ತಂದೆಯ ದಾಖಲೆ ಮುರಿದರೆ ಬ್ರ್ಯಾಂಡ್ ನ್ಯೂ ಫೆರಾರಿ ಕಾರು ಉಡುಗೊರೆಯಾಗಿ ಸಿಗಲಿದೆ ಎಂಬ ಸವಾಲು! ಈ ಸವಾಲು ಹಾಕಿದ್ದು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್. ಈ ಸವಾಲನ್ನು ಸ್ವೀಕರಿಸಿದ ಅವರ ಪುತ್ರ ಆರ್ಯವೀರ್ ಸೆಹ್ವಾಗ್‌.

ತಂದೆಯ ದಾಖಲೆ ಮುರಿದರೆ ಬ್ರ್ಯಾಂಡ್ ನ್ಯೂ ಫೆರಾರಿ ಕಾರು ಉಡುಗೊರೆಯಾಗಿ ಸಿಗಲಿದೆ ಎಂಬ ಸವಾಲು! ಈ ಸವಾಲು ಹಾಕಿದ್ದು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್. ಈ ಸವಾಲನ್ನು ಸ್ವೀಕರಿಸಿದ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಕ್ರಿಕೆಟ್ ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಒಮ್ಮೆ ತಂದೆಯ 319 ರನ್‌ಗಳ ದಾಖಲೆಯ ಸನಿಹಕ್ಕೆ ಬಂದು ನಿಂತಿದ್ದ ಆರ್ಯವೀರ್, ಇದೀಗ ಅಂಡರ್-19 ಏಷ್ಯಾಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

319 ರನ್‌ಗಳ ದಾಖಲೆ ಮುರಿದರೆ ಫೆರಾರಿ ಗಿಫ್ಟ್

ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 319 ರನ್‌ಗಳ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಇದೇ ದಾಖಲೆಯನ್ನು ತಮ್ಮ ಮಕ್ಕಳು ಮುರಿದರೆ ಫೆರಾರಿ ಕಾರು ಉಡುಗೊರೆಯಾಗಿ ನೀಡುವುದಾಗಿ ಅವರು ಹಿಂದೆ ತಮಾಷೆಯಾಗಿ ಸವಾಲು ಹಾಕಿದ್ದರು. ಶಾಲಾ ಕ್ರಿಕೆಟ್‌ನಲ್ಲಾದರೂ 319 ರನ್‌ಗಳ ಗಡಿ ದಾಟಿದರೆ ಉಡುಗೊರೆ ಸಿಗಲಿದೆ ಎಂಬುದು ಅವರ ಮಾತಾಗಿತ್ತು.

2024ರಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಪರ ಆಡಿದ್ದ ಆರ್ಯವೀರ್, ಮೇಘಾಲಯ ವಿರುದ್ಧ ಬರೋಬ್ಬರಿ 297 ರನ್ ಸಿಡಿಸಿದ್ದರು. 309 ಎಸೆತಗಳನ್ನು ಎದುರಿಸಿ 51 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ತಂದೆಯ ದಾಖಲೆಯನ್ನು ಮುರಿಯಲು ಇನ್ನೂ 23 ರನ್‌ಗಳ ಅಗತ್ಯವಿದ್ದಾಗ ಓಟ್‌ ಆfನು. ಈ ಬಗ್ಗೆ ಸೆಹ್ವಾಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಗನನ್ನು ಅಭಿನಂದಿಸುತ್ತಾ, 'ಫೆರಾರಿಯನ್ನು 23 ರನ್‌ಗಳಿಂದ ಮಿಸ್ ಮಾಡಿಕೊಂಡೆ' ಎಂದು ತಮಾಷೆ ಮಾಡಿದ್ದರು

