‘ಕೇಳ್ದೆನೆ ಚಿನ್ನಾ, ಸಿಕ್ಕಾಪಟ್ಟೆ ಇಳ್ದಿದೆ ಚಿನ್ನ’: ಇಂದೇ ಕೊಂಡ್ರೆ ಚೆನ್ನ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Dec 2018, 12:39 PM IST
Gold Prices Fall For Fourth Straight Day
Highlights

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿದ ಚಿನ್ನದ ದರ! ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಮನಾರ್ಹ ಇಳಿಕೆ! ಸ್ಥಳೀಯ ವ್ಯಾಪಾರಸ್ಥರಿಂದ ಚಿನ್ನಕ್ಕಾಗಿ ಹೆಚ್ಚಿದ ಬೇಡಿಕೆ! ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದೆ

ನವದೆಹಲಿ(ನ.25): ಸತತ ನಾಲ್ಕು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದ್ದು, ಇಂದೂ ಕೂಡ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ದರ ಇಳಿಯುತ್ತಿದ್ದು, ಇದರ ಪರಿಣಾಮ ಭಾರತೀಯ ಮಾರುಕಟ್ಟೆ ಮೇಲೂ ಆಗಿದೆ ಎಂಬುದು ತಜ್ಞರ ಅಂಬೋಣ.

ಇದೇ ಕಾರಣಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ಚಿನ್ನಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಬೆಲೆಗಳು ಇಳಿಕೆಯತ್ತ ಮುಖ ಮಾಡಿದೆ ಎನ್ನಲಾಗಿದೆ.

ಅದರಂತೆ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರದತ್ತ ಗಮನಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ-

10 ಗ್ರಾಂ 99.9 % ಶುದ್ಧ ಚಿನ್ನ-31,460 ರೂ.(15 ರೂ.ಇಳಿಕೆ)

10 ಗ್ರಾಂ 99.5 % ಶುದ್ಧ ಚಿನ್ನ-31,310 ರೂ.(15 ರೂ.ಇಳಿಕೆ)

8 ಗ್ರಾಂ ಸಾವರಿನ್ ಗೋಲ್ಡ್- 24,700 ರೂ.(ಯಾವುದೇ ಬದಲಾವಣೆ ಇಲ್ಲ)

ಇನ್ನು ಬೆಳ್ಳಿ ದರದಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಇಂದಿನ ಮಾರುಕಟ್ಟೆ ದರದತ್ತ ಗಮನಹರಿಸುವುದಾದರೆ...

1 ಕೆಜಿ ಬೆಳ್ಳಿ-36,560 ರೂ. (500 ರೂ.ಇಳಿಕೆ)

100 ಬೆಳ್ಳಿ ನಾಣ್ಯ-72,000 ರೂ. (ಕೊಳ್ಳುವಿಕೆ), 73,000 ರೂ. (ಮಾರಾಟ)

 

ಚಿನ್ನದ ದರದಲ್ಲಿ ಭಾರೀ ಇಳಿಕೆ: ಹೀಗೆ ಇಳಿಯಲಿ ಎಂಬುದೇ ಹಾರೈಕೆ!

ಕುಸಿದ ಚಿನ್ನದ ರೇಟ್: ಈಗ್ಲೇ ಖರೀದಿಸಿ ಫಟಾಫಟ್!

ಹಬ್ಬ ಹಿಂಗಾಗ್ಬೇಕು: ಚಿನ್ನದ ದರದಲ್ಲಿ ಭಾರೀ ಇಳಿಕೆ!

loader