ಶಕ್ತಿಶಾಲಿ ಬೈಕ್ ಮತ್ತು ಸ್ಕೂಟರ್‌ಗಳ ಉತ್ಪಾದಕ ಕಂಪನಿ ಯಮಹಾ, ಹಲವು ವಿಶಿಷ್ಟ ಮಾದರಿಯ ದ್ವಿಚಕ್ರವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಸಾಮಾನ್ಯವಾಗಿ ಆಫ್‌ ರೋಡ್ ಬೈಕ್‌ಗಳಿರುವುದು ಸಾಮಾನ್ಯ. ಯಮಹಾ ಈ ಸೆಗ್ಮೆಂಟ್‌ನಲ್ಲಿ ಆಫ್‌ ರೋಡ್ ಸ್ಕೂಟರ್ ಝುಮಾ 125 ಸಿಸಿ ಸ್ಕೂಟರ್ ಪರಿಚಯಿಸುತ್ತಿದೆ.

ಸಾಮಾನ್ಯವಾಗಿ ಆಫ್ ರೋಡ್ ಸ್ಕೂಟರ್‌ಗಳಿರುವುದು ಕಡಿಮೆ. ಆಫ್‌ರೋಡ್ ಟೂವ್ಹೀಲರ್‌ ಸೆಗ್ಮಿಂಟ್‌ನಲ್ಲಿ ಏನಿದದ್ರೂ ಬೈಕ್‌ಗಳ ಕಾರುಬಾರು. ಆದರೆ, ಪ್ರಖ್ಯಾತ ದ್ವಿಚಕ್ರವಾಹನಗಳ ತಯಾರಿಕಾ ಕಂಪನಿ ಈ ಸೆಗ್ಮೆಂಟ್‌ನಲ್ಲಿ ಜಬರ್ದಸ್ತ್ ಸ್ಕೂಟರ್ ಅನ್ನು ಪರಿಚಯಿಸಲು ಮುಂದಾಗಿದೆ.

ಈ ಟ್ರಾಕ್ಟರ್‌ಗೆ ಕ್ಲಚ್ಚೂ ಇಲ್ಲ, ಗಿಯರ್ ಇಲ್ಲ: ದೇಶದ ಮೊದಲ ಸಂಪೂರ್ಣ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್!

ಜಾಗತಿಕ ಮಾರುಕಟ್ಟೆಗೆ ವೈಜೆಡ್ಎಫ್-ಆರ್7 ದ್ವಿಚಕ್ರವಾಹನವನ್ನು ಪರಿಚಯಿಸಿದ ಬಳಿಕ ಕಂಪನಿ ಇದೀಗ ಝುಮಾ 125 ಆಫ್‌-ರೋಡ್ ಸ್ಕೂಟರ್ ಅನ್ನು ಅಪಡೇಟ್‌ ಮಾಡುತ್ತಿದೆ. ಲುಕ್ ಹಾಗೂ ಮೆಕ್ಯಾನಿಕಲ್ ದೃಷ್ಟಿಯಿಂದ ಈ ಝುಮಾ 125 ಸ್ಕೂಟರ್‌ ಹಲವು ಪ್ರಮುಖ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳುತ್ತಿದೆ. ಹೊಸ ರೀತಿಯ ಹೆಡ್‌ಲ್ಯಾಂಪ್‌ಗಳಿಂದ ಹಿಡಿದು, 101 ಎಂಪಿಜಿ ಇಂಧನ ದಕ್ಷತೆಯನ್ನು ನಿರೀಕ್ಷಿಸಬಹುದು. ಅದೇ ವೇಳೆ, ಈ ಸ್ಕೂಟರ್‌ನಲ್ಲಿ ಇನ್ನಷ್ಟು ಅಪ್‌ಡೇಟ್‌ಗಳನ್ನು ನಾವು ಕಾಣಬಹುದಾಗಿದೆ.

