Range Rover Car ಹೊಚ್ಚ ಹೊಸ ರೇಂಜ್ ರೋವರ್ ಕಾರಿನ ಬುಕಿಂಗ್ ಆರಂಭಿಸಿದ ಲ್ಯಾಂಡ್ ರೋವರ್
- ಅತ್ಯಾಧುನಿಕ ತಂತ್ರಜ್ಞಾನದ ಐಷಾರಾಮಿ ರೇಂಜ್ ರೋವರ್ ಕಾರು
- ನೂತನ ರೇಂಜ್ ರೋವರ್ ಕಾರಿನ ಬೆಲೆ 2.31 ಕೋಟಿ ರೂಪಾಯಿ
- 4.6 ಸೆಕೆಂಡುಗಳೊಳಗೆ 0-100km/h ವೇಗ ಸಾಮರ್ಥ್ಯ
ಬೆಂಗಳೂರು(ಜ.012): ಹೊಚ್ಚ ಹೊಸ ರೇಂಜ್ ರೋವರ್(Range Rover) ಕಾರಿನ ಬುಕಿಂಗ್ ಆರಂಭಗೊಂಜಿದೆ. ನೂತನ ಐಶಾರಾಮಿ SUV ಆರಾಮದಾಯಕ ಪ್ರಯಾಣ, ತಾಂತ್ರಿಕ ಸೂಕ್ಷ್ಮತೆ ಮತ್ತು ತಡೆರಹಿತ ಸಂಪರ್ಕ, ಆಧುನಿಕತೆ ಹಾಗೂ ಅತ್ಯಾಕರ್ಷ ಕಾರಾಗಿದೆ. ಇದು 5ನೇ ಜನರೇಶ್ ರೇಂಜ್ ರೋವರ್ ಕಾರಾಗಿದೆ. ಹೀಗಾಗಿ ಹಲವು ವಿಶೇಷತೆಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕಾರಿನಲ್ಲಿದೆ. ನೂತನ ಕಾರಿನ ಬೆಲೆ 2.31 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರು 3.0 ಲೀ ಡೀಸಲ್, 3.0 ಲೀ ಪೆಟ್ರೋಲ್ ಮತ್ತು 4.4 ಲೀ ಪೆಟ್ರೋಲ್ ವೇರಿಯೆಂಟ್ ಎಂಜಿನ್‌ಗಳಲ್ಲಿ ಲಭ್ಯವಿದೆ.
ಲ್ಯಾಂಡ್ ರೋವರ್ ಹೊಸ ಫ್ಲೆಕ್ಸಿಬಲ್ ಮಾಡ್ಯುಲರ್ ಲಾಂಗಿಟ್ಯೂಡಿನಲ್ ಆರ್ಕಿಟೆಕ್ಚರ್, ಸರಿಸಾಟಿಯಿಲ್ಲದ ಸಾಮರ್ಥ್ಯ, ಚುರುಕಾದ ನಿರ್ವಹಣೆ , ಐಶಾರಾಮಿ ಪ್ರಯಾಣದ(Luxury SUV car) ಅನುಭವ ಸೇರಿದಂತೆ ಕಾರಿನ ಪ್ರತಿಯೊಂದು ಅಂಶವನ್ನು ಅಷ್ಟೇ ಕೂಲಂಕುಷವಾಗಿ ಪರೀಕ್ಷಿಸಲಾಗಿದೆ. ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಗಳನ್ನು ವರ್ಚುವಲ್ ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಮೂಲಕ ಮತ್ತು ಲ್ಯಾಂಡ್ ರೋವರ್ ನ ಅತಿಕಠಿಣ ಅಭಿವೃದ್ಧಿ ಯೋಜನೆಯಿಂದಾಗಿ ಹೊಸ ರೇಂಜ್ ರೋವರ್ ಈಗ ಗುಣಮಟ್ಟದ ಹೊಸ ಮಟ್ಟಗಳನ್ನು ಒದಗಿಸಲಿದೆ.
ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರು ಬಿಡುಗಡೆ!
