ಬೆಂಗಳೂರು(ಜ.05): ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಆಡಿ, ಇಂದು ಭಾರತದಲ್ಲಿ ತನ್ನ ಆಕರ್ಷಕ ಮತ್ತು ಸ್ಪೋರ್ಟಿಯರ್ ಆಡಿ ಎ4 ಸೆಡಾನ್ ಬಿಡುಗಡೆ ಮಾಡಿದೆ. ಹೊಸ ಆಡಿ ಎ4 ಐದನೇ ತಲೆಮಾರಿನದ್ದಾಗಿದ್ದು ಹೊಸ ವಿನ್ಯಾಸ ಮತ್ತು ಹೆಚ್ಚು ಶಕ್ತಿಯುತ 2.0 ಲೀಟರ್ ಫೋರ್-ಸಿಲಿಂಡರ್ ಟಿಎಫ್‍ಎಸ್‍ಐ ಪೆಟ್ರೋಲ್ ಎಂಜಿನ್ 190 HP ಶಕ್ತಿ ಮತ್ತು 320 NM ಟಾರ್ಕ್ ನೀಡುತ್ತದೆ. ಹೊಸ ಆಡಿ A4 ಬೆಲೆ ಭಾರತದಲ್ಲಿ ರೂ.42,34,000 ಎಕ್ಸ್ ಶೋರೂಂ .

ಆಡಿ ಕಾರುಗಳ ಪೈಕಿ ಕೈಗೆಟುಕುವ ದರದ Q2 ಕಾರಿನ ಬುಕಿಂಗ್ ಆರಂಭ!.

A4 ಅದ್ಭುತ ಚಾಲನೀಯತೆ ನೀಡುತ್ತದೆ ಮತ್ತು ಅಪ್‍ಡೇಟ್ ಆದ ವಿಶೇಷತೆಗಳನ್ನು ಹೊಂದಿದೆ. ಸುಂದರ ವಿನ್ಯಾಸ, ಅನುಕೂಲಕರ ಮತ್ತು ತಂತ್ರಜ್ಞಾನ ಸನ್ನದ್ಧ ಕ್ಯಾಬಿನ್, ಅತ್ಯುತ್ತಮ ಕನೆಕ್ಟಿವಿಟಿ ಮತ್ತು ಈ ವರ್ಗದ ಅತ್ಯುತ್ತಮ ಇನ್ಫೊಟೈನ್‍ಮೆಂಟ್ ಕಾರಿನ ಐಷಾರಾಮಿತನ ಮತ್ತು ಚಲನಶೀಲ ನಿಲುವನ್ನು ಎತ್ತಿ ತೋರುತ್ತದೆ. ಆಡಿ ಎ4 ಅನ್ನು 2 ಲಕ್ಷ ರೂ.ಗಳ ಪ್ರಾರಂಭಿಕ ಬುಕಿಂಗ್ ಮೊತ್ತ ಪಾವತಿಸಿ ಬುಕ್ ಮಾಡಬಹುದು. 

ನಮ್ಮ ಬೆಸ್ಟ್ ಸೆಲ್ಲರ್‍ಗಳಲ್ಲಿ ಒಂದರ ಅತ್ಯಾಧುನಿಕ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ವರ್ಷವನ್ನು ಪ್ರಾರಂಭಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ. ತನ್ನ ಐದನೇ ಆವೃತ್ತಿಯಲ್ಲಿ ಹೊಸ ಆಡಿ ಎ4 ಶ್ರೇಷ್ಠ, ಸೊಗಸು ಮತ್ತು ಕ್ರೀಡಾ ನೋಟದ ಪರಿಪೂರ್ಣ ಸಂಯೋಜನೆಯಾಗಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸನ್ನದ್ಧವಾಗಿದೆ. ಈ ಮಧ್ಯಮ ಗಾತ್ರದ ಐಷಾರಾಮಿ ಸೆಆನ್ ಸ್ಪರ್ಧಾತ್ಮಕವಾಗಿದೆ ಮತ್ತು ಹೊಸ ಆಡಿ ಎ4 ಈ ವಲಯದಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ ಎಂದು  ಆಡಿ ಇಂಡಿಯಾದ ಮುಖ್ಯಸ್ಥ ಬಲ್‍ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಪವರ್‌ಫುಲ್ ಎಂಜಿನ್, ದುಬಾರಿ ಬೆಲೆ; ಭಾರತದಲ್ಲಿ ಬಿಡುಗಡೆಯಾಯ್ತು Audi RS Q8!

ಹೊಸ ಆಡಿ A4 ಬಹು ಆಯಾಮಗಳನ್ನು ಹೊಂದಿದೆ. ಇದು ಪ್ರತಿನಿತ್ಯದ ಚಾನೆಗೂ ಸೂಕ್ತವಾಗಿದೆ ನೀವು ಹೆಚ್ಚು ವಿನೋದ ಬಯಸಿದಾಗ ಥ್ರಿಲ್ಲಿಂಗ್ ಚಾಲನೆಗೂ ಸಿದ್ಧವಾಗಿರುತ್ತದೆ. ಹೊಸ ಆಡಿ A4 ಕೇವಲ 7.3 ಸೆಕೆಂಡುಗಳಲ್ಲಿ 0-100 ಕೆಪಿಎಚ್ ಜಿಗಿಯಬಲ್ಲದು. ಕಾರು ವಿಶಾಲವಾಗಿದ್ದು 460 ಲೀಟರ್ ಬೂಟ್ ನಿಮ್ಮ ವಾರಾಂತ್ಯದ ಕೌಟುಂಬಿಕ ಪ್ರಯಾಣಕ್ಕೆ ಸೂಕ್ತವಾಗಿದೆ. ಉನ್ನತ ಗುಣಮಟ್ಟದ ಒಳಾಂಗಣ ಹೊಸ ತಲೆಮಾರಿನ ತಂತ್ರಜ್ಞಾನ ಎಂಎಂಐ ಟಚ್ ಡಿಸ್ಪ್ಲೇಯೊಂದಿಗೆ ಹೊಸ ಆಪರೇಟಿಂಗ್ ಸಿಸ್ಟಂಗೆ ಕಂಟ್ರೋಲ್ ಸೆಂಟರ್ ಆಗಿದೆ.

LED ಹೆಡ್‍ಲೈಟ್ಸ್ ಸಿಗ್ನೇಚರ್ ಡೇಟೈಮ್ ರನ್ನಿಂಗ್ ಲೈಟ್ಸ್‍ನೊಂದಿಗೆ ಹೊಸ ಆಡಿ A4ನಲ್ಲಿ ಸ್ಟಾಂಡರ್ಡ್ ಆಗಿ ಬಂದಿವೆ. ಹೊಸ ಆಡಿ A4ನ ಅನನ್ಯತೆಗೆ ಮತ್ತಷ್ಟು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಅದರ ಸಿಂಗಲ್- ಫ್ರೇಮ್ ಗ್ರಿಲ್ ಅಗಲವಾಗಿದೆ ಮತ್ತು ಮತ್ತಷ್ಟು ಕಣ್ಸೆಳೆಯುವಂತಿದೆ. ಶಕ್ತಿ, ತಂತ್ರಜ್ಞಾನ ಮತ್ತು ದಕ್ಷತೆಯು ಹೊಸ ಆಡಿ A4 ಅನ್ನು ಈ ವರ್ಗದಲ್ಲಿ ಅತ್ಯಂತ ವಿಶಿಷ್ಟ ಕೊಡುಗೆಯಾಗಿದೆ.