ಅತೀ ಹೆಚ್ಚು ಮೈಲೇಜ್ ಕೊಡುವ ಅತ್ಯುತ್ತಮ ಪೆಟ್ರೋಲ್ ಕಾರು, ಇಲ್ಲಿದೆ ಫುಲ್ ಲಿಸ್ಟ್!
ಕಾರು ಖರೀದಿಸುವಾಗ ಮೈಲೇಜ್ ವಿಚಾರದಲ್ಲೂ ಗ್ರಾಹಕರು ಮುತುವರ್ಜಿ ವಹಿಸುತ್ತಾರೆ. ಸುರಕ್ಷತೆ ಜೊತೆಗೆ ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡಬಲ್ಲ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಾರೆ. ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ಕೊಡುವ ಪೆಟ್ರೋಲ್ ಕಾರು ಯಾವುದು?
ಕಾರುಗಳ ಸುರಕ್ಷತೆ ಜೊತೆಗೆ ಮೈಲೇಜ್ ಅತೀ ಮುಖ್ಯ. ಈಗಿನ ದುಬಾರಿ ಪೆಟ್ರೋಲ್ ಬೆಲೆಗೆ ನಿರ್ವಹಣೆ ಕೂಡ ಕಷ್ಟವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ ಕೆಲ ಕಾರಗಳು ಹೆಚ್ಚಿನ ಮೈಲೇಜ್ ನೀಡುತ್ತಿದೆ.
ಭಾರತದಲ್ಲಿ ಸದ್ಯ ಗರಿಷ್ಠ ಮೈಲೇಜ್ ನೀಡುವ ಪೆಟ್ರೋಲ್ ಕಾರು ಅನ್ನೋ ಹೆಗ್ಗಳಿಕೆಗೆ ಮಾರುತಿ ಗ್ರ್ಯಾಂಡ್ ವಿಟಾರ ಹಾಗೂ ಟೋಯೋಟಾ ಹೈರೈಡರ್ ಪಾತ್ರವಾಗಿದೆ. ಈ ಕಾರು 27.93 ಕಿ.ಮಿ ಮೈಲೇಜ್ ನೀಡಲಿದೆ. ಇದು ಹೈಬ್ರಿಡ್ ಕಾರಾಗಿದೆ.
ಹೋಂಡಾ ಸಿಟಿ ಇ ಕಾರಿನಲ್ಲಿ HEV ತಂತ್ರಜ್ಞಾನ ಬಳಸಲಾಗಿದೆ. ಜೊತೆಗೆ ಇ CVT ಟ್ರಾನ್ಸ್‌ಮಿಶನ್ ಹೊಂದಿದೆ. ಈ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 27.13kpl ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ಅತೀ ಕಡಿಮೆ ನಿರ್ವಹಣೆ ವೆಚ್ಚ ಹೊಂದಿರುವ ಕಾರು. ಇದರಲ್ಲಿ ಸೆಲೆರಿಯೋ ಕಾರು ಮೈಲೇಜ್ ಕೂಡ ಉತ್ತಮವಾಗಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಸೆಲೆರಿಯೋ 25.96kpl ಮೈಲೇಜ್ ನೀಡಲಿದೆ.
ಹೊಸ ಮಾರುತಿ ಸುಜುಕಿ ವ್ಯಾಗನರ್ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.ಮ್ಯಾನ್ಯುಯೆಲ್ ಕಾರು 24.35kpl ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಕಾರು 25.19kpl ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ಅಲ್ಟೋ ಕೆ10 ಪೆಟ್ರೋಲ್ ಎಂಜಿನ್ ಮಾನ್ಯುಯೆಲ್ ಕಾರು 24.39kpl ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಕಾರು 24.9kpl ಮೈಲೇಜ್ ನೀಡಲಿದೆ.
ಹೊಸ ಮಾರುತಿ ಸುಜುಕಿ ಡಿಸೈರ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ 4 ಸಿಲಿಂಡರ್ ಹೊಂದಿದೆ. ಈ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 23.69kpl ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು 23.26kpl ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 24.12kpl ಮೈಲೇಜ್ ನೀಡಲಿದೆ.