ಕೊಲೆ ಬೆದರಿಕೆ ಬೆನ್ನಲ್ಲೇ ಬುಲೆಟ್ ಪ್ರೂಫ್ ನಿಸಾನ್ ಪ್ಯಾಟ್ರೋಲ್ SUV ಖರೀದಿಸಿದ ಸಲ್ಮಾನ್ ಖಾನ್!
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಈಗಾಗಲೇ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೊಲೆ ಬೆದರಿಕೆ ಹೆಚ್ಚಾಗುತ್ತಿರುವ ಕಾರಣ ಸಲ್ಮಾನ್ ಖಾನ್ ಇದೀಗ ನಿಸಾನ್ ಪ್ಯಾಟ್ರೋಲ್ SUV ಕಾರು ಆಮದು ಮಾಡಿಕೊಂಡಿದ್ದಾರೆ. ಇದು ಬುಲೆಟ್‌ಫ್ರೂಫ್ ಕಾರು. ಇಷ್ಟೇ ಅಲ್ಲ ಹಲವು ಸುರಕ್ಷತಾ ವಿಶೇಷತೆ ಈ ಕಾರಿನಲ್ಲಿದೆ.
ಮುಂಬೈ(ಏ.07): ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಇದೀಗ ಪ್ರತಿ ದಿನ ಜೀವಬೆದರಿಕೆಯಿಂದಲೇ ದಿನದೂಡುವಂತಾಗಿದೆ. ಒಂದೆಡೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರೆ, ಮತ್ತೊಂದೆಡೆ ಮುಂಬೈ ಪೊಲೀಸರು, ಸಲ್ಮಾನ್ ಕುಟುಂಬಸ್ಥರು ಬೆದರಿಕೆ ಪತ್ರ, ಫೋನ್, ಇಮೇಲ್ ಸ್ವೀಕರಿಸಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್‌ಗೆ ಸೂಕ್ತ ಭದ್ರತೆಯನ್ನೂ ಮುಂಬೈ ಪೊಲೀಸರು ಒದಗಿಸಿದ್ದಾರೆ. ಇದರ ನಡುವೆ ಸಲ್ಮಾನ್ ಖಾನ್ ಪ್ರಯಾಣಕ್ಕಾಗಿ ಗರಿಷ್ಠ ಸುರಕ್ಷತೆಯ ಬುಲೆಟ್ ಪ್ರೂಫ್ ನಿಸಾನ್ ಪ್ಯಾಟ್ರೋಲ್ ಕಾರು ಆಮದು ಮಾಡಿಕೊಂಡಿದ್ದಾರೆ. ಕಾರಣ ನಿಸಾನ್ ಪ್ಯಾಟ್ರೋಲ್ ಕಾರು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ ವಿದೇಶಗಳಿಂದ ಈ ಕಾರು ಆಮದು ಮಾಡಿಕೊಳ್ಳಬೇಕು.
ಇದು ಸಂಪೂರ್ಣ ಬುಲೆಟ್ ಪ್ರೂಫ್ ಕಾರಾಗಿದೆ. ಕಾರಿನ ಯಾವುದೇ ಭಾಗದಿಂದ ಗುಂಡು ಹಾರಿಸಿದರೂ ಒಳಗಿರುವ ಪ್ರಯಾಣಿಕರಿಗೆ ಯಾವುದೇ ಅಪಾಯವಿಲ್ಲ. ಕಾರಿನ ಚಕ್ರಗಳು ಯಾವುದೇ ಅಪಾಯವನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಗುಂಡು, ಬೆಂಕಿಗೂ ಕಾರಿನ ಚಕ್ರ ಜಗ್ಗುವುದಿಲ್ಲ. ಕಾರಿನ ವಿಂಡೋಗೆ 78 mm ಗಾಜು ಬಳಸಲಾಗುತ್ತದೆ. ಇದರಿಂದ ಕಾರಿನ ಗಾಜಿಗೆ ಗುಂಡು ಹೊಡೆದರೂ ಯಾವುದೇ ಸಮಸ್ಯೆ ಇಲ್ಲ.ಸರ್ಟಿಫೈಟ್ ಬುಲೆಟ್‌ಪ್ರೂಫ್ ಗ್ಲಾಸ್ ಇದಾಗಿದೆ.
ಅಂಬಾನಿ ಬಳಿ ಇದೆ ಅತ್ಯಂತ ದುಬಾರಿ ಮರ್ಸಿಡೀಸ್ S600 ಬುಲೆಟ್ ಪ್ರೂಫ್ ಕಾರು!
