Asianet Suvarna News Asianet Suvarna News

Infosys CEO Salary Hike:ಸಲೀಲ್‌ ಪಾರೇಖ್‌ ಈಗ ಭಾರತದ ಅತೀಹೆಚ್ಚು ವೇತನ ಪಡೆಯುವ ಸಿಇಒ; ಇವರ ವಾರ್ಷಿಕ ಪ್ಯಾಕೇಜ್ ಎಷ್ಟು ಗೊತ್ತಾ?

*ಇತ್ತೀಚೆಗೆ ಇನ್ಫೋಸಿಸ್ ಸಿಇಒ ಆಗಿ ಮರುನೇಮಕಗೊಂಡ ಪಾರೇಖ್
*ಇನ್ಪೋಸಿಸ್ ಸಿಇಒ ವೇತನದಲ್ಲಿ ಶೇ.88ರಷ್ಟು ಹೆಚ್ಚಳ
*ಪಾರೇಖ್ ವಾರ್ಷಿಕ ಪ್ಯಾಕೇಜ್  79.75 ಕೋಟಿ ರೂ.ಗೆ ಏರಿಕೆ

Infosys CEO Salil Parekh gets 88 percent pay hike  what is his annual package details here
Author
Bangalore, First Published May 26, 2022, 6:36 PM IST

ಬೆಂಗಳೂರು (ಮೇ 26): ಇನ್ಫೋಸಿಸ್  (Infosys) ಕಂಪನಿಯ ಸಿಇಒ (CEO) ಆಗಿ ಇತ್ತೀಚೆಗೆ ಮರುನೇಮಕಗೊಂಡ ಸಲೀಲ್‌ ಪಾರೇಖ್‌ (Salil Parekh) ಅವರ ವೇತನದಲ್ಲಿ (Salary) ಶೇ.88ರಷ್ಟು ಏರಿಕೆಯಾಗಿದೆ. ಈ ಹೆಚ್ಚಳದಿಂದ ಪಾರೇಖ್ ಅವರ ವಾರ್ಷಿಕ ಪ್ಯಾಕೇಜ್  79.75 ಕೋಟಿ ರೂಪಾಯಿ ಮುಟ್ಟಿದೆ. ಈ ಮೂಲಕ ಅವರು ಭಾರತದಲ್ಲಿ ಅತೀ ಹೆಚ್ಚು ಸಂಬಳ  ಪಡೆಯುವ ಸಿಇಒ ಅನಿಸಿಕೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಂಪನಿಯು ಗಮನಾರ್ಹ ಬೆಳವಣಿಗೆ ದಾಖಲಿಸಿದೆ ಎಂದು ಹೇಳುವ ಮೂಲಕ ಇನ್ಫೋಸಿಸ್  (Infosys) ಬೃಹತ್ ಪ್ರಮಾಣದ ವೇತನ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

ಗುರುವಾರ (ಮೇ 26) ಬಿಡುಗಡೆಯಾದ ಕಂಪನಿಯ ವಾರ್ಷಿಕ ವರದಿ ಪ್ರಕಾರ ಷೇರುದಾರರ ಅನುಮೋದನೆಗೆ ಒಳಪಟ್ಟ ಹೊಸ ಉದ್ಯೋಗ ಒಪ್ಪಂದವು ಜುಲೈ 2ರಿಂದ ಜಾರಿಗೆ ಬರಲಿದೆ. 2022ನೇ ಹಣಕಾಸು ಸಾಲಿನಲ್ಲಿ ಪಾರೇಖ್ ಅವರ ಟೇಕ್ ಹೋಮ್ ವೇತನ (Take home salary) 71 ಕೋಟಿ ರೂ. ಇದರಲ್ಲಿ 52 ಕೋಟಿ ರೂ. ಈ ಹಿಂದೆ ಅವರಿಗೆ ನೀಡಲಾಗಿರುವ ನಿರ್ಬಂಧಿತ ಸ್ಟಾಕ್ ಯೂನಿಟ್‌ಗಳಿಂದ ಬಂದಿದೆ. ಕಂಪನಿಗೆ ತಾನು ಸಲ್ಲಿಸುತ್ತಿರುವ ಸೇವೆಗಳಿಗೆ ಯಾವುದೇ ಸಂಭಾವನೆ ಪಡೆಯದಿರಲು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಸ್ವಯಂಪ್ರೇರಣೆಯಿಂದ ನಿರ್ಧಾರ ಕೈಗೊಂಡಿದ್ದಾರೆ. 2021ರಲ್ಲಿ ಸಲೀಲ್ ಪರೇಖ್ ವಾರ್ಷಿಕ ವೇತನ ಬರೋಬ್ಬರಿ 49.68 ಕೋಟಿ ರೂಪಾಯಿ. 2020ರಲ್ಲಿ ಪರೇಖ್ 12 ತಿಂಗಳ ವೇತನ  34.27 ಕೋಟಿ ರೂಪಾಯಿ ಆಗಿತ್ತು. 2021ರ ಸಾಲಿನಲ್ಲಿ ಶೇಕಡಾ 45 ರಷ್ಚು ವೇತನ ಹೆಚ್ಚಿಸಲಾಗಿತ್ತು.

salil parekh ಇಸ್ಫೋಸಿಸ್‌ ಮುಖ್ಯಸ್ಥರಾಗಿ ಮರುನೇಮಕಗೊಂಡ ಸಲೀಲ್ ಪರೇಖ್ ಯಾರು?

