ರೇಂಜ್ ರೋವರ್ ಕಾರಿಗೆ 50ರ ಸಂಭ್ರಮ; ರೋವರ್ ಫಿಫ್ಟಿ ಬಿಡುಗಡೆ!

ಬ್ರಿಟೀಷ್ ಕಾರು ರೇಂಜ್ ರೋವರ್‌ಗೆ 50ರ ಸಂಭ್ರಮ. ಈ ಸಂತಸದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ಫಿಫ್ಟಿ ಬಿಡುಗಡೆಯಾಗಿದೆ. ರೇಂಜ್ ರೋವರ್ ನೂತನ ಕಾರು ಹಾಗೂ ಕಂಪನಿ ಸಾಗಿ ಬಂದ ಪಯಣದ ಮಾಹಿತಿ ಇಲ್ಲಿದೆ. 

Range rover marks 50 years luxury with exclusive new limited edition launch

ಲಂಡನ್(ಜೂ.18): SUV ಕಾರುಗಳಿಗೆ ಹೊಸ ಅರ್ಥ ನೀಡಿದ ಟಾಟಾ ಮಾಲೀಕತ್ವದ ಬ್ರಿಟೀಷ್ ಕಾರು ರೇಂಜ್ ರೋವರ್ ಇದೀಗ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಕಳೆದ 50 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ರೇಂಜ್ ರೋವರ್ ಇದೀಗ ಹೊಸ ರೇಂಜ್ ರೋವರ್ ಫಿಫ್ಟಿ ಪರಿಚಯಿಸಿದೆ.  17 ಜೂನ್ 1970 ರಿಂದ ಮೂಲ ಐಷರಾಮಿ ಎಸ್ ಯು ವಿ, ಮಾರುಕಟ್ಟೆಯನ್ನು ವಿವರಿಸಿತ್ತು ಬಂದಿದೆ. ಈಗ ಐದು ದಶಕಗಳ ಬಳಿಕ ರೇಂಜ್ ರೋವರ್, ಬಹಳ ನೆಚ್ಚಿನ ಹಾಗೂ ಸಾಮಥ್ರ್ಯವುಳ್ಳ ಐಷರಾಮಿ ವಾಹನಗಳ ಕುಟುಂಬವಾಗಿ ಹೊರಹೊಮ್ಮಿದೆ. ಅದರ ವಿನ್ಯಾಸ, ಪರಿಷ್ಕರಣೆ ಹಾಗೂ ಇಂಜಿನಿಯರಿಂಗ್ ನಾವೀನ್ಯತೆ ಉಳಿದೆಲ್ಲಾ ಐಷರಾಮಿ SUV ಗಳಿಗೆ ಒಂದು ಮಾನದಂಡವಾಗಿ ರೂಪುಗೊಂಡಿದೆ.

1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

ಇಲ್ಲೀವರೆಗಿನ, ಅದರೆ 50 ವರ್ಷಗಳ ಜೀವನ ಪಥದಲ್ಲಿ ರೇಂಜ್ ರೋವರ್, ವಿಶ್ವದ ಅನೇಕ ಪ್ರಥಮಗಳಿಗೆ ನಾಂದಿ ಹಾಡಿ ಹಲವಾರು ಅದ್ಭುತ ಸಾಧನೆಗಳನ್ನು ಮಾಡಿದೆ. ಆರಂಭವಾದಾಗ ಶಾಶ್ವತ ಸಿಸ್ಟಮ್ ಅಳವಡಿಸಿದ ಪ್ರಥಮ ಎಸ್ ಯು ವಿಯಾಗಿತ್ತು, ಮತ್ತು 1989 ರಲ್ಲಿ ಎ ಬಿ ಎಸ್ ಆ್ಯಂಟಿ-ಲಾಕ್ ಬ್ರೇಕ್‍ಗಳನ್ನು ಅಳವಡಿಸಿದ ವಿಶ್ವದ ಮೊದಲ 4x4 ವಾಹನವಾಯಿತು. ನಂತರ 1992 ರಲ್ಲಿ, ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಲೆಕ್ಟ್ರಾನಿಕ್ ‹ಏರ್ ಸಸ್ಪೆನ್ಷನ್ ಅಳವಡಿಸಿದ ವಿಶ್ವದ ಮೊದಲ 4x4 ವಾಹನವಾಗಿ ರೇಂಜ್ ರೋವರ್ ಈಗ ಪ್ರಸಿದ್ಧವಾಗಿರುವ ಚಾಲನೆ ಅನುಭವಕ್ಕೆ ಮರು ವಿವರಣೆ ನೀಡಿತು. 2012 ರಲ್ಲಿ, ಆಧುನಿಕ ಪೀಳಿಗೆಯ ರೇಂಜ್ ರೋವರ್, ಸರ್ವ ಅಲ್ಯುಮಿನಿಯಂನಿಂದ ಹಗುರ ತೂಕ ನಿರ್ಮಾಣದ ವಿಶ್ವದ ಪ್ರಥಮ ಎಸ್ ಯು ವಿ ಯಾಗಿ ಹೊಮ್ಮಿ, ಹೆಚ್ಚು ಹಗುರ, ಹೆಚ್ಚು ಬಲಿಷ್ಟ ಮತ್ತು ಹೆಚ್ಚು ಸಾಮಥ್ರ್ಯವುಳ್ಳ ವಾಹನವಾಯಿತು.

