ಹ್ಯುಂಡೈ ಇಂಡಿಯಾ ಭಾರತದಲ್ಲಿ ಹೊಚ್ಚ ಹೊಸ ಬೆಯಾನ್ ಎಸ್ಯುವಿ ಕಾರು ಲಾಂಚ್ ಮಾಡಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ, ವಿಕ್ಟೋರಿಸ್ ಸೇರಿದಂತೆ ಪ್ರಮುಖ ಎಸ್ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಬೆಯಾನ್ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಿದೆ.
ನವದೆಹಲಿ (ಅ.29) ಭಾರತದ ಕಾರು ಮಾರುಕಟ್ಟೆಗೆ ಹೊಸ ಕಾರು ಎಂಟ್ರಿಯಾಗಿದೆ. ಹ್ಯುಂಡೈ ಇಂಡಿಯಾ ಇದೀಗ ಬೆಯಾನ್ ಎಸ್ಯುವಿ ಕಾರು ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ವಿನ್ಯಾಸ, ಅತ್ಯಧಿಕ ಸ್ಥಳವಕಾಶ, ಆರಾಮದಾಯಕ ಪ್ರಯಾಣ, ಅತ್ಯುತ್ತಮ ಪರ್ಫಾಮೆನ್ಸ್, ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳ ಬೆಯಾನ್ ಕಾರು ಬಿಡುಗಡೆಯಾಗಿದೆ. 7 ವೇರಿಯೆಂಟ್ಗಳಿಂದ ಕೂಡಿದ ಬೆಯಾನ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ ಪ್ರಮುಖವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ.
ಹ್ಯುಂಡೈ ಬೆಯಾನ್ ಕಾರಿನ ಬೆಲೆ
ಹ್ಯುಂಡೈ ಬೆಯಾನ್ ದೊಡ್ಡ ಕಾರು. ಹ್ಯುಂಡೈ ಕ್ರೆಟಾ, ಟಾಟಾ ಸಿಯೆರಾ, ಮಾರುತಿ ಸುಜುಕಿ ವಿಕ್ಟೋರಿಸ್, ಗ್ರ್ಯಾಂಡ್ ವಿಟಾರ ಸೇರಿದಂತೆ ಪ್ರಮುಖ ಎಸ್ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಬೆಯಾನ್ ಕಾರು ಬಿಡುಗಡೆಯಾಗಿದೆ. ಹೆಚ್ಚಿನ ಸ್ಥಳವಕಾಶ ಈ ಕಾರಿನಲ್ಲಿದೆ. ಇದರ ಬೆಲೆ 9.99 ಲಕ್ಷ ರೂಪಾಯಿಯಿಂದ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಹ್ಯುಂಡೈ ವೆನ್ಯೂ ಹಾಗೂ ಕ್ರೆಟಾ ನಡುವಿನ ಬೆಲೆಯಲ್ಲಿ ಬೆಯಾನ್ ಕಾರು ಬಿಡುಗಡೆಯಾಗಿದೆ. ಟಾಪ್ ಮಾಡೆಲ್ ಬೆಲೆ 17.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ರಾಜ್ಯದಿಂದ ರಾಜ್ಯ, ನಗರದಿಂದ ನಗರಕ್ಕೆ ಕಾರಿನ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ.ಹತ್ತಿರದ ಡೀಲರ್ ಸಂಪರ್ಕಿಸಿ ಬೆಲೆ ಖಚಿತಪಡಿಸಿಕೊಳ್ಳಿ.
ಭಾರಿ ಬೇಡಿಕೆ ಪಡೆದ ಹ್ಯುಂಡೈ ಬೆಯಾನ್
ಹುಂಡೈ ಬೆಯಾನ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕಾರು ಬಿಡುಗಡೆಯಾಗಿದ್ದು, ಬುಕಿಂಗ್ ಕೂಡ ಭರ್ಜರಿಯಾಗಿದೆ. ಕಾರು ಆಸಕ್ತರು ಬೆಯಾನ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಹಲವೆಡೆಗಳಿಂದ ಹ್ಯುಂಡೈ ಬೆಯಾನ್ ಕುರಿತು ಕರೆಗಳು ಬರುತ್ತಿದ್ದು, ಬುಕಿಂಗ್ ಸಂಖ್ಯೆಯಲ್ಲೂ ದಾಖಲೆ ನಿರ್ಮಾಣವಾಗುತ್ತಿದೆ. ಬೆಯಾನ್ ಬಿಡುಗಡೆಯಿಂದ ಇದೀಗ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೋಯೋಟಾ ಕಾರುಗಳಿಗೆ ನಡುಕು ಶುರುವಾಗಿದೆ.
ಅಡಾಸ್ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ
ಲೆವೆಲ್ 2 ಪ್ರೋ ಅಡಾಸ್ ತಂತ್ರಜ್ಞಾನ ಈ ಕಾರಿನಲ್ಲಿ ಬಳಸಲಾಗಿದೆ. ಸರೌಂಡ್ ವೀವ್ಯೂ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ವೀವ್ಯೂ ಮಾನಿಟರ್, ರೇರ್ ಡಿಸ್ಕ್ ಬ್ರೇಕ್, ಹೆದ್ದಾರಿ ಡ್ರೈವಿಂಗ್ ಅಸಿಸ್ಟ್, ನ್ಯಾವಿಗೇಶನ್ ಆಧಾರಿತ ಕ್ರೂಸ್ ಕಂಟ್ರೋಲ್ ಹೊಂದಿದೆ. ಇನ್ನು 5 ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿದೆ ಎಂದು ಹ್ಯುಂಡೈ ಹೇಳಿದೆ.
ಬೆಯಾನ್ ಕಾರಿನ ಎಂಜಿನ್
ಹ್ಯುಂಡೈ ಬೆಯಾನ್ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 115ಪಿಎಸ್ ಪವರ್ ಹಾಗೂ 143.8 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಐವಿಟಿ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಹೊಂದಿದೆ. ಇಕೋ, ನಾರ್ಮಲ್, ಸ್ಪೋರ್ಟ್ ಡ್ರೈವಿಂಗ್ ಮೊಡ್ , ಪ್ಯಾಡಲ್ ಶಿಫ್ಟ್ ಹೊಂದಿದೆ.





