ಯಶಸ್ವಿ ಮಹಿಳಾ ಉದ್ಯಮಿ ಇಶಿತಾ ಸಾಲ್ಗಾಂವಕರ್ ಅಂಬಾನಿ ಕುಟುಂಬದ ಕುಡಿ; ಈಕೆ ಮುಖೇಶ್ ಅಂಬಾನಿಗೆ ಏನಾಗಬೇಕು?

ಅಂಬಾನಿ ಕುಟುಂಬ ಸದಾ ಸುದ್ದಿಯಲ್ಲಿರುತ್ತದೆ. ಅವರ ಜೀವನಶೈಲಿ, ಹೈ ಪ್ರೊಫೈಲ್ ಪಾರ್ಟಿಗಳು ಸದಾ ಸದ್ದು ಮಾಡುತ್ತಲೇ ಇರುತ್ತವೆ. ಹೀಗಿರುವಾಗ ಅಂಬಾನಿ ಕುಟುಂಬದವರೇ ಆದ ಇಶಿತಾ ಸಾಲ್ಗಾಂವಕರ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಹಾಗಾದ್ರೆ ಇಶಿತಾ ಸಾಲ್ಗಾಂವಕರ್ ಯಾರು? ಅವರಿಗೂ ಮುಖೇಶ್ ಅಂಬಾನಿಗೂ ಏನ್ ಸಂಬಂಧ? ಇಲ್ಲಿದೆ ಮಾಹಿತಿ. 

Who is Isheta Salgaocar and how is she related to Mukesh Ambani anu

Business Desk:ಮುಖೇಶ್ ಅಂಬಾನಿ ಕುಟುಂಬ ಸದಸ್ಯರು ಐಷಾರಾಮಿ ಜೀವನಶೈಲಿ, ಹೈ ಪ್ರೊಫೈಲ್ ಪಾರ್ಟಿಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಇವರ ಕುಟುಂಬದ ಬಗ್ಗೆ ಬಹುತೇಕರಿಗೆ ತಿಳಿದೇ ಇದೆ. ಆದರೆ, ಮುಖೇಶ್ ಅಂಬಾನಿ ಸೊಸೆ ಇಶಿತಾ ಸಾಲ್ಗಾಂವಕರ್  ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಹೌದು, ಧೀರೂಬಾಯಿ ಅಂಬಾನಿ ಅವರ ಪುತ್ರಿ ದೀಪ್ತಿ ಸಾಲ್ಗಾಂವಕರ್ ಅವರ ಪುತ್ರಿ ಇಶಿತಾ ಸಾಲ್ಗಾಂವಕರ್ ಕೂಡ ಜನಪ್ರಿಯ ಉದ್ಯಮಿ. ಆದರೆ, ಈಕೆ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಇಶಿತಾ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾರ್ವೆರ್ಡ್ ಬ್ಯುಸಿನೆಸ್ ಸ್ಕೂಲ್ ಪದವೀಧರೆಯಾಗಿರುವ ಇಶಿತಾ, ಪ್ರಸ್ತುತ ಸಾಲ್ಗಾಂವಕರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕಾರ್ಪೋರೇಟ್ ಡೆವಲಪ್ ಮೆಂಟ್ ಉಪಾಧ್ಯಕ್ಷೆಯಾಗಿದ್ದಾರೆ. ಇಶಿತಾ ಅನೇಕ ಉದ್ಯಮ ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಮೂಲಕ ತಮ್ಮ ಕೌಶಲ್ಯವನ್ನು ತೋರ್ಪಡಿಸಿದ್ದಾರೆ ಕೂಡ. ಇನ್ನು ಶಿಕ್ಷಣ ಹಾಗೂ ಆರೋಗ್ಯಸೇವಾ ವಲಯಗಳಲ್ಲಿ ಕೂಡ ಇಶಿತಾ ತೊಡಗಿಕೊಂಡಿದ್ದಾರೆ.  

ಅದ್ದೂರಿ ವಿವಾಹದ ಮೂಲಕ ಸುದ್ದಿ
ಉದ್ಯಮ ಹಾಗೂ ಸಾಮಾಜಿಕ ಸೇವೆಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಹಿನ್ನೆಲೆಯಲ್ಲಿ ಕೂಡ ಇಶಿತಾ ಸಾಕಷ್ಟು ಸುದ್ದಿಯಾಗಿದ್ದರು. 2016ರಲ್ಲಿ ನೀರವ್ ಮೋದಿ ಅವರ ತ್ಮ ನಿಶಾಲ್ ಮೋದಿ ಅವರನ್ನು ಇಶಿತಾ ವಿವಾಹವಾಗಿದ್ದರು. ಆದರೆ, ಅವರಿಬ್ಬರ ವೈವಾಹಿಕ ಜೀವನ ಹೆಚ್ಚು ದಿನ ಬಾಳಲಿಲ್ಲ. ವಿಚ್ಛೇದನೆ ಬಳಿಕ ಇಶಿತಾ ಹೊಸ ಜೀವನಕ್ಕೆ ಕಾಲಿಡುವ ನಿರ್ಧಾರ ಕೈಗೊಂಡರು. 2022ರಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ಇಶಿತಾ ಉದ್ಯಮಿ ಅತುಲ್ಯ ಮಿತ್ತಲ್ ಅವರ ಕೈ ಹಿಡಿದರು. ಅತುಲ್ಯ ಮಿತ್ತಲ್ ನೆಕ್ಸ್ ಜು ಮೊಬಿಲಿಟಿ ಸ್ಥಾಪಕರಾಗಿದ್ದಾರೆ. ಅಲ್ಲದೆ, ಅವರು ಉದ್ಯಮಿ ಲಕ್ಷ್ಮೀ ನಿವಾಸ್ ಮಿತ್ತಲ್ ಸೋದರಳಿಯ. ಇವರಿಬ್ಬರ ವಿವಾಹ ಸಮಾರಂಭ ಭಾರೀ ಸುದ್ದಿಯಾಗಿತ್ತು ಕೂಡ.