ಇನ್ನು ಕಾರಿನ ಫ್ಲೋರ್‌ಗಳು ಬಾಂಬ್ ಸ್ಪೋಟವನ್ನೂ ತಡೆಯುವ ಶಕ್ತಿ ಹೊಂದಿದೆ. ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಸೇರಿದಂತೆ ಕಡಿಮೆ ತೀವ್ರತೆ ಬಾಂಬ್ ಎಸೆದರೂ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಕಾರಿನೊಳಗೆ ಶತ್ರುಗಳಿಂದ ರಕ್ಷಣೆ ಪಡೆಯಲು ಅಥವಾ ಅಪಾಯದ ಪರಿಸ್ಥಿತಿಯಿಂದ ಪಾರಾಗಲು ಶಸ್ತಾಸ್ತ್ರ ಪ್ರತಿರೋಧ ನೀಡಬಲ್ಲ ಫೀಚರ್ಸ್ ಕೂಡ ಈ ಕಾರಿನಲ್ಲಿದೆ. ಆದರೆ ಈ ಅವಕಾಶ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಪ್ರಮುಖ ಸರ್ಕಾರಿ ಸೇವಕರ ಕಾರುಗಳಿಗೆ ಅಳವಡಿಸಲು ಮಾತ್ರ ಅವಕಾಶವಿದೆ.
ನಿಸಾನ್ ಪ್ಯಾಟ್ರೋಲ್ ಕಾರು SUV ಕಾರಾಗಿದೆ. 5.6 ಲೀಟರ್ v8 ಪೆಟ್ರೋಲ್ ಎಂಜಿನ್ ಹೊಂದಿದೆ. 405hp ಪವರ್ ಹಾಗೂ 560Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ನೂತನ ನಿಸಾನ್ ಪ್ಯಾಟ್ರೋಲ್ ಕಾರಿನ ಬೆಲೆ AED 206,000. ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದರೆ ಸರಿಸುಮಾರು 46 ಲಕ್ಷ ರೂಪಾಯಿ. ಆದರೆ ಈ ಕಾರು ಭಾರತಕ್ಕೆ ಆಮದು ಮಾಡಿಕೊಳ್ಳಬೇಕು. ಆಮದು ಸುಂಕ ದುಬಾರಿಯಾಗಲಿದೆ. ಬಳಿಕ ಆಮದು ಕಾರಿನ ರಿಜಿಸ್ಟ್ರೇಶನ್ ಫೀ, ವಿಮೆ ಸೇರಿದರೆ ಸರಿಸುಮಾರು 1 ಕೋಟಿ ರೂಪಾಯಿ ಆಗಲಿದೆ.
ಭಾರತೀಯ ಸೇನೆಗೆ ಬೇಕಿದೆ ಆಡ್‌ಆರ್ಮರ್ ಬುಲೆಟ್‌ಫ್ರೂಫ್ ವಾಹನ!
ಸಲ್ಮಾನ್ ಖಾನ್ ನಿಸಾನ್ ಪ್ಯಾಟ್ರೋಲ್ ಕಾರಿಗೂ ಮೊದಲು ಬುಲೆಟ್‌ಫ್ರೂಪ್ ಕಾರು ಹೊಂದಿದ್ದಾರೆ. ಸಲ್ಮಾನ್ ಬಳಿ ಟೋಯೋಟಾ ಲ್ಯಾಂಡ್ ಕ್ರೂಸರ್ ಕಾರು ಹೊಂದಿದ್ದಾರೆ. ಲ್ಯಾಂಡ್ ಕ್ರೂಸರ್ ಬುಲೆಟ್‌ಫ್ರೂಫ್ ಎಡಿಶನ್ ಕಾರಿನಲ್ಲೇ ಸದ್ಯ ಸಲ್ಮಾನ್ ಪ್ರಯಾಣ ಮಾಡುತ್ತಿದ್ದಾರೆ.ಇತ್ತೀಚೆಗೆ ಗೋಲ್ಡಿ ಬ್ರಾರ್ ಗ್ಯಾಂಗ್‌ಸ್ಟರ್ ಇಮೇಲ್ ಮೂಲಕ ಬೆದರಿಕೆ ಹಾಕಿದ್ದರು. ಹೀಗಾಗಿ ಕೊಲೆ ಬೆದರಿಕೆ ಹೆಚ್ಚಾಗಿರುವುದರಿಂದ ಸಲ್ಮಾನ್ ಟೋಯೋಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ಸಲ್ಮಾನ್ ಬುಲೆಟ್‌ಪ್ರೂಫ್ ರಕ್ಷಣೆ ನೀಡಬಲ್ಲ ಎರಡನೇ ಕಾರು ನಿಸಾನ್ ಪ್ಯಾಟ್ರೋಲ್ ಕಾರು ಸೇರಿಕೊಂಡಿದೆ.