Forbes Billionaires 2022: ಮಸ್ಕ್, ಬೆಜೋಸ್, ಬೆರ್ನಾರ್ಡ್ ಟಾಪ್ 3 ಸಿರಿವಂತರು: ಕರ್ನಾಟಕದಲ್ಲಿ ಅಜೀಂ ಪ್ರೇಮ್‌ಜಿ ನಂ.1
*ಫೋಬ್ಸ್‌ರ್ ಮ್ಯಾಗಜಿನ್ 2022ನೇ ವಿಶ್ವದ ಶ್ರೀಮಂತರ ಪಟ್ಟಿಬಿಡುಗಡೆ
*ಮಸ್ಕ್, ಬೆಜೋಸ್, ಬೆರ್ನಾರ್ಡ್ ಟಾಪ್ 3 ಸಿರಿವಂತರು
*ಮುಖೇಶ್ ಅಂಬಾನಿ, ಗೌತಮ್ ಅದಾನಿಗೆ 10, 11ನೇ ಸ್ಥಾನ
*ಅಜೀಂ ಪ್ರೇಮ್‌ಜಿ ಕರ್ನಾಟಕದ ನಂ.1 ಸಿರಿವಂತ
ನವದೆಹಲಿ (ಏ. 07): ಅಮೆರಿಕದ ಫೋಬ್ಸ್‌ರ್ ಮ್ಯಾಗಜಿನ್ 2022ನೇ ವಿಶ್ವದ ಶ್ರೀಮಂತರ ಪಟ್ಟಿಬಿಡುಗಡೆ ಮಾಡಿದೆ. ಅದರಲ್ಲಿ ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ (16.42 ಲಕ್ಷ ಕೋಟಿ ರು.) ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ (12.82 ಲಕ್ಷ ಕೋಟಿ ರು.), ಬರ್ನಾರ್ಡ್ಸ್ ಅರ್ನಾಲ್ಟ್ (11.85 ಲಕ್ಷ ಕೋಟಿ ರು.) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ 6.8 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಇನ್ನು ಅದಾನಿ ಗ್ರೂಫ್ಸ್‌ನ ಗೌತಮ್ ಅದಾನಿ 6.7 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.
ಯುದ್ಧ ಮತ್ತು ಸಾಂಕ್ರಾಮಿಕದಿಂದಾಗಿ ಕಳೆದ ವರ್ಷಕ್ಕಿಂತ ಕಳೆದ ವರ್ಷಕ್ಕಿಂತ ಆಸ್ತಿ ಮೌಲ್ಯ 300 ಲಕ್ಷ ಕೋಟಿಯಷ್ಟುಕಡಿಮೆಯಾಗಿದೆ. ಆದರೂ 1,000ಕ್ಕೂ ಹೆಚ್ಚಿನ ಶ್ರೀಮಂತರು ಕಳೆದ ವರ್ಷಕ್ಕಿಂತ ಹೆಚ್ಚು ಶ್ರೀಮಂತರಾಗಿದ್ದಾರೆ. 236 ಜನರು ಹೊಸದಾಗಿ ಶತಕೋಟ್ಯಾಧಿಪತಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಅಜೀಂ ಪ್ರೇಮ್‌ಜಿ ಕರ್ನಾಟಕದ ನಂ.1 ಸಿರಿವಂತ: 2022ನೇ ಸಾಲಿನ ಶತಕೊಟ್ಯಾಧಿಪತಿಗಳ ಪಟ್ಟಿಯನ್ನು ಅಮೆರಿಕದ ಫೋಬ್ಸ್‌ರ್ ಮ್ಯಾಗಜಿನ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಕರ್ನಾಟಕದವರಾದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜಿ 73.5 ಸಾವಿರ ಕೋಟಿ ರು. ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದ ಪಟ್ಟಿಯಲ್ಲಿ ಪ್ರೇಮ್‌ಜಿ ಅವರು 206ನೇ ಸ್ಥಾನ ಪಡೆದುಕೊಂಡಿದ್ದಾರೆ.