ಕತ್ರಿನಾ ಕೈಫ್ ಮನೆಗೆ ಹೊಸ ಅತಿಥಿ - 2.33 ಕೋಟಿ ಖರ್ಚು

ಪ್ಯಾರಿಸ್‍ನ ಲೌರ್ ವಸ್ತುಪ್ರದರ್ಶನಾಲಯದಲ್ಲಿ ಪ್ರದರ್ಶನಗೊಂಡ ಮೊದಲ ವಾಹನವಾಗಿ ಕುಪ್ರಸಿದ್ಧವಾದ ‘ಡೇರಿಯನ್ ಗ್ಯಾಪ್’ ಅನ್ನು ದಾಟಿದ ಮೊದಲ ವಾಹನವಾಯಿತು. ಜೊತೆಗೆ ಪ್ಯಾರಿಸ್-ಡಕರ್ ರ್ಯಾಲಿಯಲ್ಲಿ ಎರಡು ಬಾರಿ ಗೆದ್ದಿದೆ. ಐಷರಾಮ, ಆರಾಮದಾಯಕತೆ ಮತ್ತು ಆಧುನಿಕತೆಗಳನ್ನು ಹಾಗೂ ರಸ್ತೆಯ ಮೇಲೆ ಮತ್ತು ಅದರಾಚೆಯ ಕಾರ್ಯಕ್ಷಮತೆಗೆ ಇನ್ನಾವುದೇ ವಾಹನವೂ ಸರಿಸಾಟಿಯಿಲ್ಲ.

ತನ್ನ ಕ್ಲಾಮ್‍ಶೆಲ್ ಬಾನೆಟ್, ಅನನ್ಯವಾದ ತೇಲುವ ಛಾವಣಿ, ಸ್ಪ್ಲಿಟ್ ಟೈಲ್ ಗೇಟ್ ಹಾಗೂ ಹೆಗ್ಗುರುತಿನ ಪೆಂಡರ್ ವೆಂಟ್‍ಗಳೊಂದಿಗೆ ರೇಂಜ್ ರೋವರ್ ಇಂದೂ ಸಹ 1970 ರ ತನ್ನ ಮೂಲಕ್ಕೆ ಅಂಟಿಕೊಂಟಿದೆ. ತನ್ನ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಅತ್ಯಂತ ಸಮರ್ಥವಾದ, ಸಂಪರ್ಕಿತ, ಐಷರಾಮಿ ಹಾಗೂ ಸಕ್ಷಮ ವಾಹನವಾಗಿ ಉಳಿದಿದೆ.

ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!.

ತನ್ನ 50 ವರ್ಷಗಳ ಸಂಭ್ರಮವನ್ನು ಆಚರಿಸಲು ಈ ಐಕಾನಿಕ್ ಮಾಡಲ್‍ನ ಜನ್ಮ ವರ್ಷವಾದ 1970 ಇಸವಿಯ ಸವಿನೆನಪಿಗಾಗಿ ವಿಶ್ವಾದ್ಯಂತ 1970 ಯೂನಿಟ್‍ಗಳಿಗೆ ಸೀಮಿತಗೊಳಿಸಲಾಗಿದೆ.

