ನ್ಯೂಯಾರ್ಕ್(ಫೆ.17): ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸೋ ಭಾರತೀಯ ಯೋಧರಿಗೆ ಹೆಚ್ಚಿನ ಭದ್ರತೆಯ ವಾಹನಗಳು ಅತ್ಯವಶ್ಯಕ. ಅದರಲ್ಲೂ ಕಣಿವೆ ರಾಜ್ಯದೊಳಗೆ ಶಾಂತಿ ಸ್ಥಾಪಿಸಲು ನಿಯೋಜಿತವಾಗಿರುವ ಯೋಧರಿಗೆ ಹೆಚ್ಚಿನ ಭದ್ರತೆ ಅವಶ್ಯಕ. ಒಂದೆಡೆ ಭಯೋತ್ವಾದಕರ ದಾಳಿ, ಮತ್ತೊಂದೆ ಸೇನೆ ಮೇಲೆ ಕಲ್ಲು ತೂರಾಟ ಸೇರಿದಂತೆ ಹಲವು ಘಟನೆಗಳಿಂದ ರಕ್ಷಣೆ ಪಡೆಯಲು ಹಾಗೂ ಪ್ರತಿದಾಳಿ ನಡೆಸಲು ಆಧುನಿಕ ಹಾಗೂ ಗರಿಷ್ಠ ಸುರಕ್ಷತೆ ವಾಹನ ಅಗತ್ಯ.

ಇದನ್ನೂ ಓದಿ: ಭಾರತೀಯ ಸೇನೆಗೆ ಬಲಿಷ್ಠ ಟಾಟಾ ಮರ್ಲಿನ್ LSV ವಾಹನ!

ಆಡ್‌ಆರ್ಮರ್ ಎಸ್ಕಲೇಡ್ SUV ಕಾರು ಗರಿಷ್ಠ ಭದ್ರತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಬುಲೆಟ್ ಪ್ರೂಫ್, ಬಾಂಬ್ ಸ್ಫೋಟಗಳಿಂದ ಭದ್ರತೆ ಒದಗಿಸಬಲ್ಲ ಆಡ್‌ಆರ್ಮರ್ ಎಸ್ಕಲೇಡ್ SUV ಕಾರು ಭಾರತೀಯ ಸೇನೆಗೆ ಹೆಚ್ಚು ಸೂಕ್ತ. 

ಇದನ್ನೂ ಓದಿ: ದುಬೈ ಅಲ್ಲ ಇದು ಭಾರತ - ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!

AK-47 ಗನ್ ಮೂಲಕ ಶೂಟ್ ಮಾಡಿದರೂ ಈ ಕಾರಿನೊಳಗಿರುವವರಿಗೆ ಯಾವುದೇ ಅಪಾಯವಿಲ್ಲ. ಈ ಕಾರಿನಲ್ಲಿ ಪ್ರತಿ ದಾಳಿ ಮಾಡುವ ಸೌಲಭ್ಯವಿದೆ. ಹಿಡನ್ ಗನ್ ಪೋರ್ಟ್, ಕಾರನ್ನ ಟಾರ್ಗೆಟ್ ಮಾಡಿದರೆ ಅಲರಾಂ ಶಬ್ಧ, ಕಾರಿನ ಡೋರ್ ಮುಟ್ಟುವ ಅಥವಾ ತೆರೆಯುವ ಪ್ರಯತ್ನ ಮಾಡಿದರೆ ಎಲೆಕ್ಟ್ರಿಕ್ ಶಾಕ್ ಸೌಲಭ್ಯ, ಪೆಪ್ಪರ್ ಸ್ಪ್ರೆ, ಸ್ಯಾಟಲೈಟ್ ಕಮ್ಯುನಿಕೇಶನ್, ನೈಟ್ ವಿಶನ್, 360 ಡಿಗ್ರಿ ಕ್ಯಾಮರ, ಸ್ಮೋಕ್ ಸ್ಕ್ರೀನ್ ಸಿಸ್ಟಮ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳು ಹೊಂದಿದೆ.

360 ಡಿಗ್ರಿ ರೈಫಲ್ಸ್ ಕೂಡ ಈ ಕಾರಿನಲ್ಲಿದೆ. ಇನ್ನು ಬಾಂಬ್ ಸ್ಫೋಟದಲ್ಲೂ ಯಾವುದೇ ಸಮಸ್ಯೆ ಆಗದ ರೀತಿ ಈ ಕಾರನ್ನ ನಿರ್ಮಾಣ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಹಾಗೂ ಪೊಲೀಸರಿಗೆ ಗಸ್ತು ತಿರುಗುಲು ಇಂತಹ ವಾಹನಗಳು ಹೆಚ್ಚು ಉಪಕಾರಿ.