Mark Zuckerberg Net Worth : 9 ತಿಂಗಳಲ್ಲಿ ಅರ್ಧಕ್ಕರ್ಧ ಸಂಪತ್ತು ಕಳೆದುಕೊಂಡ ಮಾರ್ಕ್ ಜುಕರ್ ಬರ್ಗ್!

ತುಂಬಾ ಹಿಂದಲ್ಲ, ಕೇವಲ 9 ತಿಂಗಳ ಹಿಂದೆ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. 2021ರ ಜುಲೈ ವೇಳೆಗೆ ಅವರ ಸಂಪತ್ತು 1.42 ಲಕ್ಷ ಕೋಟಿ ಆಗಿತ್ತು. ಆದರೆ, ಕಂಪನಿಯ ಕೆಟ್ಟ ಫಲಿತಾಂಶ, ಟಿಕ್ ಟಾಕ್ ಹಾಗೂ ಆಪಲ್ ನಿಂದ ಎದುರಾಗಿರುವ ಸವಾಲು, ಫೇಸ್ ಬುಕ್ ಬಳಕೆದಾರರಲ್ಲಿಇಳಿಕೆ ಇವೆಲ್ಲವುಗಳಿಂದ, ಜುಕರ್ ಬರ್ಗ್ ಅವರ ಆದಾಯ ಅರ್ಧಕ್ಕರ್ಧ ಎಂದರೆ 73 ಸಾವಿರ ಕೋಟಿಗೆ ಇಳಿದಿದೆ. ಆ ಮೂಲಕ ಶ್ರೀಮಂತರ ಪಟ್ಟಿಯಲ್ಲಿ ಅವರು 14ನೇ ಸ್ಥಾನಕ್ಕೆ ಕುಸಿದ್ದಾರೆ.

worlds third richest person to 18th rank Facebook Founder Mark Zuckerberg wealth halved in a nine months san

ನವದೆಹಲಿ (ಏ.29): ವಿಶ್ವದ ಶ್ರೀಮಂತ ವ್ಯಕ್ತಿ (World Richest Person), 2.46 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿರುವ ಎಲಾನ್ ಮಸ್ಕ್ (Elon Musk) ಇತ್ತೀಚೆಗೆ ಟ್ವಿಟರ್ (Twitter) ಅನ್ನು ಖರೀದಿ ಮಾಡಿ ಗಮನಸೆಳೆದಿದ್ದರೆ, ಇನ್ನೊಂದೆಡೆ, ಮಾರ್ಕ್ ಜುಕರ್ ಬರ್ಗ್ (Mark Zuckerberg) ಕುಸಿಯುತ್ತಿರುವ ತನ್ನ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಫೋರ್ಬ್ಸ್ ನ (Forbes) ರಿಯಲ್ ಟೈಮ್ ಬಿಲಿಯನೇರ್ ಗಳ ಪಟ್ಟಿಯಲ್ಲಿ ನಿಮಗೆ ಒಬ್ಬರ ಹೆಸರು ನೋಡಿದರೆ ಖಂಡತವಾಗಿ ಅಚ್ಚರಿಯಾಗುತ್ತದೆ. ಅದು ಮಾರ್ಕ್ ಜುಕರ್ ಬರ್ಗ್.

ಫೇಸ್ ಬುಕ್ ಕಂಪನಿಯ ಮಾಲೀಕ, 73 ಸಾವಿರ ಕೋಟಿಯೊಂದಿಗೆ (ಮಾರ್ಕ್ ಜುಕರ್‌ಬರ್ಗ್ ನೆಟ್ ವರ್ತ್) ಈ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ, ಅವರು 18 ನೇ ಸ್ಥಾನದಲ್ಲಿದ್ದರು, ಆದರೆ ಇತ್ತೀಚೆಗೆ ಕಂಪನಿಯ ಉತ್ತಮ ಫಲಿತಾಂಶಗಳಿಂದಾಗಿ, ಕಂಪನಿಯ ಷೇರುಗಳು ಶೇಕಡಾ 20 ರಷ್ಟು ಏರಿಕೆಯಾಗಿದೆ. ಕೇವಲ 9 ತಿಂಗಳ ಹಿಂದೆ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಜುಕರ್ ಬರ್ಗ್ ಇಂದು ತಮ್ಮ ಅರ್ಧಕ್ಕರ್ಧ ಸಂಪತ್ತು ಕಳೆದುಕೊಂಡು 14ನೇ ಸ್ಥಾನಕ್ಕೆ ಇಳಿದಿದ್ದಾರೆ.