ಲ್ಯಾಂಡ್ ರೋವರ್‌ನ ಪ್ರಧಾನ ಸೃಜನಾತ್ಮಕ ಕಾರ್ಯಾಧಿಕಾರಿ ಪ್ರೊ. ಗೆರ್ರಿ ಮ್ಯಕ್ ಗವರ್ನ್ ಓಬಿಇ, “ ಐಷಾರಾಮಿ ವಾಹನಗಳ ಪ್ರಪಂಚದಲ್ಲಿ, ರೇಂಜ್ ರೋವರ್ ಸದಾ ವಿಭಿನ್ನ ಸ್ಥಾನದಲ್ಲಿದ್ದು ಸರಿಸಾಟಿಯಿಲ್ಲದ ವಾಹನವೆಂದೇ ಗುರುತಿಸಲ್ಪಟ್ಟಿದೆ. ಅದರ ವಿಶಿಷ್ಟವಾದ ಹಾಗೂ ಮಾರ್ಗಪ್ರವರ್ತಕ ಸೂಕ್ಷ್ಮತೆಗಳು ಅಸ್ಪರ್ಧಾತ್ಮಕ ಇಂಜಿನಿಯರಿಂಗ್ ಜೊತೆಗೂಡಿ, 1970 ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡಾಗಿನಿಂದಲೂ ನಮ್ಮ ಗ್ರಾಹಕರು ಬಹಳ ಮೆಚ್ಚಿಕೊಳ್ಳುವ ಅಂತರ್ಗತ ಮೌಲ್ಯಗಳಿಂದ ಕೂಡಿದೆ” ಎಂದರು.

ಡಾಲಿ ಧನಂಜಯ್‌ಗೆ ಅಪ್ಪ ಕೊಡ್ಸಿದ್ದು XL ಸೂಪರ್ - ಜನ ಕೊಟ್ಟಿದ್ದು ರೇಂಜ್ ರೋವರ್!

ರೇಂಜ್ ರೋವರ್ ಫಿಫ್ಟಿ ಆವೃತಿಯು ಸ್ಟ್ಯಾಂಡರ್ಡ್ ಹಾಗೂ ಉದ್ದನೆಯ ವೀಲ್ ಬೇಸ್ ಬಾಡಿಯ ಎರಡೂ ವಿನ್ಯಾಸಗಳಲ್ಲಿ ಲಭ್ಯವಿರುತ್ತದೆ. ಬಹಳ ಎಚ್ಚರಿಕೆಯಿಂದ ರೂಪಿಸಲಾದ ನಾಲ್ಕು ಹೊರಾಂಗಣ ಬಣ್ಣಗಳಾದ ಕಾರ್ಪೆಥಿಯನ್ ಗ್ರೆ, ರೊಸೆಲ್ಲೊ ರೆಡ್, ಅರುಬ ಮತ್ತು ಸ್ಯಾಂಟೊರಿನಿ ಬ್ಲ್ಯಾಕ್- ಈ ನಾಲ್ಕು ಬಣ್ಣಗಳಿಂದ ಗ್ರಾಹಕರು ಆಯ್ಕೆ ಮಾಡಬಹುದು. ಬಹಳ ಸೀಮಿತ ಸಂಖ್ಯೆಯಲ್ಲಿ ಹೊರತರಲಾಗಿರುವ ಕ್ಯಾಂಡ್ ರೋವರ್ ವಿಶೇಷ ವಾಹನ ಆಪರೇಷನ್‍ನಲ್ಲಿ ರೇಂಜ್ ರೋವರ್ ಫಿಫ್ಟಿ ಸಹ ಒಂದು. ಮೂಲ ರೇಂಜ್ ರೋವರ್ ಪೈಂಟ್ ಆಯ್ಕೆಗಳಾದ ಟಸ್ಕನ್ ಬ್ಲೂ, ಬಹಾಮ ಗೋಲ್ಡ್ ಮತ್ತು ದೇವೋಸ್ ವೈಟ್‍ಗಳಿಂದ ಮರು ಸೃಷ್ಟಿಸಲಾದ ಮೂರು ಪಾರಂಪರಿಕ ಬಾಹ್ಯ ಘನ ಪೈಂಟ್‍ಗಳಲ್ಲಿ ರೇಂಜ್ ರೋವರ್ ಫಿಫ್ಟಿ ಲಭ್ಯವಿರುತ್ತದೆ. ಪೆಟ್ರೋಲ್, ಡೀಸಲ್ ಮತ್ತು ಪ್ಲಗ್ ಇನ್ ಮಿಶ್ರತಳಿ P400e ಆವೃತಿಯಲ್ಲಿ ಲಭ್ಯವಿದೆ.*

