ಬೆಂಗಳೂರು(ಜು.06): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ಹೊಸ ರೇಂಜ್ ರೋವರ್ ಇವೊಕ್ ವಿತರಣೆ ಆರಂಭಿಸಿದೆ. ಹೊಸ ಇವೊಕ್ ಇಂಜಿನಿಯಮ್ 2.0 ಎಲ್ ಪೆಟ್ರೋಲ್ ನಲ್ಲಿ ಆರ್-ಡೈನಾಮಿಕ್ SE ಟ್ರಿಮ್ ಮತ್ತು 2.0 I ಡೀಸೆಲ್ ಪವರ್ ಟ್ರೈನ್ ನಲ್ಲಿ S ಟ್ರಿಮ್ ನಲ್ಲಿ ಲಭ್ಯವಿದೆ. 2.0 ಲೀ ಪೆಟ್ರೋಲ್ ಎಂಜಿನ್ 184 KW ಶಕ್ತಿ ಮತ್ತು 365 NM ಟಾರ್ಕ್ ನೀಡುತ್ತದೆ ಮತ್ತು 2.0 ಲೀ ಡೀಸೆಲ್ ಎಂಜಿನ್ 150 KW ಶಕ್ತಿ ಮತ್ತು 430 Nm ಟಾರ್ಕ್ ಅನ್ನು ನೀಡುತ್ತದೆ. ಹೊಸ ರೇಂಜ್ ರೋವರ್ ಇವೊಕ್ ನ ಭಾರತದಲ್ಲಿನ  ಬೆಲೆಯು 64.12 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.

ರೇಂಜ್ ರೋವರ್ ಸ್ಪೋರ್ಟ್ SVR ಕಾರು ಬಿಡುಗಡೆ; ದುಬಾರಿ ಕಾರಿನಲ್ಲಿದೆ 10 ವಿಷೇಷತೆ!.

ಹೊಸ ರೇಂಜ್ ರೋವರ್ ಇವೊಕ್ 3D  ಸರೌಂಡ್ ಕ್ಯಾಮೆರಾ, ಪಿಎಂ 2.5 ಫಿಲ್ಟರ್ ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್, ಫೋನ್ ಸಿಗ್ನಲ್ ಬೂಸ್ಟರ್‍ನೊಂದಿಗೆ ವೈರ್‍ಲೆಸ್ ಡಿವೈಸ್ ಚಾರ್ಜಿಂಗ್ ಮತ್ತು ಹೊಸ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಸಿಸ್ಟಮ್‍ನಂತಹ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ರೇಂಜ್ ರೋವರ್ ಇವೊಕ್ ಯಾವಾಗಲೂ ತನ್ನ ವಿಶಿಷ್ಟ, ಆಧುನಿಕ ಮತ್ತು ಸ್ಮಾರ್ಟ್ ವಿನ್ಯಾಸದೊಂದಿಗೆ ಗಮನ ಸೆಳೆದಿದೆ. ಹೊಸ ಆಂತರಿಕ ಬಣ್ಣಸಂಯೋಜನೆಗಳು ಮತ್ತು ಇತ್ತೀಚಿನ ಲ್ಯಾಂಡ್ ರೋವರ್ ತಂತ್ರಜ್ಞಾನಗಳ ಪರಿಚಯದೊಂದಿಗೆ, ಹೊಸ ಇವೊಕ್ ಶೈಲಿಯ ಅಂಶವು ಇನ್ನಷ್ಟು ವರ್ಧಿಸಿದೆ ಮತ್ತು ಹೊಸ ಇಂಜಿನಿಯಮ್ ಪವರ್ ಟ್ರೇನ್‍ಗಳು ಅದನ್ನು ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.

ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭ!..
 
ಭಾರತದಲ್ಲಿ ಲ್ಯಾಂಡ್ ರೋವರ್ ಉತ್ಪನ್ನಗಳ ಪೋರ್ಟ್‍ಫೋಲಿಯೊ
ಭಾರತದ ಲ್ಯಾಂಡ್ ರೋವರ್ ಶ್ರೇಣಿಯು ಹೊಸ ರೇಂಜ್ ರೋವರ್ ಇವೊಕ್ (@ 64.12 ಲಕ್ಷದಿಂದ ಪ್ರಾರಂಭ), ಡಿಸ್ಕವರಿ ಸ್ಪೋರ್ಟ್ (@ 65.30 ಲಕ್ಷದಿಂದ ಪ್ರಾರಂಭ), ನ್ಯೂ ರೇಂಜ್ ರೋವರ್ ವೆಲಾರ್ (@ 79.87 ಲಕ್ಷದಿಂದ ಪ್ರಾರಂಭ), ಡಿಫೆಂಡರ್ 110 (@ 83.38 ರಿಂದ ಪ್ರಾರಂಭ) ಲಕ್ಷ), ರೇಂಜ್ ರೋವರ್ ಸ್ಪೋರ್ಟ್ (@ 91.27 ಲಕ್ಷದಿಂದ ಪ್ರಾರಂಭ) ಮತ್ತು ರೇಂಜ್ ರೋವರ್ (@ 210.82 ಲಕ್ಷದಿಂದ ಪ್ರಾರಂಭ) ಗಳನ್ನು ಒಳಗೊಂಡಿದೆ. ಪ್ರಸ್ತಾಪಿಸಲಾದ ಎಲ್ಲಾ ಬೆಲೆಗಳು ಭಾರತದಲ್ಲಿನ ಎಕ್ಸ್ ಶೋರೂಮ್ ಬೆಲೆಗಳಾಗಿವೆ.

ಭಾರತದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಜಾಲ
ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಭಾರತದಲ್ಲಿ, ಅಹಮದಾಬಾದ್, ಔರಂಗಾಬಾದ್, ಬೆಂಗಳೂರು (3), ಭುವನೇಶ್ವರ, ಚಂಡೀಗರ್, ಚೆನ್ನೈ(2), ಕೊಯಮತ್ತೂರು, ದೆಹಲಿ, ಗುರಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೊಲ್ಕತ್ತಾ , ಕೊಚಿನ್, ಕರ್ನಲ್, ಲಕ್ನೋ, ಲುಧಿಯಾನ, ಮಂಗಳೂರು, ಮುಂಬೈ (2), ನೋಯ್ಡಾ, ಪುಣೆ, ರಾಯ್‍ಪುರ, ಸೂರತ್ ಮತ್ತು ವಿಜಯವಾಡ ಸೇರಿದಂತೆ 24 ನಗರಗಳಲ್ಲಿನ 28 ಅಧಿಕೃತ ಮಳಿಗೆಗಳ ಮೂಲಕ ಲಭ್ಯವಿದೆ.