ಈ ಹೊಸ ಐಶಾರಾಮೀ ಎಸ್‍ಯುವಿ, SE, HSE ಮತ್ತು ಆಟೋಬಯೋಗ್ರಫಿ ಮಾದರಿಗಳಲ್ಲಿ ಲಭ್ಯವಿದೆ. 5 ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ. ಸ್ಟ್ಯಾಂಡರ್ಡ್(SWB) ಮತ್ತು ಉದ್ದನೆಯ ವ್ಹೀಲ್‍ಬೇಸ್(LWB) ಬಾಡಿ ವಿನ್ಯಾಸಗಳು, ಐದು ಸೀಟ್‍ಗಳಲ್ಲಿ ಲಭ್ಯವಿದ್ದರೆ, ಹೊಸ ರೇಂಜ್ ರೋವರ್ LWB ಮಾದರಿಯು, ಏಳು ವಯಸ್ಕ ಪ್ರಯಾಣಿಕರನ್ನು ಆರಾಮವಾಗಿ ಪ್ರಯಾಣಿಸಬಹುದು.
ಐದನೇ ಪೀಳಿಗೆಯ ಐಶಾರಾಮೀ ಎಸ್‍ಯುವಿ, ಒಂದು ಅಚ್ಚಳಿಯದ ವಿನ್ಯಾಸ ಸ್ಟೇಟ್‍ಮೆಂಟ್ ಸೃಷ್ಟಿಸುವುದಕ್ಕಾಗಿ ತನ್ನ ಪ್ರೊಫೈಲ್ ಟ್ರೇಡ್‍ಮಾರ್ಕ್‍ನ ತತ್ಕಾಲೀನ ಗ್ರಹಿಕೆಯೊಂದಿಗೆ, ಲ್ಯಾಂಡ್ ರೋವರ್ ನ ಆಧುನಿಕ ವಿನ್ಯಾಸ ಸಿದ್ಧಾಂತವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಲ್ಯಾಂಡ್ ರೋವರ್ನ ಇತ್ತೀಚಿನ ಪಧಾನ ಉತ್ಪನ್ನಕ್ಕೆ ಅದ್ವಿತೀಯ ಆಧುನಿಕತೆ, ಸೌಂದರ್ಯದ ಘನತೆ ಮತ್ತು ಸೂಕ್ಷ್ಮತೆಯನ್ನು ತರುವ ಮೂಲಕ ಅದು ತನ್ನ ಮುನ್ನೆಲೆ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ನಿಚ್ಛಿದ್ರವಾದ ವೇಸ್ಟ್‍ಲೈನ್, ಬಾಗಿಲುಗಳ ದುಂಡನೆಯ ತುದಿಗಳು, ಸರಳವಾದ ಶುದ್ಧವಾದ ಫಿನಿಶ್‍ನಲ್ಲಿಇ ಗಾಜಿನೊಂದಿಗೆ ಹೊಂದಿಕೊಂಡಿರುವುದನ್ನು ಗಮನಿಸಿದಾಗ, ವಿವರಗಳ ಬಗ್ಗೆ ಲ್ಯಾಂಡ್ ರೋವರ್‍ಗೆ ಇರುವ ಗಮನವನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಕಾರಣ, ವಿಶೇಷವಾಗಿ ಇಂಜಿನಿಯರ್ ಮಾಡಲಾದ ಮರೆಯಾದ ವೇಸ್ಟ್ ಫಿನಿಶರ್. ವಿನ್ಯಾಸಕ್ಕೆ ನೆರವು ಒದಗಿಸುವ ತಂತ್ರಜ್ಞಾನವು ಫ್ಲಶ್ ಗ್ಲೇಜಿಂಗ್, ಬೆಳಗುವವರೆಗೆ ಮರೆಯಾಗಿರುವ ದೀಪವನ್ನು ನಿಖರವಾದ ವಿವರದೊಂದಿಗೆ ಸಂಯೋಜಿಸಿ ವಾಹನವನ್ನು ಘನವಸ್ತುವಿನಿಂದ ಮಿಲ್ ಮಾಡಲಾಗಿದೆಯೇನೋ ಎಂಬ ಭಾವವನ್ನು ಸೃಷ್ಟಿಸುತ್ತದೆ.
ರೇಂಜ್ ರೋವರ್ ಸ್ಪೋರ್ಟ್ SVR ಕಾರು ಬಿಡುಗಡೆ; ದುಬಾರಿ ಕಾರಿನಲ್ಲಿದೆ 10 ವಿಷೇಷತೆ!