ಈಗ ತನ್ನ ನಾಲ್ಕನೆ ಪೀಳಿಗೆಯಲ್ಲಿರುವ, ಮತ್ತು ಈವರೆಗೆ ಲಕ್ಷಕ್ಕೂ ಹೆಚ್ಚು ಮಾರಾಟವಾಗಿರುವ ರೇಂಜ್ ರೋವರ್ , ಐಷಾರಾಮದ ಅತ್ಯುಚ್ಛ ಅಭಿವ್ಯಕ್ತಿಯಾಗಿದೆ. ಅದರ ವಿಶಿಷ್ಟವಾದ ಅತ್ಯಾಧುನಿಕ ವಿನ್ಯಾಸ ಮತ್ತು ಎಂತಹ ಪ್ರದೇಸದಲ್ಲೂ ಚಲಿಸಬಲ್ಲ ಸಾಮಥ್ರ್ಯದಿಂದ ರೇಂಜ್ ರೋವರ್, 1970 ರ ದಶಕದಲ್ಲಿ ಎಷ್ಟು ಪ್ರಸ್ತುತವಾಗಿತ್ತೋ, ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.

ರೇಂಜ್ ರೋವರ್ ಕುಟುಂಬ
ಐಷಾರಾಮಿ ಎಸ್ ಯು ವಿ ಕ್ಷೇತ್ರದಲ್ಲಿ 3 ದಶಕಗಳ ಕಾಲ ಉನ್ನತ ಸ್ಥಾನವನ್ನು ಕಾಯ್ದುಕೊಂಡು ಬಂದ ರೇಂಜ್ ರೋವರ್, 2005 ರಲ್ಲಿ ದೊಡ್ಡ ರೇಂಜ್ ರೋವರ್‍ನ ಐಷಾರಾಮಿತನ ಹಾಗೂ ಸಾಮಥ್ರ್ಯದ ಜೊತೆಗೆ ಕ್ರೀಡಾತ್ಮಕವಾದ ಹಾಗೂ ಚಾಲನೆಯಲ್ಲಿ ಮುಳುಗಿಹೋಗುವಂಥ ಗುಣಲಕ್ಷಣಗಳನ್ನು ಬೆಸೆಯುವ ರೇಂಜ್ ರೋವರ್ ಸ್ಪೋರ್ಟ್ ಬಿಡುಗಡೆಯೊಂದಿಗೆ ರೇಂಜರ್ ಕುಟುಂಬ ಜನ್ಮ ತಾಳಿತು. 2010 ರಲ್ಲಿ,ಕಾಂಪ್ಯಾಕ್ಟ್ ರೇಂಜ್ ರೋವರ್ ಎವೋಕ್ ಪ್ರವೇಶ ಮಾಡಿತು. ಇದು ಸ್ವಲ್ಪ ತರುಣ ಹಾಗೂ ಹೆಚ್ಚು ನಾಗರೀಕ ಗ್ರಾಹಕರನ್ನು ಆಕರ್ಷಿಸಿತು. 2017 ರಲ್ಲಿ, ರೇಂಜ್ ರೋವರ್ ವೇಲರ್ ಸೇರ್ಪಡೆಯೊಂದಿಗೆ ಕುಟುಂಬ ಮತ್ತಷ್ಟು ಬೆಳೆಯಿತು. ಈ ಮಾಡಲ್, ರೇಂಜ್ ರೋವರ್ ಸ್ಪೋರ್ಟ್ ಹಾಗೂ ರೇಂಜ್ ರೋವರ್ ಎವೋಕ್ ನಡುವಿನ ಅಂತರವನ್ನು ಭರ್ತಿ ಮಾಡಿತು. ಮೊದಲ ರೇಂಜ್ ರೋವರ್ ಪ್ರೋಟೋಟೈಪ್‍ಗಳಿಂದ ಹೆಸರು ಪಡೆದುಕೊಂಡ ರೇಂಜ್ ರೋವರ್ ವೇಲರ್, ತನ್ನ ವಿಶಿಷ್ಟ ವಿನ್ಯಾಸ ಹಾಗೂ ತಂತ್ರಜ್ಞಾನ ಭರಿತ ಒಳಾಂಗಣದಿಂದ ರೇಂಜ್ ರೋವರ್ ಪೋರ್ಟ್‍ಫೋಲಿಯೋವನ್ನು ವಿಸ್ತರಿಸಿತು.

