ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಜುಲೈ 24ಕ್ಕೆ ಬಿಡುಗಡೆಯಾಗುತ್ತಿದೆ. ಹಲವು ಹೊಸತನ, ಕೈಗೆಟುಕುವ ದರದಲ್ಲಿ ಕಾರು ಲಭ್ಯವಿದೆ. 11 ಸಾವಿರ ರೂಪಾಯಿಗೆ ಕಾರು ಬುಕ್ ಮಾಡಬಹುದು. ಹೊಸ ಕಾರಿನ ಫೋಟೋ ಲೀಕ್ ಆಗಿದೆ.

ಬೆಂಗಳೂರು (ಜು.22) ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಜುಲೈ 24ಕ್ಕೆ ಬಿಡುಗಡೆಯಾಗುತ್ತಿದೆ. ಮಾರುತಿ ಬ್ರೆಜಾ ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು. ಇದೀಗ ಫೇಸ್‌ಲಿಫ್ಟ್ ಹಲವು ಹೊಸತನಗಳ ಮೂಲಕ ಬಿಡುಗಡೆಯಾಗುತ್ತಿದೆ. ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಕೆಲ ಫೋಟೋಗಳು ವಿಡಿಯೋಗಳು ಲೀಕ್ ಆಗಿದೆ. ಆಕರ್ಷಕ ವಿನ್ಯಾಸದಲ್ಲಿರುವ ಬ್ರೆಜಾ ಭಾರಿ ಬೇಡಿಕೆ ಪಡೆದುಕೊಳ್ಳಲಿದೆ. ದೊತೆಗೆ 1.0 ಲೀಟರ್ ಟರ್ಬೋ ಎಂಜಿನ್ ಮೂಲಕ ಬ್ರೆಜಾ ಹೊಸ ಸಂಚಲನ ಸೃಷ್ಟಿಸಲಿದೆ.

ಹೊಸ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಬೆಲೆ

ಹೊಚ್ಚ ಹೊಸ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರಿನ ಬೆಲೆ ಆಕರ್ಷಕ ಹಾಗೂ ಸ್ಪರ್ಧಾತ್ಮಕವಾಗಿರಲಿದೆ. ವಿಶೇಷವಾಗಿ 1.0 ಲೀಟರ್ ಎಂಜಿನ್ ಕಾರಣದಿಂದ ಹೊಸ ಫೇಸ್‌ಲಿಫ್ಟ್ ಕಾರಿನ ಬೆಲೆ ಸದ್ಯ ಮಾರುಕಟ್ಟೆಯಲಿರುವ ಬ್ರೆಜಾ ಕಾರಿಗಿಂತ ಕಡಿಮೆ ಇರಲಿದೆ. ಮೂಲಗಳ ಪ್ರಕಾರ 8.26 ಲಕ್ಷ ರೂಪಾಯಿಂದ 12. 86 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಬ್ರೆಜಾ ಫೇಸ್‌ಲಿಫ್ಟ್ ಕಾರು ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್, ಮಹೀಂದ್ರ 3ಎಕ್ಸ್ಒ, ಕಿಯಾ ಸೊನೆಟ್, ಸ್ಕೋಡಾ ಕೈಲಾಖ್, ಕಿಯಾ ಸೈರೋಸ್ ಕಾರಿಗೆ ಸ್ಪರ್ಧೆ ನೀಡಲಿದೆ.

ಹೊಸ ಬ್ರೆಜಾ ಫೇಸ್‌ಲಿಫ್ಟ್ ಎಂಜಿನ್

ಹೊಸ ಬ್ರೇಜಾ ಫೇಸ್‌ಲಿಫ್ಟ್ ಕಾರಿನ ಎಂಜಿನ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ 1.2 ಲೀಟರ್ ಎಂಜಿನ್ ಬದಲು ಹೊಸ ಬ್ರೆಜಾ ಕಾರಿನಲ್ಲಿ 1.0 ಲೀಟರ್ ಟರ್ಬೋ ಎಂಜಿನ್ ಬಳಸಲಾಗುತ್ತಿದೆ. ಇದು ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಆಗಿದೆ. ಇದೇ ಎಂಜಿನ್ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನಲ್ಲಿ ಬಳಸಲಾಗಿದೆ. 3 ಸಿಲಿಂಡರ್ ಹೊಂದಿರುವ ಈ ಬ್ರೆಜಾ ಫೇಸ್‌ಲಿಫ್ಟ್ ಕಾರು 110hp ಪವರ ಹಾಗೂ 170Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಟ್ರಾನ್ಸ್‌ಮಿಶನ್ ಹೊಂದಿದೆ. ಇನ್ನು ಸಬ್ 4 ಮೀಟರ್ ಕಾರಾಗಿರುವ ಕಾರಣ ತೆರಿಗೆಯಲ್ಲೂ ಹೆಚ್ಚಿನ ವ್ಯತ್ಯಾಸಗಳಿರುವುದಿಲ್ಲ. ಇದರಿಂದ ಕಾರು ಖರೀದಿಸುವಾಗ ಆನ್‌ರೋಡ್ ಬೆಲೆಯೂ ಕೈಗೆಟುಕುವ ದರದಲ್ಲೇ ಇರಲಿದೆ.

ಮತ್ತೊಂದು ವಿಶೇಷ ಅಂದರೆ ಹೆಚ್ಚಿನ ಪವರ್ ನಿರೀಕ್ಷಿಸುವ ಮಂದಿಗೆ ಹೊಸ ಬ್ರೆಜ್ ಫೇಸ್‌ಲಿಫ್ಟ್ 1.0 ಲೀಟರ್ ಟರ್ಬೋ ಎಂಜಿನ್ 1.5 ಲೀಟರ್ ನ್ಯಾಚುರಲ್ ಆಸ್ಪೈರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಾಗುವ ಸಾಧ್ಯತೆ ಇದೆ. ಸಿಎನ್‌ಜಿ ಕಿಟ್ ಸೇರಿದಂತೆ ಇತರ ಆಯ್ಕೆಗಳು ಲಭ್ಯವಿರಲಿದೆ.

10.1 ಇಂಚಿನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಸ ಬ್ರೆಜಾ ಫೇಸ್‌ಲಿಫ್ಟ್ ಕಾರಿನಲ್ಲಿದೆ. ಸೇಮ್ ಫೀಚರ್ ವಿಕ್ಟೋರಿಸ್ ಕಾರಿನಲ್ಲಿ ಬಳಸಲಾಗಿದೆ. ವೆಂಟಿಲೇಟೆಡ್ ಸೀಟ್, ಆ್ಯಂಬಿಯೆಟ್ ಲೈಟಿಂಗ್, ಫ್ರಂಟ್ ಪಾರ್ಕಿಂಗ್ ಸೆನ್ಸರ್, ವೈಯರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್ ಪೇನ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಸೆಲ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್ ಸೇರಿದಂತೆ ಹಲವು ಫೀಚರ್ಸ್ ಹೊಸ ಕಾರಿನಲ್ಲಿದೆ.