Asianet Suvarna News Asianet Suvarna News

Highest Paid CEO:ಈಗ ಭಾರತದ ಅತೀಹೆಚ್ಚು ವೇತನ ಪಡೆಯೋ ಸಿಇಒ ಸಲೀಲ್‌ ಪಾರೇಖ್‌ ಅಲ್ಲ, ಮತ್ತೆ ಯಾರು? ಇಲ್ಲಿದೆ ಮಾಹಿತಿ

*ಥಿಯೆರಿ ಡೆಲಾಪೋರ್ಟ್ ಅವರಿಗೆ ವಾರ್ಷಿಕ  79.8 ಕೋಟಿ ರೂ.ವೇತನ
*ಯುಎಸ್ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಕಮೀಷನ್ ಗೆ ಸಲ್ಲಿಕೆ ಮಾಡಿರುವ ವಾರ್ಷಿಕ ವರದಿಯಲ್ಲಿ ವಿಪ್ರೋ ಮಾಹಿತಿ
*ಈ ಹಿಂದೆ  ಭಾರತದ ಅತೀಹೆಚ್ಚು ವೇತನ ಪಡೆಯೋ ಸಿಇಒ ಎಂದು ಗುರುತಿಸಿಕೊಂಡಿದ್ದ ಇನ್ಫೋಸಿಸ್ ಸಿಇಒ ಸಲೀಲ್‌ ಪಾರೇಖ್‌

Wipro CEO Becomes Highest Paid Indian IT Chief in FY22 Draws Rs 79 Crore Salary
Author
Bangalore, First Published Jun 10, 2022, 5:59 PM IST

ಬೆಂಗಳೂರು (ಜೂ.10): ಭಾರತದ ಅತೀಹೆಚ್ಚು ವೇತನ (Salary) ಪಡೆಯೋ ಸಿಇಒ (CEO) ಎಂಬ ಖ್ಯಾತಿ ಗಳಿಸಿದ್ದ ಸಲೀಲ್‌ ಪಾರೇಖ್‌ (Salil Parekh) ಅವರನ್ನು ವಿಪ್ರೋ (Wipro) ಸಿಇಒ ಥಿಯೆರಿ ಡೆಲಾಪೋರ್ಟ್ (Thierry Delaporte) ಹಿಂದಿಕ್ಕಿದ್ದಾರೆ. 2022ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ಸಾಲಿನಲ್ಲಿ ಡೆಲಾಪೋರ್ಟ್ (Delaporte) ಅವರಿಗೆ ವಾರ್ಷಿಕ  79.8 ಕೋಟಿ ರೂ.(10.51 ಮಿಲಿಯನ್ ಡಾಲರ್)  ವೇತನ ಪ್ಯಾಕೇಜ್ ನೀಡಲಾಗಿದೆ ಎಂದು ಯುಎಸ್ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಕಮೀಷನ್ ಗೆ (US Securities and Exchange Commission) ಸಲ್ಲಿಕೆ ಮಾಡಿರುವ ವಾರ್ಷಿಕ ವರದಿಯಲ್ಲಿ ವಿಪ್ರೋ (Wipro)ತಿಳಿಸಿದೆ. ಹೀಗಾಗಿ ಥಿಯೆರಿ ಡೆಲಾಪೋರ್ಟ್ ಈಗ ಭಾರತದ ಐಟಿ ವಲಯದ ಅತೀಹೆಚ್ಚು ವೇತನ ಪಡೆಯೋ ಸಿಇಒ ಆಗಿದ್ದಾರೆ.

2020-21ನೇ ಆರ್ಥಿಕ ಸಾಲಿನಲ್ಲಿ ಡೆಲಾಪೋರ್ಟ್ ಅವರ ವಾರ್ಷಿಕ ವೇತನ 64.3 ಕೋಟಿ ರೂ. ($8.7 ಮಿಲಿಯನ್). ಅವರು 2020ರ ಜುಲೈನಲ್ಲಿ ವಿಪ್ರೋಗೆ ಸೇರ್ಪಡೆಗೊಂಡ ಕಾರಣ ಆ ಆರ್ಥಿಕ ಸಾಲಿನಲ್ಲಿ 9 ತಿಂಗಳ ಸಂಭಾವನೆಯನ್ನಷ್ಟೇ ಪಡೆದಿದ್ದಾರೆ. ಬೆಂಗಳೂರು (Bangalore) ಮೂಲದ ಐಟಿ ಕಂಪೆನಿ ವಿಪ್ರೋ  ಸಿಇಒ ಡೆಲಾಪೋರ್ಟ್ ವೇತನ ರೂಪದಲ್ಲಿ ವಾರ್ಷಿಕ  9.6ಕೋಟಿ ರೂ., ಕಮೀಷನ್ (Commission) ರೂಪದಲ್ಲಿ 11.2 ಕೋಟಿ ರೂ., ಸುದೀರ್ಘ ಸಂಭಾವನೆಯಾಗಿ 5.5 ಕೋಟಿ ರೂ. ಹಾಗೂ ಉಳಿದ 37.81ಕೋಟಿ ರೂ, ಇತರ ಆದಾಯದ ರೂಪದಲ್ಲಿ ಪಡೆಯುತ್ತಿದ್ದಾರೆ.

