ಸಾಂಪ್ರದಾಯಿಕ ಡಿಸೇಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಬದಲಿಗೆ ಈಗ ಎಲೆಕ್ಟ್ರಿಕ್ ವಾಹನಗಳ ಭರಾಟೆ ಜೋರಾಗಿದೆ. ಭವಿಷ್ಯದಲ್ಲಿ ಬಹುಶಃ ಸಾಂಪ್ರದಾಯಿಕ ವಾಹನಗಳ ಕಣ್ಮರೆಯಾಗಿ, ಎಲೆಕ್ಟ್ರಿಕ್ ವಾಹನಗಳೇ ಇರಲಿವೆ ಎಂಬುದು ಖಚಿತವಾಗಿದೆ. ಇದರ ಮಧ್ಯೆಯೇ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರ್‌ವೊಂದನ್ನು ಕಂಪನಿಯೊಂದು ಅನಾವರಣ ಮಾಡಿದೆ.

ಏರ್‌ಸ್ಪೀಡರ್ ಎಂಕೆ3 ಜಗತ್ತಿನ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲೆಂಡ್ ಮೂಲದ ಏರ್‌ಸ್ಪೀಡರ್, ಫ್ಲೈಯಿಂಗ್ ರೇಸ್ ಕಾರ್ಸ್‌ಗಾಗಿ ಹೊಸ ಜಾಗತಿಕ ರೇಸಿಂಗ್ ಸರಣಿಯನ್ನು ನಡೆಸಲಿದೆ. ಈ ಸೀರೀಸ್  ಈ ವರ್ಷದ ಮಧ್ಯಾರ್ಧದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಈ ಟ್ರಾಕ್ಟರ್‌ಗೆ ಕ್ಲಚ್ಚೂ ಇಲ್ಲ, ಗಿಯರ್ ಇಲ್ಲ: ದೇಶದ ಮೊದಲ ಸಂಪೂರ್ಣ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್!

ಈ ಕಂಪನಿಯು ಈಗಾಗಲೇ ಹತ್ತು ಎಂಕೆ3 ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳ ಉತ್ಪಾದನೆಯನ್ನು ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಏರ್‌ಸ್ಪೀಡರ್ ತಯಾರಿಸಿದ ಈ ಫ್ಲೈಯಿಂಗ್ ಕಾರುಗಳನ್ನೇ ರೇಸಿಂಗ್ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳಿಗೆ ಪೂರೈಸಲಾಗುತ್ತಿದೆ. ಈ ಕಾರುಗಳನ್ನು ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ  ಏರ್‌ಸ್ಪೀಡರ್ ಕಂಪನಿಯ ಸೋದರ ಸಂಸ್ಧೆದಯಾದ ಅಲುಡಾ ಏರೋನಾಟಿಕ್ಸ್ ಉತ್ಪಾದನೆ ಮಾಡಲಿದೆ ಎನ್ನಲಾಗುತ್ತಿದೆ.

ರೇಸಿಂಗ್ ಸೀರೀಸ್‌ನ ಮೊದಲ ಋತುವಿನಲ್ಲಿ ಏರ್‌ಸ್ಪೀಡರ್ ಎಂಕೆ3 ಫೈಯಿಂಗ್ ಕಾರುಗಳನ್ನು ತಂಡಗಳು ದೂರದಿಂದಲೇ ನಿಯಂತ್ರಿಸಲಿವೆ. ಅದು 2022ರ ಸೀಸನ್‌ಗೆ ನೆರವಾಗುವ ರೀತಿಯಲ್ಲಿ ತಾಂತ್ರಿಕ ಪ್ರಯೋಗಕ್ಕೂ ಇದು ನೆರವಾಗಲಿದೆ. ಭವಿಷ್ಯದಲ್ಲಿ ನಡೆಯುವ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸ್‌ ಕಾರ್‌ಗಳ ಸರಣಿಯಲ್ಲಿ ನಿಜವಾಗಿಯೂ ಈ ಕಾರುಗಳ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಚಾಲನೆ ಮಾಡಲಿದ್ದಾರೆ.

ಫಾರ್ಮುಲಾ ಒನ್ ರೀತಿಯಲ್ಲಿ ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳ ರೇಸ್ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಬ್ಯಾಟರಿ ಬದಲಾವಣೆಗೆ ಪಿಟ್ ನಿಲುಗಡೆ ಕೂಡ ಈ ರೇಸ್‌ನಲ್ಲಿ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಈ ಬ್ಯಾಟರಿ ಬದಲಾವಣಗೆ ಕೇವಲ 14 ನಿಮಿಷವಷ್ಟೇ ಸಾಕು ಎನ್ನುತ್ತದೆ ಕಂಪನಿ.