ರೇಂಜ್ ರೋವರ್‌ನ ಐತಿಹಾಸಿಕ ಪಕ್ಷಿನೋಟ
ಮೊದಲ ರೇಂಜ್ ರೋವರ್ ಅನಾವರಣಗೊಂಡ ನಂತರ , ಇಂದು ಅದರ 50 ವರ್ಷಗಳ ಅಸ್ತಿತ್ವ ಸ್ಥಾಪಿಸುತ್ತದೆ. ಆದರೆ ನಿಜವಾದ ಇತಿಹಾಸ ಇನ್ನೂ ಹಿಂದಿನದು. 1960 ರ ಮಧ್ಯ ಕಾಲದಲ್ಲಿ 4x4 ಲೀಷರ್ ಮಾರುಕಟ್ಟೆ ಬೆಳೆಯುತ್ತಿತ್ತು. ಆಗ, ರೋವರ್ ಕಾರ್ ಕಂಪನಿಯ ಹೊಸ ವಾಹನ ಯೋಜನೆ ವಿಭಾಗದ ಇಂಜಿನಿಯರಿಂಗ್ ಮುಖ್ಯಸ್ಥರಾದ ಚಾಲ್ರ್ಸ್ ಸ್ಪೆನ್ಸರ್ ‘ ಸ್ಪೆನ್’ ಕಿಂಗ್ (ಲ್ಯಾಂಡ್ ರೋವರ್ ಸಂಸ್ಥಾಪಕರ ಸೋದರಳಿಯ), ರೋವರ್ ಸಲೂನ್‍ನ ರಸ್ತೆಯ ಮೇಲಿನ ಸಾಮಥ್ರ್ಯ ಹಾಗೂ ಆರಾಮದಾಯಕತೆಯನ್ನು ಮೇಳವಿಸಿ ಲ್ಯಾಂಡ್ ರೋವರ್‍ನ ಆಫ್ ರೋಡ್ ಸಾಮಥ್ರ್ಯವಾಗಿ ಪರಿವರ್ತಿಸಲು ಯೋಜನೆ ಹಾಕಿದರು.

1960 ರ ಅಂತ್ಯ ವೇಳೆಗೆ ಮೊದಲ (100) ಇಂಚ್ ಸ್ಟೇಷನ್ ವ್ಯಾಗನ್ ಪ್ರೋಟೋಟೈಪ್ ಅಭಿವೃದ್ಧಿಯಾಯಿತು.ಇದರ ಮೊದಲ ಮಾದರಿ ವಿಶ್ವದ ಮಾಧ್ಯಮಗಳಿಗೆ ಬಿಡುಗಡೆಯಾಗಿ 1970 ರಲ್ಲಿ ಅಪಾರ ಜನಮನ್ನಣೆ ಪಡೆಯಿತು. ಅದರ ಸಾಮಥ್ರ್ಯ-ಮೋಟರ್ ವೇ ಕ್ರೂಯಿಸಿಂಗ್, ಆಫ್ ರೋಡಿಂಗ್ ಮತ್ತು ಸ್ಟೈಲ್ ಹಾಗೂ ಆರಾಮದೊಂದಿಗೆ ಟೋ ಮಾಡುವ ಸಾಮಥ್ರ್ಯ-ಅದರ ದಿಢೀರ್ ಜನಪ್ರಿಯತೆಗೆ ನಾಂದಿ ಹಾಡಿತು. ಇದರ ಮೊದಲ ಕ್ಲಾಸಿಕ್ ಮಾಡಲ್, ‘ಕೈಗಾರಿಕ ವಿನ್ಯಾಸದ ಶ್ಲಾಘನೀಯ ಕೆಲಸ’ ಎಂದು ವರ್ಣಿಸಲಾಯಿತು. ಆಗ ಅದು, 1971 ರಲ್ಲಿ ವಿಶ್ವ ಪ್ರಸಿದ್ಧ ಪ್ಯಾರಿಸ್ ಲೌರ್ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿತವಾದ ಮೊಟ್ಟ ಮೊದಲ ವಾಹನವಾಯಿತು.