ಸರಿಸಾಟಿಯಿಲ್ಲದ ಸೂಕ್ಷ್ಮತೆ
ಹೊಸ ರೇಂಜ್ ರೋವರ್ ಪ್ರತಿಯೊಂದು ಪಯಣ ಸ್ಮರಣೀಯಗೊಳಿಸುವುದಕ್ಕಾಗಿ, ಹೊಸ ಮೂರನೇ ಸಾಲಿನ ಆಸನಗಳು ಒಳಗೊಂಡಂತೆ, ಪ್ರತಿಯೊಬ್ಬ ಸವಾರನಿಗೆ ಸರಿಸಾಟಿಯಿಲ್ಲದ ಅನುಭವ ನೀಡಲಿದೆ. ಇದಕ್ಕೆ ಕಾರಣ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ತಂತ್ರಜ್ಞಾನವನ್ನು ಆಧುನಿಕ ಐಶಾರಾಮದೊಡನೆ ಸಂಯೋಜಿಸಿದೆ. ಅನಗತ್ಯವಾದ ಶಬ್ದಗಳು, ಕಂಪನಗಳು, ಮತ್ತು ವಿಗಮನಗಳನ್ನು ನಿವಾರಿಸುವ ಮೂಲಕ ಮತ್ತು ಚಾಲಕ ಮತ್ತು ಪ್ರಯಾಣಿಕರ ಮೇಲೆ ಗ್ರಹಿಕೆಯ ಹೊರೆಯನ್ನು ತಗ್ಗಿಸಲಿದೆ. ಪ್ರಯಾಣಿಕರು ಅತಿಸುದೀರ್ಘವಾದ ಪ್ರಯಾಣಗಳ ನಂತರವೂ ತಾಜಾತನದಲ್ಲಿ ಇರಲು ಸಾಧ್ಯವಾಗಲಿದೆ.
ಎಮ್‍ಎಲ್‍ಎ-ಫ್ಲೆಕ್ಸ್ ಬಾಡಿ ಆರ್ಕಿಟೆಕ್ಚರ್ ಒದಗಿಸಲಾದ ಮೂಲಭೂತ ಸೂಕ್ಷ್ಮತೆಯ ಮೇಲೆ ನಿರ್ಮಾಣಗೊಂಡಿರುವ ಅತ್ಯಾಧುನಿಕವಾದ ಸ್ಪೀಕರ್ ತಂತ್ರಜ್ಞಾನವು ಪ್ರಶಾಂತವಾದ ಕ್ಯಾಬಿನ್ ವಾತಾವರಣ ಒದಗಿಸಿ ಪ್ರಯಾಣಿಕರು ಪ್ರಥಮದರ್ಜೆ ಅನುಭವ ಪಡೆಯುವುದನ್ನು ಖಾತರಿಪಡಿಸುತ್ತದೆ. ರಸ್ತೆಯ ಮೇಲೆ ಚಲಿಸುವ ಅತ್ಯಂತ ನಿಶ್ಶಬ್ದವಾದ ವಾಹನ ಒಳಾಂಗಣವನ್ನು ಒದಗಿಸಲು ಅದು 1600W ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಮ್ ಬಳಸಿಕೊಳ್ಳುವುದರ ಜೊತೆಗೆ ಹೆಚ್ಚುವರಿಯಾಗಿ, ಅತ್ಯಂತ ಒಳಗೊಳ್ಳುವಂತಹ ಧ್ವನಿ ಅನುಭವಕ್ಕಾಗಿ ನಾಲ್ಕು ಪ್ರಧಾನ ಹೆಡ್‍ರೆಸ್ಟ್‍ಗಳಲ್ಲಿ 20 W ಸ್ಪೀಕರ್ ಗಳನ್ನು ಕೂಡ ಬಳಸಿಕೊಂಡಿದೆ.