ಏರ್‌ಸ್ಪೀಡರ್ ಎಂಕೆ3 ಫ್ಲೈಯಿಂಗ್ ಕಾರ್ ಕಾರ್ಬನ್ ಫೈಬರ್ ಟಬ್‌ನೊಂದಿಗೆ ಬರುತ್ತದೆ ಮತ್ತು ಇದು ಇನ್ನೂ ಹಗುರವಾಗಿರುವುದನ್ನು ಖಾತ್ರಿಗೊಳಿಸತ್ತದೆ. ಫ್ಲೈಯಿಂಗ್ ಕಾರ್‌ನಲ್ಲಿ ಲಿಡಾರ್ ಮತ್ತು ರಾಡಾರ್ ಘರ್ಷಣೆ ತಪ್ಪಿಸುವ ಅತ್ಯಾಧುನಿಕ ವ್ಯವಸ್ದೆಗಳೂ ಕೂಡ ಇರಲಿವೆ ಎಂದು ಹೇಳಲಾಗುತ್ತಿದೆ.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಈ ಏರ್‌ಸ್ಪೀಡರ್ ಎಂಕೆ3 ಫ್ಲೈಯಿಂಗ್ ಕಾರಿನಲ್ಲಿ 96 Kw ಎಲೆಕ್ಟ್ರಿಕ್ ಎಂಜಿನ್ 429 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ ಮತ್ತು ಆ ಪವರ್ ಅನ್ನು ಅದರ ರೂಟರ್ ಬ್ಲೇಡ್‌ಗಳಿಗೆ ವರ್ಗಾಯಿಸುತ್ತದೆ. ಈ ರೂಟರ್ ಬ್ಲೇಡ್‌ಗಳನ್ನು ಕಾರಿನ ನಾಲ್ಕು ಮೂಲೆಗಳಲ್ಲಿ ಫಿಕ್ಸ್ ಮಾಡಲಾಗಿರುತ್ತದೆ.

130 ಕೆಜಿ ಕರ್ಬ್-ತೂಕದಷ್ಟಿರುವ ಈ ಫ್ಲೈಯಿಂಗ್ ಕಾರ್ ಕಾರಿಗೆ ಎಫ್ -15 ಇ ಸ್ಟ್ರೈಕ್ ಈಗಲ್ ಫೈಟರ್ ಜೆಟ್‌ಗಿಂತ ಹೆಚ್ಚಿನ ಒತ್ತಡದಿಂದ ತೂಕದ ಅನುಪಾತವನ್ನು ಒದಗಿಸುತ್ತದೆ. ಅಂದರೆ ಅಷ್ಟೊಂದು ಶಕ್ತಿಶಾಲಿ ಪ್ರದರ್ಶನವನ್ನು ಇದು ತೋರುತ್ತದೆ. ಎಂಕೆ 3 ಫ್ಲೈಯಿಂಗ್ ರೇಸ್ ಕಾರನ್ನು 2.8 ಸೆಕೆಂಡುಗಳಲ್ಲಿ ಗಂಟೆಗೆ 0 - 100 ಕಿಮೀ ವೇಗದಲ್ಲಿ ಹೋಗುತ್ತದೆ ಮತ್ತು ಗಂಟೆಗೆ 120 ಕಿಮೀ ಗಿಂತ ಹೆಚ್ಚಿನ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ.

ಆಫ್‌-ರೋಡ್ ಸ್ಕೂಟರ್ ಯಮಹಾ ಝುಮಾ ಹೇಗಿದೆ ಗೊತ್ತಾ?

ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ವಿಶಿಷ್ಟವಾಗಿದ್ದು, ಇದು ಯಾವ ರೀತಿ ಜನಪ್ರಿಯತೆಯನ್ನು ಪಡೆದುಕೊಳ್ಳಬೇಕು ಎಂಬುದನ್ನು ಕಾದು ನೋಡಬೇಕು. ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಫ್ಲೈಯಿಂಗ್ ಎಲೆಕ್ಟ್ರಿಕ್ ಕಾರ್ ಹೆಚ್ಚು ಆಸಕ್ತಿಯನ್ನು ಮೂಡಿಸುತ್ತಿದೆ.