚಿತ ಅಭಿಪ್ರಾಯವಾಗಿದೆ.

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!

ಮರು ಸೃಷ್ಟಿಸಿದ ಕಾಯಿಲ್ ವಿಡಿಯೋ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದಾಗ ಅದು ಕೆಲವೇ ದಿನಗಳಲ್ಲಿ ವೈರಲ್ ಆಯಿತು. ವಿಶೇಷ ಏನೆಂದರೆ, ಈ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿದವರು ಪೈಕಿ ಸಿಂಹಪಾಲು ಭಾರತೀಯ ವಿದ್ಯಾರ್ಥಿಗಳೇ ಇದ್ದಾರೆ. ಇವರ ಹೊರತಾಗಿ ಕೆಲವು ಮಾಧ್ಯಮಗಳು ಕೂಡ ಆಸಕ್ತಿ ವ್ಯಕ್ತಪಡಿಸಿವೆ ಎನ್ನುತ್ತಾರೆ ಸಾಬು.

ಕಳೆದ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ನಾನು ಈ ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದೆ. ನಿಕೋಲ ಟೆಸ್ಲಾ ಅವರಿಗೆ ಇದು ಕಾಣಿಕೆಯಾಗಿದ್ದು, ಭಾರತದ ಯವ ಸಂಶೋಧಕ ಮನಸ್ಸುಗಳಿಗೆ ನಾನಿದನ್ನು ಅರ್ಪಿಸುತ್ತೇನೆ. 1891ರಲ್ಲಿ ಟೆಸ್ಲಾ ಕಾಯಿಲ್ ಸಂಶೋಧನೆಯಾಯಿತು ಮತ್ತು ಸ್ಪಾರ್ಕ್ ಗ್ಯಾಪ್ ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸುತ್ತದೆ. ನಾನು ರೂಪಿಸಿದ 2 ಕಿಲೋ ವ್ಯಾಟ್ ಘನ ಸ್ಥಿತಿಯ ಟೆಸ್ಲಾ ಕಾಯಿಲ್‌ಗೆ 230 ವೋಲ್ಟ್ ಹರಿಸಿ 300 ಕೆವಿ ವಿದ್ಯುತ್ ಪಡೆದುಕೊಳ್ಳಬಹುದು. ಮತ್ತು ಇನ್ಸುಲೇಟೆಡ್ ಗೇಟ್ ಬೈಪೋಲಾರ್ ಟಾನ್ಸಿಸ್ಟರ್‌ಗಳೆಂಬ ಸೆಮಿ ಕಂಡಕ್ಟರ್‌ಗಳ ಮೂಲಕ ಇದನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಸಾಬು.

ತಿರುವನಂಥಪುರದ ಈ ಹವ್ಯಾಸಿ ವಿಜ್ಞಾನಿ ಸಾಬು ಟೆಸ್ಲಾ ಕಾಯಿಲ್ ಮರು ಸೃಷ್ಟಿಯ ವಿಡಿಯೋವನ್ನು ಇನ್ಸ್‌ಟಾಗ್ರಾಮ್ ಮತ್ತು ಯುಟೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಪ್‌ಲೋಡ್ ಆದ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್ ಆಗಿದ್ದು ಈವರೆಗೆ ಸುಮಾರು 40 ಲಕ್ಷಕ್ಕೂ ಅಧಿಕ ಜನರು ವಿಡಿಯೋ ನೋಡಿದ್ದಾರೆ. ಮತ್ತು ಸಾಬು ಅವರ ಶ್ರಮವನ್ನು ಕೊಂಡಾಡಿದ್ದಾರೆ.

5ಜಿ ಸೇವೆ ದೊರೆತರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?