ಫೆರಾರಿ ಮಿಸ್ ಆದರೂ ಅಪ್ಪನ ಹೆಸರನ್ನು ಉಳಿಸಿಕೊಂಡ ಮಗ

ಫೆರಾರಿ ಗೆಲ್ಲುವ ಅವಕಾಶ ಕೈತಪ್ಪಿದರೂ ಆರ್ಯವೀರ್ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. 2026ರ ಅಂಡರ್-19 ಏಷ್ಯಾಕಪ್‌ನಲ್ಲಿ ಅವರು ತೋರಿದ ಪ್ರದರ್ಶನ ಇದಕ್ಕೆ ಸಾಕ್ಷಿ. ನೇಪಾಳ ವಿರುದ್ಧ 70 ರನ್ ಗಳಿಸಿ ಟೂರ್ನಿ ಆರಂಭಿಸಿದ ಅವರು, ಯುಎಇ ವಿರುದ್ಧ 160 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್‌ನಲ್ಲಿ 51 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲೂ 58 ರನ್ ಗಳಿಸಿ ತಮ್ಮ ಜವಾಬ್ದಾರಿ ನಿಭಾಯಿಸಿದರು. ಐದು ಇನ್ನಿಂಗ್ಸ್‌ಗಳಲ್ಲಿ 361 ರನ್ ಗಳಿಸಿದ ಅವರು ಟೂರ್ನಿಯ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡು ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಒಂಬತ್ತು ವರ್ಷದ ವಯಸ್ಸಿನಲ್ಲೇ ವಿರಾಟ್ ಕೊಹ್ಲಿಗೆ ಪ್ರಶ್ನೆ ಕೇಳಿದ್ದ ಬಾಲಕ

ಆರ್ಯವೀರ್ ಅವರ ಬಾಲ್ಯದ ವಿಡಿಯೋವೊಂದು ಈಗ ಮತ್ತೆ ಗಮನ ಸೆಳೆಯುತ್ತಿದೆ. 2017ರಲ್ಲಿ ಕೇವಲ ಒಂಬತ್ತು ವರ್ಷದವರಾಗಿದ್ದಾಗ ಅವರು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಸಂದರ್ಶಿಸಿದ್ದರು. ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ಪುಟ್ಟ ಆರ್ಯವೀರ್, ಕೊಹ್ಲಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರು. ಆ ಸಂದರ್ಭದಲ್ಲಿ ಕೊಹ್ಲಿ ದೊಡ್ಡ ಕನಸು ಕಾಣಬೇಕು, ನಮ್ಮಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಇರಬೇಕು ಎಂದು ಪ್ರೋತ್ಸಾಹಿಸಿದ್ದರು. ಇಂದು ಅದೇ ಬಾಲಕ ಅಂಡರ್-19 ಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ತಂದೆಯಂತೆ ಸ್ಫೋಟಕ ಬ್ಯಾಟಿಂಗ್, ಆದರೆ ತನ್ನದೇ ಶೈಲಿ

ವೀರೇಂದ್ರ ಸೆಹ್ವಾಗ್ ಎಂದರೆ ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ದಾಳಿ ಮಾಡುವ ಬ್ಯಾಟರ್ ಎಂಬ ಹೆಸರಿದೆ. ಮಗ ಆರ್ಯವೀರ್ ಕೂಡ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ಪರಿಸ್ಥಿತಿಗೆ ತಕ್ಕಂತೆ ತಾಳ್ಮೆಯಿಂದ ಆಡುವ ಗುಣವೂ ಕಾಣಿಸುತ್ತದೆ. ಯುಎಇ ವಿರುದ್ಧದ ಪಂದ್ಯವೇ ಇದಕ್ಕೆ ಉತ್ತಮ ಉದಾಹರಣೆ. ಆರಂಭದಲ್ಲಿ ರನ್ ಗಳಿಸಲು ಸಮಯ ತೆಗೆದುಕೊಂಡ ಆರ್ಯವೀರ್, ನಂತರ ಬಿರುಸಿನ ಆಟಕ್ಕೆ ಮುಂದಾಗಿ 160 ರನ್ ಗಳಿಸಿದರು. ಈ ಇನ್ನಿಂಗ್ಸ್ ಅವರ ತಾಳ್ಮೆ ಮತ್ತು ಆಟದ ವೇಗ ಬದಲಿಸುವ ಸಾಮರ್ಥ್ಯವನ್ನು ತೋರಿಸಿತು.