Infosys CEO Salary Hike:ಸಲೀಲ್‌ ಪಾರೇಖ್‌ ಈಗ ಭಾರತದ ಅತೀಹೆಚ್ಚು ವೇತನ ಪಡೆಯುವ ಸಿಇಒ; ಇವರ ವಾರ್ಷಿಕ ಪ್ಯಾಕೇಜ್ ಎಷ್ಟು ಗೊತ್ತಾ?

ಥಿಯೆರಿ ಡೆಲಾಪೋರ್ಟ್ ಯಾರು?
ಥಿಯೆರಿ ಡೆಲಾಫೋರ್ಟ್ ವಿಪ್ರೋದ ಸಿಇಒ (CEO) ಹಾಗೂ ಎಂಡಿಯಾಗಿ (MD) 2020ರ ಜುಲೈ 6ರಂದು ಅಧಿಕಾರ ಸ್ವೀಕರಿಸಿದ್ದರು. ಐಟಿ ಸೇವಾ ಕ್ಷೇತ್ರದಲ್ಲಿ 27 ವರ್ಷಗಳ ಅನುಭವ ಹೊಂದಿದ್ದಾರೆ. ವಿಪ್ರೋಗೆ ಸೇರ್ಪಡೆಗೊಳ್ಳುವ ಮುನ್ನ ಕ್ಯಾಪ್ಜೆಮಿನಿಯಲ್ಲಿ 1995ರಿಂದಲೂ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. 2017 ರ ಸೆಪ್ಟೆಂಬರ್ ನಿಂದ 2020ರ ಮೇ ತನಕ ಚೀಫ್ ಆಪರೇಟಿಂಗ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಕ್ಯಾಪ್ಜೆಮಿನಿ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 

ದೇಶದ ಇತರ ಕಂಪನಿಗಳ ಸಿಇಒ ಎಷ್ಟಿದೆ?
ವಿಪ್ರೋ ಸಿಇಒ ನಂತರ ಅಧಿಕ ವೇತನ ಪಡೆಯುತ್ತಿರೋರು ಇನ್ಫೋಸಿಸ್  (Infosys) ಕಂಪನಿಯ ಸಿಇಒ (CEO) ಸಲೀಲ್‌ ಪಾರೇಖ್‌ (Salil Parekh). 2022ನೇ ಹಣಕಾಸು ಸಾಲಿನಲ್ಲಿ  ಇನ್ಫೋಸಿಸ್ ಸಿಇಒ ವೇತನದಲ್ಲಿ ಶೇ.43ರಷ್ಟು ಹೆಚ್ಚಳವಾಗೋ ಮೂಲಕ  ವಾರ್ಷಿಕ 71 ಕೋಟಿ ರೂ. ತಲುಪಿತ್ತು.ಇನ್ನು ದೇಶದ ನಂ.1 ಐಟಿ ಸಂಸ್ಥೆ ಟಿಸಿಎಸ್ (TCS) ಸಿಇಒ ರಾಜೇಶ್ ಗೋಪಿನಾಥನ್ ಅವರ ವಾರ್ಷಿಕ ವೇತನ 25.76 ಕೋಟಿ ರೂ. ಕಳೆದ ತಿಂಗಳು ಪ್ರಕಟವಾದ ಟಿಸಿಎಸ್ ವಾರ್ಷಿಕ ವರದಿ ಪ್ರಕಾರ ರಾಜೇಶ್ ಗೋಪಿನಾಥನ್ ವೇತನದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಏರಿಕೆ ಕಂಡಿದೆ. ಎಚ್ ಸಿಎಲ್ ಟೆಕ್ ಸಿಇಒ ವಾರ್ಷಿಕ ಪ್ಯಾಕೇಜ್ 32.21 ಕೋಟಿ ರೂ. ಹಾಗೂ ಟೆಕ್ ಮಹೀಂದ್ರ ಸಿಇಒ ವೇತನ 22 ಕೋಟಿ ರೂ. ಇದೆ. 

ನವೋದ್ಯಮಗಳ ಶೇ.30ರಷ್ಟು ಆದಾಯ ಸಂಶೋಧನೆಗಿರಲಿ: ಸಚಿವ ಅಶ್ವತ್ಥ್‌ ನಾರಾಯಣ

ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಪುತ್ರ ರಿಷಾದ್ ಪ್ರೇಮ್ ಜಿ ಕಳೆದ ವರ್ಷ 1.82 ಮಿಲಿಯನ್ ಡಾಲರ್‌ ವೇತನ ಪಡೆದಿದ್ದಾರೆ. ಅದರ ಹಿಂದಿನ ವರ್ಷ 1.62 ಮಿಲಿಯನ್ ಡಾಲರ್ ವೇತನವಿತ್ತು. ರೂಪಾಯಿ ಲೆಕ್ಕದಲ್ಲಿ ರಿಷಾದ್ ಪ್ರೇಮ್ ಜಿ ವೇತನ 11.8 ಕೋಟಿ ರೂ. ಗಳಿಂದ 13.8 ಕೋಟಿ ರೂ.ಗೆ ಹೆಚ್ಚಳವಾಗಿದೆ. 

Follow Us:
Download App:
  • android
  • ios