ಫೇಸ್‌ಬುಕ್ ಸಿಇಒ (Facebook CEO) ಮಾರ್ಕ್ ಜುಕರ್‌ಬರ್ಗ್ 1.42 ಲಕ್ಷ ಕೋಟಿ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾದ ದಿನಗಳಿದ್ದವು. ಮಾರ್ಕ್ ಜುಕರ್‌ಬರ್ಗ್ ಜುಲೈ 2021 ರಲ್ಲಿ ಈ ಸ್ಥಾನವನ್ನು ಅಲಂಕರಿಸಿದ್ದರು. ಆ ಸಮಯದಲ್ಲಿ ಫೇಸ್‌ಬುಕ್‌ನ ಷೇರು ಬೆಲೆ 350 ಡಾಲರ್ ಗಳ ಸಮೀಪದಲ್ಲಿತ್ತು ಹಾಗೂ ಕಂಪನಿಯ ಮಾರುಕಟ್ಟೆ ಮೌಲ್ಯ 950 ಬಿಲಿಯನ್ ಡಾಲರ್ ಆಗಿತ್ತು. ಅಂದಿನಿಂದ, ಅವರ ಸಂಪತ್ತು ಸುಮಾರು 50 ಪ್ರತಿಶತದಷ್ಟು ಕುಸಿದಿದೆ. ಇದೀಗ ಅವರ ಸಂಪತ್ತು 73.6 ಶತಕೋಟಿ ಡಾಲರ್ ಅಂದರೆ ಆ ಸಮಯದ ಅರ್ಧದಷ್ಟಾಗಿದೆ.

ಡಿಸೆಂಬರ್ 2020 ರ ಹೊತ್ತಿಗೆ, ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರ್ಕ್ ಜುಕರ್‌ಬರ್ಗ್ ಸುಮಾರು 16.8 ಶೇಕಡಾ ಷೇರುಗಳನ್ನು ಹೊಂದಿದ್ದಾರೆ. ಅವರ ಸಂಪತ್ತು ಅವರ ಕಂಪನಿ ಫೇಸ್‌ಬುಕ್‌ಗೆ ನೇರವಾಗಿ ಸಂಬಂಧಿಸಿದೆ. ಫೇಸ್ ಬುಕ್ ನ ಷೇರು 2018 ರ ಸಮಯದಲ್ಲಿ 125 ಡಾಲರ್ ಮೌಲ್ಯದ್ದಾಗಿತ್ತು, ಇದು ಸೆಪ್ಟೆಂಬರ್ 2021 ರ ವೇಳೆಗೆ 380 ಡಾಲರ್ ಗೆ ಏರಿತ್ತು. ಫೇಸ್ ಬುಕ್ ನ ಮೌಲ್ಯವು ಹೆಚ್ಚಾದಂತೆ, ಜುಕರ್‌ಬರ್ಗ್‌ನ ಸಂಪತ್ತು ಕೂಡ ಬೆಳೆಯುತ್ತದೆ.