ಮೊದಳ ಪೀಳಿಗೆಯ ರೇಂಜ್ ರೋವರ್(1970-1996), 1970 ರಲ್ಲಿ ಅದು ಮೊದಲು ಮಾರಾಟಕ್ಕೆ ಬಿಡುಗಡೆಯಾದಾಗ ಎರಡು ಬಾಗಿಲ ಮಾದರಿಯಲ್ಲಿ ಮಾತ್ರ ಮೂಲತಃ ಲಭ್ಯವಿತ್ತು. ತನ್ನ 26 ವರ್ಷಗಳ ಜೀವಿತಕಾಲದಲ್ಲಿ ಈ ಶ್ರೇಷ್ಟ ವಾಹನ, 1981 ರಲ್ಲಿ ನಾಲ್ಕು ಬಾಗಿಲ ಮಾದರಿಯಾಗಿ ಪರಿಚಯಿಸಲ್ಪಟ್ಟಿತು. 1982 ರಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಯಿತು. 1986 ರಲ್ಲಿ ಮೊದಲ ಡೀಸಲ್ ರೇಂಜ್ ರೋವರ್ ಬಿಡುಗಡೆಯಾಯಿತು.

ಎರಡನೆ ಪೀಳಿಗೆ ರೇಂಜ್ ರೋವರ್ 1994 ರಲ್ಲಿ ಪಾದಾರ್ಪಣೆ ಮಾಡಿತು.ಚಿರಪರಿಚಿತವಾದ ಅದರ ಛಾಯಾರೇಖಾಕೃತಿ, ತೇಲುವ ಛಾವಣಿ, ಕ್ಲಾಮ್‍ಶೆಲ್ ಬಾನೆಟ್, ಸ್ಪ್ಲಿಟ್ ಟೈಲ್‍ಗೇಟ್ ಮತ್ತು ಸೀಮಾತೀತ ವೈಸ್ಟ್ ಲೈನ್‍ಗಳನ್ನು ಜನರು ತಕ್ಷಣ ಗುರುತಿಸಿದರು-ಅವೆಲ್ಲವೂ ಇಂದಿಗೂ ಹಾಗೆಯೇ ಇವೆ. ತನ್ನ ಆನ್ ರೋಡ್ ಮತ್ತು ಆಫ್ ರೋಡ್ ಸಾಮಥ್ರ್ಯದಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳದೆ ಇನ್ನೂ ಹೆಚ್ಚಿನ ಐಷಾರಾಮಿ ಒಳಾಂಗಣವನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಎತ್ತರ ಅಡ್ಜಸ್ಟ್ ಮಾಡಬಲ್ಲ ಸಸ್ಪೆನ್ಷನ್, 2.5 ಲೀಟರ್ ಡೀಸಲ್, 3.9 ಹಾಗೂ 4.6 ಲೀಟರ್ ಗಿ8 ಪೆಟ್ರೋಲ್ ಆವೃತಿಯಲ್ಲಿ ಲಭ್ಯವಿದ್ದು, ಮೊದಲಿಗಿಂತ ಹೆಚ್ಚಿನ ಕಾರ್ಯಕ್ಷಮತೆಯಿಂದ ಕೂಡಿದೆ.