ಯಮಹಾ ಕಂಪನಿಯ ಝುಮಾ 125 ಸ್ಕೂಟರ್‌ನ ಬಾಹ್ಯ ಬಾಡಿ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಿರಲಿವೆ. ಈ ಸ್ಕೂಟರ್ 125 ಸಿಸಿ ಲಿಕ್ವಿಡ್ ಕೂಲ್ಡ್ ಬ್ಲೂ ಕೋರ್ ಎಂಜಿನ್ ಒಳಗೊಂಡಿದೆ. ಲಿಕ್ವಿಡ್ ಕೂಲ್ಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್‌ಗೆ ಕಂಪನಿಯ ವೆರಿಯಬಲ್ ವಾಲ್ವ್ ಆಕ್ಟುವಿಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದೇ ತಂತ್ರಜ್ಞಾನವನ್ನು ನೀವು ವೈಝಡ್ಎಫ್-ಆರ್ 15 ಬೈಕ್‌ಗಳ 155 ಸಿಸಿ ಎಂಜಿನ್‌ನಲ್ಲಿ ಕಾಣಬಹುದು. ಇತರ ಸ್ಕೂಟರ್‌ಗಳಂತೆ, ಹಿಂಬದಿಯ ಚಕ್ರಕ್ಕೆ ಶಕ್ತಿಯನ್ನು ವರ್ಗಾವಣೆ ಮಾಡುವ ಸಿವಿಟ್ ಗಿಯರ್ ಬಾಕ್ಸ್ ಅನ್ನು ಈ ಸ್ಕೂಟರ್ ಹೊಂದಲಿದೆ.

ಹೋಂಡಾ ಶೈನ್ ಬೇಕ್ ಖರೀದಿ ಮೇಲೆ ಶೇ.5ರವರೆಗೂ ಕ್ಯಾಶ್‌ಬ್ಯಾಕ್ ಆಫರ್

ಹೊಸ ಝುಮಾ 125 ಸಿಸಿ ಸ್ಕೂಟರ್ ಹೆಚ್ಚು ಆಫ್-ರೋಡ್ ಪ್ರಯೋಜನಕಾರಿಯಾಗಿಯೂ ಮತ್ತು ಒರಟಾದ ನೋಟವನ್ನು ಪಡೆದುಕೊಂಡಿದೆ. ಇದು 12 ಇಂಚಿನ ಹಗುರವಾದ ಚಕ್ರಗಳಲ್ಲಿ ಸವಾರಿ ಮಾಡುತ್ತದೆ, ಇದು ಹೊಸ ಡುರೊ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬರುತ್ತದೆ. ಯಮಹಾ ಕಂಪನಿಯ ಹೇಳುವ ಪ್ರಕಾರ, ಈ ಟೈರ್‌ಗಳು ಆಕ್ರಮಣಕಾರಿ-ಕಾಣುವ ಬ್ಲಾಕ್ ಮಾದರಿಯನ್ನು ಪಡೆಯುತ್ತವೆ. ಇವು ಹಾರ್ಡ್‌ಕೋರ್ ಆಫ್-ರೋಡಿಂಗ್ ಹೆಚ್ಚು ಸೂಕ್ತವಾಗಿವೆ. ಹಾಗಿದ್ದೂ ಅವು ಖಂಡಿತವಾಗಿಯೂ ಸ್ಕೂಟರ್‌ನ ಒಟ್ಟಾರೆ ಒರಟಾದ ನೋಟಕ್ಕೆ ಪೂರಕವಾಗಿದ್ದು, ಅತ್ಯಂತ ಹೆಚ್ಚು ಶಕ್ತಿಶಾಲಿ ಟೈರ್‌ಗಳಾಗಿವೆ ಎಂದು ಹೇಳಬಹುದು.

