ನವದೆಹಲಿ(ಡಿ.18): ಬಂಗಾರ ಕೂಡ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇ-ಕಾಮರ್ಸ್ಗಳ ಮೂಲಕ ಚಿನ್ನ, ಬೆಳ್ಳಿ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅದರಂತೆ ಆನ್‌ಲೈನ್‌ನಲ್ಲಿ ಚಿನ್ನದ ದರಗಳ ಪೈಪೋಟಿ ಶುರುವಾಗಿದ್ದು, ಇದೀಗ ಚಿನ್ನವನ್ನು ಕೇವಲ 1 ರೂ. ಗೆ ಆನ್‌ಲೈನ್ ಮೂಲಕ ಖರೀದಿಸುವ ಆಫರ್ ಚರ್ಚೆಗೆ ಗ್ರಾಸವಾಗಿದೆ.

ಆಭರಣ ಆಮದಿನಲ್ಲಿ ಭಾರತ ವಿಶ್ವದ ಎರಡನೇ ಅತ್ಯಂತ ದೊಡ್ಡ ಆಮದು ರಾಷ್ಟ್ರವಾಗಿದ್ದು, ಪಾರಂಪರಿಕ ಬಂಗಾರದ ಅಂಗಡಿಯಿಂದ ಚಿನ್ನ, ಬೆಳ್ಳಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ.

ಇದೇ ಕಾರಣಕ್ಕೆ ಆಭರಣ ಮಳಿಗೆಯವರು ಆನ್‌ಲೈನ್ ವ್ಯಾಪಾರಕ್ಕೆ ಮೊರೆ ಹೋಗಿದ್ದು, ಆನ್‌ಲೈನ್‌ನಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಭರಾಟೆ ಜೋರಾಗಿದೆ.

ಇದಕ್ಕೆ ಹಲವು ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳು ಕೂಡ ಕೈ ಜೋಡಿಸಿದ್ದು, ಹತ್ತು ಹಲವು ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

1 ಗ್ರಾಂ ಚಿನ್ನದ ಪ್ರಸ್ತುತ ಮಾರುಕಟ್ಟೆ ದರವನ್ನೇ ಪಾವತಿಸಬೇಕಾಗುತ್ತದೆ . ಆದರೆ ಇದಕ್ಕಾಗಿ ನಡೆಯುವ ನೋಂದಣಿ ಪ್ರಕ್ರಿಯೆಯಲ್ಲಿ ಕೇವಲ 1 ರೂ. ನಂತಹ ಪಬ್ಲಿಸಿಟಿ ಯೋಜನೆಗಳನ್ನು ಸೇರಿಸಲಾಗಿರುತ್ತದೆ.

ಕಳೆದ ಸೆಪ್ಟೆಂಬರ್‌ವರೆಗೆ ಭಾರತದಲ್ಲಿ 524 ಟನ್ ಚಿನ್ನದ ವಹಿವಾಟು ನಡೆದಿದ್ದು, ಇದಕ್ಕೆ ಹೋಲಿಸಿದರೆ ಆನ್‌ಲೈನ್ ಬವಹಿವಾಟು ತುಂಬ ಕಡಿಮೆಯೇ ಇದೆ.

ಅಲ್ಲದೇ ಭಾರತದಲ್ಲಿ ಚಿನ್ನಕ್ಕಾಗಿ ಬೇಡಿಕೆ ಶೇ. 23 ರಷ್ಟು ಕಡಿಮೆಯಾಗಿದ್ದು, ಇದೇ ಕಾರಣಕ್ಕೆ ಆನ್‌ಲೈನ್ ಮಾರಾಟಕ್ಕೆ ಮೊರೆ ಹೋಗಿರುವ ವ್ಯಾಪಾರಸ್ಥರು ಹಲವು ಆಕರ್ಷಕ ಆಫರ್‌ಗಳನ್ನು ನೀಡುತ್ತಿದ್ದಾರೆ.

ಏನಿದು ವಿಚಿತ್ರ?: ಚಿನ್ನ, ಬೆಳ್ಳಿ ದರ ದಿಢೀರ ಕುಸಿತ!

‘ಕೇಳ್ದೆನೆ ಚಿನ್ನಾ, ಸಿಕ್ಕಾಪಟ್ಟೆ ಇಳ್ದಿದೆ ಚಿನ್ನ’: ಇಂದೇ ಕೊಂಡ್ರೆ ಚೆನ್ನ!

ಚಿನ್ನದ ದರದಲ್ಲಿ ಭಾರೀ ಏರಿಕೆ: ಫಲಿಸದ ಆಭರಣ ಪ್ರೀಯರ ಹಾರೈಕೆ!