ವೇತನದಲ್ಲಿ ಭಾರೀ ಹೆಚ್ಚಳ
ಮಧ್ಯಮ ವರ್ಗದ ಹಿನ್ನೆಲೆಯುಳ್ಳ ಸಂಸ್ಥಾಪಕರನ್ನು ಹೊಂದಿರುವುದು ತನ್ನ ಹಿರಿಮೆ ಎಂದು ಹೇಳಿಕೊಳ್ಳುವ ಇನ್ಫೋಸಿಸ್ ನಂತಹ ಸಂಸ್ಥೆ ಬೃಹತ್ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಿರೋದು ಅಸಾಮಾನ್ಯ ಎಂದೇ ಹೇಳಬಹುದು. ಪಾರೇಖ್ ಅವರನ್ನು ಮುಂದಿನ 5 ವರ್ಷಗಳ ತನಕ ಸಿಇಒ ಹಾಗೂ ಎಂಡಿಯಾಗಿ ಮರುನೇಮಕಗೊಳಿಸಿದ ಕೆಲವೇ ದಿನಗಳಲ್ಲಿ ಅವರ ವೇತನದಲ್ಲಿ ಬೃಹತ್ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. 

ಹೊಸ ವೇತನ ಹೆಚ್ಚಳವು ಇನ್ಫೋಸಿಸ್ ಸಿಇಒ ಹಾಗೂ ಸಾಮಾನ್ಯ ಉದ್ಯೋಗಿಗಳ ನಡುವಿನ ವೇತನ ಅಂತರವನ್ನು ಇನ್ನಷ್ಟು ಹೆಚ್ಚಿಸಿದೆ. ಸದ್ಯ ಇನ್ಫೋಸಿಸ್ ಸಿಇಒ ಹಾಗೂ ಉದ್ಯೋಗಿಗಳ ನಡುವಿನ ವೇತನ ಅಂತರ 229 (ಸ್ಟಾಕ್ ಆಧಾರಿತ ಪರಿಹಾರಧನ ಹೊರತುಪಡಿಸಿ) ಹಾಗೂ 872 (ಸ್ಟಾಕ್ ಆಧಾರಿತ ಪರಿಹಾರಧನ ಒಳಗೊಂಡು) ಇದೆ.
ಕೆಲವು ವರ್ಷಗಳ ಹಿಂದೆ ಇನ್ಫೋಸಿಸ್ ಸಹಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ಸಿಇಒಗಳಿಗೆ ದೊಡ್ಡ ಮೊತ್ತದ ವೇತನ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಸಂಸ್ಥೆಯಲ್ಲಿ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಅನುಪಾತ 20 ರಿಂದ 25 ರಷ್ಟಿರಬೇಕು ಎಂದು ಸಲಹೆ ನೀಡಿದ್ದರು. 

ಇನ್ಫೋಸಿಸ್ ಬೃಹತ್ ಮೊತ್ತದ ವೇತನ ನೀಡಲು ಕಾರಣವೇನು?
ಕಂಪನಿಯ ಕಾರ್ಯದಕ್ಷತೆ ಹಾಗೂ ಷೇರುಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಸಿಇಒ ವೇತನವನ್ನು ಪರಿಗಣಿಸಬೇಕು. ಪಾರೇಖ್ ಅವರ ಅವಧಿಯಲ್ಲಿ ಷೇರುದಾರರ ಆದಾಯದಲ್ಲಿ ಶೇ.314ರಷ್ಟು ಹೆಚ್ಚಳವಾಗಿದೆ. ಆದಾಯಬೆಳವಣಿಗೆ ಕೂಡ 70,522 ಕೋಟಿ ರೂ.ನಿಂದ 1,21,641 ಕೋಟಿ ರೂ.ಗೆ ಹೆಚ್ಚಳವಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಪಾರೇಖ್ ಅವರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ಟೈಮ್‌ ವಿಶ್ವದ 100 ಪ್ರಭಾವಿಗಳಲ್ಲಿ ಭಾರತದ ಮೂವರು

ಅತೀಹೆಚ್ಚು ವೇತನ ಪಡೆಯುವ ಸಿಇಒ
ಪಾರೇಖ್ ಭಾರತದಲ್ಲಿ ಅತೀಹೆಚ್ಚು ವೇತನ ಪಡೆಯುವ ಸಿಇಒ ಆಗಿದ್ದಾರೆ. ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ಅವರ ವಾರ್ಷಿಕ ವೇತನ 25.76 ಕೋಟಿ ರೂ. ವಿಪ್ರೋ ಪ್ಯಾರೀಸ್ ಮೂಲದ ಸಿಇಒ ವೇತನ 64.34 ಕೋಟಿ ರೂ., ಎಚ್ ಸಿಎಲ್ ಟೆಕ್ ಸಿಇಒ ವಾರ್ಷಿಕ ಪ್ಯಾಕೇಜ್ 32.21 ಕೋಟಿ ರೂ. ಹಾಗೂ ಟೆಕ್ ಮಹೀಂದ್ರ ಸಿಇಒ ವೇತನ 22 ಕೋಟಿ ರೂ. 


 

Follow Us:
Download App:
  • android
  • ios