ಮೂರನೇ ಪೀಳಿಗೆಯ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (Active Noise Cancellation3) ಸಿಸ್ಟಮ್, ವ್ಹೀಲ್‍ನ ಕಂಪನಗಳು, ಟೈರ್‍ನಶಬ್ದ, ಮತ್ತು ಕ್ಯಾಬಿನ್‍ಗಳಿಗೆ ಪ್ರಸರಣಗೊಳ್ಳುವ ಇಂಜಿನ್ ಶಬ್ದಗಳ ಮೇಲುಸ್ತುವಾರಿ ಮಾಡಿ ಸಿಸ್ಟಮ್‍ನಲ್ಲಿರುವ 35 ಸ್ಪೀಕರ್ ಮೂಲಕ ಸಿಗ್ನಲ್ ಉತ್ಪಾದಿಸುತ್ತದೆ. ಇವು, ಮುಖ್ಯವಾದ ಪ್ರಧಾನ ನಾಲ್ಕು ಕ್ಯಾಬಿನ್ ಪ್ರಯಾಣಿಕರಲ್ಲಿ ಪ್ರತಿಯೊಬ್ಬ ಪ್ರಯಾಣಿಕರ ಹೆಡ್‍ರೆಸ್ಟ್‍ನಲ್ಲಿರುವ 60 ಮಿ.ಮೀ. ವ್ಯಾಸದ ಸ್ಪೀಕರ್ ಜೊತೆಯನ್ನು ಒಳಗೊಂಡಿದ್ದು, ಹೈ-ಎಂಡ್ ಹೆಡ್‍ಫೋನ್ ಗಳನ್ನು ಬಳಸುವಾಗ ಉಂಟಾಗುವ ಪ್ರಭಾವಕ್ಕೆ ಸಮನಾದ ನಿಶ್ಶಬ್ದ ವಲಯಗಳನ್ನು ಸೃಷ್ಟಿಸುತ್ತದೆ.
ಹೊಸ ರೇಂಜ್ ರೋವರ್, ಈ ಐಶಾರಾಮೀ ಎಸ್‍ಯುವಿ ವರ್ಗಕ್ಕೆ ಕ್ಷೇಮದ ಹೊಸ ಮಟ್ಟಗಳನ್ನು ತಂದುಕೊಡುತ್ತದೆ ಮತ್ತು ಕ್ಯಾಬಿನ್ ಏರ್ ಪ್ಯೂರಿಫಿಕೇಶನ್ ಪ್ರೊ, ಈ ಅಗ್ರಮಾನ್ಯ(ಮುಂಚೂಣಿ) ತಂತ್ರಜ್ಞಾನದ ಮೇರುವಾಗಿದೆ. ಅಲರ್ಜೆನ್‍ಗಳನ್ನು ಕಡಿಮೆ ಮಾಡುವುದಕ್ಕೆ ಮತ್ತು ಪ್ಯಾಥೊಜೆನ್‍ಗಳನ್ನು ತೆಗೆದುಹಾಕುವುದಕ್ಕೆ ಸಂಯೋಜಿಸಲಾಗಿರುವ ಡ್ಯುಯಲ್ nanoe™X ತಂತ್ರಜ್ಞಾನವು, ವಾಸನೆ ಮತ್ತು ವೈರಾಣುಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಸಮಯದಲ್ಲೇ ಇಂಗಾಲದ ಡೈಆಕ್ಸೈಡ್ ನಿರ್ವಹಣೆ ಮಾಡಿದರೆ, PM2.5 ಕ್ಯಾಬಿನ್ ಏರ್ ಫಿಲ್ಟ್ರೇಶನ್ ಗಾಳಿಯ ಗುಣಮಟ್ಟವನ್ನು ವರ್ದಿಸುತ್ತದೆ.
ರೇಂಜ್ ರೋವರ್ ಕಾರಿಗೆ 50ರ ಸಂಭ್ರಮ; ರೋವರ್ ಫಿಫ್ಟಿ ಬಿಡುಗಡೆ!
ರೇಂಜ್ ರೋವರ್, 1992ದಲ್ಲಿ ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಶನ್ ಅಳವಡಿಸಿದ ಮೊಟ್ಟಮೊದಲ ಐಶಾರಾಮೀ ಎಸ್‍ಯುವಿ ಆಗಿತ್ತು ಮತ್ತು ಹೊಸ ರೇಂಜ್ ರೋವರ್, ನಿಖರವಾದ ಪ್ರತಿಕ್ರಿಯೆಗಳನ್ನು ಒದಗಿಸುವುದಕ್ಕೆ ಮುಂದಿರುವ ರಸ್ತೆಯನ್ನು ಗ್ರಹಿಸಲು ಮತ್ತು ಸಸ್ಪೆನ್ಶನ್‍ಅನ್ನು ಪ್ರೈಮ್‍ಗೊಳಿಸಲು ಇ-ಹೊರೈಜನ್ ನ್ಯಾವಿಗೇಶನ್ ಡಾಟಾವನ್ನು ಬಳಸುವ ಡೈನಮಿಕ್ ರೆಸ್ಪಾನ್ಸ್ ಪ್ರೊ ಮತ್ತು ಪ್ರಿ-ಎಂಪ್ಟಿವ್ ಸಸ್ಪೆನ್ಶನ್ ಇರುವ ಈ ಮುಂಚೂಣಿ ದೃಷ್ಟಿಕೋನವನ್ನು ಮುಂದುವರಿಸಿಕೊಂಡು ಹೋಗಿದೆ.
