ಭಾರತದ ಕುಟುಂಬ ಒಂದು ಮೂರು ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದೆ. ಇದರ ಒಟ್ಟು ಮೌಲ್ಯ 50 ಕೋಟಿ ರೂಪಾಯಿ. ಈ ಮೂಲಕ ವಿಕ್ಕಿ ಕುಟುಂಬ ಶ್ರೀಮಂತ ಅಂಬಾನಿಯನ್ನು ಹಿಂದಿಕ್ಕಿದೆ. ಯಾರು ಈ ಆರನ್ ವಿಕ್ಕಿ?

ಮುಂಬೈ (ನ.17) ಭಾರತದಲ್ಲಿ ರೋಲ್ಸ್ ರಾಯ್ಸ್ ಕಾರು ಹೊಸದಲ್ಲ. ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ, ಶಾರೂಖ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರಲ್ಲಿ ರೋಲ್ಸ್ ರಾಯ್ಸ್ ಕಾರು ಕಾರುಗಳಿವೆ. ಅತೀ ದುಬಾರಿ ಹಾಗೂ ಐಷಾರಾಮಿ ಕಾರು ಸಾಕಷ್ಟು ಉದ್ಯಮಿಗಳು, ಶ್ರೀಮಂತರು ಖರೀದಿಸಿದ್ದಾರೆ. ಬೆಂಗಳೂರಿನ ಬಾರ್ಬರ್ ರಮೇಶ್ ಬಾಬು ಬಳಿ ಕೆಲ ರೋಲ್ಸ್ ರಾಯ್ಸ್ ಕಾರುಗಳಿವೆ. ಇದೀಗ ಮುಂಬೈನ ಆರನ್ ವಿಕ್ಕಿ ಥಾಮಸ್ ಒಂದೇ ದಿನ ಮೂರು ರೋಲ್ಸ್ ರಾಯ್ಸ್ ಕಾರು ಖರೀದಿಸಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 50 ಕೋಟಿ ರೂಪಾಯಿ.

ಅಂಬಾನಿ ಹಿಂದಿಕ್ಕಿದ ಆರನ್ ವಿಕ್ಕಿ ಥಾಮಸ್

ಶ್ರೀಮಂತಿಕೆ, ಆಸ್ತಿ, ಸಂಪತ್ತಿನಲ್ಲಿ ಮುಕೇಶ್ ಅಂಬಾನಿ ಮೀರಿಸುವುದು ಸುಲಭಲ್ಲ. ಇನ್ನು ಐಷಾರಾಮಿ ಕಾರುಗಳಲ್ಲೂ ಅಂಬಾನಿ ಮೀರಿಸಲು ಕಷ್ಟ ಸಾಧ್ಯ. ಇದೀಗ ವಿಕ್ಕಿ ಥಾಮಸ್ ಕುಟುಂಬ ಒಂದೇ ದಿನ 50 ಕೋಟಿ ಮೌಲ್ಯದ ಮೂರು ರೋಲ್ಸ್ ರಾಯ್ಸ್ ಕಾರು ಖರೀದಿ ಮೂಲಕ ಹೊಸ ದಾಖಲೆ ಬರೆದಿದೆ. ಒಂದೇ ದಿನ ಗರಿಷ್ಠ ರೋಲ್ಸ್ ರಾಯ್ಸ್, ಗರಿಷ್ಠ ಒಟ್ಟು ಮೌಲ್ಯದ ಕಾರು ಖರೀದಿಸಿದ ಹೆಗ್ಗಳಿಕೆಗೆ ಆರನ್ ವಿಕ್ಕಿ ಥಾಮಸ್ ಪಾತ್ರರಾಗಿದ್ದಾರೆ. ಈ ಮೂಲಕ ಅಂಬಾನಿಯ ಬೆಂಟ್ಲಿ ಹಾಗೂ ಬಣ್ಣ ಬದಲಾಲಿಸುವ ರೋಲ್ಸ್ ರಾಯ್ಸ್ ಕಾರಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಆರನ್ ಕುಟುಂಬದಿಂದ ಕಾರು ಖರೀದಿ

ಆರನ್ ವಿಕ್ಕಿ ಥಾಮಸ್ ಮೂರು ರೋಲ್ಸ್ ರಾಯ್ಸ್ ಕಾರು ಡೆಲಿವರ ಪಡೆದಿದ್ದಾರೆ. ಚಿನ್ನದ ಲೋಗೋ ಇರುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಹಾಗೂ ಕಲ್ಲಿನನ್ ಕಾರುಗಳು ವಿಕ್ಕಿ ಮನೆಗೆ ಆಗಮಿಸಿದೆ. ಆರನ್ ವಿಕ್ಕಿ ಥಾಮಸ್ ಭಾರತದ ಅತೀ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಯಾದ ಇವಿ ಹೋಮ್ಸ್ ಉದ್ಯಮದ ಕುಡಿ. ಆರನ್ ವಿಕ್ಕಿ ಥಾಮಸ್ ಹಾಗೂ ಕುಟುಂಬ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರಿಯವಾಗಿದೆ.

ಕಲ್ಲಿನಾನ್ ಹಾಗೂ ಫ್ಯಾಂಟಮ್ ಕಾರು

ಡ್ಯುಯೆಲ್ ಟೋನ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಹಾಗೂ ಎರಡು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರುಗಳನ್ನು ಖರೀದಿ ಮಾಡಲಾಗಿದೆ. ಫ್ಯಾಂಟಮ್ ಕಾರು ಚಿನ್ನದ ಲೋಗೋ ಹೊಂದಿದೆ. ಇನ್ನು ಕಲ್ಲಿನಾನ್ ಕಾರಿನ ಆರಂಭಿಕ ಬೆಲೆ 10 ಕೋಟಿ ರೂಪಾಯಿಗೂ ಮೇಲು. ಕಸ್ಟಮೈಸ್ಡ್, ರೋಡ್ ಟ್ಯಾಕ್ಸ್, ವಿಮೆ ಸೇರಿದಂತೆ ಇತರ ಖರ್ಚು ವೆಚ್ಚಗಳು ದುಬಾರಿ. ಹೀಗಾಗಿ ಮೂರು ಕಾರುಗಳ ಒಟ್ಟು ಮೌಲ್ಯ ಸರಿಸುಮಾರು 50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕಾರಿಗಾಗಿ ಒಂದೇ ದಿನ 50 ಕೋಟಿ ರೂ ಖರ್ಚು

ಕಾರುಗಳ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರತದ ಹಲವು ಶ್ರೀಮಂತ ಕುಟುಂಬಗಳ ನಡುವೆ ದಿಢೀರ್ ಆರನ್ ವಿಕ್ಕಿ ಥಾಮಸ್ ಕುಟುಂಬ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಬರೋಬ್ಬರಿ 50 ಕೋಟಿ ರೂಪಾಯಿ ಮೊತ್ತವನ್ನು ಒಂದೇ ದಿನ ಕಾರು ಖರೀದಿಗೆ ಖರ್ಚು ಮಾಡಿದೆ. ಹೀಗಾಗಿ ಈ ಕುಟುಂಬದ ಶ್ರೀಮಂತಿಕೆ ಎಷ್ಟು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.