ದತ್ತಿಸಂಸ್ಥೆಗಳಿಗೆ ₹44000 ಕೋಟಿ ದಾನ: ದಾಖಲೆಯ ದೇಣಿಗೆ ನೀಡಿದ ವಾರನ್ ಬಫೆಟ್
ತಮ್ಮ ಆಸ್ತಿಯ ಶೇ.99ರಷ್ಟು ಭಾಗವನ್ನು ದಾನ ಮಾಡುವುದಾಗಿ ಈಗಾಗಲೇ ಘೋಷಿಸಿರುವ ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ವಾರನ್ ಬಫೆಟ್, ಮತ್ತೆ 44000 ಕೋಟಿ ರು. ಮೊತ್ತದ ದೇಣಿಗೆ ಘೋಷಿಸಿದ್ದಾರೆ. ಇದು ವಿಶ್ವದಲ್ಲಿ ಇದುವರೆಗೆ ಯಾವುದೇ ವ್ಯಕ್ತಿ ಒಂದೇ ಸಮಯದಲ್ಲಿ ಘೋಷಿಸಿದ ದಾಖಲೆ ಪ್ರಮಾಣದ ದೇಣಿಗೆಯಾಗಿದೆ.
ವಾಷಿಂಗ್ಟನ್: ತಮ್ಮ ಆಸ್ತಿಯ ಶೇ.99ರಷ್ಟು ಭಾಗವನ್ನು ದಾನ ಮಾಡುವುದಾಗಿ ಈಗಾಗಲೇ ಘೋಷಿಸಿರುವ ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ವಾರನ್ ಬಫೆಟ್, ಮತ್ತೆ 44000 ಕೋಟಿ ರು. ಮೊತ್ತದ ದೇಣಿಗೆ ಘೋಷಿಸಿದ್ದಾರೆ. ಇದು ವಿಶ್ವದಲ್ಲಿ ಇದುವರೆಗೆ ಯಾವುದೇ ವ್ಯಕ್ತಿ ಒಂದೇ ಸಮಯದಲ್ಲಿ ಘೋಷಿಸಿದ ದಾಖಲೆ ಪ್ರಮಾಣದ ದೇಣಿಗೆಯಾಗಿದೆ.
ಇಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಬರ್ಕ್‌ಶೈರ್ ಹ್ಯಾತ್‌ವೇ ಕಂಪನಿಯ ಮಾಲೀಕರೂ ಆದ ಬಫೆಟ್ ಈ ಘೋಷಣೆ ಮಾಡಿದರು. ಈ ಪೈಕಿ ಬಹುತೇಕ ದೇಣಿಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂದಾ ಗೇಟ್ಸ್ ಸ್ಥಾಪಿಸಿರುವ ಎನ್‌ಜಿಒಗೆ ಸೇರಲಿದೆ. ಉಳಿದಂತೆ ತಮ್ಮ ಪತ್ನಿಯ ಹೆಸರಲ್ಲಿ ಬಫೆಟ್ ಸ್ಥಾಪಿಸಿರುವ ಸುಸಾನ್ ಥಾಂಪ್ಸನ್ ಮತ್ತು ತಮ್ಮ ಪುತ್ರರು ನಡೆಸುವ ಇತರೆ ಮೂರು ಎನ್‌ಜಿಒಗಳಿಗೆ ಹೋಗಲಿದೆ.
ಆಪಲ್ ಕಂಪನಿಯಿಂದ ವಾರನ್ ಬಫೆಟ್‌ಗೆ 1814 ಕೋಟಿ ರೂಪಾಯಿ ಡಿವಿಡೆಂಡ್!
ಬಫೆಟ್, ಪ್ರತಿ ವರ್ಷ ತಾವು ಹೊಂದಿರುವ ಆಸ್ತಿಯಲ್ಲಿ ಶೇ.5ರಷ್ಟು ಬಡತನ ನಿವಾರಣೆ ಸೇರಿದಂತೆ ನಾನಾ ರೀತಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಿದ್ದಾರೆ. ಇಷ್ಟೆಲ್ಲಾ ದೇಣಿಗೆಯ ಹೊರತಾಗಿಯೂ ಅವರ ಆಸ್ತಿ ದಿನೇ ದಿನೇ ಏರುತ್ತಲೇ ಇದ್ದು, ಪ್ರಸ್ತುತ ಅವರು 11 ಲಕ್ಷ ಕೋಟಿ ರು.ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
Warren Buffett: ಕಾಫಿ ರೇಟ್ ನೋಡಿ ದಂಗಾದ ಕೋಟ್ಯಧಿಪತಿಯ ಪತ್ನಿ!