ಹೊಸ ಟೇಲ್ಗೇಟ್ ಈವೆಂಟ್ ಸೂಟ್(Tailgate Event Suite2), ಹೊರಾಂಗಣ ವಿಶ್ರಾಂತಿಗಾಗಿ ನಿಖರವಾದ ವಾಂಟೇಜ್ ಪಾಯಿಂಟ್ ಸೃಷ್ಟಿಸುವ ಹೆಚ್ಚುವರಿ ದೀಪವ್ಯವಸ್ಥೆ ಮತ್ತು ಆಡಿಯೋ ಅಂಶಗಳನ್ನು ಸಂಯೋಜಿಸುವ ಮೂಲಕ, ವೈವಿಧ್ಯಮಯವಾದ ಲೋಡ್‍ಸ್ಪೇಸ್ ಫ್ಲೋರ್ ಬ್ಯಾಕ್‍ರೆಸ್ಟ್ ಪರಿಕಲ್ಪನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.
ತಡೆರಹಿತ(ಅಡಚಣೆಯಿಲ್ಲದ) ತಂತ್ರಜ್ಞಾನ
ಅನುಕೂಲತೆ, ಸಾಮರ್ಥ್ಯ, ಸೂಕ್ಷ್ಮತೆ ಮತ್ತು ಸುರಕ್ಷತೆಯನ್ನು ಶ್ರಮವಿಲ್ಲದೆ ವರ್ಧಿಸುವುದಕ್ಕಾಗಿ ವಿನ್ಯಾಸಗೊಂಡ ಅಸಂಖ್ಯ ತಂತ್ರಜ್ಞಾನಗಳೊಂದಿಗೆ ಅಗ್ರಮಾನ್ಯ ಆವಿಷ್ಕಾರದ ತನ್ನ ಸಮೃದ್ಧ ಸಂಪ್ರದಾಯವನ್ನು ಹೊಸ ರೇಂಜ್ ರೋವರ್ ಮುಂದುವರಿಸಿದೆ. ಲ್ಯಾಂಡ್ ರೋವರ್ನ ಇತ್ತೀಚಿನ ಎಲೆಕ್ಟ್ರಿಕಲ್ ವೆಹಿಕಲ್ ಆರ್ಕಿಟೆಕ್ಚರ್(ಇವಿಎ 2.0), ಇದರ ಪ್ರಧಾನ ನೆರವಿನ ಸಾಧನವಾಗಿದ್ದು, 70ಕ್ಕಿಂತ ಹೆಚ್ಚಿನ ಎಲೆಕ್ಟ್ರಾನಿಕ್ ಮಾಡ್ಯೂಲ್‍ಗಳಿಗಾಗಿ ಸಾಫ್ಟ್‍ವೇರ್-ಓವರ್-ದಿ-ಏರ್(SOTA)ನವೀಕರಣಗಳನ್ನು ಒಳಗೊಂಡಿದೆ. ಅಂದರೆ, ಹೊಸ ರೇಂಜ್ ರೋವರ್ ನಿರಂತರವಾಗಿ ವಿಕಸನಗೊಳ್ಳುತ್ತಲೇ ಇರುತ್ತದೆ, ಸುಧಾರಿಸುತ್ತಿರುತ್ತದೆ ಮತ್ತು ಪ್ರಬುದ್ಧಗೊಳ್ಳುತ್ತಿದ್ದಂತೆ ಅದೂ ಕೂಡ ನವೀಕರಣಗೊಳ್ಳುತ್ತಿರುತ್ತದೆ ಎಂದು ಇದರರ್ಥ.
