5 ಲಕ್ಷ ರೂ ನೀಡಿ ಬುಕ್ ಮಾಡಿ Audi ಇ ಟ್ರಾನ್ ಎಲೆಕ್ಟ್ರಿಕ್ ಕಾರು !

  • ಭಾರತದಲ್ಲಿ ಆಡಿ ಎಲೆಕ್ಟ್ರಿಕ್ ಕಾರು ಬಿಡುಗಡೆ
  • ಆಡಿ-ಇ ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಸ್‌ಬ್ಯಾಕ್  ವೇರಿಯೆಂಟ್ ಲಭ್ಯ
  • 5 ಲಕ್ಷ ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಿಕೊಳ್ಳಬಹುದು
Audi India opens bookings for its all electric SUV Audi e tron ckm

ಬೆಂಗಳೂರು(ಜೂ.29): ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಆಡಿ ಇಂದು ತನ್ನ ಸಂಪೂರ್ಣ ಎಲೆಕ್ಟ್ರಿಕ್  SUV ಆಡಿ-ಇ ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಸ್‌ಬ್ಯಾಕ್  ಭಾರತದಲ್ಲಿ ಬಿಡುಗಡೆಯಾಗಿದೆ.  ದೇಶಾದ್ಯಂತ ಬುಕಿಂಗ್‌ ಆರಂಭಗೊಂಡಿದೆ. ನೂತನ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿದೆ. 

ಕೊರೋನಾ ಸಂಕಷ್ಟದಲ್ಲಿ ಸರ್ವೀಸ್, ಸ್ಟಾಂಡರ್ಡ್ ವಾರೆಂಟಿ ವಿಸ್ತರಿಸಿದ ಆಡಿ ಇಂಡಿಯಾ!...

ಆಡಿ ಇ ಟ್ರಾನ್ ವಿನ್ಯಾಸ, ಎಂಜಿನ್ ದಕ್ಷತೆ, ಪರ್ಫಾಮೆನ್ಸ್ ವಿಚಾರದಲ್ಲೂ ರಾಜಿಯಾಗಿಲ್ಲ. ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಆಡಿ ಇ ಟ್ರಾನ್ ಭಾರತದಲ್ಲಿ ಭಾರಿ ಸಂಚಲನ ಮೂಡಿಸಿದೆ. 5 ಲಕ್ಷ ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಬಹುದು.

ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ ಕ್ರೀಡಾ ಎಸ್‌ಯುವಿಯಾಗಿದ್ದು ಸದೃಢ  ರೂಫ್‌ಲೈನ್ ಹೊಂದಿದೆ.  ಭಾರತದಲ್ಲಿ ಬುಕಿಂಗ್‌ಗಳನ್ನು ಪ್ರಾರಂಭಿಸಲು ನಾವು ಥ್ರಿಲ್ ಆಗಿದ್ದೇವೆ. ಇ-ಟ್ರೊನ್ ಬರೀ ಒಂದು ಉತ್ಪನ್ನವಲ್ಲ ಬದಲಿಗೆ ಅದೇ ಒಂದು ಬ್ರಾಂಡ್ ಆಗಿದೆ ಮತ್ತು ನಾವು ಈ ಬ್ರಾಂಡ್ ಅಡಿಯಲ್ಲಿ ಹಲವಾರು ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಆಡಿ ಇಂಡಿಯಾದ ಮುಖ್ಯಸ್ಥ ಬಲ್‌ಬಿರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಭಾರತದಲ್ಲಿ ಹೊಸ ತಂತ್ರಜ್ಞಾನದ ಆಡಿ A4 ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಪ್ಲಗ್-ಇನ್ ಮತ್ತು ಫಾಸ್ಟ್-ಚಾರ್ಜಿಂಗ್ ಅನುಕೂಲ, ಚಾಲನೆಯಲ್ಲಿ ಸುಧಾರಿತ ಶಕ್ತಿಯ ಚೇತರಿಕೆ, ರೇಂಜ್ ಮೋಡ್,  ಮುಂಬದಿಯಲ್ಲಿ ಹಾಗೂ ಹಿಂಬದಿಯಲ್ಲಿ ಎರಡು ಅಸಾಧಾರಣ ಡೈನಮಿಕ್ ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಸನ್ನದ್ಧವಾದ ಆಡಿ ಇ-ಟ್ರೊನ್ ಮತ್ತು ಆಡಿ ಇ-ಟ್ರೊನ್ ಸ್ಪೋರ್ಟ್ಬ್ಯಾಕ್ ಸಂಪೂರ್ಣ ಹೊಸ ಚಾಲನೆಯ ಅನುಭವ ನೀಡುತ್ತದೆ. 

Latest Videos
Follow Us:
Download App:
  • android
  • ios