ಮತ್ತೊಂದು ವಿದೇಶಿ ಕೆಫೆ ಜೊತೆಗೆ ರಿಲಯನ್ಸ್ ಒಪ್ಪಂದ;ಭಾರತಕ್ಕೆ ಬರಲಿದೆ ಲಂಡನ್ ಮೂಲದ ಈ ಪಿಂಕ್ ಕಾಫಿ ಶಾಪ್

ಯಶಸ್ವಿ ಉದ್ಯಮಿ
ಇಶಿತಾ ಎರಡನೇ ವಿವಾಹದ ಬಳಿಕ ಉದ್ಯಮ ರಂಗದಲ್ಲಿ ಇನ್ನಷ್ಟು ಬೆಳವಣಿಗೆ ಕಾಣುತ್ತಿದ್ದಾರೆ. ಹೊಸ ಕ್ಷೇತ್ರಗಳಿಗೆ ಕೈಹಾಕುವ ಮೂಲಕ ಉದ್ಯಮ ವಿಸ್ತರಣೆ ಕೂಡ ಮಾಡಿದ್ದಾರೆ. ಈ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತನಗಿರುವ ಜ್ಞಾನವನ್ನು ಕೂಡ ತೋರ್ಪಡಿಸಿದ್ದಾರೆ. ಒಬ್ಬ ಯಶಸ್ವಿ ಉದ್ಯಮಿ ಹಾಗೂ ದಾನಿಯಾಗಿ ಇಶಿತಾ ಜನಪ್ರಿಯತೆ ಗಳಿಸುತ್ತಿದ್ದಾರೆ.

ಅಂಬಾನಿ ಮೊಮ್ಮಗಳು
ಇಶಿತಾ ತಾಯಿ ದೀಪ್ತಿ ಸಾಲ್ಗಾಂವಕರ್ ಧೀರೂಬಾಯಿ ಅಂಬಾನಿ ಅವರ ಕಿರಿಯ ಪುತ್ರಿ. ದೀಪ್ತಿ ಪತಿ ದತ್ತರಾಜ್ ಸಾಲ್ಗಾಂವಕರ್ ಗೋವಾದ ಸಂಸ್ಕೃತಿ ಹಾಗೂ ಬುಡಕಟ್ಟು ಜನಾಂಗದ ಉಳಿವಿಗೆ ಸುನಪರಂಟ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಅಭಿವೃದ್ಧಿಗೆ ದೀಪ್ತಿ ಹಾಗೂ ಇಶಿತಾ ಇಬ್ಬರು ಕೂಡ ಕೊಡುಗೆ ನೀಡುತ್ತಿದ್ದಾರೆ. ದೀಪ್ತಿ ಈ ಸಂಸ್ಥೆ ಉಪಾಧ್ಯಕ್ಷೆಯಾಗಿದ್ದರೆ, ಇಶಿತಾ ಸಲಹಾ ಮಂಡಳಿ ಸದಸ್ಯೆಯಾಗಿದ್ದಾರೆ. 

ಅಂಬಾನಿ ಕುಟುಂಬದ ಜೊತೆ ಉತ್ತಮ ನಂಟು
ಇಶಿತಾ ಅವರ ವಿವಾಹ ಸಮಾರಂಭದಲ್ಲಿ ಅವರು ತಾಯಿ ಮನೆಯ ಕುಟುಂಬ ಸದಸ್ಯರೊಂದಿಗೆ ಎಷ್ಟು ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಶಿತಾ ಅವರ ಮದುವೆ ಸಮಾರಂಭದಲ್ಲಿ ಮುಖೇಶ್ ಅಂಬಾನಿ ದಂಪತಿ ಹಾಗೂ ಮಕ್ಕಳು ಕೂಡ ಸಾಕಷ್ಟು ಗಮನ ಸೆಳೆದಿದ್ದರು. ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಕೂಡ ತುಂಬಾ ಸುಂದರವಾಗಿ ಅಲಂಕರಿಸಿಕೊಂಡಿದ್ದರು. ಆಕೆ ಧರಿಸಿದ್ದ ಬಟ್ಟೆ ಹಾಗೂ ಆಭರಣಗಳು ಸಾಕಷ್ಟು ಗಮನ ಸೆಳೆದಿದ್ದವು. ಇನ್ನು ಇಶಿತಾ ಅನಂತ್ ಅಂಬಾನಿ ಅವರ ಕೈ ಹಿಡಿದು ವಿವಾಹದ ಮಂಟಪಕ್ಕೆ ಬಂದಿದ್ದರು ಕೂಡ. 

ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಸೆಮಣೆ ಏರೋ ದಿನ ಬಹಿರಂಗ!

ಇಶಿತಾ ಅವರ ಆಸ್ತಿ ಕುರಿತು ನಿರ್ದಿಷ್ಟ ಮಾಹಿತಿಗಳಿಲ್ಲ. ಆದರೆ, ಇಶಿತಾ ಸಾಕಷ್ಟು ಸಂಪತ್ತು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಇಶಿತಾ ಅವರ ಬಳಿ ಐಷಾರಾಮಿ ಬಂಗಲೆ, ದುಬಾರಿ ಬೆಲೆಯ ಅನೇಕ ಕಾರುಗಳಿವೆ. 

Latest Videos
Follow Us:
Download App:
  • android
  • ios