ಉಳಿದಂತೆ ಜಾಗತಿಕ 654ನೇ ಸ್ಥಾನದಲ್ಲಿರುವ ಇಸ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ 33 ಸಾವಿರ ಕೋಟಿ ರು. ಮೌಲ್ಯದೊಂದಿಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಇಸ್ಫೋಸಿಸ್‌ನ ಸೇನಾಪತಿ ಗೋಪಾಲಕೃಷ್ಣ 30 ಸಾವಿರ ಕೋಟಿ ರು. ಮೌಲ್ಯದೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಉದ್ಯಮಿ ಚಂದ್ರು ರಹೇಜಾ ಅವರು 27 ಸಾವಿರ ಕೋಟಿ ರು. ಮೌಲ್ಯದೊಂದಿಗೆ 4ನೇ ಮತ್ತು ಇಸ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು 25 ಸಾವಿರ ಕೋಟಿ ರು. ಮೌಲ್ಯದೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ಮಸ್ಕ್, ಬೆಜೋಸ್, ಬೆರ್ನಾರ್ಡ್ ಟಾಪ್ 3 ಸಿರಿವಂತರು: ಶ್ರೀಮಂತರು- ದೇಶ- ಆಸ್ತಿ ಮೌಲ್ಯ
1. ಎಲಾನ್ ಮಸ್ಕ್- ಅಮೆರಿಕ- 16.42ಲಕ್ಷ ಕೋಟಿ
2. ಜೆಫ್‌ಬೆಜೋಸ್- ಅಮೆರಿಕ- 12.82 ಲಕ್ಷ ಕೋಟಿ
3. ಬರ್ನಾರ್ಡ್ ಅರ್ನಾಲ್ಟ್- ಫ್ರಾನ್ಸ್- 11.85 ಲಕ್ಷ ಕೋಟಿ
4. ಬಿಲ್ ಗೇಟ್ಸ್- ಅಮೆರಿಕ- 9.67 ಲಕ್ಷ ಕೋಟಿ
5. ವಾರನ್ ಬಫೆಟ್- ಅಮೆರಿಕ- 8.85 ಲಕ್ಷ ಕೋಟಿ
6. ಲ್ಯಾರಿ ಪೇಜ್- ಅಮೆರಿಕ- 8.32 ಲಕ್ಷ ಕೋಟಿ
7. ಸೆರ್ಗಿ ಬ್ರಿನ್- ಅಮೆರಿಕ- 8.02 ಲಕ್ಷ ಕೋಟಿ
8. ಲ್ಯಾರಿ ಎಲಿಸನ್- ಅಮೆರಿಕ- 7.95 ಲಕ್ಷ ಕೋಟಿ
9. ಸ್ಟೀವ್ ಬಾಲ್ಮರ್- ಅಮೆರಿಕ- 6.85 ಲಕ್ಷ ಕೋಟಿ
10. ಮುಖೇಶ್ ಅಂಬಾನಿ- ಭಾರತ- 6.8 ಲಕ್ಷ ಕೋಟಿ
11. ಗೌತಮ್ ಅದಾನಿ- ಭಾರತ 6.7- ಲಕ್ಷ ಕೋಟಿ
ಕರ್ನಾಟಕದ ಟಾಪ್ 10 ಶತಕೊಟ್ಯಾಧಿಪತಿಗಳು: ಹೆಸರು- ಕಂಪನಿ- ಆಸ್ತಿಮೌಲ್ಯ
1. ಅಜೀಂ ಪ್ರೇಮ್ ಜಿ- ವಿಪ್ರೋ- 73.5 ಸಾವಿರ ಕೋಟಿ
2. ಎನ್.ಆರ್.ನಾರಾಯಣ ಮೂರ್ತಿ- ಇಸ್ಫೋಸಿಸ್- 33 ಸಾವಿರ ಕೋಟಿ
3. ಸೇನಾಪತಿ ಗೋಪಾಲಕೃಷ್ಣ- ಇಸ್ಫೋಸಿಸ್- 30 ಸಾವಿರ ಕೋಟಿ
4. ರವಿಂದ್ರನ್, ದಿವ್ಯಾ- ಬೈಜೂಸ್- 27 ಸಾವಿರ ಕೋಟಿ
5. ನಂದನ್ ನಿಲೇಕಣಿ- ಇಸ್ಫೋಸಿಸ್- 25 ಸಾವಿರ ಕೋಟಿ
6 ಕಿರಣ್ ಮಜುಂದಾರ್ ಶಾ- ಬಯೋಕಾನ್- 24.7 ಸಾವಿರ ಕೋಟಿ
7. ಕೆ.ದಿನೇಶ್- ಇಸ್ಫೋಸಿಸ್- 21 ಸಾವಿರ ಕೋಟಿ
8. ಬಾಬಾ ಕಲ್ಯಾಣಿ- ಕಲ್ಯಾಣಿ ಗ್ರೂಪ್- 18.7 ಸಾವಿರ ಕೋಟಿ
9. ಎಸ್.ಡಿ.ಶಿಬುಲಾಲ್- ಇಸ್ಫೋಸಿಸ್- 16.5 ಸಾವಿರ ಕೋಟಿ
10. ಜಿತೇಂದ್ರ ವೀರ್ವಾನಿ- ವೀರ್ವಾನಿ ಎಂಬೆಸ್ಸಿ- 15.7 ಸಾವಿರ ಕೋಟಿ