ಕಾಡು-ಮೇಡು ಸುತ್ತಲು ಹೇಳಿ ಮಾಡಿಸಿದ ಕಾರು ಲ್ಯಾಂಡ್‌ರೋವರ್!
ಹೊಸ ರೇಂಜ್ ರೋವರ್, ತನ್ನ ಹಿಂದೆಂದೂ ಇಲ್ಲದ ಅತಿದೊಡ್ಡ ಟಚ್‍ಸ್ಕ್ರೀನ್‍ನೊಂದಿಗೆ, ಲ್ಯಾಂಡ್‍ರೋವರ್‍ನ ಪ್ರಶಸ್ತಿ-ವಿಜೇತ ಪಿವಿಪ್ರೊ (Pivi Pro), ಇನ್ಫೋಟೇನ್ಮೆಂಟ್ ತಂತ್ರಜ್ಞಾನವನ್ನು ವರ್ಧಿಸಿದೆ. 33.27 ಸೆಂ.ಮೀ (13.1) ಬಾಗಿದ, ತೇಲುವ ಸ್ಕ್ರೀನ್ ಕನಿಷ್ಟ ಪ್ರೇಮ್ ವಿನ್ಯಾಸದೊಂದಿಗೆ ಒಳಾಂಗಣದ ಆರ್ಕಿಟೆಕ್ಚರಲ್ ಹಗುರತೆಯನ್ನು ಮೈಗೂಡಿಸಿಕೊಂಡಿದೆ.
ಪಿವಿಪ್ರೊ(Pivi Pro), ಭವ್ಯವಾದ ಹೊಸ ಸೆಮಿಫ್ಲೋಟಿಂಗ್ 34.79 ಸೆಂ.ಮೀ (13.7) ಇಂಟರಾಕ್ಟಿವ್ ಡ್ರೈವರ್ ಡಿಸ್ಪ್ಲೇದೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ಪಿವಿಪ್ರೊ ಹೋಂಸ್ಕ್ರೀನ್‍ನ ವಿನ್ಯಾಸವನ್ನು ಅಂತರ್ಗತವಾಗಿ ಪ್ರತಿಫಲಿಸುವ ಮೂರುಪ್ಯಾನೆಲ್‍ಗಳ ಸುತ್ತ ಆಧಾರಿತವಾಗಿರುವ ಹೊಸ ಹೈ ಡೆಫನಿಶನ್ ಗ್ರಾಫಿಕ್ಸ್ ಇದೆ. ಗ್ರಾಹಕರು, ಸ್ಟೀರಿಂಗ್ ವೀಲ್ ಕಂಟ್ರೋಲ್‍ಗಳನ್ನು ಬಳಸಿಯೇ, ಸಾಂಪ್ರದಾಯಿಕ ಅನಲಾಗ್ ಲೇಔಟ್ ಒಳಗೊಂಡಂತೆ, ವಿವಿಧ ಕಾನ್ಫಿಗರೇಶನ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಹಿಂಬದಿಯ ಪ್ರಯಾಣಿಕರು, ಹೊಸ ರೀರ್ ಸೀಟ್ ಎಂಟರ್‍ಟೇನ್ಮೆಂಟ್ ಸಿಸ್ಟಮ್(ಆರ್ ಎಸ್‍ಇ)ಅನ್ನು ಆನಂದಿಸಬಹುದು. ಇದು, ಮುಂಬದಿಯ ಸೀಟ್‍ಬ್ಯಾಕ್„ಗಳ ಹಿಂಭಾಗಕ್ಕೆ ಅಳವಡಿಸಲಾದ, ಸರಿಪಡಿಸಬಹುದಾದ 28.95 ಸೆಂ.ಮೀ (11.4) ಟಚ್‍ಸ್ಕ್ರೀನ್ ಒದಗಿಸುತ್ತದೆ. ಇವುಗಳನ್ನು ಸ್ವತಂತ್ರವಾಗಿ ಕಾರ್ಯಾಚರಣೆಗೊಳಿಸಬಹುದು ಮತ್ತು ಇವು ಹೆಚ್‍ಡಿಎಮ್‍ಐ ಪೋರ್ಟ್ ಇರುವ ಬಹುತೇಕ ಸಾಧನಗಳಿಗೆ ಸಂಪರ್ಕದ ಸೌಲಭ್ಯತೆ ಒದಗಿಸುತ್ತದೆ. ಎಕ್ಸಿಕ್ಯೂಟಿವ್ ವರ್ಗದ ರೇರ್ ಸೀಟ್‍ಗಳ ಮಧ್ಯದ ಆರ್ಮ್‍ರೆಸ್ಟ್ ಮೇಲೆ ಅಳವಡಿಸಲಾಗಿರುವ 20.32 ಸೆಂ.ಮೀ (8) ಹಿಂಬದಿ ಸೀಟ್ ಟಚ್‍ಸ್ಕ್ರೀನ್ ಕಂಟ್ರೋಲರ್(Rear Seat Touchscreen Controller4), ನಿಖರವಾದ ಸೀಟಿಂಗ್ ಸ್ಥಾನಕ್ಕಾಗಿ ಕ್ಷಿಪ್ರವಾದ ಅಂತರ್ಗತ ಕಂಟ್ರೋಲ್ ಒದಗಿಸಿ, ಐಶಾರಾಮೀ ರೇರ್-ಸೀಟ್ ಅನುಭವವನ್ನು ವರ್ಧಿಸುತ್ತದೆ.
