Asianet Suvarna News Asianet Suvarna News

ಚಿನ್ನದ ದರದಲ್ಲಿ ಭಾರೀ ಏರಿಕೆ: ಫಲಿಸದ ಆಭರಣ ಪ್ರೀಯರ ಹಾರೈಕೆ!

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿದರದಲ್ಲಿ ಏರಿಕೆ! ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ, ಬೆಳ್ಳಿ ದರ! ಆಭರಣ ಪ್ರೀಯರಿಗೆ ನಿರಾಸೆ ಮೂಡಿಸಿದ ಚಿನ್ನ, ಬೆಳ್ಳಿ ದರ ಏರಿಕೆ! ಚಿನ್ನದ ದರದಲ್ಲಿ 100 ರೂ. ಮತ್ತು ಬೆಳ್ಳಿ ದರದಲ್ಲಿ 150 ರೂ. ಏರಿಕೆ 

Gold Prices Hike Today After Breaking 2-Day Fall
Author
Bengaluru, First Published Nov 27, 2018, 6:03 PM IST

ನವದೆಹಲಿ(ನ.27): ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಅದರಂತೆ ಬೆಳ್ಳಿ ದರದಲ್ಲೂ ಕೊಂಚ ಏರಿಕೆಯಾಗಿರುವುದು ಆಭರಣ ಪ್ರೀಯರಿಗೆ ನಿರಾಸೆ ಮೂಡಿಸಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ದರ ಇಳಿಯುತ್ತಿದ್ದು, ಇದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿ ಹಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿತ್ತು.

ಅದರಂತೆ ಭಾರತೀಯ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ ನೋಡುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ-

10 ಗ್ರಾಂ 99.9 % ಶುದ್ಧ ಚಿನ್ನ-31,850 ರೂ.(100 ರೂ.ಏರಿಕೆ)

10 ಗ್ರಾಂ 99.5 % ಶುದ್ಧ ಚಿನ್ನ-31,700 ರೂ.(100 ರೂ.ಏರಿಕೆ)

8 ಗ್ರಾಂ ತೂಕದ ಒಂದು ಸಾವರಿನ್ ಗೋಲ್ಡ್- 24,800 ರೂ.(100 ರೂ.ಏರಿಕೆ )

ಇನ್ನು ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಇಂದಿನ ಮಾರುಕಟ್ಟೆ ದರದತ್ತ ಗಮನಹರಿಸುವುದಾದರೆ...

1 ಕೆಜಿ ಬೆಳ್ಳಿ-37,450 ರೂ. (150 ರೂ.ಏರಿಕೆ)

100 ಬೆಳ್ಳಿ ನಾಣ್ಯ-73,000(ಕೊಳ್ಳುವಿಕೆ), 74,000(ಮಾರಾಟ)

Follow Us:
Download App:
  • android
  • ios