Asianet Suvarna News Asianet Suvarna News

ಮೊದಲ ಎಲೆಕ್ಟ್ರಿಕ್ ಕಾರು ಖರೀದಿಸಿದ ಶಾರುಖ್ ಖಾನ್, ಇದು ಹ್ಯುಂಡೈನ ದುಬಾರಿ ಕಾರು!

ಬಾಲಿವುಡ್ ನಟ ಶಾರೂಖ್ ಖಾನ್ ಬಳಿ ರೋಲ್ಸ್ ರಾಯ್ಸ್ ಕಲ್ಲಿನಾನ್, ಬುಗಾಟಿ ಸೇರಿದಂತೆ ಅತ್ಯಂತ ದುಬಾರಿ ಮೌಲ್ಯದ ಕಾರುಗಳಿವೆ. ಆದರೆ ಇದೇ ಮೊದಲ ಬಾರಿಗೆ ಶಾರುಖ್ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಇದು ಹ್ಯುಂಡೈ ಬ್ರ್ಯಾಂಡ್‌ನ ಅತ್ಯಂತ ದುಬಾರಿ ಕಾರು. ಈ ಕಾರಿನ ವಿಶೇಷತೆ, ಮೈಲೇಜ್ ಹಾಗೂ ಶಾರುಖ್ ಇದೇ ಕಾರನ್ನು ಖರೀದಿಸಲು ಕಾರಣವೇನು?

Bollywood shah rukh khan gets his first electric car received Hyundai Ioniq 5 EV ckm
Author
First Published Dec 4, 2023, 6:27 PM IST

ಮುಂಬೈ(ಡಿ.4) ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅತ್ಯಂತ ಶ್ರೀಮಂತ ಸಿನಿ ತಾರೆಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಶಾರುಖ್ ಖಾನ್ ಬಳಿ ಸರಿಸುಮಾರು 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಶಾರುಖ್ ಖಾನ್ ಮನೆಯಲ್ಲಿ ಕಾರು ಪಾರ್ಕಿಂಗ್‌ನಲ್ಲಿ ರೇಂಜ್ ರೋವರ್, ಬುಗಾಟಿ ಸೇರಿದಂತೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾರುಗಳಿವೆ. ಇದೀಗ ಶಾರುಖ್ ಕಾನ್ ಕಾರು ಸಂಗ್ರಹಕ್ಕೆ ಮತ್ತೊಂದು ಕಾರು ಸೇರಿಕೊಂಡಿದೆ. ಹೌದು, ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಹ್ಯುಂಡೈನ Ioniq 5 ಎಲೆಕ್ಟ್ರಿಕ್ ಕಾರನ್ನು ಶಾರುಖ್ ಖರೀದಿಸಿದ್ದಾರೆ.

ಭರ್ಜರಿ ಯಶಸ್ಸಿನಲ್ಲಿರುವ ಶಾರುಖ್ ಖಾನ್ ಇದೀಗ ಡಂಕಿ ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ಡಂಕಿ ಸಿನಿಮಾ ಬಿಡುಗಡೆಗೂ ಮೊದಲೇ ಶಾರುಖ್ ಖಾನ್ ಹೊಚ್ಚ ಹೊಸ Ioniq 5 ಎಲೆಕ್ಟ್ರಿಕ್ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ಶಾರುಖ್ ಖಾನ್ ಡೆಲಿವರಿ ಪಡೆದ ಕಾರು ಇವಿ ಕಾರು 1,100ನೇ Ioniq 5 ಇವಿ ಕಾರಾಗಿದೆ. 

ಅತೀ ಹೆಚ್ಚು ಮೈಲೇಜ್ ಕೊಡುವ ಅತ್ಯುತ್ತಮ ಪೆಟ್ರೋಲ್ ಕಾರು, ಇಲ್ಲಿದೆ ಫುಲ್ ಲಿಸ್ಟ್!

ಹ್ಯುಂಡೈ ಐಯೋನಿಕ್ 5 ಇವಿ ಕಾರು 72.6 kWh ಬ್ಯಾಟರಿ ಪ್ಯಾಕ್ ಹೊಂದಿದೆ . 60 PS ಪವರ್ ಹಾಗೂ 350 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಈ ಕಾರು 631 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಡ್ಯುಯೆಲ್ ಕಾಕ್‌ಪಿಟ್ 12 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 12 ಇಂಚಿನ ಡಿಜಿಟಲ್ ಗೇಜ್ ಫೀಚರ್ ಹೊಂದಿದೆ. AR HUD ಫೀಚರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಫೀಚರ್ ಈ ಕಾರಿನಲ್ಲಿದೆ.

 

 

ಇದರ ಬೆಲೆ 45.95 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಶಾರುಖ್ ಖಾನ್ ಬಳಿ ಇರುವ ಕಾರಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆಯ ಕಾರಾಗಿದೆ. ಆದರೆ ಹ್ಯುಂಡೈ ಬ್ರ್ಯಾಂಡ್‌ನ ದುಬಾರಿ ಕಾರಿದು. ಭಾರತದಲ್ಲಿ ಕೋಟಿ ಕೋಟಿ ಮೌಲ್ಯದ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಮರ್ಸಿಡಿಸ್ ಬೆಂಜ್, ಆಡಿ ಸೇರಿದಂತೆ ಹಲವು ಬ್ರ್ಯಾಂಡ್ ಕಾರುಗಳು ಲಭ್ಯವಿದೆ. ಆದರೆ ಶಾರುಖ್ ಖಾನ್ ಹ್ಯುಂಡೈ ಬ್ರ್ಯಾಂಡ್ ಕಾರು ಖರೀದಿಸಲು ಒಂದು ಕಾರಣವಿದೆ. ಕಳೆದ 25 ವರ್ಷದಿಂದ ಶಾರುಖ್ ಖಾನ್ ಹ್ಯುಂಡೈ ಆಟೋಮೊಬೈಲ್‌ ಕಂಪನಿಯ ರಾಯಭಾರಿಯಾಗಿದ್ದಾರೆ. ಹೀಗಾಗಿ ಹ್ಯುಂಡೈನ ದುಬಾರಿ ಕಾರುಗಳು ಶಾರುಖ್ ಬಳಿ ಇದೆ.

ಕ್ಯಾಲಿಫೋರ್ನಿಯಾದಲ್ಲಿ ಟಗರು ಹವಾ, ಕಾರಿನ ನಂಬರ್ ಪ್ಲೇಟ್‌ಗೆ ಮನಸೋತ ಧನಂಜಯ್!
 

Follow Us:
Download App:
  • android
  • ios