ಈ ಸ್ಕೂಟರ್‌ ಬ್ರೇಕಿಂಗ್ ಸಿಸ್ಟಮ್‌ ಕೂಡ ತುಂಬಾ ಸ್ಟ್ರಾಂಗ್ ಆಗಿ ಇರಲಿದೆ. ಸ್ಕೂಟರ್ ಮುಂಭಾಗ 245 ಎಂಎಂ ಹೈಡ್ರಾಲಿಕ್ ವೇವ್ ಟೈಪ್ ಇರಲಿದ್ದು, ಹಿಂಭಾಗದ ಚಕ್ರದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಸಿಸ್ಟಮ್ ಇರಲಿದೆ. ಹೆಚ್ಚುವರಿ ಸುರಕ್ಷತೆಗಾಗಿ ಲಿಂಕ್ಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಕೂಡ ಹೊಂದಿದೆ. ಹಾಗೆಯೇ, ಹಿಂಬದಿಯಲ್ಲಿ ಟ್ವಿನ್ ಶಾಕ್ಸ್‌ಬ್ಸರ್ವರ್ ಇದ್ದು, 3.1 ಇಂಚ್‌ ಸಸ್ಪೆನ್ಷನ್ ಇರಲಿದೆ. ಈ ರೀತಿಯ ಸಸ್ಪೆನ್ಸ್ ವ್ಯವಸ್ಥೆಯಿಂದಾಗಿ ಸ್ಕೂಟರ್‌ನ ಚಾಲನೆ ನಗರ ರಸ್ತೆಗಳು ಮತ್ತು ಆಫ್ ರೋಡ್ ರಸ್ತೆಗಳಿಗೆ ಹೆಚ್ಚು ಹೊಂದಾಣಿಕೆಯಾಗಲಿದೆ. ಸವಾರನಿಗೂ ಹೆಚ್ಚು ಅನುಕೂಲ ಭಾವ ಒದಗಿಸಲಿದೆ ಎಂಬುದು ಕಂಪನಿಯ ಹೇಳಿಕೆಯಾಗಿದೆ. ಹಾಗೆ ನೋಡಿದರೆ, ಕಂಪ್ಲೀಟ್ ಆಗಿ ಸಾಹಸಿ ಕೆಲಸಗಳಿಗೆ ಹೊಂದಾಣಿಕೆಯಾಗಬಲ್ಲ ಸ್ಕೂಟರ್ ಅಲ್ಲ. ಅಗತ್ಯ ಬಿದ್ದಾಗ ಈ ಸ್ಕೂಟರ್ ಕಚ್ಚಾ ರಸ್ತೆಗಳಲ್ಲಿ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸುತ್ತದೆ.

ಸ್ಕೂಟರ್‌ನ ಸೀಟ್‌ ಕೆಳಗಿರುವ ಜಾಗದಲ್ಲಿ ಯಾವುದೇ ತೊಂದರೆ ಇಲ್ಲದೇ ಸಿಂಗಲ್ ಫುಲ್ ಫೇಸ್ ಹೆಲ್ಮೆಟ್‌ನ್ನು ಇಡಬಹುದು. ಯುಎಸ್‌ಬಿ-ಎ ಸಾಕೆಟ್, ಎಲ್‌ಸಿಡಿ ಡಿಸ್‌ಪ್ಲೇ, ಹೊಂದಾಣಿಕೆ ಮಾಡಬಲ್ಲ ಹೆಡ್‌ಲೈಟ್‌ಗಳನ್ನು ಕಾಣಬಹುದಾಗಿದೆ. ಈ ಝುಮಾ 125 ಸಿಸಿ ಸ್ಕೂಟರ್ ಸದ್ಯದಲ್ಲೇ ಭಾರತದಲ್ಲಿ ಲಾಂಗ್ ಆಗಲಿಕ್ಕಿಲ್ಲ. ಈ ವರ್ಷದ ಬೇಸಿಗೆಯಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ, ಈ ಸ್ಕೂಟರ್ ಯಮಹಾ ಬ್ಲೂ ಅಥವಾ ಮ್ಯಾಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!