ಮೂರನೆ ಪೀಳಿಗೆ ರೇಂಜ್ ರೋವರ್(2001-2012), ತನ್ನ 11 ವರ್ಷಗಳ ಅವಧಿಯಲ್ಲಿ ಮುಂಚಿನ ಎಲ್ಲಾ ಆವೃತಿಗಳಿಗಿಂತ ಬಹಳಷ್ಟು ಸುಧಾರಣೆಗಳೊಂದಿಗೆ ಹೊರಹೊಮ್ಮಿತು. ಇಂಜಿನಿಯರಿಂಗ್ ನಾವೀನ್ಯತೆಯಲ್ಲಿ ಹೆಚ್ಚು ಸದೃಢವಾದ ಮಾನೋಕಾಕ್ ಬಾಡಿ(ಸಾಂಪ್ರದಾಯಿಕ 4x4ಲ್ಯಾಡರ್ ಫ್ರೇಂ ಜಾಗದಲ್ಲಿ)ಮತ್ತು ಸಂಪೂರ್ಣವಾಗಿ ಸ್ವತಂತ್ರವಾದ ಏರ್ ಸ್ಪ್ರಿಂಗ್ ಜೋಡಿಸಲಾದ ಸಸ್ಪೆನ್ಷನ್( ಆ ಕಾಲದಲ್ಲಿ ಎಲ್ಲಾ 4x4ಗಳಿಗೆ ಗಡಸು ಆಕ್ಸಲ್‍ಗಳಿದ್ದವು). ಈ ವಾಹನದ ಒಳಾಂಗಣವು ಹೈ ಎಂಡ್ ಯಾಚ್, ಉತ್ಕೃಷ್ಟ ಪೀಠೋಪಕರಣ ಮತ್ತು ಪ್ರಥಮ ದರ್ಜೆ ಏರ್ ಲೈನ್ ಆಸನಗಳಿಂದ ಸಜ್ಜಿತವಾಗಿ ಹೆಚ್ಚು ಸ್ಥಳಾವಕಾಶ ಮತ್ತು ಐಷಾರಾಮೀಯತೆ ಒದಗಿಸುತ್ತಿದ್ದವು.

2012 ರಲ್ಲಿ, ನಾಲ್ಕನೆ ಪೀಳಿಗೆಯ ಹಾಗೂ ಇತ್ತೀಚೆಗೆ ಪಾದಾರ್ಪಣ ಮಾಡಿದ ರೇಂಜ್ ರೋವರ್ ಒಳಗೊಂಡಿದೆ. ಸಕಲವೂ ಅಲ್ಯುಮಿನಿಯಂನಿಂದ ನಿರ್ಮಿಸಲ್ಪಟ್ಟ ಮೊದಲ ಎಸ್ ಯು ವಿ ಗಳಾಗಿ, ಮೊದಲಿನ ಆವೃತಿಗಳಿಗೆ ಹೋಲಿಸಿದರೆ 420 ಕೆ.ಜಿ. ತೂಕ ಕಡಿಮೆ ತೂಗುತ್ತಿದ್ದವು. ಹೊಸ ಎಲೆಕ್ಟ್ರಿಫೈಡ್ ಇಂಜೀನಿಯಂ ಇಂಜಿನ್, ಪ್ಲಗ್ ಇನ್  ಎಲೆಕ್ಟ್ರಿಕ್ ಆವೃತಿ ಮತ್ತು ವಿನೂತನ ಇನ್ಫೋಟೈನ್ಮೆಂಟ್ ಹಾಗೂ ಸುರಕ್ಷತಾ ತಂತ್ರಜ್ಞಾನಗಳಿಂದ ಸಜ್ಜಿತವಾಗಿದೆ.

ಕಳೆದ ಐದು ವರ್ಷಗಳಲ್ಲಿ ರೇಂಜ್ ರೋವರ್ ಎಸ್ ವಿ ಯ ಆತ್ಮಚರಿತ್ರೆ, ರೇಂಜ್ ರೋವರ್‍ನ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ಪರಿಷ್ಕೃತ ವಾಹನಗಳ ಸಾಲಿನೊಂದಿಗೆ ಉತ್ತುಂಗದಲ್ಲಿದೆ. ಲ್ಯಾಂಡ್ ರೋವರ್ ವಿಶೇಷ ವಾಹನ ಕಾರ್ಯಾಚರಣೆ ವಿಭಾಗದಿಂದ ಉತ್ಪಾದಿಸಲ್ಪಟ್ಟು, ಗ್ರಾಹಕರು ರೇಂಜ್ ರೋವರ್ ಎಸ್ ವಿ ಆಟೋಬೈಯಾಗ್ರಫಿ ಮತ್ತು ಎಸ್ ವುಇ ಆಟೋಬೈಯಾಗ್ರಫಿ ಡೈನಮಿಕ್ ಗಳಿಂದ ಆಯ್ಕೆ ಮಾಡಿಕೊಳ್ಳಬಹುದು.

Latest Videos
Follow Us:
Download App:
  • android
  • ios