Warren Buffett: ಕಾಫಿ ರೇಟ್ ನೋಡಿ ದಂಗಾದ ಕೋಟ್ಯಧಿಪತಿಯ ಪತ್ನಿ!
ವಸ್ತುವಿನ ಮೌಲ್ಯಕ್ಕೆ ತಕ್ಕಂತೆ ಬೆಲೆ ಇರುತ್ತೆ. ಕೆಲವೊಂದು ವಸ್ತುಗಳನ್ನು ಹೆಚ್ಚು ದುಬಾರಿ ಹಣ ನೀಡಿ ಖರೀದಿ ಮಾಡುವ ಅಗತ್ಯವಿರೋದಿಲ್ಲ. ಇದು ವಾರೆನ್ ಬಫೆಟ್ ಪತ್ನಿಗೆ ಗೊತ್ತು. ಹಾಗಾಗೇ ಅವರು 300 ರೂ. ಕಾಫಿಯನ್ನು ವಿರೋಧಿಸಿದ್ದು.
ಹನಿ ಹನಿ ಗೂಡಿದ್ರೆ ಹಳ್ಳ ಎನ್ನುವ ಮಾತಿದೆ. ಒಂದೊಂದು ರೂಪಾಯಿ ಸಂಗ್ರಹ ಮಾಡಿದಾಗ್ಲೇ ನೂರು ರೂಪಾಯಿ ಆಗಲು ಸಾಧ್ಯ. ಯಾವಾಗ್ಲೂ ಕಷ್ಟಪಟ್ಟು ಮೇಲೆ ಬಂದ ಶ್ರೀಮಂತರಿಗೆ ಹಣದ ಮಹತ್ವ ತಿಳಿದಿರುತ್ತದೆ. ಕೈನಲ್ಲಿ ಹಣವಿದೆ ಎನ್ನುವ ಕಾರಣಕ್ಕೆ ಅವರು ಅನವಶ್ಯಕ ಖರ್ಚು ಮಾಡೋದಿಲ್ಲ. ಸರಳ ಜೀವನ ನಡೆಸುವ ಅಂತ ವ್ಯಕ್ತಿಗಳು ಸಾಮಾನ್ಯರಿಗೆ ಮಾದರಿಯಾಗಿರ್ತಾರೆ. ಅದ್ರಲ್ಲಿ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಬಿಲಿಯನೇರ್ ಹೂಡಿಕೆದಾರ ವಾರೆನ್ ಬಫೆಟ್ ಸೇರಿದ್ದಾರೆ. ಕೋಟ್ಯಾಧಿಪತಿಯಾದ್ರೂ ಸಾಮಾನ್ಯರಂತೆ ಜೀವನ ನಡೆಸುವ ವಾರೆನ್ ಬಫಟ್ ಪತ್ನಿ ಆಸ್ಟ್ರಿಡ್ ಬಫೆಟ್ ಈಗ ಸುದ್ದಿಯಲ್ಲಿದ್ದಾರೆ. ಹಣದ ವಿಷ್ಯಕ್ಕೆ ಸಿಬ್ಬಂದಿ ಮೇಲೆ ಆಸ್ಟ್ರಿಡ್ ಬಫೆಡ್ ಕೋಪಗೊಂಡ ಸುದ್ದಿಯಿದೆ.
ವರದಿಗಳ ಪ್ರಕಾರ,ಯುಎಸ್ ಎ (USA)ಯ ಇಡಾಹೋದಲ್ಲಿರುವ ಸನ್ ವ್ಯಾಲಿ ರೆಸಾರ್ಟ್‌ನಲ್ಲಿ ಘಟನೆ ನಡೆದಿದೆ. ಅಲ್ಲಿ ಅಲೆನ್ ಆಂಡ್ ಕಂಪನಿ ವಾರ್ಷಿಕ ಸಮಾರಂಭದಲ್ಲಿ, ಆಸ್ಟ್ರಿಡ್ ಬಫೆಟ್ (Astrid Buffett) ಕಾಫಿ ಕುಡಿದಿದ್ದಾರೆ. ಈ ಕಾಫಿ (Coffee) ಬೆಲೆ 4 ಡಾಲರ್ ಅಂದರೆ ಸುಮಾರು 300 ರೂಪಾಯಿಯಾಗಿತ್ತು. ಒಂದು ಕಪ್ ಕಾಫಿ ಬೆಲೆ ಕೇಳಿ ಆಸ್ಟ್ರಿಡ್ ಬಫೆಟ್ ಕೋಪಗೊಂಡಿದ್ದಾರೆ. ಕಾಫಿ ಮಾರಾಟಗಾರರಿಗೆ ಇದ್ರ ಬಗ್ಗೆ ದೂರಿದ್ದಾರೆ. ಇಷ್ಟು ದುಬಾರಿ ಬೆಲೆಗೆ ಕಾಫಿ ಹೇಗೆ ಮಾರಾಟ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬೆಲೆಗೆ ಒಂದು ಪೌಂಡ್ ಕಾಫಿ ಖರೀದಿ ಮಾಡ್ಬಹುದು ಎಂದು ಆಸ್ಟ್ರಿಡ್ ಬಫೆಟ್ ಗೊಣಗಿದ್ದಾರೆ.