500 ಮೀ.ಗಳ ಬೀಮ್ ರೇಂಜ್ ಒದಗಿಸುವ ಹೊಸ ಹೈ ಡೆಫನಿಶನ್ ಡಿಜಿಟಲ್ ಎಲ್‍ಇಡಿ ಹೆಡ್‍ಲೈಟ್‍ಗಳೊಂದಿಗೆ ಪ್ರತಿಯೊಂದು ಹೊಸ ರೇಂಜ್ ರೋವರ್‍ನಲ್ಲಿ ಸಮರ್ಥವಾದ ಮತ್ತು ಶಕ್ತಿಶಾಲಿಯಾದ ಆಲ್-ಎಲ್‍ಇಡಿ ದೀಪವ್ಯವಸ್ಥೆ ಒದಗಿಸಲಾಗಿದೆ. ಇವು ಅದ್ವಿತೀಯವಾದ ವಿನ್ಯಾಸ ವಿವರ ಒದಗಿಸಿ, ಸಿಗ್ನೇಚರ್ ಹಗಲು ಓಡುವ ದೀಪಗಳು, ಆ್ಯನಿಮೇಟೆಡ್ ಇಂಡಿಕೇಟರ್‍ಗಳು, ಹೊಂದಿಕೊಳ್ಳುವ ಫ್ರಂಟ್ ಲೈಟಿಂಗ್, ಮತ್ತು ಸ್ಟಾರ್ಟ್-ಅಪ್‍ನಲ್ಲಿ ಇಮೇಜ್ ಪ್ರೊಜೆಕ್ಶನ್ ತಂತ್ರಜ್ಞಾನ ಮುಂತಾದ ಅಂಶಗಳಿಂದಾಗಿ ಲ್ಯಾಂಡ್ ರೋವರ್ ನಲ್ಲಿಒ ಅಳವಡಿಸಲಾದ ಪ್ರಪ್ರಥಮ ಅತ್ಯಾಧುನಿಕ ಹೆಡ್‍ಲೈಟ್‍ಗಳಾಗಿವೆ.
ಶ್ರಮರಹಿತ ಚಾಲನೆಯನ್ನು ಒದಗಿಸಲು 3ಡಿ ಸರೌಂಡ್ ಕ್ಯಾಮರಾ ಸಿಸ್ಟಮ್‍ನೊಂದಿಗೆ ಕಾರ್ಯನಿರ್ವಹಿಸಿ ವಾಹನದ ಪರಿಧಿಯ ಸುತ್ತಲೂ ಬೆಳಕಿನ ಆವರಣವನ್ನು ಸೃಷ್ಟಿಸುವ ಮೂಲಕ ಅತಿಕಡಿಮೆ ಬೆಳಕಿರುವ ಪ್ರದೇಶಗಳಲ್ಲೂ ಚಾಲಕರು ಸಂಪೂರ್ಣ ಕಡಿಮೆ ವೇಗದಲ್ಲಿ ಸಂಪೂರ್ಣ ಆತ್ಮವಿಶ್ವಾಸದೊಡನೆ ಚಾಲನೆ ಮಾಡುವುದಕ್ಕೆ ನೆರವಾಗುತ್ತವೆ.