ಝೀರೋ ಟು ಹಿರೋ: ಅದಾನಿ ಸಾಮ್ರಾಜ್ಯದ ಅಸಲಿ ಕಹಾನಿ

ಫೇಸ್‌ಬುಕ್‌ನ ಷೇರುಗಳ ಕುಸಿತದ ಹಾಗೂ ಜುಕರ್ ಬರ್ಗ್ ಆದಾಯ ಇಳಿಕೆಯಾಗಿರುವುದರ ಹಿಂದೆ ಹಲವು ಕಾರಣಗಳಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಡಿಸೆಂಬರ್ 2021 ರ ಫಲಿತಾಂಶಗಳು, ಇದರಲ್ಲಿ ಕಂಪನಿಯ ಲಾಭ ಕಡಿಮೆಯಾಗಿದೆ. ಮತ್ತೊಂದೆಡೆ, ಮಾರ್ಚ್ 2022 ತ್ರೈಮಾಸಿಕದಲ್ಲಿ ಫಲಿತಾಂಶಗಳು ನಿರೀಕ್ಷೆಗಿಂತ ಕೆಟ್ಟದಾಗಿರಬಹುದು ಎಂದು ಮೆಟಾ ಮುನ್ಸೂಚನೆ ನೀಡಿದೆ. ಪರಿಣಾಮವಾಗಿ, ಕಂಪನಿಯ ಷೇರುಗಳು ವೇಗವಾಗಿ ಕುಸಿಯಲು ಪ್ರಾರಂಭಿಸಿವೆ. 2022ರ ಫೆಬ್ರವರಿ 3 ರಂದು, ಹೂಡಿಕೆದಾರರು ಒಂದೇ ದಿನದಲ್ಲಿ ಸುಮಾರು 220 ಬಿಲಿಯನ್ ಡಾಲರ್ ಕಳೆದುಕೊಂಡರು. ಅಷ್ಟೇ ಅಲ್ಲ, ಟಿಕ್‌ಟಾಕ್‌ನಿಂದಾಗಿ ಫೇಸ್‌ಬುಕ್‌ನ ವ್ಯವಹಾರವೂ ಹಾಳಾಗುತ್ತಿದೆ. ಜನರು ತಮ್ಮ ಸಮಯವನ್ನು ಕಳೆಯಲು ಹಲವು ಆಯ್ಕೆಗಳನ್ನು ಹೊಂದಿದ್ದಾರೆ ಮತ್ತು ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳು ವೇಗವಾಗಿ ಬೆಳೆಯುತ್ತಿವೆ ಎಂದು ಸ್ವತಃ ಜುಕರ್ ಬರ್ಗ್ ಹೇಳಿದ್ದಾರೆ.

Forbes Billionaires 2022: ಮಸ್ಕ್, ಬೆಜೋಸ್‌, ಬೆರ್ನಾರ್ಡ್‌ ಟಾಪ್‌ 3 ಸಿರಿವಂತರು: ಕರ್ನಾಟಕದಲ್ಲಿ ಅಜೀಂ ಪ್ರೇಮ್‌ಜಿ ನಂ.1

2021 ರ ಕೊನೆಯಲ್ಲಿ, ಮೊದಲ ಬಾರಿಗೆ ಫೇಸ್‌ಬುಕ್ ತನ್ನ ಕೆಲವು ದೈನಂದಿನ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ ಎಂಬ ಸುದ್ದಿಯೂ ಕೇಳಿಬಂದಿತ್ತು. ಕುಸಿತವೂ ಚಿಕ್ಕದಾಗಿದ್ದರೂ ಇದು ಷೇರುಗಳ ಮೇಲೆ ಪರಿಣಾಮ ಬೀರಿತ್ತು.ಅದೇ ಸಮಯದಲ್ಲಿ, ಆಪಲ್‌ನ ಗೌಪ್ಯತೆ-ಸಂಬಂಧಿತ ಬದಲಾವಣೆಗಳು ಫೇಸ್‌ಬುಕ್‌ನ ಜಾಹೀರಾತು ಮಾದರಿಗೆ ಬೆದರಿಕೆಯಾಗಿವೆ. ಕಂಪನಿಯು ತನ್ನ ಆದಾಯದ 97 ಪ್ರತಿಶತಕ್ಕಿಂತ ಹೆಚ್ಚು ಜಾಹೀರಾತಿನ ಮೇಲೆ ಅವಲಂಬಿತವಾಗಿದೆ.

Latest Videos
Follow Us:
Download App:
  • android
  • ios