INCOME TAX RETURN: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆ ಈ ವಿಷ್ಯ ಗಮನದಲ್ಲಿರಲಿ!
ಆಸ್ಟ್ರಿಡ್ ಬಫೆಟ್ ಗೆ 77 ವರ್ಷ. ಅವರ ಪತಿ ವಾರೆನ್ ಬಫೆಟ್ (Warren Buffett). ವಾರನ್ ಬಫೆಟ್ ಗೆ 92 ವರ್ಷ ವಯಸ್ಸಾಗಿದೆ. ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 114 ಬಿಲಿಯನ್ ಡಾಲರ್ ಆಗಿದೆ. ಅವರು ವಿಶ್ವದ ಏಳನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ವಾರನ್ ಬಫಟ್ ಹತ್ತಾರು ಕಂಪನಿಯನ್ನು ನಡೆಸುತ್ತಿದ್ದಾರೆ. ಅವರು ಅಮೆರಿಕದ ಬಾರ್ಕ್‌ಶೈರ್ ಹ್ಯಾಥ್‌ವೇ ಕಂಪನಿಯ ಸಿಇಒ.
ದಾನ ಮಾಡೋದ್ರಲ್ಲೂ ವಾರನ್ ಬಫೆಟ್ ಮುಂದಿದ್ದಾರೆ. ಈವರೆಗೆ ಸುಮಾರು 51 ಶತಕೋಟಿಯನ್ನು ವಾರನ್ ಬಫೆಟ್ ದಾನ ಮಾಡಿದ್ದಾರೆ. 201ರಲ್ಲಿ ಅವರು, ತಮ್ಮ ಆಸ್ತಿಯ ಶೇಕಡಾ 99ರಷ್ಟನ್ನು ಚಾರಿಟಿಗೆ ನೀಡುವುದಾಗಿ ಭರವಸೆ ನೀಡಿದ್ದರು.
10 ಕೋಟಿ ಟ್ಯಾಕ್ಸ್ ಕಟ್ತಾರೆ ಬಾಲಿವುಡ್‌ನ ಈ ನಟಿ ಮಣಿಯರು!
ವಾರನ್ ಬಫೆಟ್ ಇಷ್ಟು ಶ್ರೀಮಂತರಾಗಿದ್ದು ಹೇಗೆ? : ವಾರೆನ್ ಬಫೆಟ್ ತಮ್ಮ 11ನೇ ವಯಸ್ಸಿನಲ್ಲಿಯೇ ಷೇರು ಮಾರುಕಟ್ಟೆ ಕಡೆ ಹೆಜ್ಜೆ ಇಟ್ಟಿದ್ದರು. ಆಗಿನಿಂದ್ಲೇ ಹೂಡಿಕೆ ಶುರು ಮಾಡಿದ್ದರು. 1942 ರಲ್ಲಿ ಮೊದಲ ಬಾರಿ ಅವರು ಷೇರುಗಳನ್ನು ಖರೀದಿಸಿದ್ದರು. ಸಿಟಿ ಸರ್ವೀಸ್ ಪ್ರಿಪೇಯ್ಡ್ ನ 6 ಷೇರುಗಳನ್ನು ಅವರು ಖರೀದಿಸಿದ್ದರು.
ಸರಳಿ ಜೀವಿ ವಾರೆನ್ ಬಫೆಟ್ : ಕೈತುಂಬಾ ಹಣವಿದ್ರೂ ವಾರೆನ್ ಬಫೆಟ್ ದುಬಾರಿ ಜೀವನ ಶೈಲಿಯನ್ನು ಅಳವಡಿಸಿಕೊಂಡಿಲ್ಲ. ಒಮಾಹಾದಲ್ಲಿ 1958 ರಲ್ಲಿ ಖರೀದಿಸಿದ ಮನೆಯಲ್ಲಿಯೇ ಅವರು ಈಗ್ಲೂ ವಾಸವಾಗಿದ್ದಾರೆ. ಆಗ ಅವರು ಮನೆಯನ್ನು 31,500 ಡಾಲರ್ ಗೆ ಖರೀದಿ ಮಾಡಿದ್ದರು. ಪತ್ನಿ ಆಸ್ಟ್ರಿಡ್ ಕೂಡ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ವಾರೆನ್ ಬಫೆಟ್ ಮತ್ತು ಆಸ್ಟ್ರಿಡ್ ಮೆಂಕ್ಸ್ 2006 ರಲ್ಲಿ ವಿವಾಹವಾದರು. ಆ ಸಮಯದಲ್ಲಿ ವಾರನ್ ಬಫೆಟ್ ಗೆ 76 ವರ್ಷ ಹಾಗೂ ಆಸ್ಟ್ರಿಡ್ ಬಫೆಟ್ ಗೆ 60 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಾರೆನ್ ಬಫೆಟ್, ತಮ್ಮ ಪರ್ಸ್ ನಲ್ಲಿ ಎರಡು ವಸ್ತುಗಳನ್ನು ಮರೆಯದೆ ಇಡ್ತೇನೆ ಎಂದಿದ್ದರು. ಒಂದು 100 ಡಾಲರ್ ನಗದು ಹಾಗೂ ಇನ್ನೊಂದು ಅಮೇರಿಕನ್ ಎಕ್ಸ್‌ಪ್ರೆಸ್ ಕಾರ್ಡ್.